ಮುಂಬೈನಲ್ಲಿ ಮೈಲಿಗಲ್ಲು ಸ್ಥಾಪಿಸಲಿರುವ ‘ಕಾಂತಾರ: ಚಾಪ್ಟರ್ 1’
Kantara Chapter 1 movie: 2022 ರಲ್ಲಿ ಬಿಡುಗಡೆ ಆಗಿದ್ದ ‘ಕಾಂತಾರ’ ಸಿನಿಮಾ ಹಿಂದಿ ಭಾಗಗಳಲ್ಲಿ ದೊಡ್ಡ ಯಶಸ್ಸು ಗಳಿಸಿತ್ತು. ಇದೀಗ ‘ಕಾಂತಾರ: ಚಾಪ್ಟರ್ 1’ ಸಿನಿಮಾಕ್ಕೂ ಸಹ ಹಿಂದಿ ಪ್ರದೇಶಗಳಲ್ಲಿ ಭರ್ಜರಿ ಪ್ರೇಕ್ಷಕರ ಪ್ರೀತಿ ದೊರಕುತ್ತಿದೆ. ‘ಕಾಂತಾರ: ಚಾಪ್ಟರ್ 1’ ಬಿಡುಗಡೆ ಆಗಿ 23 ದಿನಗಳಲ್ಲಿ ಈ ಸಿನಿಮಾದ ಹಿಂದಿ ಆವೃತ್ತಿ ಅಥವಾ ಹಿಂದಿ ಪ್ರದೇಶದಲ್ಲಿ ದೊಡ್ಡ ಮೊತ್ತ ಗಳಿಕೆ ಮಾಡಿದೆ.

‘ಕಾಂತಾರ: ಚಾಪ್ಟರ್ 1’ (Kantara Chapter 1) ಸಿನಿಮಾ ಬಿಡುಗಡೆ ಆಗಿ ಮೂರು ವಾರಕ್ಕೂ ಹೆಚ್ಚು ಸಮಯವಾಗಿದೆ. ಸಿನಿಮಾದ ನಿರ್ಮಾಣ ಮಾಡಿರುವ ಹೊಂಬಾಳೆ ನೀಡಿರುವ ಲೆಕ್ಕಾಚಾರದಂತೆ ವಿಶ್ವ ಬಾಕ್ಸ್ ಆಫೀಸ್ನಲ್ಲಿ ‘ಕಾಂತಾರ: ಚಾಪ್ಟರ್ 1’ ಸಿನಿಮಾ 818 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಆ ಮೂಲಕ 1000 ಕೋಟಿ ಗಳಿಕೆಯತ್ತ ದಾಪುಗಾಲು ಹಾಕುತ್ತಿದೆ. ಸಿನಿಮಾದ ಇಂಗ್ಲೀಷ್ ಆವೃತ್ತಿ ಸಹ ಬಿಡುಗಡೆ ಆಗುತ್ತಿದ್ದು, ಇದರಿಂದ ಕಲೆಕ್ಷನ್ ಮೊತ್ತ ಇನ್ನಷ್ಟು ಹೆಚ್ಚಿಗೆ ಆಗುವ ಸಾಧ್ಯತೆ ಇದೆ. ಇದೀಗ ಈ ಸಿನಿಮಾ ಮುಂಬೈನಲ್ಲಿ ಅಂದರೆ ಹಿಂದಿ ಬಾಕ್ಸ್ ಆಫೀಸ್ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲು ಮುಂದಾಗಿದೆ.
2022 ರಲ್ಲಿ ಬಿಡುಗಡೆ ಆಗಿದ್ದ ‘ಕಾಂತಾರ’ ಸಿನಿಮಾ ಹಿಂದಿ ಭಾಗಗಳಲ್ಲಿ ದೊಡ್ಡ ಯಶಸ್ಸು ಗಳಿಸಿತ್ತು. ಇದೀಗ ‘ಕಾಂತಾರ: ಚಾಪ್ಟರ್ 1’ ಸಿನಿಮಾಕ್ಕೂ ಸಹ ಹಿಂದಿ ಪ್ರದೇಶಗಳಲ್ಲಿ ಭರ್ಜರಿ ಪ್ರೇಕ್ಷಕರ ಪ್ರೀತಿ ದೊರಕುತ್ತಿದೆ. ‘ಕಾಂತಾರ: ಚಾಪ್ಟರ್ 1’ ಬಿಡುಗಡೆ ಆಗಿ 23 ದಿನಗಳಲ್ಲಿ ಈ ಸಿನಿಮಾದ ಹಿಂದಿ ಆವೃತ್ತಿ ಅಥವಾ ಹಿಂದಿ ಪ್ರದೇಶದಲ್ಲಿ 181 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದೆ.
‘ಥಮ’ ಸೇರಿದಂತೆ ಇನ್ನೂ ಕೆಲವು ಸಿನಿಮಾಗಳು ‘ಕಾಂತಾರ: ಚಾಪ್ಟರ್ 1’ ಸಿನಿಮಾಕ್ಕೆ ಸ್ಪರ್ಧೆ ಒಡ್ಡಿದವರಾದರೂ ಸಿನಿಮಾದ ಓಟ ಕಮ್ಮಿಯಾಗಿಲ್ಲ. 181 ಕೋಟಿಗೂ ಹೆಚ್ಚು ಮೊತ್ತ ಗಳಿಸಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಕೆಲವೇ ದಿನಗಳಲ್ಲಿ 200 ಕೋಟಿ ಗಳಿಕೆ ಮಾಡಲಿದೆ. ಪರಭಾಷೆ ಸಿನಿಮಾ ಒಂದು ಹಿಂದಿ ಪ್ರದೇಶದಲ್ಲಿ 200 ಕೋಟಿ ಗಳಿಸುವುದು ಸಾಮಾನ್ಯ ವಿಷಯವಲ್ಲ. ಈ ರೀತಿಯ ಸಾಧನೆ ಮಾಡಿದ ಅತ್ಯಂತ ಕಡಿಮೆ ಸಿನಿಮಾಗಳ ಪೈಕಿ ‘ಕಾಂತಾರ: ಚಾಪ್ಟರ್ 1’ ಸಹ ಒಂದಾಗಿದೆ.
ಇದನ್ನೂ ಓದಿ:‘ಕಾಂತಾರ’, ರಿಷಬ್ ಶೆಟ್ಟಿ ಹಾಗೂ ಇನ್ನಿತರೆ: ಪ್ರಗತಿ ಶೆಟ್ಟಿ ಮಾತು
ಈ ಹಿಂದೆ ‘ಕೆಜಿಎಫ್ 2’ ಸಿನಿಮಾ ಹಿಂದಿ ಪ್ರದೇಶದಲ್ಲಿ 200 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿತ್ತು. ಅದರ ಹೊರತಾಗಿ ‘ಬಾಹುಬಲಿ 2’ ಮತ್ತು ‘ಪುಷ್ಪ 2’ ಸಿನಿಮಾಗಳು ಹಿಂದಿ ಪ್ರದೇಶದಲ್ಲಿ 200 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದ್ದವು. ಇದೀಗ ‘ಕಾಂತಾರ: ಚಾಪ್ಟರ್ 1’ ಸಹ 200 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡುವ ಗಡಿಯಲ್ಲಿದೆ.
‘ಕಾಂತಾರ: ಚಾಪ್ಟರ್ 1’ ಸಿನಿಮಾ ಹಿಂದಿ ಪ್ರದೇಶಗಳಲ್ಲಿ ಮಾತ್ರವೇ ಅಲ್ಲದೆ ತೆಲುಗು ರಾಜ್ಯಗಳಲ್ಲಿಯೂ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಆಂಧ್ರ ಪ್ರದೇಶ ಮತ್ತು ತೆಲಂಗಾಣಗಳಲ್ಲಿ ಈ ಸಿನಿಮಾ 110 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದ್ದು, 150 ಕೋಟಿ ಮೊತ್ತ ದಾಟಲಿದೆ. ವಿಶ್ವ ಬಾಕ್ಸ್ ಆಫೀಸ್ನಲ್ಲಿ 818 ಕೋಟಿ ರೂಪಾಯಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದೆಯೆಂದು ಹೊಂಬಾಳೆ ಫಿಲಮ್ಸ್ ಹೇಳಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




