ತೊನ್ನು ಸಮಸ್ಯೆ ಕುರಿತ ‘ಬಿಳಿಚುಕ್ಕಿ ಹಳ್ಳಿಹಕ್ಕಿ’ ಸಿನಿಮಾ ಅಕ್ಟೋಬರ್ 24ಕ್ಕೆ ಬಿಡುಗಡೆ
‘ಬಿಳಿಚುಕ್ಕಿ ಹಳ್ಳಿಹಕ್ಕಿ’ ಸಿನಿಮಾದ ದಿನಾಂಕವನ್ನು ಪೋಸ್ಟರ್ ಮೂಲಕ ಚಿತ್ರತಂಡ ಘೋಷಿಸಿದೆ. ತೊನ್ನು ಸಮಸ್ಯೆ ಕುರಿತು ನಿರ್ಮಾಣ ಆಗಿರುವ ಮೊದಲ ಸಿನಿಮಾ ಇದು ಎಂಬುದು ವಿಶೇಷ. ಅಕ್ಟೋಬರ್ 24ರಂದು ಈ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಕಾಜಲ್ ಕುಂದರ್, ಮಹೇಶ್ ಗೌಡ ಮುಂತಾದವರು ನಟಿಸಿದ್ದಾರೆ.

‘ಮಹಿರಾ’ ಖ್ಯಾತಿಯ ನಿರ್ದೇಶಕ ಮಹೇಶ್ ಗೌಡ (Mahesh Gowda) ಅವರು ‘ಬಿಳಿಚುಕ್ಕಿ ಹಳ್ಳಿಹಕ್ಕಿ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ನಿರ್ಮಾಣವನ್ನು ಕೂಡ ಅವರೇ ಮಾಡಿದ್ದಾರೆ. ಅಷ್ಟೇ ಅಲ್ಲದೇ, ಮುಖ್ಯ ಭೂಮಿಕೆಯಲ್ಲೂ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಒಂದು ಡಿಫರೆಂಟ್ ಕಥಾಹಂದರ ಇದೆ. ಜನಪ್ರಿಯ ಅಲೆಗಳ ಕಥಾಹಂದರವನ್ನು ಬಿಟ್ಟು ಅವರು ಬೇರೆ ಏನನ್ನೋ ಜನರಿಗೆ ತಲುಪಿಸಲು ಹೊರಟಿದ್ದಾರೆ. ಪೋಸ್ಟರ್ಗಳ ಮೂಲಕ ಈ ಸಿನಿಮಾ ಗಮನ ಸೆಳೆದಿದೆ. ತೊನ್ನು (Vitiligo) ಎಂಬ ಚರ್ಮ ಸಮಸ್ಯೆಯ ಬಗ್ಗೆ ‘ಬಿಳಿಚುಕ್ಕಿ ಹಳ್ಳಿಹಕ್ಕಿ’ (Bilichukki Hallihakki) ಸಿನಿಮಾದಲ್ಲಿ ಹೇಳಲಾಗುತ್ತಿದೆ.
‘ಬಿಳಿಚುಕ್ಕಿ ಹಳ್ಳಿಹಕ್ಕಿ’ ಸಿನಿಮಾದ ದಿನಾಂಕವನ್ನು ಪೋಸ್ಟರ್ ಮೂಲಕ ಚಿತ್ರತಂಡ ಘೋಷಿಸಿದೆ. ಅಕ್ಟೋಬರ್ 24ರಂದು ಈ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಇದು ಒಂದು ಭಿನ್ನ ಕಥೆ ಹೊಂದಿರುವ ಸಿನಿಮಾ. ನಮ್ಮ ಸುತ್ತಮುತ್ತಲೇ ತೊನ್ನು (ವಿಟಿಲಿಗೋ) ಎಂಬ ಚರ್ಮ ಬಾಧೆ ಅನೇಕರನ್ನು ಆವರಿಸಿದೆ. ಆ ವಿಷಯದ ಕುರಿತು ಸಿದ್ಧವಾಗುತ್ತಿರುವ ಮೊದಲ ಸಿನಿಮಾ ಇದೆ ಎಂಬುದು ವಿಶೇಷ.
ತೊನ್ನು ಸಮಸ್ಯೆ ಬಗ್ಗೆ ಅನೇಕರಿಗೆ ಸರಿಯಾಗಿ ತಿಳಿದಿಲ್ಲ. ಇದರ ಸುತ್ತ ಅನೇಕ ಚಿತ್ರವಿಚಿತ್ರ ನಂಬಿಕೆಗಳು ಇವೆ. ಹೊರಜಗತ್ತಿಗೆ ಇದೊಂದು ಚರ್ಚ ವ್ಯಾಧಿ ಆಗಿದ್ದರೂ ಕೂಡ ಅದಕ್ಕೆ ಸಂಬಂಧಿಸಿದಂತೆ ದೊಡ್ಡ ಕಥೆ ಇದೆಯಂತೆ. ತೊನ್ನು ಇರುವವರ ಮನೋವ್ಯಾಕುಲವನ್ನು ಸುಲಭಕ್ಕೆ ಅಂದಾಜಿಸಲು ಸಾಧ್ಯವಿಲ್ಲ. ಅದರ ಕುರಿತಾಗಿ ನಿರ್ದೇಶಕ ಮಹೇಶ್ ಗೌಡ ಅವರು ‘ಬಿಳಿಚುಕ್ಕಿ ಹಳ್ಳಿಹಕ್ಕಿ’ ಸಿನಿಮಾ ಮಾಡಿದ್ದಾರೆ.
ನಿರ್ದೇಶಕ ಮಹೇಶ್ ಗೌಡ ಅವರು ಈ ಮೊದಲು ‘ಮಹಿರಾ’ ಸಿನಿಮಾ ಮೂಲಕ ಗುರುತಿಸಿಕೊಂಡಿದ್ದರು. ಒಂದಷ್ಟು ಸಮಯದ ಸಿದ್ಧತೆಗಳ ಬಳಿಕ ‘ಹೊನ್ನುಡಿ ಪ್ರೊಡಕ್ಷನ್ಸ್’ ಬ್ಯಾನರ್ ಮೂಲಕ ಈಗ ‘ಬಿಳಿಚುಕ್ಕಿ ಹಳ್ಳಿಹಕ್ಕಿ’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದಲ್ಲಿ ರಂಗಭೂಮಿ ನಟಿ ಕಾಜಲ್ ಕುಂದರ್ ಅವರು ಕವಿತಾ ಎಂಬ ಪಾತ್ರವನ್ನು ಮಾಡಿದ್ದಾರೆ.
ಇದನ್ನೂ ಓದಿ: ತೊನ್ನು ಕಾಯಿಲೆ ಕುರಿತ ‘ಬಿಳಿಚುಕ್ಕಿ ಹಳ್ಳಿಹಕ್ಕಿ’ ಸಿನಿಮಾಗೆ ಕಾಜಲ್ ಕುಂದರ್ ನಾಯಕಿ
ಸ್ವತಃ ವಿಟಿಲಿಗೋ ಸಮಸ್ಯೆ ಹೊಂದಿರುವ ಮಹೇಶ್ ಗೌಡ ಅವರಿಗೆ ಇದರ ಬಗ್ಗೆ ಹೆಚ್ಚು ಅನುಭವ ಇದೆ. ಹಾಗಾಗಿ ಅವರೇ ಈ ಸಿನಿಮಾದ ನಾಯಕನಾಗಿ ಅಭಿನಯಿಸಿದ್ದಾರೆ. ಈ ಕಥೆಯನ್ನು ಪಕ್ಕಾ ಕಮರ್ಶಿಯಲ್ ಶೈಲಿಯಲ್ಲಿ, ಮನರಂಜನೆಯ ಅಂಶಗಳ ಜೊತೆಯಲ್ಲಿ ಕಟ್ಟಿಕೊಡಲಾಗಿದೆ ಎಂದು ಚಿತ್ರತಂಡ ಹೇಳಿದೆ. ವೀಣಾ ಸುಂದರ್, ರವಿ ಭಟ್, ಜಹಾಂಗೀರ್ ಮುಂತಾದವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




