ದಕ್ಷಿಣ ಭಾರತ ಚಿತ್ರರಂಗದಿಂದ ವ್ಯಕ್ತವಾಗಿತ್ತು ಸಿಜೆಪಿಗೆ ಭರ್ಜರಿ ಬೆಂಬಲ

Updated on: Jul 25, 2026 | 5:54 PM

CJP Protest: ಸಿಜೆಪಿ (ಕಾಕ್ರೂಚ್ ಜನಪಾ ಪಾರ್ಟಿ)ಯ ಪ್ರತಿಭಟನೆ ಸಫಲಗೊಂಡಿದೆ. ಇಂದು (ಜುಲೈ 25) ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಈ ವಿದ್ಯಾರ್ಥಿ ಪ್ರಭಟನೆಯ ಕೇಂದ್ರ ದೆಹಲಿಯ ಜಂತರ್ ಮಂಥರ್ ಆಗಿದ್ದರೂ ಸಹ ದೇಶದಾದ್ಯಂತ ಪ್ರತಿಭಟನೆಗೆ ಬೆಂಬಲ ವ್ಯಕ್ತವಾಗಿತ್ತು. ಬಾಲಿವುಡ್​​ನ ಹಲವಾರು ಸೆಲೆಬ್ರಿಟಿಗಳು ಮಕ್ಕಳ ಪರ ನಿಂತಿದ್ದರು. ದಕ್ಷಿಣ ಭಾರತ ಚಿತ್ರರಂಗದ ಸದಸ್ಯರು ಸಹ ವಿದ್ಯಾರ್ಥಿಗಳಿಗೆ ಬೆಂಬಲಿಸಿದ್ದರು. ಸಿಜೆಪಿಯ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದ ದಕ್ಷಿಣ ಭಾರತ ನಟ-ನಟಿಯರ ಪಟ್ಟಿ ಇಲ್ಲಿದೆ....

1 / 8
ನಟ ಪ್ರಕಾಶ್ ರೈ ಹಾಗೂ ಕಿಶೋರ್ ಅವರುಗಳು ಈ ಪ್ರತಿಭಟನೆಯ ಆರಂಭದಿಂದಲೂ ವಿದ್ಯಾರ್ಥಿಗಳ ಪರವಾಗಿ ನಿಂತಿದ್ದರು. ನಟ ಪ್ರಕಾಶ್ ರೈ ಅವರು ಖುದ್ದು ದೆಹಲಿಗೆ ಹೋಗಿ ಉಪವಾಸ ನಿರತ ಸೋನಂ ವಾಂಕ್ಚುಕ್ ಅವರನ್ನು ಭೇಟಿ ಮಾಡಿದರು. ನಟ ಕಿಶೋರ್ ಸಹ ಬೆಂಗಳೂರಿನ ಫ್ರೀಡಂ ಪಾರ್ಕ್​​ನಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಸತತವಾಗಿ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸಿದ್ದರು.

2 / 8
ಮಾಜಿ ಕಾಂಗ್ರೆಸ್ ಸಂಸೆದೆ ಮತ್ತು ನಟಿ ರಮ್ಯಾ ಅವರು ಸಹ ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದರು. ಪ್ರತಿಭಟನೆಯ ಹಲವಾರು ವಿಡಿಯೋಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ನಟ ಯುವರಾಜ್ ಕುಮಾರ್ ಸಹ ವಿದ್ಯಾರ್ಥಿಗಳ ಪರವಾಗಿ ಪೋಸ್ಟ್ ಹಂಚಿಕೊಂಡಿದ್ದರು. ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿದ್ದರು.

3 / 8
ಮಲಯಾಳಂ ಚಿತ್ರರಂಗದ ಸೂಪರ್ ಹಿಟ್ ಸಿನಿಮಾ ಆಗಿರುವ ‘ಪ್ರೇಮುಲು’ನ ಇಡೀ ತಂಡ ದೆಹಲಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದರು. ವಿದ್ಯಾರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸಿದರು.

4 / 8
ತಮಿಳಿನಲ್ಲಿ ಕೆಲ ಸಿನಿಮಾ ನಿರ್ದೇಶಕರು, ನಟರುಗಳು ಬೀದಿಗಿಳಿದು ಪ್ರತಿಭಟನೆ ಮಾಡಿದರು. ವಿದ್ಯಾರ್ಥಿಗಳ ಮೇಲೆ ಹಲ್ಲೆ ಖಂಡಿಸಿ ನಿರ್ದೇಶಕ ವೆಟ್ರಿಮಾರನ್, ಪಾ ರಂಜಿತ್, ಮಿಸ್ಕಿನ್, ನಟಿ ಆಂಡ್ರೆಯಾ ಜೆಮೆಯಾ ಅವರುಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದರು.

5 / 8
ನಟಿ ಜ್ಯೋತಿಕಾ ಮತ್ತು ಸೂರ್ಯ ಜೋಡಿ ಸಹ ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಜ್ಯೋತಿಕಾ ಅವರು ಪೋಸ್ಟ್ ಹಂಚಿಕೊಂಡು ವಿದ್ಯಾರ್ಥಿಗಳ ಪರ ಬೆಂಬಲ ವ್ಯಕ್ತಪಡಿಸಿದರೆ. ನಟ ಸೂರ್ಯ ತಮ್ಮ ಸಿನಿಮಾದ ಟ್ರೈಲರ್ ಬಿಡುಗಡೆಯನ್ನೇ ಮುಂದೂಡಿದರು.

6 / 8
ತಮಿಳಿನ ನಟ, ಹಾಲಿ ರಾಜ್ಯಸಭಾ ಸದಸ್ಯರ ಕಮಲ್ ಹಾಸನ್ ಅವರು ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆ ಖಂಡಿಸಿ ಬಹಿರಂಗ ಹೇಳಿಕೆ ಬಿಡುಗಡೆ ಮಾಡಿದ್ದರು. ಮಕ್ಕಳನ್ನು, ಬ್ಯಾರಿಕೇಡ್ ಮತ್ತು ಬಂದೂಕುಗಳಿಂದ ಎದುರುಗೊಳ್ಳಲಾಗಿದೆ ಎಂದಿದ್ದರು. ಮಮ್ಮುಟಿ ಸಹ ತೀವ್ರ ದುಃಖ ವ್ಯಕ್ತಪಡಿಸಿ ಮಕ್ಕಳ ಮಾತು ಕೇಳಿ, ಅವರನ್ನು ಕಾಪಾಡಿ ಎಂದು ಕೇಂದ್ರಕ್ಕೆ ಮನವಿ ಮಾಡಿದ್ದರು.

7 / 8
ಮಲಯಾಳಂ ಸ್ಟಾರ್ ನಟರಾದ ದುಲ್ಕರ್ ಸಲ್ಮಾನ್ ಮತ್ತು ಟೊವಿನೊ ಥಾಮಸ್ ಅವರುಗಳು ಸಹ ದೆಹಲಿ ಪ್ರತಿಭಟನೆ ಮತ್ತು ಅಲ್ಲಿ ನಡೆದ ವಿದ್ಯಾರ್ಥಿಗಳ ಮೇಲಿನ ಹಲ್ಲೆಗೆ ಪ್ರತಿಕ್ರಿಯೆ ನೀಡಿದ್ದರು. ಘಟನೆಯನ್ನು ತೀವ್ರವಾಗಿ ಖಂಡಿಸಿದ್ದರು.

8 / 8
ಕನ್ನಡದ ‘ಮಿಲನ’, ‘ಪೃಥ್ವಿ’ ಸೇರಿದಂತೆ ಇನ್ನೂ ಕೆಲ ಸಿನಿಮಾಗಳಲ್ಲಿ ನಟಿಸಿರುವ ಪಾರ್ವತಿ ಮೆನನ್ ಮತ್ತು ಬಹು ಭಾಷಾ ನಟಿ ರೇವತಿ ಅವರುಗಳು ಸಹ ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆಯನ್ನು ತೀವ್ರವಾಗಿ ಖಂಡಿಸಿದ್ದು, ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿದ್ದರು.

Follow Us