Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾನು ಹಾಡಿದ್ರೆ ಪಿಬಿ ಶ್ರೀನಿವಾಸ್​ಗೆ ಆಫರ್ ಸಿಗಲ್ಲ’ ಎಂದಿದ್ದ ರಾಜ್​ಕುಮಾರ್; ಅಣ್ಣಾವ್ರ ಒಳ್ಳೆ ಮನಸ್ಸಿನ ಬಗ್ಗೆ ಇಳಯರಾಜ ಅಪರೂಪದ ಮಾತು

ರಾಜ್​ಕುಮಾರ್ ಅವರು ‘ಯಾರೇ ಕೂಗಾಡಲಿ..’ ಹಾಡನ್ನು ಹಾಡಿದ್ದರು. ಈ ಹಾಡನ್ನು ರಾಜ್​ಕುಮಾರ್ ಅವರ ಬಳಿ ಹಾಡಿಸೋ ಆಲೋಚನೆ ಯಾರಿಗೂ ಇರಲಿಲ್ಲ. ಈ ಆಲೋಚನೆ ಮೊದಲು ಬಂದಿದ್ದು ಇಳಯರಾಜ ಹಾಗೂ ಜಿಕೆ ವೆಂಕಟೇಶ್ ಅವರಿಗೆ.

‘ನಾನು ಹಾಡಿದ್ರೆ ಪಿಬಿ ಶ್ರೀನಿವಾಸ್​ಗೆ ಆಫರ್ ಸಿಗಲ್ಲ’ ಎಂದಿದ್ದ ರಾಜ್​ಕುಮಾರ್; ಅಣ್ಣಾವ್ರ ಒಳ್ಳೆ ಮನಸ್ಸಿನ ಬಗ್ಗೆ ಇಳಯರಾಜ ಅಪರೂಪದ ಮಾತು
‘ನಾನು ಹಾಡಿದ್ರೆ ಪಿಬಿ ಶ್ರೀನಿವಾಸ್​ಗೆ ಆಫರ್ ಸಿಗಲ್ಲ’ ಎಂದಿದ್ದ ರಾಜ್​ಕುಮಾರ್
Follow us
ರಾಜೇಶ್ ದುಗ್ಗುಮನೆ
|

Updated on:Oct 17, 2024 | 12:10 PM

ರಾಜ್​ಕುಮಾರ್ ಅವರ ಕಂಠಕ್ಕೆ ಮರುಳಾಗದವರೇ ಇಲ್ಲ. ಅವರು ಮೊದಲ ಹಾಡಿದ್ದು ಎಂದರೆ ಅದು ‘ಸಂಪತ್ತಿಗೆ ಸವಾಲ್’ ಚಿತ್ರದ ‘ಯಾರೇ ಕೂಗಾಡಲಿ..’ ಹಾಡನ್ನು. ರಾಜ್​ಕುಮಾರ್ ಅವರು ಗಾಯಕ ಆಗಲು ಕಾರಣವಾಗಿದ್ದು ಇಳಯರಾಜ ಅವರು ಅನ್ನೋದು ವಿಶೇಷ. ಈ ಬಗ್ಗೆ ಇಳಯರಾಜ ಇತ್ತೀಚೆಗೆ ಹೇಳಿಕೊಂಡಿದ್ದರು. ಮೈಸೂರು ದಸರಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದರು.

‘ಸಂಪತ್ತಿಗೆ ಸವಾಲ್’ ಚಿತ್ರಕ್ಕೆ ಜಿಕೆ ವೆಂಕಟೇಶ್ ಸಂಗೀತ ಸಂಯೋಜನೆ ಮಾಡಿದ್ದರು. ನಾನು ಅವರಿಗೆ ಸಹಾಯಕನಾಗಿದ್ದೆ. ಆಗ ರಾಜ್​ಕುಮಾರ್ ಸಿನಿಮಾಗಳು ಎಂದಾಗ ಪಿಬಿ ಶ್ರೀನಿವಾಸ್ ಹಾಡುತ್ತಿದ್ದರು. ಈ ಸಿನಿಮಾದ ಹಾಡನ್ನು ಹೊಸ ಧ್ವನಿ ಬೇಕು ಎಂದು ನಾನು ಜಿಕೆ ವೆಂಟಕೇಶ್ ಹತ್ತಿರ ಹೇಳಿದೆ’ ಎಂದು ಅಂದಿನ ಘಟನೆ ವಿವರಿಸಿದರು ಇಳಯರಾಜ.

‘ಜಿಕೆ ವೆಂಕಟೇಶ್ ಅವರು ಎಸ್​ಪಿ ಬಾಲಸುಬ್ರಹ್ಮಣ್ಯ ಹೆಸರು ಹೇಳಿದರು. ಬೇಡ ಎಂದೆ. ಆ ಬಳಿಕ ರಾಜ್​ಕುಮಾರ್ ಅವರ ಹತ್ತಿರವೇ ಹಾಡಿಸಿದರೆ ಹೇಗೆ ಎಂದು ಜಿಕೆವಿ ಕೇಳಿದರು. ರಾಜ್​ಕುಮಾರ್ ಹಾಡ್ತಾರಾ ಎಂದು ಪ್ರಶ್ನೆ ಮಾಡಿದೆ. ಹೌದು, ಅವರ ಧ್ವನಿ ಉತ್ತಮವಾಗಿದೆ. ಅವರು ರಂಗಭೂಮಿಯಿಂದ ಬಂದವರು ಎಂದು ಜಿಕೆವಿ ಹೇಳಿದರು. ಅವರೇ ಹಾಡಿದರೆ ಉತ್ತಮ ಎಂದು ನಿರ್ಧರಿಸಲಾಯಿತು’ ಎಂದಿದ್ದಾರೆ ರಾಜ್​ಕುಮಾರ್.

‘ಈ ವಿಚಾರವನ್ನು ರಾಜ್​ಕುಮಾರ್ ಬಳಿ ಹೇಳಲಾಯಿತು. ಈ ಹಾಡನ್ನು ಪಿಬಿ ಶ್ರೀನಿವಾಸ್ ಅವರೇ ಹಾಡಲಿ ಬಿಟ್ಟುಬಿಡಲಿ, ಇದರಿಂದ ಅವರ ಜೀವನ ನಡೆಯುತ್ತಿದೆ ಎಂದು ರಾಜ್​ಕುಮಾರ್ ಹೇಳಿದ್ದರು. ಅವರ ಒಳ್ಳೆಯತನ ಎಷ್ಟಿತ್ತು ನೋಡಿ’ ಎಂದಿದ್ದಾರೆ ಇಳಯರಾಜ. ತಾವು ಹಾಡಿದರೆ ಪಿಬಿಎಸ್​ಗೆ ಆಫರ್​ಗಳು ಇರುವುದಿಲ್ಲವಲ್ಲ ಎನ್ನುವ ಬೇಸರ ರಾಜ್​ಕುಮಾರ್​ಗೆ ಕಾಡಿತ್ತು.

ಇದನ್ನೂ ಓದಿ: ‘ನಾನು ಎಮ್ಮೆ ಕಾದವನು ಎಂಎ ಮಾಡಿದವನಲ್ಲ, ನನಗೇಕೆ ಡಾಕ್ಟರೇಟ್’ ಎಂದು ಕೇಳಿದ್ದ ರಾಜ್​ಕುಮಾರ್

‘ಜಿಕೆವಿ ಅವರ ಬಳಿ ಹಾಡಿ ತೋರಿಸಿ ಎಂದರು ರಾಜ್​ಕುಮಾರ್. ಹಾಡಿ ತೋರಿಸಿದಾಗ ಅವರು ಖುಷಿಪಟ್ಟರು. ನಾನೇ ಹಾಡುತ್ತೇನೆ ಎಂದರು. ರಾಜ್​ಕುಮಾರ್ ಅಣ್ಣ ಅವರ ಬಳಿ ಮೊದಲು ಹಾಡಿಸಿದ್ದು ನಾನೇ’ ಎಂದರು ಇಳಯರಾಜ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:10 pm, Thu, 17 October 24

ಹೊಸ ಪಕ್ಷ ಕಟ್ಟಲ್ಲ ಎಂದಿದ್ದ ಬಸನಗೌಡ ಯತ್ನಾಳ್ ಗೊಂದಲದಲ್ಲಿರೋದು ಸ್ಪಷ್ಟ
ಹೊಸ ಪಕ್ಷ ಕಟ್ಟಲ್ಲ ಎಂದಿದ್ದ ಬಸನಗೌಡ ಯತ್ನಾಳ್ ಗೊಂದಲದಲ್ಲಿರೋದು ಸ್ಪಷ್ಟ
ಕಚ್ಚಲೆಂದು ಬಂದ ಹಾವು, ಅದೇ ವೇಗದಲ್ಲಿ ವಾಪಸ್ ಹೋಗಿದ್ದೇಕೆ?
ಕಚ್ಚಲೆಂದು ಬಂದ ಹಾವು, ಅದೇ ವೇಗದಲ್ಲಿ ವಾಪಸ್ ಹೋಗಿದ್ದೇಕೆ?
ಹಂತಕರು ನೇಪಾಳಿ ಮಂಜನಿಗೆ ಅಪರಚಿತರಾಗಿರಲಿಲ್ಲ, ಅವರೇ ಊಟಕ್ಕೆ ಕರೆಸಿದ್ದರು
ಹಂತಕರು ನೇಪಾಳಿ ಮಂಜನಿಗೆ ಅಪರಚಿತರಾಗಿರಲಿಲ್ಲ, ಅವರೇ ಊಟಕ್ಕೆ ಕರೆಸಿದ್ದರು
ಫ್ಲೈಓವರ್​ನಿಂದ ಸರ್ವೀಸ್ ರಸ್ತೆಗೆ ಬಿದ್ದ ತೈಲ ಟ್ಯಾಂಕರ್, ಭಯಾನಕ ವಿಡಿಯೋ
ಫ್ಲೈಓವರ್​ನಿಂದ ಸರ್ವೀಸ್ ರಸ್ತೆಗೆ ಬಿದ್ದ ತೈಲ ಟ್ಯಾಂಕರ್, ಭಯಾನಕ ವಿಡಿಯೋ
ಮಂಗಳೂರಿನಲ್ಲಿ ರಂಜಾನ್: ಸಾಮೂಹಿಕ ಪ್ರಾರ್ಥನೆಯಲ್ಲಿ ಸ್ಪೀಕರ್ ಖಾದರ್ ಭಾಗಿ
ಮಂಗಳೂರಿನಲ್ಲಿ ರಂಜಾನ್: ಸಾಮೂಹಿಕ ಪ್ರಾರ್ಥನೆಯಲ್ಲಿ ಸ್ಪೀಕರ್ ಖಾದರ್ ಭಾಗಿ
ಮಸೀದಿ ಎದುರು ಮಹಿಳೆ-ಭದ್ರತಾ ಅಧಿಕಾರಿ ಪರಸ್ಪರ ಕಪಾಳಮೋಕ್ಷ
ಮಸೀದಿ ಎದುರು ಮಹಿಳೆ-ಭದ್ರತಾ ಅಧಿಕಾರಿ ಪರಸ್ಪರ ಕಪಾಳಮೋಕ್ಷ
ಇಂದು ದೇಶಾದ್ಯಂತ ರಂಜಾನ್ ಹಬ್ಬ ಆಚರಣೆ: 30 ದಿನಗಳ ಉಪವಾಸ ಅಂತ್ಯ
ಇಂದು ದೇಶಾದ್ಯಂತ ರಂಜಾನ್ ಹಬ್ಬ ಆಚರಣೆ: 30 ದಿನಗಳ ಉಪವಾಸ ಅಂತ್ಯ
ಯಾರಾದ್ರೂ ಸತ್ರಾ? ಪಾದಚಾರಿಗಳಿಗೆ ಗುದ್ದಿದ್ಮೇಲೆ ಕಾರು ಚಾಲಕ ಕೇಳಿದ್ದಿದು
ಯಾರಾದ್ರೂ ಸತ್ರಾ? ಪಾದಚಾರಿಗಳಿಗೆ ಗುದ್ದಿದ್ಮೇಲೆ ಕಾರು ಚಾಲಕ ಕೇಳಿದ್ದಿದು
ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಓಕುಳಿ ಉತ್ಸವ ಸಂಭ್ರಮ
ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಓಕುಳಿ ಉತ್ಸವ ಸಂಭ್ರಮ
Devotional: ಮಹಿಳೆಯರಿಗೆ ಕೈ ಕೆರೆತವಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?
Devotional: ಮಹಿಳೆಯರಿಗೆ ಕೈ ಕೆರೆತವಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?