‘ಮರೆಯಾದ ಮೇಲೆ ನಿನ್ನಂತೆ ಯಾರನ್ನೂ ಕಂಡಿಲ್ಲ’; ಗೆಳೆಯ ಪುನೀತ್ ಬಗ್ಗೆ ಜಗ್ಗೇಶ್ ಭಾವುಕ ಪೋಸ್ಟ್

ಜಗ್ಗೇಶ್ ಅವರು ಪುನೀತ್ ರಾಜ್ ಕುಮಾರ್ ಅವರನ್ನು ನೆನೆದು ಭಾವುಕ ಪದ್ಯವನ್ನು ಬರೆದಿದ್ದಾರೆ. ಅವರ ಬಾಲ್ಯದಿಂದ ಹಿಡಿದು ಅವರ ನಿಧನದವರೆಗಿನ ಸಂಬಂಧವನ್ನು ವಿವರಿಸುವ ಈ ಪದ್ಯವು ಅಪ್ಪು ಅವರ ವ್ಯಕ್ತಿತ್ವದ ಬಗ್ಗೆ ಆಳವಾದ ಅರಿವು ಹೊಂದಿರುವವರ ಮಾತುಗಳಂತೆ ತೋರುತ್ತದೆ. ಅಭಿಮಾನಿಗಳು ಈ ಪದ್ಯಕ್ಕೆ ಭಾವುಕವಾಗಿ ಸ್ಪಂದಿಸಿದ್ದಾರೆ.

‘ಮರೆಯಾದ ಮೇಲೆ ನಿನ್ನಂತೆ ಯಾರನ್ನೂ ಕಂಡಿಲ್ಲ’; ಗೆಳೆಯ ಪುನೀತ್ ಬಗ್ಗೆ ಜಗ್ಗೇಶ್ ಭಾವುಕ ಪೋಸ್ಟ್
ಪುನೀತ್​-ಜಗ್ಗೇಶ್
Updated By: ರಾಜೇಶ್ ದುಗ್ಗುಮನೆ

Updated on: Oct 29, 2024 | 1:08 PM

ಪುನೀತ್ ರಾಜ್​ಕುಮಾರ್ ಇಲ್ಲ ಎಂಬ ನೋವು ಯಾವಾಗಲೂ ನಮ್ಮ ಹೃದಯದಲ್ಲಿ ಇರುವಂಥದ್ದು. ಅದು ಸದ್ಯಕ್ಕೆ ಮರೆಯಾಗುವಂಥದ್ದಲ್ಲ. ಪುನೀತ್ ಅವರನ್ನು ಕಳೆದುಕೊಂಡ ನೋವು ಅಭಿಮಾನಿಗಳ ಹೃದಯದಲ್ಲಿ ಅವರ ಆಪ್ತರಲ್ಲಿ ಸದಾ ಮಾಸದೇ ಇರುತ್ತದೆ. ಪುನೀತ್ ಅವರ ಆಪ್ತ ಬಳಗದಲ್ಲಿ ಇದ್ದವರಲ್ಲಿ ಜಗ್ಗೇಶ್ ಕೂಡ ಒಬ್ಬರು. ಪುನೀತ್ ಜನಿಸಿದಾಗಿನಿಂದ ಅವರು ನಿಧನ ಹೊಂದುವವರೆಗೆ ಪುನೀತ್ ಜೊತೆಗೆ ಇದ್ದರು. ಪುನೀತ್ ಅವರನ್ನು ಪ್ರತಿ ಹಂತದಲ್ಲಿ ಕಂಡವರು. ಈಗ ಪುನೀತ್ ಬಗ್ಗೆ ಅವರು ಭಾವುಕ ಸಾಲುಗಳನ್ನು ಬರೆದುಕೊಂಡಿದ್ದಾರೆ.

ಜಗ್ಗೇಶ್ ಅವರು ಚಿತ್ರರಂಗದಲ್ಲಿ, ರಾಜಕೀಯದಲ್ಲಿ ಬ್ಯುಸಿ ಇದ್ದಾರೆ. ಇದರ ಜೊತೆಗೆ ಅವರು ಸೋಶಿಯಲ್ ಮೀಡಿಯಾದಲ್ಲೂ ಆ್ಯಕ್ಟೀವ್ ಆಗಿದ್ದಾರೆ. ಅವರು ಹಲವು ವಿಚಾರಗಳ ಬಗ್ಗೆ ಮಾಹಿತಿ ನೀಡುತ್ತಾ ಇರುತ್ತಾರೆ. ಪುನೀತ್ ಇಲ್ಲ ಎಂಬ ನೋವಿನಲ್ಲಿ ಭಾವುಕ ಸಾಲುಗಳನ್ನು ಜಗ್ಗೇಶ್ ಬರೆದಿದ್ದಾರೆ. ಈ ಸಾಲುಗಳ ಅರ್ಥವನ್ನು ನೋಡಿ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ.

ನೀ ಮಗುವಾಗಿದ್ದಾಗ ಅಪ್ಪನ ಮಡಿಲಲ್ಲಿ ಕಂಡಿದ್ದೆ..

ಅಪ್ಪನ ಭುಜದವರೆಗೆ ಬೆಳೆದಾಗ ಅಪ್ಪನ ಪಕ್ಕದಲ್ಲಿ ಕಂಡಿದ್ದೆ..

ಮದುವೆಯಾದಾಗ ಮಡದಿಯ ಪಕ್ಕದಲ್ಲಿ ಕಂಡಿದ್ದೆ..

ನಟನಾಗಿ ಬೆಳದಾಗ ಅಭಿಮಾನಿಗಳ ಹೃದಯದಲ್ಲಿ ಕಂಡಿದ್ದೆ..

ಗೆಳೆಯನಾದಾಗ ನಿನ್ನ ನಗುವನ್ನು ಕಂಡಿದ್ದೆ..

ಮರೆಯಾದ ಮೇಲೆ ನಿನ್ನಂತೆ ಯಾರನ್ನೂ ಕಂಡಿಲ್ಲ..

ಯಾವಾಗಲೂ ನಿನ್ನ ಪ್ರೀತಿಸುತ್ತೇನೆ..

ಇದನ್ನೂ ಓದಿ: ‘ದರ್ಶನ್​ ಸಲುವಾಗಿ ಪೂಜೆ ಅಂದಿದ್ರೆ ನಾನು ಬರುತ್ತಿರಲಿಲ್ಲ’: ಜಗ್ಗೇಶ್ ನೇರ ಮಾತು

ಸದ್ಯ ಜಗ್ಗೇಶ್ ಅವರ ಸಾಲುಗಳಿಗೆ ಫ್ಯಾನ್ಸ್ ಕಡೆಯಿಂದ ಮೆಚ್ಚುಗೆ ಸಿಕ್ಕಿದೆ. ಪುನೀತ್ ಅವರನ್ನು ಹತ್ತಿರದಿಂದ ಕಂಡವರು ಮಾತ್ರ ಈ ರೀತಿ ಬರೆಯಲು ಸಾಧ್ಯ ಎಂದು ಕೆಲವರು ಹೇಳಿದ್ದಾರೆ. ‘ಅಪ್ಪುವಿಗೆ ಅಪ್ಪುನೇ ಸಾಟಿ, ಅಪ್ಪುವಿಗೆ ನಮ್ಮ ನಮನಗಳು’ ಎಂದು ಕೆಲವರು ಬರೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.