Nidhi Subbaiah Birthday: ಪಂಚರಂಗಿ ನಿಧಿ ಸುಬ್ಬಯ್ಯಗೆ ಇಂದು ಹುಟ್ಟು ಹಬ್ಬದ ಸಂಭ್ರಮ

Nidhi Subbaiah Birthday: ಇಂದು ನಟಿ ನಿಧಿ ಸುಬ್ಬಯ್ಯ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

Nidhi Subbaiah Birthday: ಪಂಚರಂಗಿ ನಿಧಿ ಸುಬ್ಬಯ್ಯಗೆ ಇಂದು ಹುಟ್ಟು ಹಬ್ಬದ ಸಂಭ್ರಮ
ನಟಿ ನಿಧಿ ಸುಬ್ಬಯ್ಯ

Updated on: Feb 16, 2021 | 2:40 PM

ಕೊಡಗಿನ ಬೆಡಗಿ, ನಟಿ ನಿಧಿ ಸುಬ್ಬಯ್ಯಗೆ ಇಂದು ಹುಟ್ಟು ಹಬ್ಬದ ಸಂಭ್ರಮ.  ಕನ್ನಡ ಮತ್ತು ಹಿಂದಿ ಚಿತ್ರಗಳಲ್ಲಿ ನಿಧಿ ಅಭಿನಯಿಸಿದ್ದಾರೆ.  1987ರಲ್ಲಿ ಜನಿಸಿದವರು. ಬೊಲ್ಲಚಂದ ಸುಭಾಷ್ ಸುಬ್ಬಯ್ಯ ಮತ್ತು ಜಾನ್ಸಿ ಸುಬ್ಬಯ್ಯ ಅವರ ಪುತ್ರಿ ನಿಧಿ. ಕನ್ನಡ, ಹಿಂದಿ ಮತ್ತು ತೆಲುಗು ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ ನಿಧಿ. ಕನ್ನಡದಲ್ಲಿ ಪಂಚರಂಗಿ ಚಿತ್ರದ ಮೂಲಕ ಹೆಚ್ಚು ಜನಮನಗೆದ್ದು ಅಭಿಮಾನಿಗಳ ಪ್ರೀತಿ ಗಳಿಸಿಕೊಂಡಿದ್ದಾರೆ.

ಕಾಲೇಜು ವಿದ್ಯಾಭ್ಯಾಸದ ನಂತರ ನಿಧಿ ಮಾಡೆಲಿಂಗ್​ ಮಾಡುತ್ತಿದ್ದರು. ನಂತರದ ದಿನಗಳಲ್ಲಿ ಚಿತ್ರರಂಗಕ್ಕೆ ಪ್ರವೇಶಿಸಿದ್ದು. ಮೊದಲಿಗೆ ಅಭಿಮಾನಿ ಎಂಬ ಸಿನಿಮಾದಿಂದ ಚಿತ್ರರಂಗ ಪ್ರವೇಶಿಸಿದರು. ಹಾಗೂ ನಿರ್ದೇಶಕ ಯೋಗರಾಜ್ ಭಟ್ ಪಂಚರಂಗಿ ಚಿತ್ರದಲ್ಲಿ ನಟ ದಿಗಂತ್​ ಜೊತೆ ನಟಿಯಾಗಿ ಪಂಚರಂಗಿ ಚಿತ್ರದಲ್ಲಿ ಅಭಿನಯಿಸಿದರು.

ನಿಧಿ ಸುಬ್ಬಯ್ಯ

ನಿಧಿ ಸುಬ್ಬಯ್ಯ ಚಿತ್ರರಂಗಕ್ಕೆ ಪ್ರವೇಶಿ 13ಕ್ಕಿಂತಲೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡ, ಹಿಂದಿ ಹಾಗೂ ತೆಲುಗು ಭಾಷೆಯಲ್ಲಿ ಸಿನಿಮಾ ಮಾಡಿದ್ದಾರೆ. ಅಭಿಮಾನಿ (2009), ಚಮ್ಕಾಯ್ಸಿ ಚಿಂದಿ ಉಡಾಯ್ಸಿ (2009), ಸ್ವೀಟ್​ ಹಾರ್ಟ್​ (2009), ಕೃಷ್ಣ ನೀ ಲೇಟಾಗಿ ಬಾರೋ(2010), ಬೆಟ್ಟಿಂಗ್ ಬಂಗಾರರಾಜು(2010), ಪಂಚರಂಗಿ(2010), ವೀರಬಾಹು(2011), ಕೃಷ್ಣನ್ ಮ್ಯಾರೇಜ್ ಸ್ಟೋರಿ(2011), ಅಣ್ಣಾ ಬಾಂಡ್(2012), ಓಹ್​ ಮೈ ಗಾಡ್(2012), ಅಜಬ್ ಗಜಬ್ ಲವ್(2012), ಸ್ಕೂಲ್ ಡೇಸ್(2012) ಹಾಗೂ ವರ(2015) ಇವುಗಳು ನಿಧಿ ಸುಬ್ಬಯ್ಯ ನಟಿಸಿರುವ ಚಿತ್ರಗಳಾಗಿವೆ.

ನಟಿ ನಿಧಿ ಸುಬ್ಬಯ್ಯಗೆ ಹುಟ್ಟು ಹಬ್ಬದ ಸಂಭ್ರಮ

Published On - 2:02 pm, Tue, 16 February 21