ಪ್ರಭಾಸ್ (Prabhas) ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾಗೆ ಭರ್ಜರಿ ಪ್ರಚಾರ ನೀಡಲಾಗುತ್ತಿದೆ. ಈ ಸಿನಿಮಾದಲ್ಲಿ ಬಳಕೆ ಆದ ‘ಬುಜ್ಜಿ’ ಕಾರು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಈ ಕಾರನ್ನು ಫ್ಯಾನ್ಸ್ ಸಖತ್ ಇಷ್ಟಪಟ್ಟಿದ್ದಾರೆ. ಸೆಲೆಬ್ರಿಟಿಗಳಿಗೂ ಕಾರು ಫೇವರಿಟ್ ಎನಿಸಿಕೊಂಡಿದೆ. ಇತ್ತೀಚೆಗೆ ಟಾಲಿವುಡ್ನ ಸ್ಟಾರ್ ನಟ ನಾಗ ಚೈತನ್ಯ ಇದನ್ನು ರೈಡ್ ಮಾಡಿದ್ದರು. ಈಗ ಈ ಕಾರು ಬೆಂಗಳೂರಿಗೆ ಬರುತ್ತಿದ್ದು, ಕನ್ನಡದ ಸೆಲೆಬ್ರಿಟಿಗಳು ಇದನ್ನು ರೈಡ್ ಮಾಡುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ.
‘ಕಲ್ಕಿ 2898 ಎಡಿ’ ಸಿನಿಮಾಗೋಸ್ಕರ ವಿಶೇಷವಾಗಿ ಕಾರು ತಯಾರಿಸಲಾಗಿದೆ. ಇದನ್ನು ರಾಮೋಜಿ ಫಿಲ್ಮ್ ಸಿಟಿಯಲ್ಲಿ ರಿವೀಲ್ ಮಾಡಲಾಗಿತ್ತು. ಹಲವು ಆಟೋಮೊಬೈಲ್ ವಿಮರ್ಶಕರು ಈ ಬಗ್ಗೆ ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದೆ. ಐದು ಕೋಟಿ ರೂಪಾಯಿ ಬೆಲೆಯ ಈ ಕಾರನ್ನು ನಾಗ ಚೈತನ್ಯ ಕೂಡ ಡ್ರೈವ್ ಮಾಡಿದ್ದರು. ಈ ಕಾರನ್ನು ವಿವಿಧ ನಗರಗಳಿಗೆ ಕೊಂಡೊಯ್ಯಲು ತಂಡ ನಿರ್ಧರಿಸಿದೆ.
ಭಾರತದ ಪ್ರಮುಖ ನಗರಗಳಲ್ಲಿ ಇದನ್ನು ಪ್ರದರ್ಶಿಸಲು ಸಿನಿಮಾ ತಂಡ ಮುಂದಾಗಿದೆ. ಈ ವೇಳೆ ಫ್ಯಾನ್ಸ್ಗೆ ಸೆಲ್ಫಿ ತೆಗೆದುಕೊಳ್ಳಲು ತಂಡ ಅವಕಾಶ ನೀಡುತ್ತಿದೆ. ಇದೇ ವೇಳೆ ಪ್ರಮುಖ ಸೆಲೆಬ್ರಿಟಿಗಳಿಗೆ ಡ್ರೈವ್ ಮಾಡಲು ಅವಕಾಶ ನೀಡಲಾಗುತ್ತಿದೆಯೇ ಎನ್ನುವ ಪ್ರಶ್ನೆ ಮೂಡಿದೆ. ಒಂದೊಮ್ಮೆ ಈ ಅವಕಾಶ ಕೊಟ್ಟರೆ ಸಿನಿಮಾಗೆ ಭರ್ಜರಿ ಪ್ರಚಾರ ಸಿಕ್ಕಂತೆ ಆಗಲಿದೆ.
ಸ್ಯಾಂಡಲ್ವುಡ್ನಲ್ಲಿ ನಟ ದರ್ಶನ್ ಅವರು ಕಾರಿನ ಬಗ್ಗೆ ವಿಶೇಷ ಕ್ರೇಜ್ ಹೊಂದಿದ್ದಾರೆ. ಅವರ ಬಳಿ ಹಲವು ಸೂಪರ್ ಕಾರುಗಳಿವೆ. ಅವರು ಕೂಡ ಇದನ್ನು ಓಡಿಸಬಹುದು. ಕಿಚ್ಚ ಸುದೀಪ್, ಯಶ್, ಧ್ರುವ ಸರ್ಜಾ, ಶಿವರಾಜ್ಕುಮಾರ್ಗೂ ಕಾರಿನ ಬಗ್ಗೆ ಕ್ರೇಜ್ ಇದೆ. ಅವರಿಗೂ ಈ ಕಾರನ್ನು ಓಡಿಸೋ ಅವಕಾಶ ಸಿಗಲಿದೆಯೇ ಎನ್ನುವ ಕುತೂಹಲ ಮೂಡಿದೆ.
ಇದನ್ನೂ ಓದಿ: ‘ಕಲ್ಕಿ 2898 ಎಡಿ’ ಪ್ರಮೋಷನ್ಗೆ ಖರ್ಚು ಮಾಡ್ತಿರೋ ಹಣದಲ್ಲಿ ಬಿಗ್ ಬಜೆಟ್ ಸಿನಿಮಾ ಮಾಡಬಹುದು
ನಾಗ್ ಅಶ್ವಿನ್ ಅವರ ಕಲ್ಪನೆಯಲ್ಲಿ ‘ಕಲ್ಕಿ 2898 ಎಡಿ’ ಸಿನಿಮಾ ಮೂಡಿ ಬಂದಿದೆ. ಕಾರಿನ ಕಲ್ಪನೆಯನ್ನೂ ಕೂಡ ಅವರೇ ನೀಡಿದ್ದಾರೆ. ಮಹಿಂದ್ರಾ ಸಂಸ್ಥೆಯವರು ಈ ಕಾರನ್ನು ನಿರ್ಮಾಣ ಮಾಡಿದ್ದಾರೆ. ಜೂನ್ 27ರಂದು ಈ ಸಿನಿಮಾ ರಿಲೀಸ್ ಆಗಲಿದೆ. ಈ ಚಿತ್ರ ಬಿಡುಗಡೆಗೆ ಇನ್ನು ಇರೋದು ಕೇವಲ ಒಂದು ತಿಂಗಳು ಮಾತ್ರ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:12 pm, Mon, 27 May 24