AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸು ಫ್ರಂ ಸೋ’ ಹಾದಿಯಲ್ಲೇ ನಡೆಯಲಿದೆ ‘ಕಾಂತಾರ: ಚಾಪ್ಟರ್ 1’?

Kantara Chapter 1: ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರ ಕಾರ್ಯ ಚಾಲ್ತಿಯಲ್ಲಿದೆ. ಸಿನಿಮಾದ ಪ್ರಚಾರಕ್ಕಾಗಿ ರಿಷಬ್ ಶೆಟ್ಟಿ ಮತ್ತು ಹೊಂಬಾಳೆ ಹೊಸ ಯೋಜನೆಯೊಂದನ್ನು ಹಾಕಿದೆ ಎನ್ನಲಾಗುತ್ತಿದೆ. ಇತ್ತೀಚೆಗೆ ಬಿಡುಗಡೆ ಆಗಿ ದೊಡ್ಡ ಹಿಟ್ ಆದ ‘ಸು ಫ್ರಂ ಸೋ’ ಸಿನಿಮಾದ ಮಾದರಿಯನ್ನೇ ‘ಕಾಂತಾರ: ಚಾಪ್ಟರ್ 1’ ಸಹ ಅನುಸರಿಸಲಿದೆ ಎನ್ನಲಾಗುತ್ತಿದೆ.

‘ಸು ಫ್ರಂ ಸೋ’ ಹಾದಿಯಲ್ಲೇ ನಡೆಯಲಿದೆ ‘ಕಾಂತಾರ: ಚಾಪ್ಟರ್ 1’?
Rishab Shetty
ಮಂಜುನಾಥ ಸಿ.
|

Updated on: Sep 16, 2025 | 4:06 PM

Share

ಕಳೆದ ಎರಡು ಮೂರು ತಿಂಗಳುಗಳು ಕನ್ನಡ ಸಿನಿಮಾ ಪಾಲಿಗೆ ಉತ್ತಮವಾಗಿದ್ದವರು. ‘ಎಕ್ಕ’, ‘ಜೂನಿಯರ್’ ಇಂದ ಆರಂಭವಾದ ಕನ್ನಡ ಸಿನಿಮಾಗಳ ಬಾಕ್ಸ್ ಆಫೀಸ್ ಯಶಸ್ಸನ್ನು ‘ಸು ಫ್ರಂ ಸೋ’ ಭಾರಿ ದೊಡ್ಡ ಮಟ್ಟಕ್ಕೆ ಕೊಂಡೊಯ್ಯಿತು. ಈಗ ‘ಏಳುಮಲೆ’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಅಬ್ಬರಿಸುತ್ತಿದೆ. ಅದರ ಬೆನ್ನಲ್ಲೆ ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ‘ಕಾಂತಾರ: ಚಾಪ್ಟರ್ 1’ ಬಿಡುಗಡೆಗೆ ಸಜ್ಜಾಗಿದೆ. ಸಿನಿಮಾ ಅಕ್ಟೋಬರ್ 2 ರಂದು ಬಿಡುಗಡೆ ಆಗಲಿದ್ದು, ಸಿನಿಮಾ ಬಿಡುಗಡೆಗೆ ‘ಸು ಫ್ರಂ ಸೋ’ ಮಾದರಿಯನ್ನು ರಿಷಬ್ ಶೆಟ್ಟಿ ಮತ್ತು ಹೊಂಬಾಳೆ ಫಾಲೋ ಮಾಡಲಿದ್ದಾರೆ ಎನ್ನಲಾಗುತ್ತಿದೆ.

‘ಸು ಫ್ರಂ ಸೋ’ ಸಿನಿಮಾದ ಅಧಿಕೃತ ಬಿಡುಗಡೆಗೆ ಮುಂಚೆಯೇ ಸಿನಿಮಾದ ನಿರ್ಮಾಪಕ ರಾಜ್ ಬಿ ಶೆಟ್ಟಿ ರಾಜ್ಯದ ಹಲವು ನಗರಗಳಲ್ಲಿ ಪೇಯ್ಡ್ ಪ್ರೀಮಿಯರ್​​ಗಳನ್ನು ಆಯೋಜನೆ ಮಾಡಿದ್ದರು. ಇದರಿಂದ ಹಲವು ನಗರಗಳಲ್ಲಿ ಏಕಕಾಲಕ್ಕೆ ಪ್ರಚಾರದ ಜೊತೆಗೆ ಕಲೆಕ್ಷನ್ ಸಹ ಆಗಿತ್ತು. ಪ್ರಚಾರಕ್ಕೆ ಹೆಚ್ಚಿನ ಹಣವನ್ನು ಖರ್ಚು ಮಾಡುವ ಬದಲಿಗೆ ಜನರೇ ಸಿನಿಮಾಕ್ಕೆ ಪ್ರಚಾರ ನೀಡುವಂತೆ ಐಡಿಯಾ ಮಾಡಿದರು ರಾಜ್ ಬಿ ಶೆಟ್ಟಿ. ಇದೇ ಐಡಿಯಾ ಅನ್ನು ‘ಕಾಂತಾರ: ಚಾಪ್ಟರ್ 1’ ಸಿನಿಮಾಕ್ಕೂ ಬಳಸಲು ರಿಷಬ್ ಶೆಟ್ಟಿ ಮತ್ತು ಹೊಂಬಾಳೆ ಮುಂದಾಗಿದೆ.

ಇದನ್ನೂ ಓದಿ:‘ಕಾಂತಾರ: ಚಾಪ್ಟರ್ 1’: ರಿಷಬ್ ಶೆಟ್ಟಿಯ ಕೊಂಡಾಡಿದ ಪರಭಾಷೆ ಖ್ಯಾತ ಕಲಾ ನಿರ್ದೇಶಕ

ಸಿನಿಮಾದ ಅಧಿಕೃತ ಬಿಡುಗಡೆ ಅಕ್ಟೋಬರ್ 2ಕ್ಕೆ ಇದೆಯಾದರೂ, ಮೂರು ದಿನ ಮುಂಚಿತವಾಗಿ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಪ್ರೀಮಿಯರ್ ಅನ್ನು ಭಾರತದ ಹಲವು ನಗರಗಳಲ್ಲಿ ಆಯೋಜಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಬೆಂಗಳೂರು, ಮುಂಬೈ, ಹೈದರಾಬಾದ್, ವಿಶಾಖಪಟ್ಟಣಂ, ಕಲ್ಕತ್ತ, ಚೆನ್ನೈ ಇನ್ನೂ ಹಲವಾರು ಪ್ರಮುಖ ನಗರಗಳಲ್ಲಿ ವಿಶೇಷ ಪ್ರೀಮಿಯರ್ ಶೋಗಳನ್ನು ಹೊಂಬಾಳೆ ಫಿಲಮ್ಸ್ ಆಯೋಜನೆ ಮಾಡಲಿದ್ದು, ಈ ಶೋಗಳ ಟಿಕೆಟ್ ದರವೂ ಸಹ ಹೆಚ್ಚಿರಲಿದೆಯಂತೆ. ಇದರ ಮೂಲಕ ಬಾಕ್ಸ್ ಆಫೀಸ್ ಕಲೆಕ್ಷನ್ ಉತ್ತಮಗೊಳ್ಳುವ ಜೊತೆಗೆ ಸಿನಿಮಾಕ್ಕೆ ಪುಕ್ಕಟೆ ಪ್ರಚಾರವೂ ಸಿಗಲಿದೆ.

ಶೆಟ್ಟಿ ಗ್ಯಾಂಗ್​​ನವರು ಪ್ರೀಮಿಯ್ ಶೋಗಳನ್ನು ಮೊದಲಿನಿಂದಲೂ ಚೆನ್ನಾಗಿ ಬಳಸಿಕೊಂಡು ಬರುತ್ತಿದ್ದಾರೆ. ರಕ್ಷಿತ್ ಶೆಟ್ಟಿ ಸಹ ತಮ್ಮ ನಿರ್ಮಾಣದ ‘777 ಚಾರ್ಲಿ’ ಸಿನಿಮಾದ ಪ್ರೀಮಿಯರ್ ಶೋಗಳನ್ನು ಹಲವು ಪ್ರಮುಖ ನಗರಗಳಲ್ಲಿ ಆಯೋಜನೆ ಮಾಡಿದ್ದರು. ಪ್ರೀಮಿಯರ್ ಶೋಗಳಿಂದಲೇ ದೊಡ್ಡ ಮೊತ್ತದ ಕಲೆಕ್ಷನ್ ಅನ್ನು ಅವರು ಮಾಡಿಕೊಂಡಿದ್ದರು. ಅದಕ್ಕೆ ಮುಂಚೆ ‘ಅವನೇ ಶ್ರೀಮನ್ನಾರಾಯಣ’, ಅವರ ಸಹ ನಿರ್ಮಾಣದ ‘ನೋಗರಾಜ್’ ಸಿನಿಮಾಗಳದ್ದೂ ಪೇಯ್ಡ್ ಪ್ರೀಮಿಯರ್ ಆಯೋಜನೆ ಮಾಡಿದ್ದರು.

ಈಗ ರಿಷಬ್ ಶೆಟ್ಟಿ ಸಹ ಅದೇ ಯೋಜನೆಯಲ್ಲಿದ್ದಾರೆ ಎನ್ನಲಾಗುತ್ತಿದೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಬಗ್ಗೆ ದೇಶದಾದ್ಯಂತ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಸಿನಿಮಾಕ್ಕಾಗಿ ಜನ ಕಾಯುತ್ತಿದ್ದಾರೆ ಹಾಗಾಗಿ ಈ ಸಿನಿಮಾಕ್ಕೆ ಹೆಚ್ಚಿನ ಪ್ರಚಾರದ ಅಗತ್ಯವಿಲ್ಲ. ಅಲ್ಲದೆ ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಾಗಿರುವ ಕಾರಣ, ಪೇಯ್ಡ್ ಪ್ರೀಮಿಯರ್​​ಗಳಿಗೆ ಸುಲಭವಾಗಿ ಜನ ಬರುತ್ತಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
'ಶ್ರಮ ವ್ಯರ್ಥವಾಯಿತು': ನೀಟ್ ಪರೀಕ್ಷೆ ರದ್ದತಿಗೆ ವಿದ್ಯಾರ್ಥಿನಿ ಬೇಸರ
'ಶ್ರಮ ವ್ಯರ್ಥವಾಯಿತು': ನೀಟ್ ಪರೀಕ್ಷೆ ರದ್ದತಿಗೆ ವಿದ್ಯಾರ್ಥಿನಿ ಬೇಸರ
ಕಾಂಗ್ರೆಸ್​​​ಗೆ​ ಮೇ ಅಂತ್ಯಕ್ಕೆ ಶುಭಕಾಲ?
ಕಾಂಗ್ರೆಸ್​​​ಗೆ​ ಮೇ ಅಂತ್ಯಕ್ಕೆ ಶುಭಕಾಲ?
ಪ್ರಧಾನಿ ಮೋದಿ ಹೇಳಿಕೆಗೆ ಖಾಸಗಿ ಶಾಲಾ ಒಕ್ಕೂಟದಿಂದ ಆಕ್ಷೇಪ
ಪ್ರಧಾನಿ ಮೋದಿ ಹೇಳಿಕೆಗೆ ಖಾಸಗಿ ಶಾಲಾ ಒಕ್ಕೂಟದಿಂದ ಆಕ್ಷೇಪ
ನೀಟ್: ರಾಜ್ಯದಲ್ಲಿ ಅಕ್ರಮವಾಗಿದೆಯಾ? ಬಂಗಾರಪ್ಪ ಏನಂದ್ರು ನೋಡಿ
ನೀಟ್: ರಾಜ್ಯದಲ್ಲಿ ಅಕ್ರಮವಾಗಿದೆಯಾ? ಬಂಗಾರಪ್ಪ ಏನಂದ್ರು ನೋಡಿ
ಪ್ರಧಾನಿ ಮೋದಿ ಹೇಳಿದ್ದಕ್ಕೆ BMTC ಬಸ್​ನಲ್ಲಿ ಬಂದೆ ಎಂದ ಪ್ರಯಾಣಿಕ!
ಪ್ರಧಾನಿ ಮೋದಿ ಹೇಳಿದ್ದಕ್ಕೆ BMTC ಬಸ್​ನಲ್ಲಿ ಬಂದೆ ಎಂದ ಪ್ರಯಾಣಿಕ!
ವಿಶ್ವಾಸ ಮತ ಯಾಚನೆಯಲ್ಲಿ ಭಾಗಿಯಾಗದಂತೆ TVK ಶಾಸಕನಿಗೆ ಕೋರ್ಟ್​ ನಿರ್ಬಂಧ
ವಿಶ್ವಾಸ ಮತ ಯಾಚನೆಯಲ್ಲಿ ಭಾಗಿಯಾಗದಂತೆ TVK ಶಾಸಕನಿಗೆ ಕೋರ್ಟ್​ ನಿರ್ಬಂಧ
ವಿಧಾನಸಭೇಲಿ ಸಿಎಂ ವಿಜಯ್ ಕಾಲೆಳೆದ ಉದಯನಿಧಿ ಬಿಚ್ಚಿಟ್ಟರು ಹಳೇ ಕಾಲದ ರಹಸ್ಯ!
ವಿಧಾನಸಭೇಲಿ ಸಿಎಂ ವಿಜಯ್ ಕಾಲೆಳೆದ ಉದಯನಿಧಿ ಬಿಚ್ಚಿಟ್ಟರು ಹಳೇ ಕಾಲದ ರಹಸ್ಯ!
ನಿದ್ದೆಯ ಮಂಪರಿನಲ್ಲಿ ಡಿವೈಡರ್​​ಗೆ ಗುದ್ದಿದ ಟ್ರಕ್​ ಡ್ರೈವರ್
ನಿದ್ದೆಯ ಮಂಪರಿನಲ್ಲಿ ಡಿವೈಡರ್​​ಗೆ ಗುದ್ದಿದ ಟ್ರಕ್​ ಡ್ರೈವರ್
ತಮಿಳುನಾಡು ರಾಜಕಾರಣದಲ್ಲಿ ಸ್ಫೋಟಕ ಬೆಳವಣಿಗೆ: ಎಐಎಡಿಎಂಕೆಯಲ್ಲಿ ಭಾರಿ ಬಂಡಾಯ
ತಮಿಳುನಾಡು ರಾಜಕಾರಣದಲ್ಲಿ ಸ್ಫೋಟಕ ಬೆಳವಣಿಗೆ: ಎಐಎಡಿಎಂಕೆಯಲ್ಲಿ ಭಾರಿ ಬಂಡಾಯ
Live: ಅಸ್ಸಾಂ ಸಿಎಂ ಆಗಿ ಹಿಮಂತ್ ಬಿಸ್ವಾ ಶರ್ಮಾ ಪದಗ್ರಹಣದ ನೇರಪ್ರಸಾರ
Live: ಅಸ್ಸಾಂ ಸಿಎಂ ಆಗಿ ಹಿಮಂತ್ ಬಿಸ್ವಾ ಶರ್ಮಾ ಪದಗ್ರಹಣದ ನೇರಪ್ರಸಾರ