ದರ್ಶನ್ ಮಾಡಿದ ಪಾರ್ಟಿ ದಿನ ನಡೆದಿದ್ದೇನು? ಪೊಲೀಸರಿಂದ ಸಿಕ್ತು ಇಂಚಿಂಚು ಮಾಹಿತಿ

ಸುಬ್ರಮಣ್ಯ ಪೊಲೀಸ್ ಠಾಣೆಯ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಜೆಟ್​ಲ್ಯಾಗ್​ನಲ್ಲಿ ಅಂದು ಏನಾಯಿತು ಎನ್ನುವ ಕುರಿತು ಪೊಲೀಸರು ಮಾಹಿತಿ ನೀಡಿದ್ದಾರೆ.

ದರ್ಶನ್ ಮಾಡಿದ ಪಾರ್ಟಿ ದಿನ ನಡೆದಿದ್ದೇನು? ಪೊಲೀಸರಿಂದ ಸಿಕ್ತು ಇಂಚಿಂಚು ಮಾಹಿತಿ
ಅಭಿಷೇಕ್​-ದರ್ಶನ್
Follow us
Jagadisha B
| Updated By: ರಾಜೇಶ್ ದುಗ್ಗುಮನೆ

Updated on: Jan 09, 2024 | 8:03 AM

ದರ್ಶನ್ ನಟನೆಯ ‘ಕಾಟೇರ’ ಸಿನಿಮಾ (Kaatera Movie) ಸಕ್ಸಸ್​ ಪಾರ್ಟಿ ಬಳಿಕ ದರ್ಶನ್, ಡಾಲಿ ಧನಂಜಯ್, ಅಭಿಷೇಕ್ ಅಂಬರೀಷ್ ಸೇರಿ ಅನೇಕರು ಬೆಂಗಳೂರಿನ ಜೆಟ್​ಲ್ಯಾಗ್​ನಲ್ಲಿ ಮುಂಜಾನೆವರೆಗೆ ಪಾರ್ಟಿ ಮಾಡಿದ್ದರು. ಬೀಟ್ ಪೊಲೀಸರು ಸ್ಟಾರ್​ಗಳಿಗೆ ಪಾರ್ಟಿ ಮಾಡಲು ಅವಕಾಶ ನೀಡಿದ್ದೇಕೆ ಎನ್ನುವ ಪ್ರಶ್ನೆ ಮೂಡಿತ್ತು. ಇದಕ್ಕೆ ವಿಚಾರಣೆ ವೇಳೆ ಪೊಲೀಸರು ಮಾಹಿತಿ ನೀಡಿದ್ದಾರೆ. ಅಂದು ಅಲ್ಲಿ ಆಗಿದ್ದೇನೆ ಎಂಬುದನ್ನು ಮಲ್ಲೇಶ್ವರ ಎಸಿಪಿ ಎದುರು ವಿವರಿಸಿದ್ದಾರೆ.

ಸುಬ್ರಮಣ್ಯ ಪೊಲೀಸ್ ಠಾಣೆಯ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಅಂದು ಅಲ್ಲಿ ಏನಾಯಿತು ಎನ್ನುವ ಕುರಿತು ಅವರು ಮಾಹಿತಿ ನೀಡಿದ್ದಾರೆ. ಪ್ರಕರಣ ನಡೆದ ದಿನ ಮಧ್ಯರಾತ್ರಿ 12.45ಕ್ಕೆ ಜೆಟ್​ಲ್ಯಾಗ್​ಗೆ ಅವತ್ತಿನ ನೈಟ್ ರೌಂಡ್ಸ್ ಇರೋ ಎಸ್​ಐ ಮತ್ತು ಸಿಬ್ಬಂದಿ ಹೋಗಿದ್ದರು. ತಡರಾತ್ರಿ 1:10ಕ್ಕೆ ಎಸ್​ಐ ಜೆಟ್​ಲ್ಯಾಗ್ ರೆಸ್ಟೋಬಾರ್ ಕ್ಲೋಸ್ ಮಾಡಿಸಿದ್ದರು. ಸ್ಟಾರ್​ಗಳು ಒಳಗಡೆ ಇರೋದೇಕೆ ಎಂದು ಎಸ್​ಐ ಪ್ರಶ್ನೆ ಮಾಡಿದ್ದರು.

‘ದರ್ಶನ್ ಸಿನಿಮಾವೊಂದರ ಮಾತು ಕತೆ ನಡೆಯುತ್ತಿದೆ. ದರ್ಶನ್ ನಮ್ಮ ಫ್ಯಾಮಿಲಿ ಫ್ರೆಂಡ್. ಮೇಲೊಂದು ಗಾಜಿನ ರೂಮ್ ಇದೆ. ಅಲ್ಲಿ ಸಿನಿಮಾಗೆ ಸಂಬಂಧಿಸಿದಂತೆ ಮಾತು ಕತೆ ನಡೆಸುತ್ತಿದ್ದೇವೆ’ ಎಂದು ಜೆಟ್​ಲ್ಯಾಗ್ ಮಾಲೀಕರು ಮಾಹಿತಿ ನೀಡಿದ್ದರು. ಅಲ್ಲದೆ ನಟ ದರ್ಶನ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಿರ್ದೇಶಕ ತರುಣ್ ಸುಧೀರ್ ಮಾತ್ರ ಇದ್ದಾರೆ ಎಂದು ಜೆಟ್​ಲ್ಯಾಗ್ ಮಾಲೀಕರು ಮಾಹಿತಿ ನೀಡಿದ್ದರು.

ಈ ನಡುವೆ ಮಧ್ಯರಾತ್ರಿ 2.50ಕ್ಕೆ ಬ್ಯಾಂಕ್ ಆಫ್ ಇಂಡಿಯಾದಲ್ಲಿ ರಾಬರಿ ಆಗಿದೆ ಎಂದು ಪೊಲೀಸರಿಗೆ ಕರೆ ಬಂದಿದೆ. ರೆಸ್ಟೋಬಾರ್ ಕ್ಲೋಸ್ ಮಾಡಿಸಿ ಆ ಕೇಸ್ ಅಟೆಂಡ್ ಮಾಡಲು ಪೊಲೀಸರು ಹೋಗಿದ್ದರು. ಸೈರನ್ ಆಗಿದ್ದರಿಂದ ಬ್ಯಾಂಕ್ ರಾಬರಿ ಆಗಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಟೆಕ್ನಿಕಲ್ ಇಶ್ಯೂ ಆಗಿದ್ದರಿಂದ ಸೈರನ್ ಕೂಗಿತ್ತು. ಅಲ್ಲಿಗೆ ಮುಂಜಾನೆ 3 ಗಂಟೆ ಆಗಿತ್ತು. ಈ ಪ್ರಕರಣ ಮುಗಿಯುತ್ತಿದ್ದಂತೆ ಮತ್ತೆ ರೆಸ್ಟೋಬಾರ್​ನತ್ತ ಪೊಲೀಸರು ಹೋಗಿದ್ದರು.

ಇದನ್ನೂ ಓದಿ: ಜೆಟ್ ಲ್ಯಾಗ್ ಪಾರ್ಟಿ ಪ್ರಕರಣ: ದರ್ಶನ್, ಅಭಿಷೇಕ್​ಗೆ ಪೊಲೀಸರ ನೋಟಿಸ್

ಈ ವೇಳೆ ದರ್ಶನ್ ಜೊತೆ ಫೋಟೋಗಾಗಿ ಅಭಿಮಾನಿಗಳು ನಿಂತಿದ್ದರು. ಹೋಗಿ ಕ್ರೌಡ್ ಕ್ಲಿಯರ್ ಮಾಡಿ ದರ್ಶನ್ ಮತ್ತು ಸಹನಟರನ್ನ ಕಳಿಸಿದ್ದಾಗಿ ಪೊಲೀಸರು ಹೇಳಿದ್ದಾರೆ. ಜೊತೆಗೆ ಅಂದು ರಾತ್ರಿ ನಡೆದ ಘಟನೆಗಳ ಬಗ್ಗೆ ಪೊಲೀಸ್ ಸಿಬ್ಬಂದಿ ಡೈರಿಯಲ್ಲಿ ಉಲ್ಲೇಖ ಮಾಡಿದ್ದಾರೆ ಎನ್ನಲಾಗಿದೆ. ಇತ್ತ, ಜೆಟ್​ಲ್ಯಾಗ್ ಮಾಲೀಕರಾದ ಶಶಿರೇಖಾ ಜಗದೀಶ್ ಹೇಳಿಕೆಯಲ್ಲಿ ನಟ ದರ್ಶನ್ ಸೇರಿ ಎಂಟು ಜನರ ಹೆಸರು ಇದೆ. ಹೀಗಾಗಿ, ಅವರಿಗೆ ನೋಟಿಸ್ ನೀಡಲಾಗಿದೆ. ಸದ್ಯ ನೋಟಿಸ್​ಗೆ ಯಾವುದೇ ಉತ್ತರ ಬಂದಿಲ್ಲ. ಹೀಗಾಗಿ, ಎರಡನೇ ನೋಟಿಸ್ ನೀಡಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ