
‘ಕಾಂತಾರ: ಚಾಪ್ಟರ್ 1’ (Kantara: Chapter 1) ಅಬ್ಬರದ ಗಳಿಕೆ ಮಾಡುತ್ತಾ ಸಾಗುತ್ತಿದೆ. ಈ ಚಿತ್ರದ ಭಾನುವಾರದ ಕಲೆಕ್ಷನ್ ನೋಡಿ ಎಲ್ಲರಿಗೂ ಶಾಕ್ ಆಗಿದೆ. ಈ ಸಿನಿಮಾ ಮೊದಲ ಮೂರು ದಿನ ಅಬ್ಬರದ ಕಲೆಕ್ಷನ್ ಮಾಡಿದೆ. ನಾಲ್ಕನೇ ದಿನ ಈ ಅಬ್ಬರ ಮತ್ತಷ್ಟು ಜೋರಾಗಿದೆ. ಊಹೆಗೂ ಮೀರಿದ ಕಲೆಕ್ಷನ್ ಚಿತ್ರಕ್ಕೆ ಆಗುತ್ತಿದೆ. ಈ ಸಿನಿಮಾ ಕೇವಲ ನಾಲ್ಕೇ ದಿನಕ್ಕೆ 200 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಇದು ಚಿತ್ರದ ಹೆಚ್ಚುಗಾರಿಕೆ.
‘ಕಾಂತಾರ: ಚಾಪ್ಟರ್ 1’ ಸಿನಿಮಾ ಅಕ್ಟೊಬರ 2ರಂದು ರಿಲೀಸ್ ಆಯಿತು. ಅಂದು ದಸರಾ ಹಾಗೂ ಗಾಂಧೀ ಜಯಂತಿ ಪ್ರಯುಕ್ತ ರಜೆ ಇತ್ತು. ಇದು ಚಿತ್ರಕ್ಕೆ ಸಹಕಾರಿ ಆಗಿದೆ. ಸಿನಿಮಾಗೆ ಸಿಕ್ಕ ಪಾಸಿಟಿವ್ ಪ್ರತಿಕ್ರಿಯೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಚಿತ್ರಮಂದಿರದತ್ತ ನುಗ್ಗಿದರು. ಮೊದಲ ದಿನ ಸಿನಿಮಾ 62 ಕೋಟಿ ರೂಪಾಯಿ ಅಷ್ಟು ಕಲೆಕ್ಷನ್ ಮಾಡಿತು.
ಎರಡನೇ ದಿನ ಚಿತ್ರಕ್ಕೆ 45.4 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಮೂರನೇ ದಿನ 55 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಯಾವುದೇ ಸಿನಿಮಾಗೆ ಭಾನುವಾರ ಎಷ್ಟು ಉತ್ತಮ ಗಳಿಕೆ ಆಗುತ್ತದೆ ಎನ್ನುವ ಕುತೂಹಲ ಇರುತ್ತದೆ. ಅದೇ ರೀತಿ, ಈ ಚಿತ್ರದ ಭಾನುವಾರದ ಕಲೆಕ್ಷನ್ ಮೇಲೆ ಎಲ್ಲರ ದೃಷ್ಟಿ ಇತ್ತು. ಈಗ ಇದರ ಲೆಕ್ಕ ಸಿಕ್ಕಿದ್ದು, 61 ಕೋಟಿ ರೂಪಾಯಿ ಆಗಿದೆ ಎಂದು sacnilk ಹೇಳಿದೆ.
ಸದ್ಯ ಚಿತ್ರದ ಒಟ್ಟಾರೆ ಗಳಿಕೆ 223.25 ಕೋಟಿ ರೂಪಾಯಿ ಆಗಿದೆ ಎಂದು sacnilk ವರದಿ ಮಾಡಿದೆ. ಈ ವಾರವೂ ಸಿನಿಮಾ ಒಳ್ಳೆಯ ರೀತಿಯ ಕಲೆಕ್ಷನ್ ಮಾಡಿ ಸಾಗಲಿದೆ. ಆ ಬಳಿಕ ದೀಪಾವಳಿ ಹಬ್ಬದ ಸಮಯದಲ್ಲಿ ಸಿನಿಮಾ ಅದ್ಭುತ ಗಳಿಕೆ ಮಾಡುವುದನ್ನು ಮುಂದುವರಿಸಲಿದೆ.
ಇದನ್ನೂ ಓದಿ: 3ನೇ ದಿನವೂ ‘ಕಾಂತಾರ: ಚಾಪ್ಟರ್ 1’ ಅಬ್ಬರದ ಕಲೆಕ್ಷನ್; ಒಟ್ಟು ಎಷ್ಟಾಯ್ತು?
‘ಕಾಂತಾರ: ಚಾಪ್ಟರ್ 1’ ಚಿತ್ರಕ್ಕೆ ರಿಷಬ್ ಶೆಟ್ಟಿ ನಿರ್ದೇಶನ ಇದೆ. ಅವರು ಈ ಚಿತ್ರದಲ್ಲಿ ಬೆರ್ಮೆ ಹೆಸರಿನ ಪಾತ್ರ ಮಾಡಿದ್ದಾರೆ. ಈ ಸಿನಿಮಾಗೆ ರುಕ್ಮಿಣಿ ವಸಂತ್ ನಾಯಕಿ. ಗುಲ್ಶನ್ ದೇವಯ್ಯ, ಜಯರಾಂ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ಈ ಸಿನಿಮಾದ ಕೊನೆಯಲ್ಲಿ ‘ಕಾಂತಾರ: ಚಾಪ್ಟರ್ 2’ ಬರುವ ಸೂಚನೆ ನೀಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.