Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಕಾಶ್ ರಾಜ್ ವಿಚ್ಛೇದನಕ್ಕೆ ಕಾರಣವಾದ ವಿಚಾರವೇನು? ಜಯಂತಿ ಕಣ್ಣಪ್ಪ ವಿವರಿಸಿದ್ದು ಹೀಗೆ

‘ಚೆನ್ನೈಗೆ ಚಾನ್ಸ್ ಹುಡುಕಿ ಬರುವ ಕಲಾವಿದರಿಗೆ ಲಲಿತಾ ಅವರು ಉಳಿದುಕೊಳ್ಳಲು ವ್ಯವಸ್ಥೆ ಮಾಡುತ್ತಿದ್ದರು. ಪ್ರಕಾಶ್ ರಾಜ್ ಅವರು ಕರ್ನಾಟಕದಿಂದ ಚೆನ್ನೈಗೆ ಬಂದಿದ್ದರು. ಅವರಿಗೆ ಉಳಿದುಕೊಳ್ಳೋಕೆ ಲಲಿತಾ ಸಹಾಯ ಮಾಡಿದ್ದರು. ನಂತರ ಇಬ್ಬರ ಮಧ್ಯೆ ಪರಿಚಯ ಬೆಳೆಯಿತು’ ಎಂದಿದ್ದಾರೆ ಲಲಿತಾ.

ಪ್ರಕಾಶ್ ರಾಜ್ ವಿಚ್ಛೇದನಕ್ಕೆ ಕಾರಣವಾದ ವಿಚಾರವೇನು? ಜಯಂತಿ ಕಣ್ಣಪ್ಪ ವಿವರಿಸಿದ್ದು ಹೀಗೆ
ಪ್ರಕಾಶ್ ರಾಜ್ ಹಾಗೂ ಕುಟುಂಬ
Follow us
ರಾಜೇಶ್ ದುಗ್ಗುಮನೆ
|

Updated on: May 18, 2024 | 7:37 AM

ಪ್ರಕಾಶ್ ರಾಜ್ (Prakash Raj) ಅವರು ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ಅವರು ಸಿನಿಮಾಗಳ ಜೊತೆಗೆ ರಾಜಕೀಯ ಪಕ್ಷವನ್ನು ಟೀಕಿಸುವ ಮೂಲಕ ಚರ್ಚೆ ಆಗಿದ್ದು ಇದೆ. ಅವರ ವೈಯಕ್ತಿಕ ಜೀವನದ ಬಗ್ಗೆಯೂ ಸಾಕಷ್ಟು ಚರ್ಚ ಆಗಿದೆ. ಅವರು ಈ ಮೊದಲು ಲಲಿತಾ ಕುಮಾರಿ ಅವರನ್ನು ಮದುವೆ ಆಗಿದ್ದರು. 2009ರಲ್ಲಿ ಇವರು ಬೇರೆ ಆದರು. ಇದಾದ ಮರು ವರ್ಷವೇ ಪ್ರಕಾಶ್ ಕೊರಿಯೋಗ್ರಾಫರ್ ಪೊನಿ ವರ್ಮಾ ಅವರನ್ನು ವಿವಾಹ ಆದರು. ಈ ಬಗ್ಗೆ ತಮಿಳು ಸೆಲೆಬ್ರಿಟಿ ಜಯಂತಿ ಕಣ್ಣಪ್ಪ ಅವರು ಮಾತನಾಡಿದ್ದಾರೆ.

ಲಲಿತಾ ಕುಮಾರಿ ಅವರು ತಮಿಳು ನಟಿ ಡಿಸ್ಕೋ ಶಾಂತಿ ಅವರ ತಂಗಿ. ‘ಚೆನ್ನೈಗೆ ಚಾನ್ಸ್ ಹುಡುಕಿ ಬರುವ ಕಲಾವಿದರಿಗೆ ಲಲಿತಾ ಅವರು ಉಳಿದುಕೊಳ್ಳಲು ವ್ಯವಸ್ಥೆ ಮಾಡುತ್ತಿದ್ದರು. ಪ್ರಕಾಶ್ ರಾಜ್ ಅವರು ಕರ್ನಾಟಕದಿಂದ ಚೆನ್ನೈಗೆ ಬಂದಿದ್ದರು. ಅವರಿಗೆ ಉಳಿದುಕೊಳ್ಳೋಕೆ ಲಲಿತಾ ಸಹಾಯ ಮಾಡಿದ್ದರು. ನಂತರ ಇಬ್ಬರ ಮಧ್ಯೆ ಪರಿಚಯ ಬೆಳೆಯಿತು. ಆ ಬಳಿಕ ಪ್ರೀತಿ ಬೆಳೆಯಿತು’ ಎಂದು ಜಯಂತಿ ಅವರು ಹೇಳಿಕೊಂಡಿರುವುದಾಗಿ ವರದಿ ಆಗಿದೆ. 1994ರಲ್ಲಿ ಲಲಿತಾ ಹಾಗೂ ಪ್ರಕಾಶ್ ವಿವಾಹ ಆಯಿತು.

‘ಮದುವೆ ಬಳಿಕ ಜಯಂತಿ ಹಾಗೂ ಪ್ರಕಾಶ್ ರಾಜ್ ಖುಷಿಯಾಗಿಯೇ ಇದ್ದರು. ಈ ದಂಪತಿಗೆ ಎರಡು ಹೆಣ್ಣು ಮಕ್ಕಳು, ಓರ್ವ ಮಗ ಇದ್ದ. ದುರಾದೃಷ್ಟ ಎಂದರೆ 2004ರಲ್ಲಿ ಪ್ರಕಾಶ್ ರಾಜ್ ಮಗ ಸಿಧು ಟೆರೇಸ್​ನಿಂದ ಬಿದ್ದು ತೀರಿ ಹೋದ. ಇದರಿಂದ ಲಲಿತಾ ಹಾಗೂ ಪ್ರಕಾಶ್ ರಾಜ್ ಅವರು ದೂರ ಆಗುತ್ತಾ ಬಂದರು. ಈ ಸಂದರ್ಭದಲ್ಲಿ ಅವರ ಜೀವನದಲ್ಲಿ ಪೊನಿ ವರ್ಮಾ’ ಬಂದರು ಎಂದು ವಿವರಿಸಿದ್ದಾರೆ ಜಯಂತಿ.

ಇದನ್ನೂ ಓದಿ: ನಮಗೆ ವಿಕೃತ ಮನಸ್ಸಿನ ವ್ಯಕ್ತಿಗಿಂತ 2 ಸಾವಿರ ಮಹಿಳೆಯರು ಮುಖ್ಯ: ಪ್ರಕಾಶ್​​ ರೈ​​​

‘ಪ್ರಕಾಶ್ ಅವರು ವಿಚ್ಛೇದನ ಪಡೆಯಲು ನಿರ್ಧರಿಸಿದರು. ಇದಕ್ಕೆ ಲಲಿತಾ ಯಾವುದೇ ವಿರೋಧ ತೋರಲಿಲ್ಲ. ಅವರು ಯಾವುದೇ ನಿರ್ಧಾರ ತೆಗೆದುಕೊಂಡರೂ ನಾನು ಅದನ್ನು ಸ್ವೀಕರಿಸುತ್ತೇನೆ ಎಂದರು. ವಿಚ್ಛೇದನದ ಬಳಿಕವೂ ಮಕ್ಕಳ ಜವಾಬ್ದಾರಿಯನ್ನು ಪ್ರಕಾಶ್ ಅವರೇ ತೆಗೆದುಕೊಂಡರು. ಮಕ್ಕಳನ್ನು ಪ್ರಕಾಶ್ ವಿದೇಶಕ್ಕೆ ಕಳುಹಿಸಿದರು’ ಎಂದಿದ್ದಾರೆ ಅವರು. 2010ರಲ್ಲಿ ಪೊನ್ನಿ ಹಾಗೂ ಪ್ರಕಾಶ್ ಮದುವೆ ಆದರು. ಈ ದಂಪತಿಗೆ ವೇದಾಂತ್ ಹೆಸರಿನ ಮಗ ಇದ್ದಾನೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮೂಡಿಗೆರೆ: ಮಾಕೋನಹಳ್ಳಿ ಗ್ರಾಮದಲ್ಲಿ ಮನೆಗೆ ನುಗ್ಗಿ ಕಾಡಾನೆ ದಾಂಧಲೆ
ಮೂಡಿಗೆರೆ: ಮಾಕೋನಹಳ್ಳಿ ಗ್ರಾಮದಲ್ಲಿ ಮನೆಗೆ ನುಗ್ಗಿ ಕಾಡಾನೆ ದಾಂಧಲೆ
ಮುಷ್ಕರ ಕಾರಣ ಮಹಾರಾಷ್ಟ್ರದ ಟ್ರಕ್ಕನ್ನು ಟೋಲ್ ಗೇಟ್ ಬಳಿ ತಡೆಯಲಾಗಿತ್ತು
ಮುಷ್ಕರ ಕಾರಣ ಮಹಾರಾಷ್ಟ್ರದ ಟ್ರಕ್ಕನ್ನು ಟೋಲ್ ಗೇಟ್ ಬಳಿ ತಡೆಯಲಾಗಿತ್ತು
ಗರೀಬ್​ ರಥ್​ ಎಕ್ಸ್​ಪ್ರೆಸ್​ ರೈಲನ್ನು ಹಳಿ ತಪ್ಪಿಸುವ ಯತ್ನ ವಿಫಲ
ಗರೀಬ್​ ರಥ್​ ಎಕ್ಸ್​ಪ್ರೆಸ್​ ರೈಲನ್ನು ಹಳಿ ತಪ್ಪಿಸುವ ಯತ್ನ ವಿಫಲ
ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಏಣಿಕೆ: ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಏಣಿಕೆ: ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ನೋ ಬಾಲ್, ಫ್ರೀ ಹಿಟ್, ರನೌಟ್​: ಸೂಪರ್​ ಓವರ್​ನಲ್ಲಿ ಡೆಲ್ಲಿಗೆ ರೋಚಕ ಜಯ
ನೋ ಬಾಲ್, ಫ್ರೀ ಹಿಟ್, ರನೌಟ್​: ಸೂಪರ್​ ಓವರ್​ನಲ್ಲಿ ಡೆಲ್ಲಿಗೆ ರೋಚಕ ಜಯ
Daily Devotional: ಧಾರ್ಮಿಕ ಕ್ಷೇತ್ರಗಳಲ್ಲಿ ಪಂಕ್ತಿ ಭೋಜನದ ಮಹತ್ವ
Daily Devotional: ಧಾರ್ಮಿಕ ಕ್ಷೇತ್ರಗಳಲ್ಲಿ ಪಂಕ್ತಿ ಭೋಜನದ ಮಹತ್ವ
Daily Horoscope: ಈ ರಾಶಿಯವರಿಗೆ ಇಂದು ಆರು ಗ್ರಹಗಳ ಅನುಗ್ರಹ
Daily Horoscope: ಈ ರಾಶಿಯವರಿಗೆ ಇಂದು ಆರು ಗ್ರಹಗಳ ಅನುಗ್ರಹ
ಕೇಕ್ ಕಟ್ ಮಾಡಿ ಮೊದಲ ಪೀಸನ್ನು ಶಿವಕುಮಾರ್​ಗೆ ನೀಡಿದ ಸಿದ್ದರಾಮಯ್ಯ
ಕೇಕ್ ಕಟ್ ಮಾಡಿ ಮೊದಲ ಪೀಸನ್ನು ಶಿವಕುಮಾರ್​ಗೆ ನೀಡಿದ ಸಿದ್ದರಾಮಯ್ಯ
ಮ್ಯಾಜಿಸ್ಟ್ರೇಟ್ 50,000 ರೂ. ಲಂಚ ಕೇಳಿದ್ದಕ್ಕೆ ಮರ ಹತ್ತಿದ ವೃದ್ಧೆ!
ಮ್ಯಾಜಿಸ್ಟ್ರೇಟ್ 50,000 ರೂ. ಲಂಚ ಕೇಳಿದ್ದಕ್ಕೆ ಮರ ಹತ್ತಿದ ವೃದ್ಧೆ!
ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?