AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂತಾರಾಷ್ಟ್ರೀಯ ಡ್ಯಾನ್ಸ್ ದಿನ: ಪುನೀತ್ ರಾಜ್​ಕುಮಾರ್ ಅವರನ್ನು ನೆನಪಿಸಿಕೊಂಡ ಅಭಿಮಾನಿಗಳು

International Dance Day 2023: ಮೊದಲ ಸಿನಿಮಾದಿಂದಲೇ ಅವರು ಡ್ಯಾನ್ಸ್ ಮೂಲಕ ಎಲ್ಲರ ಗಮನ ಸೆಳೆದರು. ಅವರು ಹಾಕುತ್ತಿದ್ದ ಸ್ಟೆಪ್ ನೋಡಿ ಅನೇಕರು ಕಣ್ಣರಳಿಸಿದ್ದಾರೆ. ಅವರು ಹಾಕುತ್ತಿದ್ದ ಸ್ಟೆಪ್​ನ ಕಾಪಿ ಮಾಡೋದು ಅಷ್ಟು ಸುಲಭದ ಮಾತಾಗಿರಲಿಲ್ಲ.

ಅಂತಾರಾಷ್ಟ್ರೀಯ ಡ್ಯಾನ್ಸ್ ದಿನ: ಪುನೀತ್ ರಾಜ್​ಕುಮಾರ್ ಅವರನ್ನು ನೆನಪಿಸಿಕೊಂಡ ಅಭಿಮಾನಿಗಳು
ಪುನೀತ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Apr 29, 2023 | 11:52 AM

ಇಂದು (ಮೇ 29) ವಿಶ್ವಾದ್ಯಂತ ಅಂತಾರಾಷ್ಟ್ರೀಯ ಡ್ಯಾನ್ಸ್ ದಿನಾಚರಣೆಯನ್ನು (International Dance Day) ಆಚರಿಸಲಾಗುತ್ತಿದೆ. ಈ ದಿನ ಕರ್ನಾಕಟದ ಜನತೆಗೆ ವಿಶೇಷವಾಗಿ ನೆನಪಾಗೋದು ಪುನೀತ್ ರಾಜ್​ಕುಮಾರ್ (Puneeth Rajkumar) ಅವರು. ಡ್ಯಾನ್ಸ್ ಮಾಡೋದು ಎಂದರೆ ಅವರಿಗೆ ನೀರು ಕುಡಿದಷ್ಟೇ ಸುಲಭ ಆಗಿತ್ತು. ಅವರು ಈ ವಿಚಾರದಲ್ಲಿ ಅನೇಕರಿಗೆ ಮಾದರಿ. ಅವರ ಡ್ಯಾನ್ಸ್ ನೋಡಿ ಸ್ಫೂರ್ತಿ ಪಡೆದವರ ಪಟ್ಟಿ ದೊಡ್ಡದಿದೆ. ಇಂದು ಎಲ್ಲರೂ ಪುನೀತ್ ರಾಜ್​ಕುಮಾರ್ ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಅವರ ಡ್ಯಾನ್ಸ್ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಲಾಗುತ್ತಿದೆ.

ಪುನೀತ್ ರಾಜ್​ಕುಮಾರ್ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು ‘ಅಪ್ಪು’ ಸಿನಿಮಾ ಮೂಲಕ. ಅವರು ಸಿನಿಮಾ ರಂಗಕ್ಕೆ ಕಾಲಿಡುವಾಗಲೇ ನಟನೆ ಜೊತೆಗೆ ಡ್ಯಾನ್ಸ್ ಕೂಡ ಕಲಿತಿದ್ದರು. ಮೊದಲ ಸಿನಿಮಾದಿಂದಲೇ ಅವರು ಡ್ಯಾನ್ಸ್ ಮೂಲಕ ಎಲ್ಲರ ಗಮನ ಸೆಳೆದರು. ಅವರು ಹಾಕುತ್ತಿದ್ದ ಸ್ಟೆಪ್ ನೋಡಿ ಅನೇಕರು ಕಣ್ಣರಳಿಸಿದ್ದಾರೆ. ಅವರು ಹಾಕುತ್ತಿದ್ದ ಸ್ಟೆಪ್​ನ ಕಾಪಿ ಮಾಡೋದು ಅಷ್ಟು ಸುಲಭದ ಮಾತಾಗಿರಲಿಲ್ಲ.

ಪುನೀತ್ ರಾಜ್​ಕುಮಾರ್ ಅವರು ‘ಲಕ್ಕಿ ಮ್ಯಾನ್’ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದ್ದರು. ಈ ಚಿತ್ರದ ‘ಬಾರೋ ರಾಜ..’ ಹಾಡು ಎಲ್ಲರ ಗಮನ ಸೆಳೆದಿತ್ತು. ಇದಕ್ಕೆ ಕಾರಣ ಪುನೀತ್ ರಾಜ್​ಕುಮಾರ್ ಹಾಗೂ ಪ್ರಭುದೇವ. ಇಬ್ಬರೂ ಡ್ಯಾನ್ಸ್​ಗೆ ಫೇಮಸ್. ಇಬ್ಬರೂ ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದರೂ ಒಟ್ಟಾಗಿ ನಟಿಸುವ ಅವಕಾಶ ಸಿಕ್ಕಿರಲಿಲ್ಲ. ‘ಬಾರೋ ರಾಜ..’ ಹಾಡಿನ ಮೂಲಕ ಇಬ್ಬರೂ ಒಂದಾದರು. ಈ ಹಾಡಿನಲ್ಲಿ ಪುನೀತ್ ರಾಜ್​ಕುಮಾರ್ ಅವರು ಮಸ್ತ್​ ಡ್ಯಾನ್ಸ್ ಮಾಡಿದರು. ಅವರು ಕಾಣಿಸಿಕೊಂಡ ಕೊನೆಯ ಹಾಡು ಡ್ಯಾನ್ಸ್​ಗೆ ಸಂಬಂಧಿಸಿದ್ದಾಗಿತ್ತು.

‘ನಟಸಾರ್ವಭೌಮ’ ಚಿತ್ರದ ‘ಓಪನ್ ದಿ ಬಾಟಲ್​..’ ಸೇರಿ ಅನೇಕ ಹಾಡುಗಳಲ್ಲಿ ಪುನೀತ್ ಮಸ್ತ್ ಸ್ಟೆಪ್ ಹಾಕಿದ್ದರು. ಅವರು ನಮ್ಮನ್ನು ಅಗಲಿದರೂ ಆ ಹಾಡುಗಳು, ಅವರು ಹಾಕಿದ ಸ್ಟೆಪ್ ಅಭಿಮಾನಿಗಳ ಮನಸ್ಸಲ್ಲಿ ಸದಾ ಉಳಿದುಕೊಂಡಿರುತ್ತದೆ. ಪುನೀತ್ ನಿಧನಕ್ಕೂ ಕೆಲವೇ ದಿನ ಮೊದಲ ನಡೆದ ‘ಭಜರಂಗಿ 2’ ಪ್ರೀ-ರಿಲೀಸ್ ಇವೆಂಟ್​ನಲ್ಲಿ ಪುನೀತ್, ಯಶ್ ಹಾಗೂ ಶಿವರಾಜ್​ಕುಮಾರ್ ಒಟ್ಟಾಗಿ ಹೆಜ್ಜೆ ಹಾಕಿದ್ದರು.

ಇದನ್ನೂ ಓದಿ: ಅಭಿಮಾನಿಯ ಮದುವೆಯಲ್ಲಿ ಪುನೀತ್​, ರಾಜ್​ಕುಮಾರ್​ ಫೋಟೋಗಳಿಂದಲೇ ಕಲ್ಯಾಣ ಮಂಟಪದ ಸಿಂಗಾರ

ಅಕ್ಟೋಬರ್ 29, 2021ರಂದು ಪುನೀತ್ ರಾಜ್​ಕುಮಾರ್ ಅವರು ಹೃದಯಾಘಾತದಿಂದ ನಿಧನ ಹೊಂದಿದರು. ಅವರನ್ನು ರಕ್ಷಿಸಿಕೊಳ್ಳಬೇಕು ಎನ್ನುವ ಕುಟುಂಬದ ಪ್ರಯತ್ನ ವಿಫಲವಾಯಿತು. ಇಡೀ ಕುಟುಂಬಕ್ಕೆ ಇದು ಆಘಾತ ತಂದಿತ್ತು. ಅವರು ನಿಧನ ಹೊಂದಿರುವ ವಿಚಾರವನ್ನು ಅಭಿಮಾನಿಗಳ ಬಳಿ ಈಗಲೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:46 am, Sat, 29 April 23

ಒನ್​ ವೇನಲ್ಲಿ ಬಂದು ಡಿಸಿಗೆ ಅವಾಜ್ ಹಾಕಿದ ಬೈಕ್ ಸವಾರ: ಮುಂದೇನಾಯ್ತು?
ಒನ್​ ವೇನಲ್ಲಿ ಬಂದು ಡಿಸಿಗೆ ಅವಾಜ್ ಹಾಕಿದ ಬೈಕ್ ಸವಾರ: ಮುಂದೇನಾಯ್ತು?
ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಸಾಮೂಹಿಕ ನಾಯಕತ್ವ ಬೇಕಾಗುತ್ತದೆ: ರಾಜಣ್ಣ
ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಸಾಮೂಹಿಕ ನಾಯಕತ್ವ ಬೇಕಾಗುತ್ತದೆ: ರಾಜಣ್ಣ
ಜನಪ್ರಿಯ ಗೆಟ್ಟೋ ಕಿಡ್ಸ್​ಗೆ ಪ್ರೀತಿಯ ವಿದಾಯ ಹೇಳಿದ ಅರ್ಜುನ್ ಜನ್ಯ
ಜನಪ್ರಿಯ ಗೆಟ್ಟೋ ಕಿಡ್ಸ್​ಗೆ ಪ್ರೀತಿಯ ವಿದಾಯ ಹೇಳಿದ ಅರ್ಜುನ್ ಜನ್ಯ
ಕಚೇರಿಗೆ ಗೈರುಹಾಜರಾದರೂ ಸಿಬ್ಬಂದಿಯಿಂದ ಸಿಎಲ್ ಅರ್ಜಿ ಇಲ್ಲ!
ಕಚೇರಿಗೆ ಗೈರುಹಾಜರಾದರೂ ಸಿಬ್ಬಂದಿಯಿಂದ ಸಿಎಲ್ ಅರ್ಜಿ ಇಲ್ಲ!
ತಾಲೂಕು ಕಚೇರಿಯ ಗ್ರೇಡ್ 2 ತಹಸೀಲ್ದಾರ್​ಗೆ ನೀರಿಳಿಸಿದ ಸಚಿವ ಭೈರೇಗೌಡ
ತಾಲೂಕು ಕಚೇರಿಯ ಗ್ರೇಡ್ 2 ತಹಸೀಲ್ದಾರ್​ಗೆ ನೀರಿಳಿಸಿದ ಸಚಿವ ಭೈರೇಗೌಡ
ಯಾವ್ಯಾವುದಕ್ಕೆ ಎಷ್ಟೆಷ್ಟು ಲಂಚ ಅಂತ ಕಚೇರಿಯಲ್ಲಿ ದರಪಟ್ಟಿ ಲಗತ್ತಿಸಿ! ಸಚಿವ
ಯಾವ್ಯಾವುದಕ್ಕೆ ಎಷ್ಟೆಷ್ಟು ಲಂಚ ಅಂತ ಕಚೇರಿಯಲ್ಲಿ ದರಪಟ್ಟಿ ಲಗತ್ತಿಸಿ! ಸಚಿವ
ಕಚೇರಿಗೆ ದಿಢೀರ್ ಭೇಟಿ: ಅಧಿಕಾರಿಗಳು, ನೌಕರರಿಗೆ ಕೃಷ್ಣಭೈರೇಗೌಡ ಕ್ಲಾಸ್
ಕಚೇರಿಗೆ ದಿಢೀರ್ ಭೇಟಿ: ಅಧಿಕಾರಿಗಳು, ನೌಕರರಿಗೆ ಕೃಷ್ಣಭೈರೇಗೌಡ ಕ್ಲಾಸ್
ಕುಮಾರಸ್ವಾಮಿ ಮತ್ತು ಜೋಶಿಯವರನ್ನು ಚರ್ಚೆಗೆ ಕರೆಯುತ್ತಿದ್ದೇನೆ: ಪ್ರದೀಪ್
ಕುಮಾರಸ್ವಾಮಿ ಮತ್ತು ಜೋಶಿಯವರನ್ನು ಚರ್ಚೆಗೆ ಕರೆಯುತ್ತಿದ್ದೇನೆ: ಪ್ರದೀಪ್
ಭಾರತ-ಯುಎಇ ಸಹಭಾಗಿತ್ವ ಮಹತ್ವದ್ದು: ಸಚಿವ ಹರ್ದೀಪ್ ಸಿಂಗ್
ಭಾರತ-ಯುಎಇ ಸಹಭಾಗಿತ್ವ ಮಹತ್ವದ್ದು: ಸಚಿವ ಹರ್ದೀಪ್ ಸಿಂಗ್
ಈ ಬಾರಿ 11 ದಿನ ಮೈಸೂರು ದಸರಾ ಆಚರಣೆ: ವಿಶೇಷತೆ ಏನು ಗೊತ್ತಾ?
ಈ ಬಾರಿ 11 ದಿನ ಮೈಸೂರು ದಸರಾ ಆಚರಣೆ: ವಿಶೇಷತೆ ಏನು ಗೊತ್ತಾ?