ಯಶ್ ಹಾಗೂ ರಿಷಬ್ ಯೋಚನೆಯಲ್ಲಿ ಎಷ್ಟು ಹೋಲಿಕೆ ಇದೆ ನೋಡಿ

ಯಶ್ ಮತ್ತು ರಿಷಬ್ ಶೆಟ್ಟಿ ಕೆಜಿಎಫ್ 2 ಹಾಗೂ ಕಾಂತಾರ ಸಿನಿಮಾಗಳ ಬಗ್ಗೆ ಸಮಾನ ಆಲೋಚನೆಗಳನ್ನು ಹೊಂದಿದ್ದಾರೆ. ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ ಈ ಪ್ಯಾನ್ ಇಂಡಿಯಾ ಚಿತ್ರಗಳನ್ನು ಇಬ್ಬರೂ ತಮ್ಮದೆಂದು ಬಣ್ಣಿಸಿದ್ದಾರೆ. ಇದು ಅಭಿಮಾನಿಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಆ ವಿಡಿಯೋ ಇಲ್ಲಿದೆ.

ಯಶ್ ಹಾಗೂ ರಿಷಬ್ ಯೋಚನೆಯಲ್ಲಿ ಎಷ್ಟು ಹೋಲಿಕೆ ಇದೆ ನೋಡಿ
ರಿಷಬ್-ಯಶ್
Updated By: ರಾಜೇಶ್ ದುಗ್ಗುಮನೆ

Updated on: Oct 20, 2025 | 9:31 AM

ರಾಕಿಂಗ್ ಸ್ಟಾರ್ ಯಶ್ (Yash) ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಅವರನ್ನು ರಿಷಬ್ ಕೂಡ ಫಾಲೋ ಮಾಡಿದರು. ‘ಕೆಜಿಎಫ್ 2’ ಯಶಸ್ಸಿನ ಬಳಿಕ ಬಂದಿದ್ದು ‘ಕಾಂತಾರ’. ಈ ಎರಡೂ ಚಿತ್ರಗಳನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿದೆ. ಯಶ್ ಹಾಗೂ ರಿಷಬ್ ಮಧ್ಯೆ ಸಾಕಷ್ಟು ಹೋಲಿಕೆ ಇದೆ ಎಂದು ಅನೇಕರಿಗೆ ಅನಿಸಿದೆ. ಇದಕ್ಕೆ ಕಾರಣ ಆಗಿರೋದು ಇತ್ತೀಚಿಗಿನ ಒಂದು ಸಂದರ್ಶನ. ಈ ಬಗ್ಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.

ಯಶ್ ಅವರು ‘ಕೆಜಿಎಫ್ 2’ ಯಶಸ್ಸಿನ ಬಳಿಕ ವಿಶ್ವ ಮಟ್ಟದಲ್ಲಿ ಖ್ಯಾತಿ ಪಡೆದರು. ಅವರನ್ನು ಅನೇಕರು ಸಂದರ್ಶನ ಮಾಡಿದ್ದಾರೆ. ಈ ರೀತಿ ಸಂದರ್ಶನ ಮಾಡುವಾಗ ಅವರನ್ನು ಅನೇಕರು ಹೊಗಳುತ್ತಾರೆ. ಇದು ಸಾಮಾನ್ಯ. ಅದೇ ರೀತಿ, ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡುತ್ತಾರೆ. ‘ಕಾಂತಾರ’ ಸಿನಿಮಾ ಬರುವಾಗ ಯಶ್ ಅವರು ‘ಕಾಂತಾರ’ ಚಿತ್ರದ ಬಗ್ಗೆ ಮಾತನಾಡಿದ್ದರು.

ಇದನ್ನೂ ಓದಿ
ಒಂದೇ ದಿನ ಒಟಿಟಿಗೆ ಕಾಲಿಟ್ಟ ಕನ್ನಡದ ಎರಡು ಹಿಟ್ ಚಿತ್ರಗಳು; ಮಿಸ್ ಮಾಡಬೇಡಿ
ಅಶ್ವಿನಿಯ ಚಮಚ ಆದ ಜಾನ್ವಿ; ಹೇಳಿದಂತೆ ಕುಣೀತಾರೆ ತಕತೈ, ತಕತೈ
ರಕ್ಷಿತಾ ಗುಂಡಿಗೆ ಮೆಚ್ಚಲೇಬೇಕು; ಅಶ್ವಿನಿ-ಜಾನ್ವಿ ಕೂಗಾಡಿದರೂ ಜಗಲ್ಲೂ ಇಲ್ಲ
ಆಲಿಯಾ ಹೊಸ ಮನೆಯಲ್ಲಿ ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿದ ಗಣಪತಿ ಮೂರ್ತಿ

ಆ್ಯಂಕರ್ ‘ಕಾಂತಾರ’ ಎಂದು ಹೇಳಿ, ‘ಇದು ನಿಮ್ಮ ಸಿನಿಮಾ ಅಲ್ಲ, ಆದರೆ ಕನ್ನಡದ ಚಿತ್ರ’ ಎಂದರು. ಆಗ ಯಶ್, ‘ಅದು ನನ್ನ ಸಿನಿಮಾ ಕೂಡ ಹೌದು’ ಎಂದು ಹೇಳಿದರು. ಈಗ ರಿಷಬ್​ಗೆ ಇದೇ ರೀತಿಯ ಪ್ರಶ್ನೆ ಎದುರಾದಾಗ ಅವರ ಉತ್ತರ ಕೂಡ ಯಶ್ ಉತ್ತರದ ರೀತಿಯೇ ಇತ್ತು.

‘ಕೆಜಿಎಫ್ 2 ಹಾಗೂ ಕಾಂತಾರ ಚಾಪ್ಟರ್ 1 ಹೋಲಿಕೆ ಬಗ್ಗೆ ನೀವೇನು ಹೇಳಿರುತ್ತೀರಿ’ ಎಂದು ಕೇಳಿದಾಗ ರಿಷಬ್ ಅವರು ನೇರವಾಗಿ ಉತ್ತರ ನೀಡಿದರು. ‘ಎರಡೂ ನಮ್ಮದೇ ಸಿನಿಮಾ, ನಮ್ಮದೇ ಹೀರೋ. ನಮ್ಮ ಪ್ರೊಡಕ್ಷನ್ ಸಂಸ್ಥೆಯ ಸಿನಿಮಾಗಳು ಇವು’ ಎಂದು ರಿಷಬ್ ಶೆಟ್ಟಿ ಪ್ರೀತಿಯಿಂದ ಹೇಳಿದ್ದಾರೆ. ಎರಡೂ ವಿಡಿಯೋಗಳನ್ನು ಹೋಲಿಕೆ ಮಾಡಿ ವೈರಲ್ ಮಾಡಲಾಗುತ್ತಿದೆ.

ಇದನ್ನೂ ಓದಿ: ‘ಕೆಜಿಎಫ್ 3 ಫೈನಲ್ ಡ್ರಾಫ್ಟ್ ಸಿದ್ಧ’; ಪ್ರಶಾಂತ್ ನೀಲ್ ಪೋಸ್ಟ್ ಹಿಂದಿನ ಅಸಲಿಯತ್ತು ಏನು?

‘ಕೆಜಿಎಫ್ 2’ ಸಿನಿಮಾ 1200+ ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಕನ್ನಡದ ಚಿತ್ರವೊಂದು ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು ಇದೇ ಮೊದಲು. ಈಗ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಕೂಡ ಸಾವಿರ ಕೋಟಿ ರೂಪಾಯಿಗೂ ಅಧಿಕ ಕಲೆಕ್ಷ ಮಾಡುವ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:00 am, Mon, 20 October 25