‘ಸಖತ್’​ ಸಿನಿಮಾ ಫಸ್ಟ್​ ಹಾಫ್​ ರಿಪೋರ್ಟ್​; ಗಣೇಶ್​-ಸುನಿ ಚಿತ್ರದ ಮೊದಲಾರ್ಧದಲ್ಲಿ ಏನುಂಟು, ಏನಿಲ್ಲ?

Sakath Movie Review: ‘ಗೋಲ್ಡನ್​ ಸ್ಟಾರ್​’ ಗಣೇಶ್​ ಮತ್ತು ನಿರ್ದೇಶಕ ಸಿಂಪಲ್​ ಸುನಿ ಕಾಂಬಿನೇಷನ್​ನಲ್ಲಿ ಮೂಡಿಬಂದಿರುವ ‘ಸಖತ್​’ ಸಿನಿಮಾ ಬಿಡುಗಡೆಯಾಗಿ ಪ್ರೇಕ್ಷಕರನ್ನು ರಂಜಿಸುತ್ತಿದೆ. ಈ ಚಿತ್ರದ ಫಸ್ಟ್​ ಹಾಫ್​ ಹೇಗಿದೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ..

‘ಸಖತ್’​ ಸಿನಿಮಾ ಫಸ್ಟ್​ ಹಾಫ್​ ರಿಪೋರ್ಟ್​; ಗಣೇಶ್​-ಸುನಿ ಚಿತ್ರದ ಮೊದಲಾರ್ಧದಲ್ಲಿ ಏನುಂಟು, ಏನಿಲ್ಲ?
‘ಗೋಲ್ಡನ್​ ಸ್ಟಾರ್​’ ಗಣೇಶ್​

ಇದೇ ಮೊದಲ ಬಾರಿಗೆ ನಟ ಗಣೇಶ್ (Golden Star Ganesh)​ ಅವರು ‘ಸಖತ್​’ (Sakath Kannada Movie) ಸಿನಿಮಾದಲ್ಲಿ ಅಂಧನ ಪಾತ್ರ ಮಾಡಿದ್ದಾರೆ. ಸಿಂಪಲ್​ ಸುನಿ (Simple Suni) ನಿರ್ದೇಶನ ಮಾಡಿರುವ ಈ ಚಿತ್ರ ಇಂದು (ನ.26) ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಗಣೇಶ್​ಗೆ ನಾಯಕಿಯರಾಗಿ ನಿಶ್ವಿಕಾ ನಾಯ್ಡು ಮತ್ತು ಸುರಭಿ ಪುರಾಣಿಕ್​ ನಟಿಸಿದ್ದಾರೆ. ಚಿತ್ರದ ಹಾಡುಗಳಿಗೆ ಜೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ಕಾಮಿಡಿ ನಟರಾದ ಸಾಧುಕೋಕಿಲ, ಧರ್ಮಣ್ಣ, ಕುರಿ ಪ್ರತಾಪ್​ ಕೂಡ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ಹಾಸ್ಯದ ನಿರೂಪಣೆಯಲ್ಲಿ ಸಿನಿಮಾ ಮೂಡಿಬಂದಿದ್ದು, ಮೊದಲಾರ್ಧದಲ್ಲಿ ಪ್ರೇಕ್ಷಕರಿಗೆ ಇಷ್ಟ ಆಗುವಂತಹ ಅನೇಕ ಅಂಶಗಳಿವೆ. ಹಾಸ್ಯಕ್ಕೆ ಹೆಚ್ಚು ಮಹತ್ವ ನೀಡಲಾಗಿದೆ.

  • ಹೀರೋ ಪಾತ್ರದ ಇಂಟ್ರಡಕ್ಷನ್​ನಿಂದ ಮಧ್ಯಂತರದವರೆಗೂ ಸಿನಿಮಾದಲ್ಲಿ ಸಖತ್​ ಕಾಮಿಡಿ ಇದೆ. ಗಣೇಶ್​,  ಸಾಧುಕೋಕಿಲ, ಕುರಿ ಪ್ರತಾಪ್​ ಮತ್ತು ಧರ್ಮಣ್ಣ ಅವರು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತಾರೆ.
  • ಮೊದಲಾರ್ಧದಲ್ಲಿ ರಿಯಾಲಿಟಿ ಶೋ ಮತ್ತು ಸೋಶಿಯಲ್​ ಮೀಡಿಯಾ ಬಗ್ಗೆ ಅನೇಕ ವಿಚಾರಗಳನ್ನು ಹೇಳಲಾಗಿದೆ. ಅದು ಪ್ರೇಕ್ಷಕರಿಗೆ ಹೆಚ್ಚು ಕನೆಕ್ಟ್​ ಆಗುತ್ತದೆ. ನಿರೂಪಣೆ ತುಂಬ ಫನ್​ ಆಗಿ ಮೂಡಿಬಂದಿದೆ.
  • ಕುರುಡನ ರೀತಿ ನಟಿಸುವ ವ್ಯಕ್ತಿಯ ಪಾತ್ರದಲ್ಲಿ ಗಣೇಶ್​ ಕಾಣಿಸಿಕೊಂಡಿದ್ದಾರೆ. ಕಥಾನಾಯಕ ಆ ರೀತಿ ವರ್ತಿಸಲು ಕೂಡ ಒಂದು ಕಾರಣ ಇದೆ. ಆ ಕಾರಣ ಏನೆಂಬುದನ್ನು ಚಿತ್ರಮಂದಿರದಲ್ಲಿ ನೋಡಿ ತಿಳಿದರೆ ಉತ್ತಮ.
  • ಮಧ್ಯಂತರದ ವೇಳೆಗೆ ಒಂದು ಟ್ವಿಸ್ಟ್​ ನೀಡಲಾಗಿದೆ. ಆ ಮೂಲಕ ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿ, ದ್ವಿತೀಯಾರ್ಧಕ್ಕಾಗಿ ಕಾಯುವಂತೆ ಮಾಡಿದ್ದಾರೆ ನಿರ್ದೇಶಕ ಸುನಿ.
  • ಮೊದಲಾರ್ಧದಲ್ಲಿ ಮೂರು ಹಾಡುಗಳಿವೆ. ಆದರೆ ಯಾವುದೇ ಫೈಟಿಂಗ್​ ದೃಶ್ಯಗಳಿಲ್ಲ. ಕಾಮಿಡಿ ಸನ್ನಿವೇಶಗಳು ಅತ್ಯುತ್ತಮವಾಗಿ ಮೂಡಿಬಂದಿವೆ. ಡೈಲಾಗ್​ಗಳು ತುಂಬ ಆಕರ್ಷಿಸುತ್ತವೆ.
  • ಗಣೇಶ್ ಅವರ ಅಭಿನಯ ಮೆಚ್ಚುವಂತಿದೆ. ಹಲವು ದೃಶ್ಯಗಳಲ್ಲಿ ಅವರ ನಟನೆಗೆ ಪ್ರೇಕ್ಷಕರಿಂದ ಶಿಳ್ಳೆ, ಚಪ್ಪಾಳೆ ಸಿಗುತ್ತದೆ. ‘ಗೋಲ್ಡನ್​ ಸ್ಟಾರ್​’ ಅಭಿಮಾನಿಗಳಿಗೆ ಈ ಸಿನಿಮಾ ಹೆಚ್ಚು ಇಷ್ಟ ಆಗುತ್ತದೆ.

ಇದನ್ನೂ ಓದಿ:

ಬಾಕ್ಸ್​ ಆಫೀಸ್​ನಲ್ಲಿ ಸ್ಟಾರ್​ ಸಿನಿಮಾಗಳ ಪೈಪೋಟಿ; ಈ ವಾರ ಬಾಲಿವುಡ್​ ಮಂದಿ ಎದುರು ‘ಸಖತ್​’​ ಮುಖಾಮುಖಿ

‘ಸಖತ್​’ ಜತೆ ತೆರೆಕಂಡ ‘ಗೋರಿ’; ಉತ್ತರ ಕರ್ನಾಟಕ ಪ್ರತಿಭೆಗಳ ಕನಸಿನ ಕಿರಣ

Click on your DTH Provider to Add TV9 Kannada