
‘ಬಿಗ್ ಬಾಸ್ ಕನ್ನಡ ಸೀಸನ್ 12’ರ (BBK 12) ಜಾನ್ವಿ ಅವರು ಎಲಿಮಿನೇಟ್ ಆಗಿ ಹಲವು ವಾರ ಕಳೆದಿದೆ. ಬಿಗ್ ಬಾಸ್ನಿಂದ ಹೊರ ಬಂದ ಬಳಿಕ ಅವರು ವಿವಿಧ ಫೋಟೋಶೂಟ್ ಮಾಡುತ್ತಾ ಗಮನ ಸೆಳೆಯುತ್ತಿದ್ದಾರೆ. ಫಿನಾಲೆ ಸಂದರ್ಭದಲ್ಲಿ ಅವರು ಎಡವಟ್ಟೊಂದನ್ನು ಮಾಡಿಕೊಂಡಿದ್ದಾರೆ. ಅವರು ಮಾಡಿರುವ ಪೋಸ್ಟ್ ಬಗ್ಗೆ ಚರ್ಚೆ ಶುರುವಾಗಿದೆ. ಜಾನ್ವಿ ಹೊಟ್ಟೆ ಉರಿದುಕೊಂಡು ಈ ರೀತಿ ಪೋಸ್ಟ್ ಹಾಕಿರಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಬಿಗ್ ಬಾಸ್ ಅಲ್ಲಿ ಇದ್ದಷ್ಟು ದಿನ ಜಾನ್ವಿ ಚರ್ಚೆಯಲ್ಲಿ ಇದ್ದರು. ಕಲರ್ಸ್ ಕನ್ನಡದವರು ಸ್ಪಂದನಾ ಅವರನ್ನು ಉಳಿಸಿಕೊಳ್ಳುತ್ತಿದ್ದಾರೆ ಎಂದು ನೇರವಾಗಿ ಆರೋಪಿಸಿದ್ದರು. ಈ ಬಗ್ಗೆ ಚರ್ಚೆ ನಡೆದಿತ್ತು. ಸುದೀಪ್ ಕೂಡ ಇದನ್ನು ಪ್ರಶ್ನೆ ಮಾಡಿದ್ದರು. ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕವೂ ಜಾನ್ವಿ ಚರ್ಚೆಯಲ್ಲಿರುವ ಪ್ರಯತ್ನ ಮಾಡುತ್ತಿದ್ದಾರೆ.
ಇದನ್ನೂ ಓದಿ: ಟಾಪ್ 6ನಿಂದ ಒಬ್ಬರು ಔಟ್; ವಿನ್ ನನ್ನ ಹಣೆಯಲ್ಲಿ ಬರೆದಿಲ್ಲ ಎಂದ ಗಿಲ್ಲಿ
ಬಿಗ್ ಬಾಸ್ ಫಿನಾಲೆ ನಡೆಯುತ್ತಿದೆ. ಗಿಲ್ಲಿ ನಟನಿಗೆ ಸಾಕಷ್ಟು ಹೈಪ್ ಸಿಗುತ್ತಿದೆ. ಈ ಹೈಪ್ ನೋಡಿದ ಅನೇಕರಿಗೆ ಈರ್ಷೆ ಬಂದಿದೆ ಎಂಬ ಅಭಿಪ್ರಾಯ ಅಭಿಮಾನಿಗಳದ್ದು. ‘ಗಿಲ್ಲಿಗೆ ಹೈಪ್ ನೀಡೋದು ಸರಿ ಎನಿಸುತ್ತಿಲ್ಲ’ ಎಂಬರ್ಥದ ಸ್ಟೇಟಸ್ನ ಅವರು ಹಾಕಿದ್ದರು. ನಂತರ, ‘ಅಶ್ವಿನಿ ದುಡ್ಡು ಕೊಟ್ಟು ವೋಟ್ ಖರೀದಿ ಮಾಡಿದ್ದಾರೆ ಎಂದು ಆರೋಪಿಸುವವರು ಚುನಾವಣೆ ಸಂದರ್ಭದಲ್ಲೂ ಈ ಬಗ್ಗೆ ಪ್ರಶ್ನೆ ಮಾಡಿ’ ಎಂಬ ಸ್ಟೇಟಸ್ನ ಹಂಚಿಕೊಂಡಿದ್ದಾರೆ.
ಇಷ್ಟೆಲ್ಲಾ ಬುದ್ಧಿವಂತಿಕೆ ಮಾತಾಡೋರು ಮತ್ತೆ ಬಿಗ್ ಬಾಸ್ ಮನೆಗೆ ಯಾಕೆ ಹೋಗಿದ್ದು ಜಾನವಿ ಮೇಡಂ? ಅಲ್ಲಿರೋದು ಬರೀ ಡ್ರಾಮಾ ಅಲ್ವಾ? ಜನರಿಗೆ ಉಪದೇಶ ಮಾಡೋದು ಸುಲಭ, ಆದ್ರೆ ಅದನ್ನ ಪಾಲಿಸೋದು ಕಷ್ಟ.ಈ ಗಿಲ್ಲಿ ಪಬ್ಲಿಸಿಟಿ ಕಂಡು ಬೇರೆ contestants ಬರೀ ಹೊಟ್ಟೆ ಉರಿಯುತ್ತಿಲ್ಲ, ಅಸಹ್ಯ ಆಗ್ತಿದೆ ಅವರಿಗೆಲ್ಲ ಅಷ್ಟೇ. #bbk12 pic.twitter.com/xaValsyryL
— Praveen Reddy (@PraveenReddy181) January 18, 2026
ಯಾವುದೇ ಸ್ಪರ್ಧಿಗೆ ಹೈಪ್ ಕೊಡೋದು ತಪ್ಪೇ ಎಂಬುದು ಅನೇಕರ ಪ್ರಶ್ನೆ. ‘ಇಷ್ಟೆಲ್ಲಾ ಬುದ್ಧಿವಂತಿಕೆ ಮಾತಾಡೋರು ಮತ್ತೆ ಬಿಗ್ ಬಾಸ್ ಮನೆಗೆ ಯಾಕೆ ಹೋಗಿದ್ದು ಜಾನವಿ ಮೇಡಂ’ ಎಂದು ಜಾನ್ವಿಯನ್ನು ಕೆಲವರು ಪ್ರಶ್ನೆ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 5:21 pm, Sun, 18 January 26