ಪ್ರೀತಿ ಉಳಿಸಿಕೊಳ್ಳಲು ಗಣೇಶ್ ಪರದಾಟ: ‘ಬಾನ ದಾರಿಯಲ್ಲಿ’ ಟ್ರೈಲರ್ ಬಿಡುಗಡೆ

Baana Daariyalli: ಗಣೇಶ್ ನಟನೆಯ 'ಬಾನ ದಾರಿಯಲ್ಲಿ' ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಸಖತ್ ಕಲರ್​ಫುಲ್ ಆಗಿ ಸಿನಿಮಾವನ್ನು ಚಿತ್ರೀಕರಿಸಲಾಗಿದ್ದು, ಸಿನಿಮಾದಲ್ಲಿ ರೊಮ್ಯಾಂಟಿಕ್ ಆದ ಪ್ರೇಮಕತೆಯಿದೆ. ಸಿನಿಮಾ ಸೆಪ್ಟೆಂಬರ್ 28 ರಂದು ಬಿಡುಗಡೆ ಆಗುತ್ತಿದೆ.

ಪ್ರೀತಿ ಉಳಿಸಿಕೊಳ್ಳಲು ಗಣೇಶ್ ಪರದಾಟ: ಬಾನ ದಾರಿಯಲ್ಲಿ ಟ್ರೈಲರ್ ಬಿಡುಗಡೆ
ಬಾನ ದಾರಿಯಲ್ಲಿ

Updated on: Sep 05, 2023 | 9:02 PM

‘ಪ್ರೀತಿ ಕಳೆದುಕೊಂಡರೆ ತುಂಬಾ ಕಷ್ಟ ಅಂತಾರೆ, ಪ್ರೀತಿಸಿದ ಹುಡುಗಿಯನ್ನೇ ಕಳೆದುಕೊಂಡರೆ?’ ಗಣೇಶ್ (Ganesh) ನಟನೆಯ ‘ಬಾನ ದಾರಿಯಲ್ಲಿ ಸಿನಿಮಾದ ಸಂಭಾಷಣೆ ಇದು. ಈ ಸಂಭಾಷಣೆಯೊಂದೇ ಸಾಕು ಗಣೇಶ್ ಅಭಿಮಾನಿಗಳು ಹುರುಪು ತುಂಬಿಕೊಳ್ಳಲು. ‘ಬಾನ ದಾರಿಯಲ್ಲಿ’ ಸಿನಿಮಾದ ಮೂಲಕ ಮತ್ತೊಂದು ರೊಮ್ಯಾಂಟಿಕ್, ಸ್ಯಾಡ್ ಪ್ರೇಮಕತೆಯೊಂದಿಗೆ ಗಣೇಶ್ ಮರಳಿದ್ದಾರೆ. ‘ಬಾನ ದಾರಿಯಲ್ಲಿ’ ಸಿನಿಮಾದ ಟ್ರೈಲರ್ ಇಂದು (ಸೆಪ್ಟೆಂಬರ್ 05) ಬಿಡುಗಡೆ ಆಗಿದ್ದು, ಸಿನಿಮಾದಲ್ಲಿ ಪ್ರೇಮದರ್ಶನದ ಜೊತೆಗೆ ವಿಶ್ವಪರ್ಯಟನೆಯನ್ನು ಮಾಡಿಸಿದಂತೆ ಚಿತ್ರತಂಡ.

ಟ್ರೈಲರ್​ನಲ್ಲಿ ಗಣೇಶ್ ಹಾಗೂ ನಟಿ ರೀಮಾ ನಾಣಯ್ಯ, ರುಕ್ಮಿಣಿ ವಸಂತ್ ಅವರುಗಳ ಜೊತೆಗೆ ರಂಗಾಯಣ ರಘು ಸಹ ಪದೇ ಪದೇ ಕಾಣಿಸಿಕೊಂಡಿದ್ದಾರೆ. ಜಾಲಿ ಹುಡುಗನೊಬ್ಬ ಗಂಭೀರವಾಗಿ ಪ್ರೀತಿಯಲ್ಲಿ ಬಿದ್ದು, ಆ ಪ್ರೀತಿಗೆ ಪ್ರೀತಿಸಿದ ಹುಡುಗಿಯ ಪೋಷಕರು ಅಡ್ಡಾದಾಗ ಶಕ್ತಿ ಬಳಸಿ ಅಲ್ಲದೆ ವ್ಯಕ್ತಿತ್ವ ಬಳಸಿ ಹೇಗೆ ಅಡ್ಡಿಯನ್ನು ತೊಲಗಿಸಿ ಪ್ರೀತಿಯನ್ನು ಒಲಿಸಿಕೊಳ್ಳುತ್ತಾನೆ, ಅಸಲಿಗೆ ನಿಜಕ್ಕೂ ಪ್ರೀತಿಯನ್ನು ಒಲಿಸಿಕೊಳ್ಳುತ್ತಾನೋ ಅಥವಾ ಇಲ್ಲವೋ ಎಂಬುದೇ ಕತೆ.

ಇದನ್ನೂ ಓದಿ:Viral Video: ಸಪ್ತಸಾಗರದಾಚೆ ಎಲ್ಲೋ; ಸುನಿಧಿ ಗಣೇಶ್ ಹಾಡಿರುವ ಟೈಟಲ್ ಟ್ರ್ಯಾಕ್​ ವೈರಲ್

ಗಣೇಶ್ ಟ್ರೇಡ್​ಮಾರ್ಕ್ ಆದ ಕಾಮಿಡಿ, ರೊಮ್ಯಾನ್ಸ್, ತರ್ಲೆ, ಸುಂದರವಾದ ನಟಿಯರು, ಅಷ್ಟೆ ಸುಂದರವಾದ ಹಾಡುಗಳು ಈ ಸಿನಿಮಾದಲ್ಲಿಯೂ ಇವೆಯೆಂಬುದು ಟ್ರೈಲರ್ ಮೂಲಕ ತಿಳಿದು ಬರುತ್ತಿದೆ. ಸಿನಿಮಾವನ್ನು ಕರ್ನಾಟಕ ಮಾತ್ರವೇ ಅಲ್ಲದೆ ಹೊರದೇಶಗಳಲ್ಲಿಯೂ ಚಿತ್ರೀಕರಿಸಿರುವುದು ತಿಳಿದು ಬರುತ್ತಿದೆ. ಪ್ರಾಣಿ ಸಫಾರಿ, ಸಮುದ್ರ ಸರ್ಫಿಂಗ್, ಕ್ರಿಕೆಟ್ ಆಟ ಇನ್ನೂ ಹಲವನ್ನು ಈ ಸಿನಿಮಾ ಒಳಗೊಂಡಿದೆ.

‘ಬಾನ ದಾರಿಯಲ್ಲಿ’ ಸಿನಿಮಾ ಟ್ರೈಲರ್

‘ಬಾನ ದಾರಿಯಲ್ಲಿ’ ಸಿನಿಮಾವನ್ನು ಗಣೇಶ್​ರ ಹಳೆಯ ಗೆಳೆಯ ಪ್ರೀತಂ ಗುಬ್ಬಿ ನಿರ್ದೇಶನ ಮಾಡಿದ್ದಾರೆ. ಸಿನಿಮಾವನ್ನು ಸಖತ್ ಕಲರ್​ಫುಲ್ ಆಗಿ ನಿರ್ದೇಶನ ಮಾಡಿದ್ದಾರೆ. ಹಲವು ಹೊಸ ಲೊಕೇಶನ್​ಗಳಲ್ಲಿ ಶೂಟ್ ಮಾಡಲಾಗಿದೆ. ಸಿನಿಮಾಕ್ಕೆ ಸಂಗೀತವನ್ನು ಅರ್ಜುನ್ ಜನ್ಯ ನೀಡಿದ್ದಾರೆ. ಅಭಿಲಾಷ್ ಕಲಾತಿ ಸಿನಿಮಾಟೊಗ್ರಫಿ ಜವಾಬ್ದಾರಿ ನಿಭಾಯಿಸಿದ್ದಾರೆ. ‘ಬಾನ ದಾರಿಯಲ್ಲಿ’ ಸಿನಿಮಾವು ಸೆಪ್ಟೆಂಬರ್ 28ಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 7:49 pm, Tue, 5 September 23