ಲೈಂಗಿಕ ದೌರ್ಜನ್ಯ ಎಸಗುವಾಗ ಆಕೆಗಿನ್ನೂ 16 ವರ್ಷ; ಜಾನಿ ಮಾಸ್ಟರ್ ರಿಮಾಂಡ್ ರಿಪೋರ್ಟ್

ಜಾನಿ ಮಾಸ್ಟರ್ ತಮ್ಮ ಜೂನಿಯರ್ ಕೊರಿಯೋಗ್ರಾಫರ್​ಗೆ ಲೈಂಗಿಕ ಕಿರುಕುಳ ನೀಡಿದ್ದರು ಅನ್ನೋದು ಗೊತ್ತಾಗಿದೆ. ಆ ಹುಡುಗಿಯನ್ನು ಜಾನಿ ಮಾಸ್ಟರ್ 2020ರಲ್ಲಿ ತಮ್ಮ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದ್ದರು. ಆಕೆಗೆ ಆಗ ಕೇವಲ 16 ವರ್ಷ.

ಲೈಂಗಿಕ ದೌರ್ಜನ್ಯ ಎಸಗುವಾಗ ಆಕೆಗಿನ್ನೂ 16 ವರ್ಷ; ಜಾನಿ ಮಾಸ್ಟರ್ ರಿಮಾಂಡ್ ರಿಪೋರ್ಟ್
ಜಾನಿ ಮಾಸ್ಟರ್ ಹಾಗೂ ಪತ್ನಿ
Follow us
ರಾಜೇಶ್ ದುಗ್ಗುಮನೆ
|

Updated on: Sep 21, 2024 | 6:27 AM

ಲೈಂಗಿಕ ದೌರ್ಜನ್ಯ, ಅತ್ಯಾಚಾರ ಎಸಗಿದ ಆರೋಪದ ಮೇಲೆ ಖ್ಯಾತ ಸಾಂಗ್ ಕೊರಿಯೋಗ್ರಾಫರ್ ಜಾನಿ ಮಾಸ್ಟರ್ ಬಂಧನ ಆಗಿದೆ. ಈಗಾಗಲೇ ಅವರನ್ನು ಹೈದರಾಬಾದ್​ಗೆ ತರಲಾಗಿದ್ದು, ವಿಚಾರಣೆ ನಡೆಯುತ್ತಿದೆ. ರಿಮಾಂಡ್ ರಿಪೋರ್ಟ್​ನಲ್ಲಿ ಜಾನಿ ಮಾಸ್ಟರ್ ತಪ್ಪೊಪ್ಪಿಕೊಂಡಿರುವುದಾಗಿ ಹಾಗೂ ಘಟನೆಯನ್ನು ಸಂಪೂರ್ಣವಾಗಿ ವಿವರಿಸಿದ್ದಾಗಿ ಬರೆದಿದೆ. ಜಾನಿ ಮಾಸ್ಟರ್ ನಡೆದುಕೊಂಡ ರೀತಿ ಶಾಕಿಂಗ್ ಆಗಿದೆ.

ಜಾನಿ ಮಾಸ್ಟರ್ ತಮ್ಮ ಜೂನಿಯರ್ ಕೊರಿಯೋಗ್ರಾಫರ್​ಗೆ ಲೈಂಗಿಕ ಕಿರುಕುಳ ನೀಡಿದ್ದರು ಅನ್ನೋದು ಗೊತ್ತಾಗಿದೆ. ಆ ಹುಡುಗಿಯನ್ನು ಜಾನಿ ಮಾಸ್ಟರ್ 2020ರಲ್ಲಿ ತಮ್ಮ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದ್ದರು. ಆಕೆಗೆ ಆಗ ಕೇವಲ 16 ವರ್ಷ. ಈ ನಾಲ್ಕು ವರ್ಷದಲ್ಲಿ ಆ ಹುಡುಗಿಗೆ ಜಾನಿ ಮಾಸ್ಟರ್ ಅನೇಕ ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎನ್ನಲಾಗಿದೆ.

ಈ ರೀತಿಯ ಘಟನೆಗಳು ನಡೆದಾಗ ಯಾರೂ ಪತಿಯ ಪರ ವಹಿಸಿಕೊಂಡು ಬರಲ್ಲ. ಆದರೆ, ಈ ಪ್ರಕರಣದಲ್ಲಿ ಹಾಗಿಲ್ಲ. ಸ್ವತಃ ಜಾನಿ ಮಾಸ್ಟರ್ ಪತ್ನಿ ಕೂಡ ಸಂತ್ರಸ್ತೆಗೆ ಬೆದರಿಕೆ ಹಾಕುತ್ತಿದ್ದರು ಎನ್ನುವ ವಿಚಾರ ಗೊತ್ತಾಗಿದೆ. ಇದನ್ನು ಕೇಳಿ ಅನೇಕರಿಗೆ ಶಾಕ್ ಆಗಿದೆ. ಜಾನಿ ಮಾಸ್ಟರ್​ಗೆ ಯುವತಿಯನ್ನು ಆಯ್ಕೆ ಮಾಡಿಕೊಳ್ಳುವಾಗಲೇ ದುರುದ್ದೇಶ ಇತ್ತು ಎನ್ನಲಾಗಿದೆ.

ಪೊಲೀಸರು ಕೋರ್ಟ್​ಗೆ ಹೇಳಿದ್ದೇನು?

2019ರಲ್ಲಿ ಜಾನಿ ಮಾಸ್ಟರ್ ಹಾಗೂ ಸಂಸ್ತ್ರಸ್ತೆಯ ಭೇಟಿ ಆಗುತ್ತದೆ. 2020ರಲ್ಲಿ ತಮ್ಮ ಸಹಾಯಕರಾಗಿ ಜಾನಿ ಮಾಸ್ಟರ್ ಅವರು ಯುವತಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆ ಬಳಿಕ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಾರೆ. ಅಲ್ಲದೆ, ಕರಿಯರ್​ನ ಕೊನೆಗೊಳಿಸುವುದಾಗಿ ಅವರು ಎಚ್ಚರಿಕೆ ಕೂಡ ನೀಡಿದ್ದರು. ಇದರಿಂದ ಸಂತ್ರಸ್ತೆ ಸಾಕಷ್ಟು ಹೆದರಿದ್ದರು. ಆ ಯುವತಿಗೆ ಕೆಲವು ಸಿನಿಮಾ ಆಫರ್​ಗಳು ತಪ್ಪಿ ಹೋಗಲು ಜಾನಿ ಮಾಸ್ಟರ್ ಕೂಡ ಕಾರಣ ಆಗಿದ್ದರು.

ಇದನ್ನೂ ಓದಿ: ‘ಪ್ರತಿ ಸಿನಿಮಾದಲ್ಲೂ ಆ ಸಂತ್ರಸ್ತೆಗೆ ಅವಕಾಶ ಕೊಡ್ತೀನಿ’; ಜಾನಿ ಮಾಸ್ಟರ್ ವಿರುದ್ಧ ತಿರುಗಿಬಿದ್ದ ಅಲ್ಲು ಅರ್ಜುನ್

ಜಾನಿ ಮಾಸ್ಟರ್ ಪತ್ನಿ ಆಗಾಗ ಸಂತ್ರಸ್ತೆಯ ಮನೆಗೆ ಬಂದು ಅವರನ್ನು ಬೆದರಿಕೆ ಹಾಕುತ್ತಿದ್ದರು ಎನ್ನಲಾಗಿದೆ. ಇದರ ಜೊತೆಗೆ ತಮ್ಮ ಪತಿಯನ್ನು ಮದುವೆ ಆಗುವಂತೆಯೂ ಪೀಡಿಸುತ್ತಿದ್ದರು. ಇದು ನಿಜಕ್ಕೂ ಶಾಕಿಂಗ್ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.