ಮತ್ತೊಂದು ಶುಕ್ರವಾರ (Friday) ಬಂದಿದೆ. ಕಳೆದ ಶುಕ್ರವಾರ ಸಿನಿಮಾ ಪ್ರೇಮಿಗಳ ಪಾಲಿಗೆ ಹಬ್ಬವೇ ಆಗಿತ್ತು. ಕನ್ನಡದ ಹೊಯ್ಸಳ, ತೆಲುಗಿನ ದಸರಾ, ತಮಿಳಿನ ವಿಡುದಲೈ ಹಾಗೂ ಹಿಂದಿಯ ಭೋಲಾ ಸಿನಿಮಾಗಳು ತೆರೆಗೆ ಬಂದಿದ್ದವು. ಎಲ್ಲವೂ ಸ್ಟಾರ್ ನಟರ ಬಿಗ್ ಬಜೆಟ್ ಮಾಸ್ ಸಿನಿಮಾಗಳೇ. ಇದೀಗ ಮತ್ತೊಂದು ಶುಕ್ರವಾರಕ್ಕೆ ಕಾದಿರುವ ಸಿನಿಮಾ ಪ್ರೇಮಿಗಳು ಭಿನ್ನ ರೀತಿಯ ಸಿನಿಮಾಗಳು ಚಿತ್ರಮಂದಿರಗಳಲ್ಲಿ (Theater) ಎದುರುಗೊಳ್ಳುತ್ತಿವೆ.
ಶಶಿಧರ್ ಸ್ಟುಡಿಯೋಸ್ ಪ್ರೊಡಕ್ಷನ್ ಮೂಲಕ ಕೆ.ಎಂ. ಶಶಿಧರ್ ಅವರು ನಿರ್ಮಿಸಿರುವ ಫ್ಯಾಮಿಲಿ ಎಮೋಷನ್ ಜೊತೆಗೆ ಲವ್, ಆಕ್ಷನ್, ಥ್ರಿಲ್ಲರ್ ಡ್ರಾಮಾ ಕಥಾಹಂದರ ಹೊಂದಿರುವ ಚಿತ್ರ ವೀರಂ ಶುಕ್ರವಾರ (ಏಪ್ರಿಲ್ 07) ರಾಜ್ಯಾದ್ಯಂತ ತೆರೆಕಾಣುತ್ತಿದೆ. ಟ್ರೈಲರ್, ಹಾಡುಗಳ ಮೂಲಕ ದೊಡ್ಡ ಮಟ್ಟದ ಕುತೂಲಕ ಹುಟ್ಟುಹಾಕಿರುವ ಈ ಚಿತ್ರಕ್ಕೆ ಖದರ್ ಕುಮಾರ್ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಒಂದು ಕುಟುಂಬಕ್ಕೆ ತೊಂದರೆ ಬಂದಾಗ ಎಲ್ಲರೂ ಹೇಗೆ ಜೊತೆಗೆ ನಿಲ್ತಾರೆ ಎನ್ನುವುದು ಚಿತ್ರದ ಕಥೆ. ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಹಾಗೂ ನಟಿ ಶೃತಿ, ಅಕ್ಕ ತಮ್ಮನಾಗಿ ಅಲ್ಲದೆ ಶ್ರೀನಗರ ಕಿಟ್ಟಿ ಅಣ್ಣನಾಗಿಯೂ ಕಾಣಿಸಿಕೊಂಡಿದ್ದಾರೆ.
ಐದು ಬೇರೆ ಬೇರೆ ಜಾನರ್ನ ಕಥೆಗಳನ್ನು ಇಟ್ಟುಕೊಂಡು ಮಾಡಿರುವ ಅಂಥಾಲಜಿ ಸಿನಿಮಾ ಪೆಂಟಗನ್ ಈ ಶುಕ್ರವಾರ ರಾಜ್ಯದಾದ್ಯಂತ ತೆರೆಕಾಣುತ್ತಿದೆ. ಈ ಚಿತ್ರವನ್ನು ನಿರ್ದೇಶಕ ಕಮ್ ನಿರ್ಮಾಪಕ ಗುರು ದೇಶಪಾಂಡೆ ತಮ್ಮ ಜಿ.ಅಕಾಡೆಮಿ ಅಡಿಯಲ್ಲಿ ನಿರ್ಮಿಸಿದ್ದು, ಚಿತ್ರದ 5 ಕಥೆಗಳಿಗೆ ಆಕಾಶ್ ಶ್ರೀವತ್ಸ, ಚಂದ್ರಮೋಹನ್, ರಾಘು ಶಿವಮೊಗ್ಗ, ಕಿರಣ್ ಕುಮಾರ್ ಹಾಗೂ ಗುರು ದೇಶಪಾಂಡೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಸಾವು 5 ಕಥೆಗಳಲ್ಲೂ ಸಾಮಾನ್ಯ ಅಂಶವಾಗಿದ್ದು, ಈ ಐದೂ ಕತೆಗಳ ಕೊನೆಯಲ್ಲಿ ಕಾಗೆಯೊಂದು ಕತೆಗಳಿಗೆ ಲಿಂಕ್ ಮಾಡುತ್ತಾ ಹೋಗುತ್ತದೆ. ಈ ಚಿತ್ರದಲ್ಲಿ ಹಿರಿಯನಟ ಪ್ರಕಾಶ್ ಬೆಳವಾಡಿ, ಪ್ರಮೋದ್ ಶೆಟ್ಟಿ, ಕೃತಿಕಾ ದೇಶಪಾಂಡೆ, ರವಿಶಂಕರ್, ಅನುಷಾ ರೈ, ವಂಶಿಕೃಷ್ಣ, ಅಪೂರ್ವ, ತನಿಶಾ, ಪ್ರೇರಣಾ ಕಂಬಂ, ಕಿರಣ್ ನಾಯಕ್, ಕಿಶೋರ್, ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ, ಅಶ್ವಿನಿ, ನಟ ಪೃಥ್ವಿ ಅಂಬರ್, ಬಿರಾದಾರ್ ಹಾಗೂ ಬಾಲನಟಿ ಆರಾಧ್ಯ ಹಾಗೂ ಇತರರು ಅಭಿನಯಿಸಿದ್ದಾರೆ.
ಸರ್ಕಾರಿ ಶಾಲೆಗಳ ಮಹತ್ವ ಸಾರುವ ಪ್ರವೀಣ ಸಿನಿಮಾ ಇದೇ ವಾರ ತೆರೆಗೆ ಬರುತ್ತಿದೆ. ಮಂಡ್ಯ ರಮೇಶ್ ಸೇರಿದಂತೆ ಹಲವು ಬಾಲ ನಟರು ಪ್ರಮುಖ ಪಾತ್ರದಲ್ಲಿ ನಟಿಸಿರುವ ಇದಾಗಿದೆ. ಸಿನಿಮಾವನ್ನು ಮಹೇಶ್ ಸಿಂಧುವಳ್ಳಿ ನಿರ್ದೇಶನ ಮಾಡಿದ್ದು, ನಿರ್ಮಾಣ ಮಾಡಿರುವುದು ಜಗದೀಶ್ ಕೆ.ಆರ್.
ಥ್ರಿಲ್ಲರ್ ಕಥಾನಕ ಹೊಂದಿರುವ ರಾಮಾಚಾರಿ 2.0 ಹೆಸರಿನ ಕನ್ನಡ ಸಿನಿಮಾ ಈ ವಾರ ತೆರೆಗೆ ಬರುತ್ತಿದೆ. ಸಿನಿಮಾದಲ್ಲಿ ನಾಯಕನಾಗಿ ತೇಜ್ ನಟಿಸಿದ್ದು, ರಾಘವೇಂದ್ರ ರಾಜ್ಕುಮಾರ್, ನಟಿ ಸ್ಪರ್ಷ ರೇಖ ಸಹ ಇದ್ದಾರೆ. ಸಿನಿಮಾದ ಟ್ರೈಲರ್ ಕುತೂಹಲಕಾರಿಯಾಗಿದೆ. ಇದರ ಜೊತೆಗೆ ನಮ್ ನಾಣಿ ಮದ್ವೆ ಹೆಸರಿನ ಹಾಸ್ಯಪ್ರಧಾನ ಸಿನಿಮಾ ಸಹ ಬಿಡುಗಡೆ ಆಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:39 pm, Thu, 6 April 23