Kode Muruga: ‘ಕೊಡೆ ಮುರುಗ’ ಚಿತ್ರ ಮರು ಬಿಡುಗಡೆ; ಮಾ.10ಕ್ಕೆ ಮತ್ತೆ ಚಿತ್ರಮಂದಿರಕ್ಕೆ ಬರಲಿದೆ ಕಾಮಿಡಿ ಸಿನಿಮಾ

Kode Muruga Movie | Sandalwood News: ‘ಕೊಡೆ ಮುರುಗ’ ಚಿತ್ರದಲ್ಲಿ ಮುನಿಕೃಷ್ಣ, ಪಲ್ಲವಿ ಗೌಡ ಮುಖ್ಯ ಪಾತ್ರ ಮಾಡಿದ್ದಾರೆ. ಸ್ವಾತಿ ಗುರುದತ್, ಅರವಿಂದ್​ ರಾವ್, ರಾಕ್‌ಲೈನ್ ಸುಧಾಕರ್, ಮೋಹನ್ ಜುನೇಜಾ, ಕುರಿ ಪ್ರತಾಪ್, ಗೋವಿಂದೇ ಗೌಡ ಮುಂತಾದವರು ಕೂಡ ನಟಿಸಿದ್ದಾರೆ.

Kode Muruga: ‘ಕೊಡೆ ಮುರುಗ’ ಚಿತ್ರ ಮರು ಬಿಡುಗಡೆ; ಮಾ.10ಕ್ಕೆ ಮತ್ತೆ ಚಿತ್ರಮಂದಿರಕ್ಕೆ ಬರಲಿದೆ ಕಾಮಿಡಿ ಸಿನಿಮಾ
ಸುಬ್ರಹ್ಮಣ್ಯ ಪ್ರಸಾದ್, ಮುನಿಕೃಷ್ಣ
Follow us
ಮದನ್​ ಕುಮಾರ್​
|

Updated on:Mar 06, 2023 | 4:47 PM

ಕೊರೊನಾ ವೈರಸ್​ (Corona Virus) ಕಾರಣದಿಂದ ಕಷ್ಟ ಅನುಭವಿಸಿದ ಸಿನಿಮಾಗಳು ಹಲವು. 2020ರಲ್ಲಿ ಅನೇಕ ಚಿತ್ರತಂಡಗಳಿಗೆ ಲಾಕ್​ಡೌನ್​ನಿಂದ ತೊಂದರೆ ಆಗಿತ್ತು. ಆ ರೀತಿ ಕಷ್ಟಕ್ಕೆ ಸಿಲುಕಿದ ಸಿನಿಮಾಗಳ ಪೈಕಿ ‘ಕೊಡೆ ಮುರುಗ’ (Kode Muruga) ಚಿತ್ರ ಕೂಡ ಪ್ರಮುಖವಾದ್ದು. ಬಿಡುಗಡೆಯಾದ ಮೂರೇ ದಿನಕ್ಕೆ ಈ ಸಿನಿಮಾ ಪ್ರದರ್ಶನ ನಿಲ್ಲಿಸುವಂತಾಗಿತ್ತು. ವಿಶೇಷ ಏನೆಂದರೆ, ಈ ಚಿತ್ರವನ್ನು ಮತ್ತೆ ಬಿಡುಗಡೆ ಮಾಡಲು ನಿರ್ಮಾಪಕರು ತೀರ್ಮಾನಿಸಿದ್ದಾರೆ. ಮಾರ್ಚ್ 10ರಂದು ‘ಕೊಡೆ ಮುರುಗ’ ಚಿತ್ರ ರೀ-ರಿಲೀಸ್​ ಆಗಲಿದೆ. ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ ಚಿತ್ರತಂಡ ಈ ವಿಷಯ ತಿಳಿಸಿದೆ. ಈ ಸಿನಿಮಾದಲ್ಲಿ ಮುನಿಕೃಷ್ಣ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಪಲ್ಲವಿ ಗೌಡ (Pallavi Gowda) ಅವರು ನಾಯಕಿಯಾಗಿ ನಟಿಸಿದ್ದಾರೆ. ಮರು ಬಿಡುಗಡೆ ಮಾಡುತ್ತಿರುವುದರ ಉದ್ದೇಶ ಏನು ಎಂಬುದನ್ನು ಚಿತ್ರತಂಡದವರು ವಿವರಿಸಿದ್ದಾರೆ.

ಕೆ. ರವಿಕುಮಾರ್​ ನಿರ್ಮಾಣದ ‘ಕೊಡೆ ಮುರುಗ’ ಚಿತ್ರಕ್ಕೆ ಸುಬ್ರಹ್ಮಣ್ಯ ಪ್ರಸಾದ್​ ನಿರ್ದೇಶನ ಮಾಡಿದ್ದಾರೆ. ‘ಈ ಮೊದಲು ನಾವು ಈ ಸಿನಿಮಾವನ್ನು ರಾಂಗ್ ಟೈಮ್‌ನಲ್ಲಿ ಬಿಡುಗಡೆ ಮಾಡಿದ್ದೆವು. ಉತ್ತಮ ಪ್ರತಿಕ್ರಿಯೆ ಸಿಕ್ಕರೂ ಕೂಡ ಜನರು ಚಿತ್ರಮಂದಿರಕ್ಕೆ ಬರುವ ಪರಿಸ್ಥಿತಿ ಇರಲಿಲ್ಲ. ಆದ್ದರಿಂದ ಕೇವಲ ಮೂರೇ ದಿನಕ್ಕೆ ಪ್ರದರ್ಶನ ನಿಲ್ಲಿಸಿದ್ದೆವು. ಮತ್ತೆ ಬಿಡುಗಡೆ ಮಾಡಲು ಒಳ್ಳೆಯ ಸಂದರ್ಭಕ್ಕಾಗಿ ಕಾಯುತ್ತಿದ್ದೆವು. ಮಾರ್ಚ್ 10ರಂದು ರಾಜ್ಯಾದ್ಯಂತ ರಿಲೀಸ್​ ಮಾಡುತ್ತೇವೆ. ಈ ಬಾರಿ ಸಿನಿಮಾ ಖಂಡಿತಾ ಗೆಲ್ಲುತ್ತದೆ ಎಂಬ ವಿಶ್ವಾಸ ನಮಗಿದೆ’ ಎಂದಿದ್ದಾರೆ ನಿರ್ಮಾಪಕ ಕೆ. ರವಿಕುಮಾರ್​.

ಇದನ್ನೂ ಓದಿ: 19 20 21 Movie Review: ನಾಡಿನ ಜನ ನೋಡಲೇಬೇಕಾದ ಕಾಡಿನ ಮಕ್ಕಳ ಕಥೆ ಮತ್ತು ಘನತೆ

ಜನಪ್ರಿಯ ‘ಅಗ್ನಿಸಾಕ್ಷಿ’ ಧಾರಾವಾಹಿಯಲ್ಲಿ ಬರುವ ಒಂದು ಪಾತ್ರದ ಹೆಸರು ಮುರುಗ. ಆ ಪಾತ್ರವನ್ನೇ ಪ್ರಧಾನವಾಗಿ ಇಟ್ಟುಕೊಂಡು ಸುಬ್ರಹ್ಮಣ್ಯ ಪ್ರಸಾದ್ ಅವರು ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ. ಕೊರೊನಾ ಸಮಯದಲ್ಲೂ ತಮ್ಮ ಚಿತ್ರ ಹೌಸ್​ಫುಲ್​ ಆಗಿತ್ತು ಎಂಬುದನ್ನು ನಾಯಕ ಮುನಿಕೃಷ್ಣ ಮೆಲುಕು ಹಾಕಿದ್ದಾರೆ. ಈ ಬಾರಿ ಕೂಡ ಅದೇ ರೀತಿಯ ರೆಸ್ಪಾನ್ಸ್​ ಸಿಗಲಿದೆ ಎಂಬ ಭರವಸೆ ಅವರಿಗೆ ಇದೆ.

ಇದನ್ನೂ ಓದಿ: Abhishek Bachchan: ‘ಕಬ್ಜ’ ಟ್ರೇಲರ್​ ನೋಡಿ ಅಭಿಷೇಕ್​ ಬಚ್ಚನ್​ ಫಿದಾ; ವಿತರಕರಿಗೆ ಮೆಚ್ಚುಗೆ ಸಂದೇಶ ಕಳಿಸಿದ ನಟ

ಮುನಿಕೃಷ್ಣ, ಪಲ್ಲವಿ ಗೌಡ ಜೊತೆ ಸ್ವಾತಿ ಗುರುದತ್, ಅರವಿಂದ್​ ರಾವ್, ಅಶೋಕ್ ಶರ್ಮ, ರಾಕ್‌ಲೈನ್ ಸುಧಾಕರ್, ಸ್ವಯಂವರ ಚಂದ್ರು, ಮೋಹನ್ ಜುನೇಜಾ, ಕುರಿ ಪ್ರತಾಪ್, ಗೋವಿಂದೇ ಗೌಡ ಮುಂತಾದವರು ಕೂಡ ನಟಿಸಿದ್ದಾರೆ.

ಇದನ್ನೂ ಓದಿ: New Kannada Movie: ಈ ವಾರ ರಿಲೀಸ್​ ಆಗ್ತಿವೆ ಕನ್ನಡದ 12 ಸಿನಿಮಾಗಳು; ಪ್ರೇಕ್ಷಕರ ಮುಂದಿದೆ ಸಿಕ್ಕಾಪಟ್ಟೆ ಆಯ್ಕೆ

‘ಕೊಡೆ ಮುರುಗ’ ಚಿತ್ರಕ್ಕೆ ಸೆಟ್‌ನಲ್ಲಿಯೇ ಶೇಕಡ 80ರಷ್ಟು ಶೂಟಿಂಗ್ ಮಾಡಲಾಗಿದೆ. ವಿಶೇಷ ಪಾತ್ರವೊಂದರಲ್ಲಿ ‘ಲೂಸ್ ಮಾದ’ ಯೋಗಿ ಕಾಣಿಸಿಕೊಂಡಿದ್ದಾರೆ. ರುದ್ರಮುನಿ ಬೆಳಗೆರೆ ಛಾಯಾಗ್ರಹಣ ಮಾಡಿದ್ದಾರೆ. ತ್ಯಾಗರಾಜ್ ಸಂಗೀತ ನಿರ್ದೇಶನ, ಸಿ. ರವಿಚಂದ್ರನ್ ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ. ಭೂಷಣ್, ಸ್ಟಾರ್ ಗಿರಿ ನೃತ್ಯ ನಿರ್ದೇಶನ ಮಾಡಿದ್ದಾರೆ. ಮಾಸ್ ಮಾದ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:47 pm, Mon, 6 March 23

ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ