ಶರಣ್ ನಟನೆಯ ‘ಅಧ್ಯಕ್ಷ’ ಸಿನಿಮಾ ನೋಡಿದವರಿಗೆ ನಟಿ ಹೆಬಾ ಪಟೇಲ್ ಅವರ ಪರಿಚಯ ಇದ್ದೇ ಇರುತ್ತದೆ. ಅದು ಅವರ ಮೊದಲ ಸಿನಿಮಾ ಕೂಡ ಹೌದು. ಆ ಸಿನಿಮಾ ಮೂಲಕ ಅವರು ತಮ್ಮದೇ ಛಾಪು ಮೂಡಿಸಿದರು. ಬಳಿಕ ಅವರಿಗೆ ತಮಿಳು, ತೆಲುಗಿನಲ್ಲಿ ಸಿಕ್ಕಾಪಟ್ಟೆ ಅವಕಾಶಗಳು ಸಿಕ್ಕವು. ಬೇಡಿಕೆಯ ನಟಿಯಾಗಿ ಅವರು ಗುರುತಿಸಿಕೊಂಡರು. ಈಗ ಮತ್ತೆ ಅವರು ಕನ್ನಡ ಚಿತ್ರರಂಗಕ್ಕೆ ಕಮ್ಬ್ಯಾಕ್ ಮಾಡುತ್ತಿದ್ದಾರೆ ಎಂಬುದು ವಿಶೇಷ. ‘ರಾಮರಸ’ ಸಿನಿಮಾದಲ್ಲಿ ಹೆಬಾ ಪಟೇಲ್ ಅವರಿಗೆ ವಿಶೇಷವಾದ ಪಾತ್ರ ಇದೆ.
ಗುರು ದೇಶಪಾಂಡೆ ಅವರು ನಿರ್ಮಾಣ ಮಾಡುತ್ತಿರುವ ‘ರಾಮರಸ’ ಸಿನಿಮಾ ಕೌತುಕ ಮೂಡಿಸಿದೆ. ಈ ಸಿನಿಮಾವನ್ನು ‘ಜಿ ಸಿನಿಮಾಸ್’ ಹಾಗೂ ‘ಸೆವೆನ್ ಸ್ಟಾರ್ ಸ್ಟುಡಿಯೋಸ್’ ಮೂಲಕ ನಿರ್ಮಾಣ ಮಾಡಲಾಗುತ್ತಿದೆ. ರಾಷ್ಟ್ರ ಪ್ರಶಸ್ತಿ ಪಡೆದಿರುವ ನಿರ್ದೇಶಕ ಬಿ.ಎಂ. ಗಿರಿರಾಜ್ ಅವರು ‘ರಾಮರಸ’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಈಗ ಚಿತ್ರತಂಡಕ್ಕೆ ಹೆಬಾ ಪಟೇಲ್ ಸೇರ್ಪಡೆ ಆಗಿರುವ ಸುದ್ದಿಯನ್ನು ಹಂಚಿಕೊಳ್ಳಲಾಗಿದೆ.
ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ ಅವರ ‘ರಾಮರಸ’ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸುತ್ತಿದ್ದಾರೆ. ಈ ಸಿನಿಮಾಗೆ ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಹೆಬಾ ಪಟೇಲ್ ನಿಭಾಯಿಸುವ ಪಾತ್ರವನ್ನು ಈ ಸಾಲುಗಳ ಮೂಲಕ ಚಿತ್ರತಂಡ ಬಣ್ಣಿಸಿದೆ.‘ಅವಳ ಅಂದಕ್ಕೆ ಸೋತವರು, ಮಾತಿಗೆ ಮರುಳಾದವರು, ನಡಿಗೆಗೆ ನಡುಗಿದವರಾರೂ, ಭೂಮಿ ಮೇಲೆ ಉಳಿದೇ ಇಲ್ಲ. ಗಂಡಸರ ಆಸೆಗೆ ಅವಳು ಒಂದು ಮಿಸ್ಟರಿ.. ಅವಳೇ ಭ್ರಮರಿ.’
ಇದನ್ನೂ ಓದಿ: ಹಾಟ್ ಆಗಿ ಪಡ್ಡೆಗಳ ಮನಗೆದ್ದ ಹೆಬಾ ಪಟೇಲ್
ಈ ಸಿನಿಮಾದಲ್ಲಿ ಹೆಬಾ ಪಟೇಲ್ ಅವರು ಲುಕ್ ಹೇಗಿರಲಿದೆ ಎಂಬುದನ್ನು ಕೂಡ ಚಿತ್ರತಂಡದವರು ಬಹಿರಂಗಪಡಿಸಿದ್ದಾರೆ. ತುಂಬ ಗ್ಲಾಮರಸ್ ಆಗಿ ಅವರ ಕಾಣಿಸಿಕೊಂಡಿದ್ದಾರೆ. ಫಸ್ಟ್ ಲುಕ್ ಪೋಸ್ಟರ್ ಮೂಲಕ ‘ರಾಮರಸ’ ಸಿನಿಮಾ ಮೇಲಿನ ಕೌತುಕ ಜಾಸ್ತಿ ಆಗಿದೆ. ನಿರ್ಮಾಣದ ಜೊತೆ ಈ ಚಿತ್ರಕ್ಕೆ ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಒಂದು ವಿಶೇಷವಾದ ಕಥಾಹಂದರ ಈ ಸಿನಿಮಾದಲ್ಲಿ ಇರಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.