AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿರ್ಮಾಪಕ ಕೆ ಮಂಜುಗೆ ಅನಾರೋಗ್ಯ, ಆರೋಗ್ಯ ಸ್ಥಿತಿ ಬಗ್ಗೆ ಸ್ಪಷ್ಟನೆ

K Manju Health: ಕನ್ನಡದ ಜನಪ್ರಿಯ ನಿರ್ಮಾಪಕ ಕೆ ಮಂಜು ಅವರು ಆಸ್ಪತ್ರೆ ಬೆಡ್​ ಮೇಲೆ ಅಂಗಾತ ಮಲಗಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದೀಗ ಕೆ ಮಂಜು ಅವರೇ ತಮ್ಮ ಆರೋಗ್ಯದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ನಿರ್ಮಾಪಕ ಕೆ ಮಂಜುಗೆ ಅನಾರೋಗ್ಯ, ಆರೋಗ್ಯ ಸ್ಥಿತಿ ಬಗ್ಗೆ ಸ್ಪಷ್ಟನೆ
ಮಂಜುನಾಥ ಸಿ.
|

Updated on: Oct 19, 2024 | 6:13 PM

Share

ಕನ್ನಡದ ಜನಪ್ರಿಯ ನಿರ್ಮಾಪಕ ಕೆ ಮಂಜು ಅವರು ಆಸ್ಪತ್ರೆ ಬೆಡ್​ ಮೇಲೆ ಮಲಗಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕೆ ಮಂಜು ಆರೋಗ್ಯದಲ್ಲಿ ಏರುಪಾರಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಈಗ ವೈರಲ್ ಆಗುತ್ತಿರುವ ಚಿತ್ರದಲ್ಲಿ ಕೆ ಮಂಜು ಅವರ ಎದೆ, ಕೈ, ಕಾಲುಗಳಿಗೆ ಇಸಿಜಿ ವೈಯರ್ ಕೇಬಲ್​ಗಳನ್ನು ಜೋಡಿಸಲಾಗಿದೆ. ಕೆ ಮಂಜು ಅವರು ಹೃದಯ ಸಂಬಂಧಿ ಪರೀಕ್ಷೆಗೆ ಒಳಪಡುತ್ತಿರುವುದು ಗೊತ್ತಾಗುತ್ತಿದೆ.

ಚಿತ್ರ ವೈರಲ್ ಆದ ಬಳಿಕ ತಮ್ಮ ಆರೋಗ್ಯದ ಬಗ್ಗೆ ಸ್ವತಃ ಸ್ಪಷ್ಟನೆ ನೀಡಿರುವ ಕೆ ಮಂಜು, ಯಾವುದೇ ಅನಾರೋಗ್ಯ ಇಲ್ಲ. ಇತ್ತೀಚೆಗೆ ಕೆಲಸ ತುಸು ಹೆಚ್ಚಾಗಿ ಒತ್ತಡ ಉಂಟಾಗಿತ್ತು, ಹಾಗಾಗಿ ವೈದ್ಯರ ಸಲಹೆ ಮೇರೆಗೆ ಜನರಲ್ ಬಾಡಿ ಚೆಕಪ್ ಮಾಡಿಸಿದೆ ಎಂದು ಹೇಳಿದ್ದಾರೆ. ಅಲ್ಲದೆ ಹಿಂದೆ ಆಪರೇಷನ್ ಆಗಿತ್ತು, ಅದರ ನೋವು ಸಣ್ಣಗೆ ಕಾಣಿಸಿಕೊಂಡಿತ್ತು ಹಾಗಾಗಿ ಇಸಿಜಿ ಇನ್ನಿತರೆ ಪರೀಕ್ಷೆಗಳನ್ನು ಮಾಡಿಸಿದ್ದು, ಯಾವುದೇ ಸಮಸ್ಯೆ ಇಲ್ಲ. ನಾನು ಆರೋಗ್ಯವಾಗಿದ್ದೇನೆ ಎಂದು ಹೇಳಿದ್ದಾರೆ.

ಕೆ ಮಂಜು ಅವರಿಗೆ ಕೆಲ ವರ್ಷಗಳ ಹಿಂದೆ ಅನಾರೋಗ್ಯವಾಗಿತ್ತು. ಶಸ್ತ್ರಚಿಕಿತ್ಸೆಯೂ ಆಗಿತ್ತು. ಹಾಗಾಗಿ ಆಗಾಗ್ಗೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತಿರುತ್ತಾರೆ. ಈಗಲೂ ಸಹ ತಮ್ಮ ಆಪ್ತ ವೈದ್ಯರ ಸಲಹೆಯಂತೆ ಅವರದ್ದೇ ಕ್ಲೀನಿಕ್​ನಲ್ಲಿ ಆರೋಗ್ಯ ತಪಾಸಣೆಗೆ ಒಳಗಾಗಿದ್ದಾರೆ ಕೆ ಮಂಜು. ಆದರೆ ಕೆ ಮಂಜುಗೆ ಯಾವುದೇ ಅನಾರೋಗ್ಯ ಅಥವಾ ಹೃದಯ ಸಮಸ್ಯೆ ಕಾಣಿಸಿಕೊಂಡಿಲ್ಲ.

ಇದನ್ನೂ ಓದಿ:ದರ್ಶನ್​ಗೆ ಕೆಟ್ಟ ಸಮಯ ನಡೆಯುತ್ತಿದೆ, ಫೆಬ್ರವರಿಗೆ ಸರಿಹೋಗುತ್ತೆ: ಕೆ ಮಂಜು ಭವಿಷ್ಯ

ಕೆ ಮಂಜು ಕನ್ನಡದ ಜನಪ್ರಿಯ ಸಿನಿಮಾ ನಿರ್ಮಾಪಕರಾಗಿದ್ದು ಕನ್ನಡಕ್ಕೆ ಹಲವಾರು ಅತ್ಯುತ್ತಮ ಸಿನಿಮಾಗಳನ್ನು ನೀಡಿದ್ದಾರೆ. 1996 ರಿಂದಲೂ ಸಹ ಕೆ ಮಂಜು ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ‘ಯಮಲೋಕದಲ್ಲಿ ವೀರಪ್ಪನ್’, ಸುದೀಪ್ ನಟನೆಯ ‘ವಾಲಿ’, ವಿಷ್ಣುವರ್ಧನ್ ನಟನೆಯ ‘ಜಮೀನ್ದಾರ್ರು’, ‘ಹೃದಯವಂತ’, ‘ಮಾತಾಡ್ ಮಾತಾಡ್ ಮಲ್ಲಿಗೆ’, ‘ಬಳ್ಳಾರಿ ನಾಗ’, ‘ಲಂಕೇಶ್ ಪತ್ರಿಕೆ’, ‘ಅರಮನೆ’, ‘ಕಿಚ್ಚ-ಹುಚ್ಚ’, ‘ರಾಮ ಶಾಮ ಭಾಮ’, ‘ರಾಜಾ ಹುಲಿ’, ‘ಸಂತು ಸ್ಟ್ರೈಟ್ ಫಾರ್ವರ್ಡ್’, ‘ಜಿಗರ್​ಥಂಡ’ ಇನ್ನೂ ಹಲವಾರು ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಕೆ ಮಂಜು ಪುತ್ರ ಶ್ರೇಯಸ್ ಮಂಜು ಸಹ ನಾಯಕನಾಗಿ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ