ಹೊಂಬಾಳೆ ಫಿಲ್ಮ್ಸ್​​ ಸಿನಿಮಾ ಪ್ರಪಂಚ ಸೇರಿಕೊಳ್ಳಲು ಇದೆ ಅವಕಾಶ: ಹೇಗೆ?

Hombale Films: ಹೊಂಬಾಳೆ ಫಿಲ್ಮ್ಸ್​ನವರು ಹೊಸ ಸಹಾಯಕ ನಿರ್ದೇಶಕರನ್ನು ನೇಮಕ ಮಾಡಿಕೊಳ್ಳುತ್ತಿದ್ದು, ಅರ್ಹ ಅಭ್ಯರ್ಥಿಗಳು ನೇರ ಸಂದರ್ಶನ ಎದುರಿಸಬೇಕಿದೆ. ಸಂದರ್ಶನ ನಡೆಯುವ ಸ್ಥಳ, ದಿನಾಂಕ, ಅಭ್ಯರ್ಥಿಗಳಿಗೆ ಇರಬೇಕಾದ ಅರ್ಹತೆ ಇನ್ನಿತರೆ ಮಾಹಿತಿಗಳು ಇಲ್ಲಿವೆ.

ಹೊಂಬಾಳೆ ಫಿಲ್ಮ್ಸ್​​ ಸಿನಿಮಾ ಪ್ರಪಂಚ ಸೇರಿಕೊಳ್ಳಲು ಇದೆ ಅವಕಾಶ: ಹೇಗೆ?
ಹೊಂಬಾಳೆ ಫಿಲ್ಮ್ಸ್​
Follow us
ಮಂಜುನಾಥ ಸಿ.
|

Updated on: Nov 08, 2023 | 4:17 PM

ಕೆಜಿಎಫ್’ (KGF), ‘ಕಾಂತಾರ’ (Kantara) ಸೇರಿದಂತೆ ಹಲವು ಅತ್ಯುತ್ತಮ ಸಿನಿಮಾಗಳನ್ನು ನೀಡಿರುವ, ‘ಸಲಾರ್’ ಸೇರಿದಂತೆ ಹಲವು ಭಾರಿ ಬಜೆಟ್​ ಸಿನಿಮಾಗಳ ಮೇಲೆ ಬಂಡವಾಳ ಹೂಡಿರುವ ಹೊಂಬಾಳೆ ಫಿಲ್ಮ್ಸ್​ ನಿರ್ಮಾಣ ಸಂಸ್ಥೆ ಕಡಿಮೆ ಅವಧಿಯಲ್ಲಿ ಭಾರತದ ಜನಪ್ರಿಯ, ಭರವಸೆಯ ಸಿನಿಮಾ ನಿರ್ಮಾಣ ಸಂಸ್ಥೆಯಾಗಿ ಬೆಳೆದು ನಿಂತಿದೆ. ಹೊಂಬಾಳೆ ಫಿಲ್ಮ್ಸ್​ನವರ ಸಿನಿಮಾಗಳಲ್ಲಿ ಕೆಲಸ ಮಾಡಲು ದೊಡ್ಡ ದೊಡ್ಡ ನಟ-ನಟಿಯರು, ತಂತ್ರಜ್ಞರು ತುದಿಗಾಲಲ್ಲಿ ಕಾಯುತ್ತಿದ್ದಾರೆ. ಹೀಗಿರುವಾಗ ಹೊಂಬಾಳೆ ಫಿಲ್ಮ್ಸ್​ ಹೊಸ ನಿರ್ದೇಶಕರಿಗೆ ಅಥವಾ ಭವಿಷ್ಯದ ನಿರ್ದೇಶಕರಿಗೆ ಅವಕಾಶವೊಂದನ್ನು ನೀಡಿದೆ. ನಿರ್ಮಾಣ ಸಂಸ್ಥೆಗಾಗಿ ಕೆಲಸ ಮಾಡಲು ಸಹಾಯಕ ನಿರ್ದೇಶಕರನ್ನು ನೇಮಕ ಮಾಡಿಕೊಳ್ಳುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಹೊಂಬಾಳೆ ಫಿಲ್ಮ್ಸ್​ ‘ಸಹಾಯಕ ನಿರ್ದೇಶಕರಾಗಿ ನಮ್ಮ ಸಿನಿಮಾ ಲೋಕಕ್ಕೆ ಬನ್ನಿ, ನಿಮ್ಮ ಸೃಜನಶೀಲ ಕಿಡಿ ಮತ್ತು ಕಥೆ ಹೇಳುವ ಉತ್ಸಾಹವನ್ನು ನಮ್ಮ ಸಿನಿಮಾ ಪ್ರಯಾಣದ ಜೊತೆಗೆ ತನ್ನಿ. ನಮ್ಮ ರೋಚಕವಾದ ಯೋಜನೆಗಳ ಭಾಗವಾಗಲು ನಾವು ನಿಮ್ಮನ್ನು ಸ್ವಾಗತಿಸುತ್ತೇವೆ. ಅಲ್ಲಿ ನೀವು ಕಲಿಯಬಹುದು, ಬೆಳೆಯಬಹುದು ಮತ್ತು ಬೆಳ್ಳಿ ಪರದೆಯ ಮ್ಯಾಜಿಕ್‌ಗೆ ಕೊಡುಗೆ ನೀಡಬಹುದು. ನೀವು ಹೊಳೆಯುವ ಅವಕಾಶ ಇಲ್ಲಿಂದ ಪ್ರಾರಂಭವಾಗುತ್ತದೆ’ ಎಂದಿದೆ.

ಹೊಂಬಾಳೆ ಫಿಲ್ಮ್ಸ್​ ಈ ವರೆಗೆ ಬಹುತೇಕ ಹೆಸರಾಂತ ನಿರ್ದೇಶಕರು, ನಟರೊಟ್ಟಿಗೆ ಮಾತ್ರವೇ ಕೆಲಸ ಮಾಡಿದೆ. ಆದರೆ ಹೊಸ ಪೀಳೆಗೆಯ ನಿರ್ದೇಶಕರು, ಬರಹಗಾರರನ್ನು ತಯಾರು ಮಾಡುವ ದೃಷ್ಟಿಯಿಂದಾಗಿ ಇದೀಗ ನೇಮಕಾತಿ ಆರಂಭ ಮಾಡಿದೆ. ಆದರೆ ಕೆಲವು ಷರತ್ತುಗಳನ್ನು ಸಹ ವಿಧಿಸಿದ್ದು, ಈಗಾಗಲೇ ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಉಳ್ಳವರು, ಶಾರ್ಟ್​ ಸಿನಿಮಾಗಳನ್ನು ಮಾಡಿದವರು, ಸಿನಿಮಾದ ಪ್ರೀ ಪ್ರೊಡಕ್ಷನ್, ಪೋಸ್ಟ್ ಪ್ರೊಡಕ್ಷನ್, ಪ್ರೊಡಕ್ಷನ್​ ಬಗ್ಗೆ ಮಾಹಿತಿ ಇರುವವರು ಮಾತ್ರವೇ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.

ಇದನ್ನೂ ಓದಿ:Salaar Release Date: ‘ಕಮಿಂಗ್​ ಬ್ಲಡಿ ಸೂನ್​’: ಪ್ರಭಾಸ್​ ಅಭಿಮಾನಿಗಳಿಗೆ ‘ಸಲಾರ್​’ ರಿಲೀಸ್​ ಡೇಟ್​ ತಿಳಿಸಿದ ‘ಹೊಂಬಾಳೆ ಫಿಲ್ಮ್ಸ್​’

ಹೊಂಬಾಳೆ ಫಿಲ್ಮ್ಸ್​​ ನ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಲು ಆಸಕ್ತಿ ಇರುವವರು ನಿರ್ಮಾಣ ಸಂಸ್ಥೆಯವರು ಆಯೋಜಿಸಿರುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ಸಂದರ್ಶನವು ನವೆಂಬರ್ 11 ರಂದು ಬೆಳಿಗ್ಗೆ 8 ರಿಂದ ಆರಂಭವಾಗುತ್ತದೆ. ಸಂಜೆ ನಾಲ್ಕರ ವರೆಗೆ ನಡೆಯುತ್ತದೆ. ಆಸಕ್ತಿ ಇರುವವರು ಬೆಂಗಳೂರಿನ ಮಲ್ಲೇಶ್ವರದ 8ನೇ ಕ್ರಾಸ್ ರಸ್ತೆ, 8ನೇ ಮುಖ್ಯ ರಸ್ತೆ, #158/1, ಜಿಎಂ ರಿಜಾಯ್ಸ್​​ ಡಿಜಿಟಲ್ ಆಡಿಟೋರಿಯಂ ಬ್ಯಾಂಕ್ವೆಟ್ ಗೆ ಭೇಟಿ ನೀಡಿ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.

ಹೊಂಬಾಳೆ ಫಿಲ್ಮ್ಸ್​ ಪ್ರಸ್ತುತ ಹಲವು ಸಿನಿಮಾಗಳ ಮೇಲೆ ಬಂಡವಾಳ ಹೂಡಿದೆ. ಪ್ರಭಾಸ್ ನಟನೆಯ ‘ಸಲಾರ್’, ಕೀರ್ತಿ ಸುರೇಶ್ ನಟನೆಯ ತಮಿಳು ಸಿನಿಮಾ ‘ತಾತ’, ಪೃಥ್ವಿರಾಜ್ ಸುಕುಮಾರನ್ ನಟಿಸಿ ನಿರ್ದೇಶಿಸುತ್ತಿರುವ ಮಲಯಾಳಂ ಸಿನಿಮಾ ‘ಮೈಖಲ್’, ಶ್ರೀಮುರಳಿ ನಟಿಸಿರುವ ‘ಬಘೀರ’, ಯುವರಾಜ್ ಕುಮಾರ್ ನಟಿಸುತ್ತಿರುವ ‘ಯುವ’, ರಕ್ಷಿತ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ ‘ರಿಚರ್ಡ್ ಆಂಟೊನಿ’, ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ ‘ಕಾಂತಾರ 2’ ಸಿನಿಮಾಗಳ ಮೇಲೆ ಪ್ರಸ್ತುತ ಬಂಡವಾಳ ಹೂಡಿದ್ದು, ಇನ್ನೂ ಕೆಲವು ಸಿನಿಮಾ ನಟರು, ತಂತ್ರಜ್ಞರೊಡನೆ ಚರ್ಚೆ ಚಾಲ್ತಿಯಲ್ಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್