Abhishek Bachchan: ‘ಕಬ್ಜ’ ಟ್ರೇಲರ್ ನೋಡಿ ಅಭಿಷೇಕ್ ಬಚ್ಚನ್ ಫಿದಾ; ವಿತರಕರಿಗೆ ಮೆಚ್ಚುಗೆ ಸಂದೇಶ ಕಳಿಸಿದ ನಟ
Kabzaa Movie | Upendra: ಆನಂದ್ ಪಂಡಿತ್ ಅವರು ಅಭಿಷೇಕ್ ಬಚ್ಚನ್ಗೆ ‘ಕಬ್ಜ’ ಚಿತ್ರದ ಟ್ರೇಲರ್ ಕಳಿಸಿದ್ದಾರೆ. ಅದನ್ನು ನೋಡಿ ಅವರು ಪ್ರತಿಕ್ರಿಯೆ ತಿಳಿಸಿದ್ದಾರೆ.
ಉಪೇಂದ್ರ, ಕಿಚ್ಚ ಸುದೀಪ್, ಶಿವರಾಜ್ಕುಮಾರ್, ಶ್ರೀಯಾ ಶರಣ್ ನಟನೆಯ ‘ಕಬ್ಜ’ ಸಿನಿಮಾ (Kabzaa Movie) ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಈ ಚಿತ್ರಕ್ಕೆ ಆರ್. ಚಂದ್ರು ನಿರ್ದೇಶನ ಮಾಡಿದ್ದು, ದೇಶಾದ್ಯಂತ ನಿರೀಕ್ಷೆ ಮೂಡಿಸಿದೆ. ಇತ್ತೀಚೆಗಷ್ಟೇ ಈ ಸಿನಿಮಾದ ಟ್ರೇಲರ್ (Kabzaa Trailer) ರಿಲೀಸ್ ಆಯಿತು. ಅದನ್ನು ಕಂಡು ಅಭಿಮಾನಿಗಳು ವಾವ್ ಎನ್ನುತ್ತಿದ್ದಾರೆ. ಫ್ಯಾನ್ಸ್ ಮಾತ್ರವಲ್ಲದೇ ಬಾಲಿವುಡ್ ಮಂದಿ ಕೂಡ ಫಿದಾ ಆಗಿದ್ದಾರೆ. ಖ್ಯಾತ ನಟ ಅಭಿಷೇಕ್ ಬಚ್ಚನ್ ಅವರಿಗೆ ‘ಕಬ್ಜ’ ಸಿನಿಮಾದ ಟ್ರೇಲರ್ ಇಷ್ಟ ಆಗಿದೆ. ಹಿಂದಿ ವಿತರಕರಾದ ಆನಂದ್ ಪಂಡಿತ್ ಅವರಿಗೆ ಅಭಿಷೇಕ್ ಬಚ್ಚನ್ (Abhishek Bachchan) ಮೆಸೇಜ್ ಮಾಡಿ ತಮ್ಮ ಮೆಚ್ಚುಗೆ ಸೂಚಿಸಿದ್ದಾರೆ. ಇದರಿಂದ ಚಿತ್ರತಂಡಕ್ಕೆ ಸಖತ್ ಖುಷಿ ಆಗಿದೆ.
ಕರ್ನಾಟಕದಲ್ಲಿ ಮಾತ್ರವಲ್ಲದೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ‘ಕಬ್ಜ’ ಸಿನಿಮಾ ಸದ್ದು ಮಾಡಲಿದೆ. ಕನ್ನಡದ ಜೊತೆಗೆ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿ ಈ ಸಿನಿಮಾ ತೆರೆಕಾಣಲಿದೆ. ಆನಂದ್ ಪಂಡಿತ್ ಅವರು ಈ ಚಿತ್ರವನ್ನು ಹಿಂದಿಯಲ್ಲಿ ವಿತರಣೆ ಮಾಡಲಿದ್ದಾರೆ. ಬಚ್ಚನ್ ಕುಟುಂಬದ ಜೊತೆ ಅವರಿಗೆ ಒಡನಾಟ ಇದೆ. ಅಭಿಷೇಕ್ ಬಚ್ಚನ್ ಅವರಿಗೆ ಟ್ರೇಲರ್ ಕಳಿಸಲಾಗಿದ್ದು, ಅದನ್ನು ನೋಡಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ತುಂಬ ದೊಡ್ಡದಾಗಿ. ಅಭಿನಂದನೆಗಳು ಆನಂದ್ ಭಾಯ್’ ಎಂದು ಅಭಿಷೇಕ್ ಬಚ್ಚನ್ ಮೆಸೇಜ್ ಕಳಿಸಿದ್ದಾರೆ.
ಇದನ್ನೂ ಓದಿ: Kabzaa Trailer: ಕಬ್ಜ ಟ್ರೈಲರ್ ಬಿಡುಗಡೆ, ಕತ್ತರಿಸುವ ಕೈಗಳು ಬರೆದ ಇತಿಹಾಸವಿದು, ಎರಡು ಶೇಡ್ನಲ್ಲಿ ಉಪ್ಪಿ
ಮಾರ್ಚ್ 4ರಂದು ‘ಕಬ್ಜ’ ಟ್ರೇಲರ್ ಬಿಡುಗಡೆ ಆಯಿತು. ಅಮಿತಾಭ್ ಬಚ್ಚನ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಲಿಂಕ್ ಹಂಚಿಕೊಳ್ಳುವ ಮೂಲಕ ಟ್ರೇಲರ್ ಅನಾವರಣ ಮಾಡಿದರು. ‘ನನ್ನ ಪ್ರೀತಿಯ ಸ್ನೇಹಿತ ಆನಂದ್ ಪಂಡಿತ್ ನಿರ್ಮಾಣ ಮಾಡಿರುವ ಮತ್ತು ಆರ್. ಚಂದ್ರು ನಿರ್ದೇಶನ ಮಾಡಿರುವ ಕಬ್ಜ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಲು ಹೆಮ್ಮೆ ಎನಿಸುತ್ತಿದೆ. ಉಪೇಂದ್ರ, ಕಿಚ್ಚ ಸುದೀಪ್, ಶ್ರೀಯಾ ಶರಣ್ ಹಾಗೂ ಶಿವರಾಜ್ಕುಮಾರ್ ಅವರಿಗೆ ಆಲ್ ದಿ ಬೆಸ್ಟ್’ ಎಂದು ಅಮಿತಾಭ್ ಬಚ್ಚನ್ ಟ್ವೀಟ್ ಮಾಡಿದರು. ಅದರ ಬೆನ್ನಲ್ಲೇ ಅಭಿಷೇಕ್ ಬಚ್ಚನ್ ಕೂಡ ಟ್ರೇಲರ್ ನೋಡಿ ಇಷ್ಟಪಟ್ಟಿದ್ದಾರೆ.
ಇದನ್ನೂ ಓದಿ: Tanya Hope: ಸುಡು ಬೇಸಿಗೆಯಲ್ಲೂ ‘ಕಬ್ಜ’ ಚಿತ್ರದ ‘ಚುಂ ಚುಂ ಚಳಿ..’ ಹಾಡಿಗೆ ಉಪೇಂದ್ರ ಅಭಿಮಾನಿಗಳು ಫಿದಾ
ಪುನೀತ್ ರಾಜ್ಕುಮಾರ್ ಜನ್ಮದಿನದ ಪ್ರಯುಕ್ತ ಮಾರ್ಚ್ 17ರಂದು ‘ಕಬ್ಜ’ ಸಿನಿಮಾ ರಿಲೀಸ್ ಆಗಲಿದೆ. ಈ ಚಿತ್ರವನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲು ಅಭಿಮಾನಿಗಳು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಎಲ್ಲ ಕಡೆಗಳಲ್ಲಿ ಈ ಸಿನಿಮಾ ಬಗ್ಗೆ ಕ್ರೇಜ್ ಸೃಷ್ಟಿ ಆಗಿದೆ. ಟ್ರೇಲರ್ನಲ್ಲಿ ಕಾಣಿಸಿದ ತಾಂತ್ರಿಕ ಗುಣಮಟ್ಟ ಕಂಡು ಸಿನಿಪ್ರಿಯರು ಫಿದಾ ಆಗಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.