ಗೋಲ್ಡನ್ ಸ್ಟಾರ್ ಮನೆಗೆ ಬಂತು ರೇಂಜ್ ರೋವರ್: ಹೊಸ ಕಾರಿನ ಬೆಲೆ ಎಷ್ಟು?
Golden star Ganesh: ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಈ ಹಿಂದಿನ ಸಿನಿಮಾ ‘ಕೃಷ್ಣಂ ಪ್ರಣಯ ಸಖಿ’ ಸೂಪರ್ ಹಿಟ್ ಆಗಿದೆ. ಅದರ ಬೆನ್ನಲ್ಲೆ ಗಣೇಶ್ ಹೊಸ ಐಶಾರಾಮಿ ಕಾರೊಂದನ್ನು ತಮಗಾಗಿ ಖರೀದಿ ಮಾಡಿದ್ದಾರೆ.
ಕೆಲವು ನಟರು, ಭಾರಿ ಬಜೆಟ್ ಸಿನಿಮಾ, ಪ್ಯಾನ್ ಇಂಡಿಯಾ ಸಿನಿಮಾ ಎಂದೆಲ್ಲ ಆರ್ಭಟ ಮಾಡುತ್ತಾ ವರ್ಷಾನುಗಟ್ಟಲೆ ಒಂದೊಂದು ಸಿನಿಮಾಗಳಲ್ಲಿ ಕಳೆಯುತ್ತಿರುವಾಗ ಗಣೇಶ್, ದುನಿಯಾ ವಿಜಯ್ ಅಂಥಹವರು ಸೀಮಿತ ಬಜೆಟ್ನಲ್ಲಿ ಸಿನಿಮಾ ಮಾಡಿ ಭರ್ಜರಿ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದಾರೆ. ಗಣೇಶ್ ನಟನೆಯ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ ಕೆಲ ವಾರಗಳ ಹಿಂದಷ್ಟೆ ಬಿಡುಗಡೆ ಆಗಿ ಹಿಟ್ ಎನಿಸಿಕೊಂಡಿತು. ಕೌಟುಂಬಿಕ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತಂದ ಸಿನಿಮಾ ಎನಿಸಿಕೊಂಡಿತು. ಸಿನಿಮಾ ಗೆದ್ದ ಖುಷಿಯಲ್ಲಿ ಗಣೇಶ್ ಹೊಸ ಐಶಾರಾಮಿ ಕಾರು ಖರೀದಿ ಮಾಡಿದ್ದಾರೆ.
ನಟ ಗಣೇಶ್ ರೇಂಜ್ ರೋವರ್ ಕಾರೊಂದನ್ನು ಖರೀದಿ ಮಾಡಿದ್ದಾರೆ. ಗಣೇಶ್, ತಮ್ಮ ಇಬ್ಬರು ಮಕ್ಕಳೊಟ್ಟಿಗೆ ಬಂದು ಹೊಸ ಕಾರು ಖರೀದಿ ಮಾಡಿರುವ ವಿಡಿಯೋವನ್ನು ಕಾರು ಸಂಸ್ಥೆ ಹಂಚಿಕೊಂಡಿದೆ. ಗಣೇಶ್ ಖರೀದಿ ಮಾಡಿರುವುದು ರೇಂಜ್ ರೋವರ್ ವೋಗ್ ಕಾರನ್ನು ಎನ್ನಲಾಗುತ್ತಿದೆ. ಬೆಂಗಳೂರಿನ ಮಾರ್ಕ್ಲ್ಯಾಂಡ್ ಏಜೆನ್ಸಿ ಕಡೆಯವರಿಂದ ಕಾರನ್ನು ಖರೀದಿ ಮಾಡಿದ್ದಾರೆ ಗಣೇಶ್. ಕಾರಿಗೆ ಪೂಜೆ ಮಾಡಿಸಿ, ಮಕ್ಕಳನ್ನು, ಪತ್ನಿಯನ್ನು ಕರೆದುಕೊಂಡು ಜಾಲಿ ರೈಡ್ ಹೋಗಿದ್ದಾರೆ.
ಗಣೇಶ್ ಖರೀದಿ ಮಾಡಿರುವ ರೇಂಜ್ ರೋವರ್ ಕಾರು ಬಲು ದುಬಾರಿ. ರೇಂಜ್ ರೋವರ್ನ ಕಡಿಮೆ ಬೆಲೆಯ ಕಾರಿನ ಬೆಲೆಯೇಸುಮಾರು 90 ಲಕ್ಷ ರೂಪಾಯಿ ಇದೆ. ಗಣೇಶ್ ಖರೀದಿ ಮಾಡಿರುವುದು ರೇಂಜ್ ರೋವರ್ ವೋಗ್ ಕಾರು ಎನ್ನಲಾಗುತ್ತಿದ್ದು, ಈ ಕಾರಿನ ಬೆಲೆ ಬೆಂಗಳೂರಿನಲ್ಲಿ ಸುಮಾರು 3 ಕೋಟಿ ರೂಪಾಯಿಗಳಿವೆ.
ಇದನ್ನೂ ಓದಿ: ದರ್ಶನ್ರ ಮತ್ತೊಂದು ಸಿನಿಮಾ ಮರು ಬಿಡುಗಡೆಗೆ ಸಜ್ಜು
ಗಣೇಶ್ ಕುಟುಂಬ ಕಾರನ್ನು ಡೆಲಿವರಿ ತೆಗೆದುಕೊಳ್ಳುತ್ತಿರುವ ವಿಡಿಯೋವನ್ನು ಏಜೆನ್ಸಿಯವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಗಣೇಶ್ರ ಪುತ್ರನಿಗೆ ಹಾರು, ಪೇಟ ಹಾಕಿ, ಹೂಗುಚ್ಛ ನೀಡಿ ಕಾರನ್ನು ಡೆಲಿವರಿ ನೀಡಲಾಗಿದೆ. ಗಣೇಶ್ ದಂಪತಿಗಳು ಕೇಕ್ ಕತ್ತರಿಸಿ, ಎಲ್ಲರಿಗೂ ಸಿಹಿ ನೀಡಿ, ಹೊಸ ಕಾರು ಖರೀದಿ ಮಾಡಿದ್ದನ್ನು ಸಂಭ್ರಮಿಸಿದ್ದಾರೆ.
ಗಣೇಶ್ ನಟನೆಯ ಈ ಹಿಂದಿನ ಸಿನಿಮಾ ‘ಕೃಷ್ಣಂ ಪ್ರಣಯ ಸಖಿ’ ಸೂಪರ್ ಹಿಟ್ ಆಗಿದೆ. ಇದೀಗ ಕೆಲ ಹೊಸ ಸಿನಿಮಾಗಳಲ್ಲಿ ಗಣೇಶ್ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಗಣೇಶ್ ನಟನೆಯ ‘ಯುವರ್ ಸಿನ್ಸಿಯರ್ಲಿ ರಾಮ್’ ಹೆಸರಿನ ಸಿನಿಮಾ ಸೆಟ್ಟೇರಿದೆ. ಸಿನಿಮಾದಲ್ಲಿ ರಮೇಶ್ ಅರವಿಂದ್ ಸಹ ಇದ್ದಾರೆ. ಇದರ ಹೊರತಾಗಿ ಇನ್ನೂ ಎರಡು ಸಿನಿಮಾಗಳು ಪ್ರಸ್ತುತ ಗಣೇಶ್ ಕೈಯಲ್ಲಿವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ