‘ಕಮಲಿ’ ಕಿರಿಕ್​: ನಿರ್ಮಾಪಕರಿಗೇ ವಂಚಿಸಿದ್ರಾ ಡೈರೆಕ್ಟರ್​?

|

Updated on: Jan 14, 2020 | 7:02 AM

ಬೆಂಗಳೂರು: ಕನ್ನಡದ ಖ್ಯಾತ ಧಾರವಾಹಿಯ ನಿರ್ಮಾಪಕನಿಗೆ ನಿರ್ದೇಶಕರೇ ವಂಚನೆ ಮಾಡಿರೋ ಆರೋಪ ಕೇಳಿಬಂದಿದೆ. ಕಮಲಿ ಧಾರವಾಹಿ ನಿರ್ದೇಶಕ ಅರವಿಂದ ಕೌಶಿಕ್ 73ಲಕ್ಷ ರೂಪಾಯಿ ಬಂಡವಾಳ ಹೂಡಿಕೆ ಮಾಡಿಸಿಕೊಂಡು ವಂಚಿಸಿದ್ದಾರೆ ಅಂತಾ ನಿರ್ಮಾಪಕ ರೋಹಿತ್ ಆರೋಪಿಸಿದ್ದಾರೆ. ನಿರ್ದೇಶಕರಿಂದ ವಂಚನೆ ಆರೋಪ: 2018ರ ಮೇ 28ರಂದು ಕಮಲಿ ಧಾರವಾಹಿ ಶುರುವಾಗಿತ್ತು. ಸುಮಾರು 287 ಸಂಚಿಕೆಗಳ ಕಾಲ ರೋಹಿತ್​ರನ್ನ ನಿರ್ಮಾಪಕನೆಂದು ತೋರಿಸಲಾಗಿತ್ತು. ನಂತರ ಧಾರವಾಹಿಯ ಟೈಟಲ್ ಕಾರ್ಡ್​ನಿಂದ ರೋಹಿತ್ ಹೆಸರನ್ನ ಧಾರವಾಹಿ ತಂಡ ತೆಗೆದು ಹಾಕಿದ್ಯಂತೆ. ತನ್ನ ಪತ್ನಿ ಹೆಸರಿನಲ್ಲಿ ಸತ್ವ […]

‘ಕಮಲಿ’ ಕಿರಿಕ್​: ನಿರ್ಮಾಪಕರಿಗೇ ವಂಚಿಸಿದ್ರಾ ಡೈರೆಕ್ಟರ್​?
Follow us on

ಬೆಂಗಳೂರು: ಕನ್ನಡದ ಖ್ಯಾತ ಧಾರವಾಹಿಯ ನಿರ್ಮಾಪಕನಿಗೆ ನಿರ್ದೇಶಕರೇ ವಂಚನೆ ಮಾಡಿರೋ ಆರೋಪ ಕೇಳಿಬಂದಿದೆ. ಕಮಲಿ ಧಾರವಾಹಿ ನಿರ್ದೇಶಕ ಅರವಿಂದ ಕೌಶಿಕ್ 73ಲಕ್ಷ ರೂಪಾಯಿ ಬಂಡವಾಳ ಹೂಡಿಕೆ ಮಾಡಿಸಿಕೊಂಡು ವಂಚಿಸಿದ್ದಾರೆ ಅಂತಾ ನಿರ್ಮಾಪಕ ರೋಹಿತ್ ಆರೋಪಿಸಿದ್ದಾರೆ.

ನಿರ್ದೇಶಕರಿಂದ ವಂಚನೆ ಆರೋಪ:
2018ರ ಮೇ 28ರಂದು ಕಮಲಿ ಧಾರವಾಹಿ ಶುರುವಾಗಿತ್ತು. ಸುಮಾರು 287 ಸಂಚಿಕೆಗಳ ಕಾಲ ರೋಹಿತ್​ರನ್ನ ನಿರ್ಮಾಪಕನೆಂದು ತೋರಿಸಲಾಗಿತ್ತು. ನಂತರ ಧಾರವಾಹಿಯ ಟೈಟಲ್ ಕಾರ್ಡ್​ನಿಂದ ರೋಹಿತ್ ಹೆಸರನ್ನ ಧಾರವಾಹಿ ತಂಡ ತೆಗೆದು ಹಾಕಿದ್ಯಂತೆ. ತನ್ನ ಪತ್ನಿ ಹೆಸರಿನಲ್ಲಿ ಸತ್ವ ಮೀಡಿಯಾ ಎಂದು ಅಗ್ರೀಮೆಂಟ್ ಮಾಡಿಕೊಂಡಿರೋ ನಿರ್ದೇಶಕ ಅರವಿಂದ್ ಕೌಶಿಕ್, ತನ್ನ ಪತ್ನಿ ಶಿಲ್ಪಾ ಹಾಗೂ ನವೀನ್ ಸಾಗರ್ ಎಂಬುವವರ ಹೆಸರಿನಲ್ಲಿ ಸತ್ವ ಮೀಡಿಯಾ ಹೆಸರಿನಲ್ಲಿ ಲಾಭ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.

ಪೊಲೀಸ್ ಆಯುಕ್ತರಿಗೆ ದೂರು:
ಸದ್ಯ 500 ಸಂಚಿಕೆಗಳನ್ನ ಪೂರೈಸಿರೋ ಕಮಲಿ ಧಾರವಾಹಿಯ ಕೇವಲ 250ಸಂಚಿಕೆಯ ಲಾಭಾಂಶವಾದ 20 ಲಕ್ಷ ನೀಡಿದ್ದಾರಂತೆ. ಅಸಲಿಗೆ ಧಾರವಾಹಿ ನಿರ್ಮಾಣಕ್ಕೆ ಲಕ್ಷಗಟ್ಟಲೇ ಹಣ ಹೂಡಿಕೆ ಮಾಡಿದ್ದು ನಾನಾಗಿದ್ದು, 287 ಸಂಚಿಕೆ ಬಳಿಕ ಬಂದ ಲಾಭಾಂಶ ಮತ್ತು ಹಾಕಿದ ಬಂಡವಾಳ ನೀಡದೇ ನಿರ್ದೇಶಕ ಅರವಿಂದ್ ಕೌಶಿಕ್ ವಂಚಿಸಿದ್ದಾರಂತೆ. ಈ ಬಗ್ಗೆ ನಿರ್ಮಾಪಕ ರೋಹಿತ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್​ ರಾವ್​ಗೂ ಸಹ ದೂರು ನೀಡಿದ್ದಾರೆ.