35 ಹಾಡುಗಳ ಚಿತ್ರದೊಂದಿಗೆ ಬಂದ ರವಿಚಂದ್ರನ್; ಬಿಗ್ ಬಾಸ್ ವೇದಿಕೆ ಮೇಲೆ ಘೋಷಣೆ
ರವಿಚಂದ್ರನ್ ಹೊಸ ಸಿನಿಮಾ 'ಐ ಆ್ಯಮ್ ಗಾಡ್' ಬಿಗ್ ಬಾಸ್ ವೇದಿಕೆಯಲ್ಲಿ ಘೋಷಣೆಯಾಗಿದೆ. ಸಂಪೂರ್ಣವಾಗಿ AI ತಂತ್ರಜ್ಞಾನ ಬಳಸಿ, ರವಿಚಂದ್ರನ್ ಅವರೇ ನಿರ್ದೇಶನ, ನಿರ್ಮಾಣ ಸೇರಿದಂತೆ ಎಲ್ಲವನ್ನೂ ನಿಭಾಯಿಸಿದ್ದಾರೆ. ವಿಶೇಷವೆಂದರೆ ಈ ಚಿತ್ರ 30-35 ಹಾಡುಗಳನ್ನು ಒಳಗೊಂಡಿದೆ. ಮೇ 30ರಂದು ಅವರ ಹುಟ್ಟುಹಬ್ಬದಂದು ಸಿನಿಮಾ ಬಿಡುಗಡೆ ಮಾಡುವ ಉದ್ದೇಶ ಹೊಂದಿದ್ದಾರೆ.

ರವಿಚಂದ್ರನ್ ಸಿನಿಮಾಗಳಲ್ಲಿ ಹಾಡುಗಳೇ ಹೈಲೈಟ್ ಆಗಿರುತ್ತವೆ. ಅವರು ನೀಡಿದ ಹಲವು ಸಿನಿಮಾಗಳಲ್ಲಿ ಇದು ಕಾಣಿಸಿದೆ. ಈಗ ಅವರು 35 ಹಾಡುಗಳು ಇರು ಸಿನಿಮಾ ಮೂಲಕ ಬರಲು ರೆಡಿ ಆಗಿದ್ದಾರೆ. ಬಿಗ್ ಬಾಸ್ ಫಿನಾಲೆ ವೇದಿಕೆ ಮೇಲೆ ಈ ಬಗ್ಗೆ ಘೋಷಣೆ ಮಾಡಿದ್ದಾರೆ. ಇದನ್ನು ಕೇಳಿ ಅನೇಕರಿಗೆ ಅಚ್ಚರಿ ಆಗಿದೆ.
‘ಐ ಆ್ಯಮ್ ಗಾಡ್’ ಎಂಬುದು ಚಿತ್ರದ ಟೈಟಲ್. ಇದು ಸಂಪೂರ್ಣವಾಗಿ ಎಐ ತಂತ್ರಜ್ಞಾನದಿಂದ ಮಾಡಲ್ಪಟ್ಟ ಸಿನಿಮಾ ಅನ್ನೋದು ವಿಶೇಷ. ಈ ಬಗ್ಗೆ ರವಿಚಂದ್ರನ್ ಅವರು ಮಾಹಿತಿ ನೀಡಿದ್ದಾರೆ. ಒಬ್ಬರನ್ನು ಎಲಿಮಿನೇಟ್ ಮಾಡಲು ರವಿಚಂದ್ರನ್ ಅವರು ಬಿಗ್ ಬಾಸ್ ವೇದಿಕೆಗೆ ಬಂದಿದ್ದರು. ಈ ವೇಳೆ ಅವರು ಸಿನಿಮಾ ಬಗ್ಗೆ ಮಾಹಿತಿ ನೀಡಿದರು.
‘ಎರಡೂವರೆ ವರ್ಷದಿಂದ ಒಂದು ಸಿನಿಮಾ ಮಾಡ್ತಾ ಇದೀನಿ.400 ದಿನ ಶೂಟ್ ಮಾಡಿದ್ದೇನೆ. ಈ ಸಿನಿಮಾನ ಒಬ್ಬನೇ ಮಾಡಿದ್ದೇನೆ. ಎಐ ಇದೆ. ಕ್ಯಾಮೆರಾಮೆನ್ ಬಿಟ್ರೆ ಉಳಿದೆಲ್ಲವನ್ನೂ ನಾನೋಬ್ನೇ ಮಾಡಿದ್ದು. ಐ ಆ್ಯಮ್ ಗಾಡ್ ಚಿತ್ರದ ಹೆಸರು. ಇದಕ್ಕೆ ಮ್ಯೂಸಿಕ್ ಡೈರೆಕ್ಟರ್ ಕೂಡ ಇಲ್ಲ’ ಎಂದರು ರವಿಚಂದ್ರನ್.
ಇದನ್ನೂ ಓದಿ: ರವಿಚಂದ್ರನ್ ಎದುರೇ ರಾಜಾರೋಷವಾಗಿ ಸುಳ್ಳು ಹೇಳಿದ ಗಿಲ್ಲಿ; ಕಂಡು ಹಿಡಿದ ಕ್ರೇಜಿಸ್ಟಾರ್
‘ಐ ಆ್ಯಮ್ ಗಾಡ್ ಸಿನಿಮಾದಲ್ಲಿ 30-35 ಹಾಡು ಬರುತ್ತೆ. ನನ್ನ ಬರ್ತ್ಡೇಗೆ (ಮೇ 30) ಸಿನಿಮಾ ತರಬೇಕು ಎಂಬ ಉದ್ದೇಶ ಇದೆ. ನಾನೇ ಎಲ್ಲವನ್ನೂ ಮಾಡಬೇಕು. ಹೀಗಾಗಿ ಟೈಮ್ ಆಗ್ತಾ ಇದೆ’ ಎಂದು ರವಿಚಂದ್ರನ್ ಮಾಹಿತಿ ನೀಡಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




