AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನನ್ನ ಬಗ್ಗೆ ನನಗೆ ಅಸಹ್ಯ ಆಗಿದೆ’: ಜನ್ಮದಿನದಂದೇ ಫ್ಯಾನ್ಸ್​ ಸತ್ತಿದ್ದಕ್ಕೆ ಯಶ್​ ನೋವಿನ ನುಡಿ

‘ಎಲ್ಲರಲ್ಲೂ ಮನವಿ ಮಾಡಿಕೊಳ್ಳುತ್ತೇನೆ. ಬ್ಯಾನರ್​ ಕಟ್ಟುವುದು, ಬೈಕ್​ನಲ್ಲಿ ಚೇಸ್​ ಮಾಡುವುದನ್ನೆಲ್ಲ ಬಿಟ್ಟು ಬಿಡಿ. ನಿಜವಾಗಿಯೂ ನೀವು ಪ್ರೀತಿ ತೋರಿಸಬೇಕು ಎಂದರೆ ಒಳ್ಳೆಯ ಕೆಲಸ ಮಾಡಿ ನಿಮ್ಮ ಜೀವನದಲ್ಲಿ ಖುಷಿಯಾಗಿರಿ. ಅದೇ ಸಾಕು. ಪ್ರತಿಯೊಬ್ಬ ಅಭಿಮಾನಿಯೂ ಅವರವರ ಬದುಕಿನಲ್ಲಿ ಬೆಳೆದರೆ ಅದೇ ನಮಗೆ ಅವರು ಅಭಿಮಾನ ತೋರಿಸಿದಂತೆ’ ಎಂದು ಯಶ್​ ಹೇಳಿದ್ದಾರೆ.

‘ನನ್ನ ಬಗ್ಗೆ ನನಗೆ ಅಸಹ್ಯ ಆಗಿದೆ’: ಜನ್ಮದಿನದಂದೇ ಫ್ಯಾನ್ಸ್​ ಸತ್ತಿದ್ದಕ್ಕೆ ಯಶ್​ ನೋವಿನ ನುಡಿ
ಸೊರಣಗಿ ಗ್ರಾಮದಲ್ಲಿ ಯಶ್​
TV9 Web
| Edited By: |

Updated on: Jan 08, 2024 | 7:59 PM

Share

ಬ್ಯಾನರ್​ ಕಟ್ಟಲು ಹೋದ ಅಭಿಮಾನಿಗಳು ನಿಧನರಾದ ಹಿನ್ನೆಲೆಯಲ್ಲಿ ಯಶ್​ (Yash) ಅವರು ಗದಗ ಜಿಲ್ಲೆಯ ಸೊರಣಗಿ ಗ್ರಾಮಕ್ಕೆ ಆಗಮಿಸಿದ್ದಾರೆ. ಮೃತರಾದ ಹನುಮಂತ ಹರಿಜನ, ಮುರಳಿ ನಡವಿನಮನಿ ಮತ್ತು ನವೀನ್ ಅವರ ಕುಟುಂಬದ ಸದಸ್ಯರನ್ನು ಯಶ್​ ಭೇಟಿ ಮಾಡಿದ್ದಾರೆ. ಮೃತರ ತಂದೆ-ತಾಯಿಗೆ ಸಾಂತ್ವನ ಹೇಳಿದ ಬಳಿಕ ಯಶ್​ ಅವರು ಮಾಧ್ಯಮದ ಜೊತೆ ಮಾತನಾಡಿದ್ದಾರೆ. ಅಭಿಮಾನಿಗಳ ಸಾವಿನ (Yash Fans Death) ಬಗ್ಗೆ ಅವರು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಹುಟ್ಟುಹಬ್ಬದ (Yash Birthday) ದಿನವೇ ಫ್ಯಾನ್ಸ್​ ನಿಧನರಾಗಿದ್ದಕ್ಕೆ ಯಶ್​ ಅವರಿಗೆ ತೀವ್ರ ನೋವಾಗಿದೆ.

‘ಬ್ಯಾನರ್​ ಹಾಕಿ ಅಭಿಮಾನ ವ್ಯಕ್ತಪಡಿಸಬೇಕು ಎಂಬುದನ್ನು ನಾವು ಯಾರೂ ಇಷ್ಟಪಡುವುದಿಲ್ಲ. ಪ್ರತಿ ವರ್ಷ ಬರ್ತ್​ಡೇ ಬಂದಾಗ ಇಂಥ ಒಂದು ಘಟನೆ ನಡೆದರೆ ಬರ್ತ್​ಡೇ ಎಂದರೆ ನನಗೆ ಭಯ ಬಂದಿದೆ. ನಿಜ ಹೇಳಬೇಕು ಎಂದರೆ ನನ್ನ ಬಗ್ಗೆ ನನಗೆ ಅಸಹ್ಯ ಆಗಿದೆ. ಎಲ್ಲಿಂದಲೋ ಅವರು ಪ್ರೀತಿಯಿಂದ ಹರಸಿದರೆ ಸಾಕು. ಇದೇ ನಿಜವಾದ ಬರ್ತ್​ಡೇ’ ಎಂದು ಯಶ್​ ಹೇಳಿದ್ದಾರೆ.

‘10-15 ದಿನ ಮುಂಚೆ ಕೊವಿಡ್​ ಅಂತ ಶುರು ಮಾಡಿದರು. ನಮ್ಮ ಬರ್ತ್​ಡೇಯಿಂದ ಯಾರಿಗೂ ತೊಂದರೆ ಆಗಬಾರದು ಅಂತ ನಾನು ಈ ವರ್ಷ ಎಲ್ಲರ ಜೊತೆ ಆಚರಣೆ ಬೇಡ ಅಂತ ನಿರ್ಧರಿಸಿದೆ. ಬೇಡ ಎಂದರೂ ಅಭಿಮಾನಿಗಳು ಬೇಜಾರು ಮಾಡಿಕೊಳ್ಳುತ್ತಾರೆ. ಸಹಾಯ ಯಾರು ಬೇಕಾದರೂ ಮಾಡಬಹುದು. ಮನೆಗೆ ಮಗ ಬರುತ್ತಾನಾ? ಕುಟುಂಬದಲ್ಲಿ ಮಕ್ಕಳನ್ನು ಕಳೆದುಕೊಂಡವರು ಏನು ಹೇಳಲು ಸಾಧ್ಯ? ನಮ್ಮ ಮನೆಗಳಲ್ಲಿ ಸಾವಾದರೂ ಹಾಗೆ ಅಲ್ಲವೇ? ಆ ಹುಡುಗರು ಇನ್ನೂ ಚಿಕ್ಕ ವಯಸ್ಸಿನವರು’ ಎಂದಿದ್ದಾರೆ ಯಶ್​.

‘ಈ ಮೂಲಕ ನಾನು ಎಲ್ಲರಲ್ಲೂ ಮನವಿ ಮಾಡಿಕೊಳ್ಳುತ್ತೇನೆ. ಬ್ಯಾನರ್​ ಕಟ್ಟುವುದು, ಬೈಕ್​ನಲ್ಲಿ ಚೇಸ್​ ಮಾಡುವುದನ್ನೆಲ್ಲ ಬಿಟ್ಟು ಬಿಡಿ. ನಿಜವಾಗಿಯೂ ನೀವು ಪ್ರೀತಿ ತೋರಿಸಬೇಕು ಎಂದರೆ ಒಳ್ಳೆಯ ಕೆಲಸ ಮಾಡಿ ನಿಮ್ಮ ಜೀವನದಲ್ಲಿ ಖುಷಿಯಾಗಿರಿ. ಅದೇ ಸಾಕು. ನನ್ನ ಬಗ್ಗೆ ಬೇಜಾರು ಮಾಡಿಕೊಂಡರೂ ಪರವಾಗಿಲ್ಲ ಅಂತ ನಾನು ದೂರ ಇರುತ್ತೇನೆ. ಪ್ರತಿಯೊಬ್ಬ ಅಭಿಮಾನಿಯೂ ಅವರವರ ಬದುಕಿನಲ್ಲಿ ಬೆಳೆದರೆ ಅದೇ ನಮಗೆ ಅವರು ಅಭಿಮಾನ ತೋರಿಸಿದಂತೆ’ ಎಂದು ಯಶ್​ ಹೇಳಿದ್ದಾರೆ.

ಅಭಿಮಾನಿಗಳ ನಿಧನ ನೋವಿನಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದ ನಟ ಯಶ್​

‘ಈಗ ನಾನು ಪರಿಹಾರ ಘೋಷಣೆ ಮಾಡುವುದು ದೊಡ್ಡ ವಿಷಯ ಅಲ್ಲ. ಏನು ಬೇಕಾದರೂ ನಾನು ಮಾತಾಡಬಹುದು. ಆದರೆ ನಿಜವಾಗಿ ಇವರ ಕುಟುಂಬಕ್ಕೆ ಏನು ಅವಶ್ಯಕತೆ ಇದೆಯೋ ಅದನ್ನು ಮಾಡೋಣ. ಅವರ ಕುಟುಂಬಕ್ಕೆ ಮಾಡಬೇಕಾಗಿದ್ದನ್ನು ನಾನು ಮಾಡುತ್ತೇನೆ. ಹಾಗಂತ ಇದು ಒಂದು ಪಾಠ ಆಗಬಾರದು. ಯಾರು ಬೇಜಾರು ಮಾಡಿಕೊಂಡರೂ ಪರವಾಗಿಲ್ಲ. ಇಂದು ಯಾಕೆ ಬಂದು ನೋಡುತ್ತೇವೆ ಎಂದರೆ, ತಂದೆ-ತಾಯಿ ಮೇಲೆ ಇರುವ ಗೌರವಕ್ಕೆ. ಈ ಪ್ರಕರಣದಲ್ಲಿ ಆಗಿದ್ದು ಅವಘಡ. ಅವರಿಗೆ ಗೊತ್ತಾಗದೆಯೇ ಹೀಗೆ ಆಗಿದೆ. ನಮ್ಮ ಮೇಲಿನ ಅಭಿಮಾನಕ್ಕಾಗಿ ನಿಮ್ಮ ಜೀವಕ್ಕೆ ಹಾನಿ ಮಾಡಿಕೊಳ್ಳಬೇಡಿ. ಪ್ರೀತಿ, ಗೌರವ ಇದ್ದರೆ ಜವಾಬ್ದಾರಿಯಿಂದ ನಡೆದುಕೊಳ್ಳಿ’ ಎಂದು ಯಶ್​ ಕಿವಿಮಾತು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
TV9 Web
TV9 Web

TV9 Kannada

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು