ಯಶ್ ಪಕ್ಕಾ ಫ್ಯಾಮಿಲಿ ಮ್ಯಾನ್; ಕುಟುಂಬಕ್ಕೆ ಅವರು ಇಷ್ಟೊಂದು ಆದ್ಯತೆ ನೀಡೋದೇಕೆ?
ಯಶ್ ಮತ್ತು ರಾಧಿಕಾ ಪಂಡಿತ್ ಅವರ ಪ್ರೇಮಕಥೆ, ಅವರ ಕುಟುಂಬ ಜೀವನ ಮತ್ತು ಯಶಸ್ಸಿನ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಧಾರಾವಾಹಿಗಳಲ್ಲಿ ನಟಿಸುವಾಗ ರಾಧಿಕಾ ಪರಿಚಯ ಅವರಿಗೆ ಆಯಿತು. ‘ಕೆಜಿಎಫ್’ ಚಿತ್ರದ ಯಶಸ್ಸಿನ ನಂತರವೂ, ಯಶ್ ಅವರು ತಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ಆದ್ಯತೆ ನೀಡುತ್ತಾರೆ. ಅವರ ಸರಳತೆ ಮತ್ತು ಕುಟುಂಬ ಪ್ರೀತಿಯು ಅಭಿಮಾನಿಗಳನ್ನು ಸೆಳೆಯುತ್ತದೆ.
ಜನವರಿ 8 ನಟ ರಾಕಿಂಗ್ ಸ್ಟಾರ್ ಬರ್ತ್ಡೇ. ಯಶ್ ಅವರ ಜನ್ಮದಿನ ಸಮೀಪಿಸಿದೆ. ಅವರು ಈಗ ಪ್ಯಾನ್ ಇಂಡಿಯಾ ಹೀರೋ. ‘ಕೆಜಿಎಫ್ 2’ ಬಳಿಕ ಅವರಿಗೆ ದೊಡ್ಡ ಜನಪ್ರಿಯತೆ ಸಿಕ್ಕಿದೆ. ಇಷ್ಟೆಲ್ಲ ಜನಪ್ರಿಯತೆ ಸಿಕ್ಕರೂ ಅವರು ಕುಟುಂಬ ಮರೆತಿಲ್ಲ. ಅವರು ಪಕ್ಕಾ ಫ್ಯಾಮಿಲಿ ಮ್ಯಾನ್. ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಯಶ್ ಅವರ ಲವ್ ಸ್ಟೋರಿ ಆರಂಭ ಆಗಿದ್ದು ಹೇಗೆ? ಅವರು ಕುಟುಂಬಕ್ಕೆ ಏಕೆ ಅಷ್ಟು ಪ್ರಾಮುಖ್ಯತೆ ಕೊಡುತ್ತಾರೆ? ಆ ಬಗ್ಗೆ ಈ ಸ್ಟೋರಿಯಲ್ಲಿ ಮಾಹಿತಿ ಇದೆ.
ಯಶ್ ಲವ್ ಸ್ಟೋರಿ
ಯಶ್ ಹಾಗೂ ರಾಧಿಕಾ ಪಂಡಿತ್ ಮಧ್ಯೆ ಸಾಕಷ್ಟು ಹೋಲಿಕೆ ಇದೆ. ಇಬ್ಬರೂ ಮೊದಲು ಧಾರಾವಾಹಿಗಳಲ್ಲಿ ನಟಿಸಿದವರು. ಆ ಬಳಿಕ ಹಿರಿತೆರೆಗೆ ಕಾಲಿಟ್ಟರು. ಯಶ್ ಹಾಗೂ ರಾಧಿಕಾ ಪಂಡಿತ್ ಒಂದೇ ಧಾರಾವಾಹಿಯಲ್ಲಿ ನಟಿಸಿದ್ದರು. ಇಬ್ಬರೂ ಹಿರಿತೆರೆಗೆ ಕಾಲಿಟ್ಟಿದ್ದು ‘ಮೊಗ್ಗಿನ ಮನಸು’ ಸಿನಿಮಾಗಳ ಮೂಲಕ. ನಂತರ ‘ಡ್ರಾಮಾ’ ಸಿನಿಮಾ ಸಂದರ್ಭದಲ್ಲಿ ಇವರ ಮಧ್ಯೆ ಪ್ರೀತಿ ಮೂಡಿತು ಎನ್ನಲಾಗಿದೆ. ಅಲ್ಲಿಯವರೆಗೆ ಇಬ್ಬರ ಮಧ್ಯೆ ಒಳ್ಳೆಯ ಗೆಳೆತನ ಮಾತ್ರ ಇತ್ತು.
ಪತಿಗೆ ಬೆಂಬಲ
ರಾಧಿಕಾ ಪಂಡಿತ್ ಹಾಗೂ ಯಶ್ ಹಲವು ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ. ಮದುವೆ ಬಳಿಕ ರಾಧಿಕಾ ಪಂಡಿತ್ ಅವರು ನಟನೆ ತೊರೆದಿದ್ದಾರೆ. ಅವರು ಪತಿಯ ವೃತ್ತಿ ಜೀವನಕ್ಕೆ ಬೆಂಬಲ ನೀಡುತ್ತಾ ಬರುತ್ತಿದ್ದಾರೆ. ಯಶ್ ಅವರು ಸಿನಿಮಾ ಕೆಲಸಗಳಿಗೆ ಬೇರೆ ಬೇರೆ ಕಡೆಗಳಲ್ಲಿ ತೆರಳುವ ಸಂದರ್ಭದಲ್ಲಿ ರಾಧಿಕಾ ಪಂಡಿತ್ ಅವರು ಮಕ್ಕಳನ್ನು ನೋಡಿಕೊಳ್ಳುತ್ತಾ ಇದ್ದಾರೆ.
ಯಶ್ಗೂ ವಿಶೇಷ ಪ್ರೀತಿ
ರಾಧಿಕಾ ಪಂಡಿತ್ ಅವರಿಗೆ ಯಶ್ ಬಗ್ಗೆ ವಿಶೇಷ ಪ್ರೀತಿ ಇರೋದು ಮಾತ್ರವಲ್ಲ, ಯಶ್ಗೂ ರಾಧಿಕಾ ಪಂಡಿತ್ ಬಗ್ಗೆ ವಿಶೇಷ ಕಾಳಜಿ-ಪ್ರೀತಿ ಇದೆ. ಯಶ್ ಅವರು ಸಾಕಷ್ಟು ಪ್ರೀತಿ ತೋರಿಸುತ್ತಾರೆ. ಸಮಯ ಸಿಕ್ಕಾಗ ಅವರು ಕುಟುಂಬದ ಜೊತೆ ಟ್ರಿಪ್ ತೆರಳುತ್ತಾರೆ. ಮಕ್ಕಳ ಜೊತೆ ಸಮಯ ಕಳೆಯುತ್ತಾರೆ. ಯಶ್ ಅವರು ಬಿಡುವು ಸಿಕ್ಕಾಗ ಸಂಪೂರ್ಣ ಕುಟುಂಬದ ಜೊತೆ ಸಮಯ ಕಳೆಯುತ್ತಾರೆ. ಹಬ್ಬಗಳನ್ನು ಅವರು ಕುಟುಂಬದ ಜೊತೆಯೇ ಆಚರಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಯಶ್ ಜನ್ಮದಿನಕ್ಕೆ ಸೂಪರ್ ಸರ್ಪ್ರೈಸ್; ಪೋಸ್ಟರ್ ಮೂಲಕ ಅಪ್ಡೇಟ್ ಕೊಟ್ಟ ‘ಟಾಕ್ಸಿಕ್’ ಟೀಂ
ಯಶ್ ಗೆಳೆಯರು
ಯಶ್ ಅವರ ಗೆಳೆಯರ ವರ್ಗ ತುಂಬಾನೇ ಸಣ್ಣದು. ಅವರಿಗೆ ಇರೋದು ಕೆಲವೇ ಕೆಲವು ಫ್ರೆಂಡ್ಸ್. ಹಾಗಂತ ಅವರು ಯಾವಾಗಲೂ ಗೆಳೆಯರ ಜೊತೆ ಇರೋದಿಲ್ಲ. ಅವರು ಗೆಳೆಯರಿಗಿಂತ ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯಲು ಇಷ್ಟಪಡುತ್ತಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.