Lohitashwa Death: ಹಿರಿಯ ನಟ ಲೋಹಿತಾಶ್ವ ಇನ್ನಿಲ್ಲ; ಅನಾರೋಗ್ಯದಿಂದ ಬೆಂಗಳೂರಿನಲ್ಲಿ ನಿಧನ

| Updated By: Digi Tech Desk

Updated on: Nov 08, 2022 | 6:43 PM

Lohitashwa Death News: ನೂರಾರು ಸಿನಿಮಾಗಳಲ್ಲಿ ನಟಿಸಿ ಲೋಹಿತಾಶ್ವ ಅವರು ಜನಪ್ರಿಯತೆ ಪಡೆದಿದ್ದರು. ಇಂದು (ನವೆಂಬರ್ 8) ಅನಾರೋಗ್ಯದಿಂದ ಅವರು ಇಹಲೋಕ ತ್ಯಜಿಸಿದ್ದಾರೆ.

Lohitashwa Death: ಹಿರಿಯ ನಟ ಲೋಹಿತಾಶ್ವ ಇನ್ನಿಲ್ಲ; ಅನಾರೋಗ್ಯದಿಂದ ಬೆಂಗಳೂರಿನಲ್ಲಿ ನಿಧನ
ಲೋಹಿತಾಶ್ವ
Follow us on

ಕನ್ನಡ ಚಿತ್ರರಂಗದ ಹಿರಿಯ ನಟ ಲೋಹಿತಾಶ್ವ (Lohitashwa) ನಿಧನರಾಗಿದ್ದಾರೆ. ಹಲವು ದಿನಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಐಸಿಯುನಲ್ಲಿ ಇರಿಸಲಾಗಿತ್ತು. ಇಂದು (ನವೆಂಬರ್ 8) ಅವರು ಕೊನೆಯುಸಿರು ಎಳೆದಿದ್ದಾರೆ. ಚಂದನವನದಲ್ಲಿ ಲೋಹಿತಾಶ್ವ ಅವರು ಹಲವು ವರ್ಷಗಳ ಅನುಭವ ಹೊಂದಿದ್ದರು. ಡಾ. ರಾಜ್​ಕುಮಾರ್​, ಅಂಬರೀಷ್​, ವಿಷ್ಣುವರ್ಧನ್​, ಶಂಕರ್​ನಾಗ್​ ಮುಂತಾದವರ ಜೊತೆ ನಟಿಸಿ ಅವರು ಸೈ ಎನಿಸಿಕೊಂಡಿದ್ದರು. ಇಂದು ಅವರ ನಿಧನದ ಸುದ್ದಿ (Lohitashwa Death) ತಿಳಿದು ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಸಂತಾಪ ಸೂಚಿಸುತ್ತಿದ್ದಾರೆ.

ಲೋಹಿತಾಶ್ವ ಅವರಿಗೆ 80 ವರ್ಷ ವಯಸ್ಸಾಗಿತ್ತು. ಇತ್ತೀಚೆಗೆ ಅವರಿಗೆ ಇನ್ಫೆಕ್ಷನ್​ ಆಗಿತ್ತು. ಹಾಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಇನ್ನೇನು ಗುಣಮುಖರಾಗುತ್ತಾರೆ ಎಂದುಕೊಳ್ಳುತ್ತಿರುವಾಗಲೇ ಅವರಿಗೆ ಹೃದಯಾಘಾತ ಸಂಭವಿಸಿತು. ನಂತರ ಅವರನ್ನು ಐಸಿಯುನಲ್ಲಿ ಇರಿಸಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಸುಮಾರು ಒಂದು ತಿಂಗಳ ಕಾಲ ಅವರಿಗೆ ಚಿಕಿತ್ಸೆ ನೀಡಲಾಯಿತು. ಆದರೆ ಇಂದು ಚಿಕಿತ್ಸೆ ಫಲಕಾರಿ ಆಗದೇ ಅವರು ಕೊನೆಯುಸಿರು ಎಳೆದಿದ್ದಾರೆ.

ರಾತ್ರಿ 7.30ರ ನಂತರ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನಿವಾಸಕ್ಕೆ ಅವರ ಪಾರ್ಥೀವ ಶರೀರ ತೆಗೆದುಕೊಂಡು ಹೋಗಲಾಗುತ್ತದೆ. ರಾತ್ರಿ 11 ಗಂಟೆವರೆಗೂ ಅಂತಿಮ ದರ್ಶನಕ್ಕೆ ಅವಕಾಶ ಇರುತ್ತದೆ. ನಾಳೆ (ನವೆಂಬರ್ 9) ಅವರ ಹುಟ್ಟೂರಾದ ತುಮಕರೂ ಬಳಿಯ ತೊಂಡಗೇರೆ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

ಇದನ್ನೂ ಓದಿ
Rahul Koli Death: ಆಸ್ಕರ್​ಗೆ ಭಾರತದಿಂದ ಆಯ್ಕೆ ಆದ ‘ಚೆಲ್ಲೋ ಶೋ’ ಚಿತ್ರದ ಬಾಲ ನಟ ಕ್ಯಾನ್ಸರ್​ನಿಂದ ನಿಧನ
Breaking News: ಖ್ಯಾತ ನಟ ಅರುಣ್​ ಬಾಲಿ ನಿಧನ; ಹಿರಿಯ ಕಲಾವಿದನ ಅಗಲಿಕೆಗೆ ಕಂಬನಿ ಮಿಡಿದ ಚಿತ್ರರಂಗ
Raju Srivastava Death: ಹಾಸ್ಯ ನಟ ರಾಜು ಶ್ರೀವಾಸ್ತವ​ ನಿಧನ; ಕಡೆಗೂ ಫಲಿಸಲಿಲ್ಲ ಅಭಿಮಾನಿಗಳ ಪ್ರಾರ್ಥನೆ
Pradeep Patwardhan: ಹೃದಯಾಘಾತದಿಂದ ನಟ ಪ್ರದೀಪ್​ ಪಟವರ್ಧನ್​ ನಿಧನ; ಸಂತಾಪ ಸೂಚಿಸಿದ ಮಹಾರಾಷ್ಟ್ರ ಸಿಎಂ

500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಲೋಹಿತಾಶ್ವ ಅವರು ನಟಿಸಿದ್ದರು. ಚಿಕ್ಕ ವಯಸ್ಸಿನಿಂದಲೂ ಅವರಿಗೆ ನಟನೆಯಲ್ಲಿ ಆಸಕ್ತಿ ಇತ್ತು. ವಿದ್ಯಾರ್ಥಿ ಆಗಿದ್ದಾಗಿನಿಂದಲೇ ರಂಗಭೂಮಿಯಲ್ಲಿ ತೊಡಗಿಕೊಂಡಿದ್ದರು. ಅಲ್ಲಿಂದ ಅವರಿಗೆ ಚಿತ್ರರಂಗಕ್ಕೆ ಎಂಟ್ರಿ ಸಿಕ್ಕಿತು. ಪೋಷಕ ಪಾತ್ರಗಳಲ್ಲಿ ಅವರು ತುಂಬ ಫೇಮಸ್​ ಆಗಿದ್ದರು. ಮುಖ್ಯಮಂತ್ರಿ ಪಾತ್ರವನ್ನು ಹಲವಾರು ಸಿನಿಮಾಗಳಲ್ಲಿ ಮಾಡಿದ್ದರು. ವಿಲನ್​ ಆಗಿಯೂ ನಟಿಸಿ ಗಮನ ಸೆಳೆದರು.

ಲೋಹಿತಾಶ್ವ ಅವರು ತುಮಕೂರಿನ ತೊಂಡಗೆರೆ ಗ್ರಾಮದವರು. ಅಲ್ಲಿಯೇ ಅವರು ಪ್ರಾಥಮಿಕ ಶಿಕ್ಷಣ ಪಡೆದರು. ನಂತರ ತುಮಕೂರಿನಲ್ಲಿ ಹೈಸ್ಕೂಲ್​ ಓದಿದರು. ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಇಂಗ್ಲಿಷ್​ ಎಂ.ಎ. ಸ್ನಾತಕೋತ್ತರ ಪದವಿ ಪಡೆದರು. ಬಳಿಕ ಇಂಗ್ಲಿಷ್​ ಪ್ರಾಧ್ಯಾಪಕರಾಗಿ ಕೆಲಸ ಆರಂಭಿಸಿದರು. 33 ವರ್ಷಗಳ ಕಾಲ ಅವರು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.

ಇತ್ತೀಚಿನ ವರ್ಷಗಳಲ್ಲಿ ಅವರು ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸುತ್ತಿರಲಿಲ್ಲ. ತಮ್ಮ ಹಳ್ಳಿಗೆ ತೆರಳಿ ಅಲ್ಲಿಯೇ ವಾಸವಾಗಿದ್ದರು. ಅವರ ಪುತ್ರ ಶರತ್​ ಲೋಹಿತಾಶ್ವ ಕೂಡ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟನಾಗಿ ಗುರುತಿಸಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:35 pm, Tue, 8 November 22