AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Yash: ಸಿಕ್ಕ ಚಿತ್ರಗಳನ್ನೆಲ್ಲ ಯಶ್ ರಿಜೆಕ್ಟ್ ಮಾಡೋಕೂ ಇದೆ ಕಾರಣ; ಕೊನೆಗೂ ಬಯಲಾಯ್ತು ವಿಷಯ  

ದೊಡ್ಡ ಗೆಲುವು ಸಿಕ್ಕ ಬಳಿಕ ಅದನ್ನು ಕಾಪಾಡಿಕೊಳ್ಳೋದು ಚಾಲೆಂಜ್. ಗೆದ್ದ ಬಳಿಕ ಸಾಲು ಸಾಲು ಸೋಲು ಕಂಡ ಅನೇಕರಿದ್ದಾರೆ. ಈ ಕಾರಣದಿಂದಲೇ ಯಶ್ ಅವರು ಹೆಚ್ಚು ಎಚ್ಚರಿಕೆಯಿಂದ ಕೆಲಸ ಮಾಡುತ್ತಿದ್ದಾರೆ.

Yash: ಸಿಕ್ಕ ಚಿತ್ರಗಳನ್ನೆಲ್ಲ ಯಶ್ ರಿಜೆಕ್ಟ್ ಮಾಡೋಕೂ ಇದೆ ಕಾರಣ; ಕೊನೆಗೂ ಬಯಲಾಯ್ತು ವಿಷಯ  
ಯಶ್
ರಾಜೇಶ್ ದುಗ್ಗುಮನೆ
|

Updated on: Jun 22, 2023 | 2:48 PM

Share

ರಾಕಿಂಗ್ ಸ್ಟಾರ್ ಯಶ್ (Yash) ಅವರ 19ನೇ ಸಿನಿಮಾ ಯಾವುದು ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಉಳಿದಿದೆ. ಈ ಸಿನಿಮಾ ಬಗ್ಗೆ ಮೂಡಿರುವ ಪ್ರಶ್ನೆಗಳು ಹಲವು. ಈ ಚಿತ್ರ ಯಾವಾಗ ಸೆಟ್ಟೇರಲಿದೆ, ಯಾರು ನಿರ್ದೇಶನ ಮಾಡುತ್ತಾರೆ ಎಂಬುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ಹೀಗಿರುವಾಗಲೇ ಯಶ್ ಅವರ ಮುಂದಿನ ಸಿನಿಮಾ ಕುರಿತು ಒಂದು ಅಚ್ಚರಿಯ ಮಾಹಿತಿ ರಿವೀಲ್ ಆಗಿದೆ. ಯಶ್ ಅವರು ಕಳೆದ ಆರು ತಿಂಗಳಿಂದ ಯಾವುದೇ ಕಥೆ ಕೇಳುತ್ತಿಲ್ಲವಂತೆ! ಮತ್ತೊಂದು ಅಚ್ಚರಿಯ ಸುದ್ದಿ ಎಂದರೆ ‘Yash19’ ಸಿನಿಮಾ ಫೈನಲ್ ಆಗಿ ಆರು ತಿಂಗಳೇ ಕಳೆದಿವೆ ಅನ್ನೋದು ವಿಶೇಷ.

ಒಂದು ದೊಡ್ಡ ಹಿಟ್ ಸಿಕ್ಕಿತು ಎಂದರೆ ನಿರ್ಮಾಪಕರು, ನಿರ್ದೇಶಕರು ನಟನ ಮನೆ ಮುಂದೆ ಸಾಲುಗಟ್ಟಿ ನಿಲ್ಲುತ್ತಾರೆ. ಹೀರೋ ಕೇಳಿದಷ್ಟು ಸಂಭಾವನೆ ಕೊಡೋಕೆ ರೆಡಿ ಇರುತ್ತಾರೆ. ಆದರೆ, ದೊಡ್ಡ ಗೆಲುವು ಸಿಕ್ಕ ಬಳಿಕ ಅದನ್ನು ಕಾಪಾಡಿಕೊಳ್ಳೋದು ಚಾಲೆಂಜ್. ಗೆದ್ದ ಬಳಿಕ ಸಾಲು ಸಾಲು ಸೋಲು ಕಂಡ ಅನೇಕರಿದ್ದಾರೆ. ಈ ಕಾರಣದಿಂದಲೇ ಯಶ್ ಅವರು ಹೆಚ್ಚು ಎಚ್ಚರಿಕೆಯಿಂದ ಕೆಲಸ ಮಾಡುತ್ತಿದ್ದಾರೆ. ಅವರು 19ನೇ ಸಿನಿಮಾ ಫೈನಲ್ ಮಾಡಿದ್ದು, ಶೀಘ್ರವೇ ದೊಡ್ಡ ಮಟ್ಟದಲ್ಲಿ ಘೋಷಣೆ ಮಾಡಲಿದ್ದಾರೆ.

ಯಶ್ ಆರು ತಿಂಗಳ ಹಿಂದೆಯೇ ಸಿನಿಮಾ ಫೈನಲ್ ಮಾಡಿದ್ದಾರೆ. ಆ ಬಳಿಕ ಅದರ ಕೆಲಸಗಳಲ್ಲಿ ಯಶ್ ತೊಡಗಿಕೊಂಡರು ಎನ್ನಲಾಗುತ್ತಿದೆ. ಇತ್ತೀಚೆಗೆ ಮಾತನಾಡಿದ್ದ ಅವರು, ‘ನಾನು ಒಂದು ದಿನ ಒಂದು ಕ್ಷಣವನ್ನೂ ವ್ಯರ್ಥ ಮಾಡುತ್ತಿಲ್ಲ’ ಎಂದಿದ್ದರು. ಈ ಮೂಲಕ ಯಶ್ ಕಳೆದ ಆರು ತಿಂಗಳಿಂದ ಮುಂದಿನ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಯಶ್ ಕಳೆದ ಆರು ತಿಂಗಳಲ್ಲಿ ಯಾವುದೇ ಹೊಸ ಕಥೆಯನ್ನು ಕೇಳಿಲ್ಲ. ಇದಕ್ಕೂ ಕಾರಣ ಇದೆ. ಒಮ್ಮೆಲೇ ಎರಡು-ಮೂರು ಸಿನಿಮಾ ಒಪ್ಪಿಕೊಂಡರೆ ಯಾವ ಚಿತ್ರದ ಮೇಲೂ ಸರಿಯಾಗಿ ಗಮನ ಹರಿಸಲು ಆಗುವುದಿಲ್ಲ. ಇದೇ ಉದ್ದೇಶದಿಂದಲೇ ಅವರ ಗಮನ ಸಂಪೂರ್ಣವಾಗಿ ‘Yash19’ ಮೇಲಿದೆ. ಕಳೆದ ಆರು ತಿಂಗಳಿಂದ ಅವರು ಯಾವುದೇ ಹೊಸ ಕಥೆ ಕೇಳಿಲ್ಲ.

ಇದನ್ನೂ ಓದಿ: Yash: ‘ನಾನು ಎಲ್ಲೂ ಹೋಗಿಲ್ಲ, ಇರೋ ಕಡೆನೇ ಎಲ್ಲರನ್ನೂ ಕರೆಸಿಕೊಂಡಿದ್ದೀನಿ’: ಯಶ್ 

‘ದಂಗಲ್’ ಖ್ಯಾತಿಯ ನಿತೇಶ್ ತಿವಾರಿ ಅವರು ಬಾಲಿವುಡ್​ನಲ್ಲಿ ರಾಮಾಯಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ರಾವಣನ ಪಾತ್ರ ಮಾಡಲು ಯಶ್​ಗೆ ಆಫರ್ ನೀಡಲಾಗಿತ್ತು ಎನ್ನುವ ಸುದ್ದಿ ಇತ್ತೀಚೆಗೆ ಹರಿದಾಡಿತ್ತು. ಈಗ ಯಶ್ ಆರು ತಿಂಗಳಿಂದ ಹೊಸ ಕಥೆಯನ್ನೇ ಕೇಳಿಲ್ಲ ಎಂದಾದರೆ ಆ ಸುದ್ದಿ ನಿಜವೇ ಅಥವಾ ಕೇವಲ ವದಂತಿಯೇ ಎನ್ನುವ ಪ್ರಶ್ನೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್