‘ಕಾಂತಾರ: ಚಾಪ್ಟರ್ 1’ ಎಫೆಕ್ಟ್: ಐಎಂಡಿಬಿ ಇಂಡಿಯಾ ಟ್ರೆಂಡ್​ನಲ್ಲಿ ಟಾಪ್ 2 ಸ್ಥಾನ ಪಡೆದ ರಿಷಬ್-ರುಕ್ಮಿಣಿ

'ಕಾಂತಾರ: ಚಾಪ್ಟರ್ 1' ಚಿತ್ರವು ವಿಶ್ವಮಟ್ಟದಲ್ಲಿ ಭಾರಿ ಯಶಸ್ಸು ಕಂಡು, ಸಾವಿರ ಕೋಟಿ ಗಳಿಕೆಯತ್ತ ಸಾಗುತ್ತಿದೆ. ರಿಷಬ್ ಶೆಟ್ಟಿ ಮತ್ತು ರುಕ್ಮಿಣಿ ವಸಂತ್ IMDB ಇಂಡಿಯಾ ಟ್ರೆಂಡಿಂಗ್​ನಲ್ಲಿ ಮೊದಲ ಹಾಗೂ ಎರಡನೇ ಸ್ಥಾನ ಪಡೆದಿದ್ದಾರೆ. ಪ್ರೇಕ್ಷಕರ ನಿರೀಕ್ಷೆ ಮೀರಿ ಗೆದ್ದಿರುವ ಈ ಸಿನಿಮಾ, ಇಬ್ಬರ ಪಾತ್ರಗಳ ಮೂಲಕ ಮತ್ತಷ್ಟು ತೂಕ ಪಡೆದಿದೆ.

‘ಕಾಂತಾರ: ಚಾಪ್ಟರ್ 1’ ಎಫೆಕ್ಟ್: ಐಎಂಡಿಬಿ ಇಂಡಿಯಾ ಟ್ರೆಂಡ್​ನಲ್ಲಿ ಟಾಪ್ 2 ಸ್ಥಾನ ಪಡೆದ ರಿಷಬ್-ರುಕ್ಮಿಣಿ
ರುಕ್ಮಿಣಿ-ರಿಷಬ್

Updated on: Oct 16, 2025 | 12:27 PM

‘ಕಾಂತಾರ: ಚಾಪ್ಟರ್ 1’ ಸಿನಿಮಾ ಪಡೆದ ಯಶಸ್ಸು ತುಂಬಾನೇ ದೊಡ್ಡದು. ಈ ಸಿನಿಮಾ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಚಿತ್ರದ ಕಲೆಕ್ಷನ್ ಸಾವಿರ ಕೋಟಿ ರೂಪಾಯಿ ಸಮೀಪಿಸುತ್ತಿದೆ. ರಿಷಬ್ ಶೆಟ್ಟಿ (Rishab Shetty) ಹಾಗೂ ರುಕ್ಮಿಣಿ ವಸಂತ್ ಅವರ ಹೆಸರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೆಂಡ್ ಆಗುತ್ತಿದೆ. ರಿಷಬ್ ಹಾಗೂ ರುಕ್ಮಿಣಿ ಹೆಸರು ಐಎಂಡಿಬಿ ಇಂಡಿಯಾ ಟ್ರೆಂಡ್​ನಲ್ಲಿ ಅನುಕ್ರಮವಾಗಿ ಒಂದು ಹಾಗೂ ಎರಡನೇ ಸ್ಥಾನ ಪಡೆದುಕೊಂಡಿವೆ.

‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಗ್ಗೆ ಪ್ರೇಕ್ಷಕರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆ ನಿರೀಕ್ಷೆಯನ್ನೂ ಮೀರಿ ಸಿನಿಮಾ ಗೆಲುವು ಕಂಡಿದೆ. ರಿಷಬ್ ಪಾತ್ರಕ್ಕೆ ಸಾಕಷ್ಟು ತೂಕ ಇದೆ. ಅದೇ ರೀತಿ, ರುಕ್ಮಿಣಿ ಪಾತ್ರ ಸಾಕಷ್ಟು ಶೇಡ್​ಗಳನ್ನು ಹೊಂದಿದೆ. ಈ ಪಾತ್ರಗಳು ಸಿನಿಮಾ ತೂಕ ಹೆಚ್ಚಿಸಿದೆ. ಈಗ ಇವರ ಹೆಸರು ಟ್ರೆಂಡ್​ನಲ್ಲಿರುವ ಬಗ್ಗೆ ಐಎಂಡಿಬಿ ಮಾಹಿತಿ ನೀಡಿದೆ.

ಇದನ್ನೂ ಓದಿ
ಆಲಿಯಾ ಹೊಸ ಮನೆಯಲ್ಲಿ ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿದ ಗಣಪತಿ ಮೂರ್ತಿ
ಸಪ್ತಪದಿ ತುಳಿಯುವಾಗಲೇ ಕರ್ಣನಿಗೆ ಗೊತ್ತಾಯ್ತು ನಿಧಿ ಪ್ರೆಗ್ನೆನ್ಸಿ ವಿಚಾರ
ಬಕ್ರಾ ಮಾಡಲು ಬಂದ ಜಾನ್ವಿ-ಅಶ್ವಿನಿಗೆ ಮಣ್ಣು ಮುಕ್ಕಿಸಿದ ರಕ್ಷಿತಾ ಶೆಟ್ಟಿ
ಬಿಗ್ ಬಾಸ್ ಮನೆಯಲ್ಲಿ ಮಿಡ್ ವೀಕ್ ಎಲಿಮಿನೇಷನ್; ಆ ಇಬ್ಬರು ಔಟ್?

ವಾರದ ಟ್ರೆಂಡ್​ನ ಐಎಂಡಿಬಿ ಇಂಡಿಯಾ ಬಿಡುಗಡೆ ಮಾಡಿದೆ. ಇದರಲ್ಲಿ ರಿಷಬ್ ಮೊದಲ ಸ್ಥಾನ ಪಡೆದರೆ, ರುಕ್ಮಿಣಿ ವಸಂತ್​ಗೆ ಎರಡನೇ ಸ್ಥಾನ ಸಿಕ್ಕಿದೆ. ಮೂರನೇ ಸ್ಥಾನದಲ್ಲಿ ಮೋನಾ ಸಿಂಗ್ ಹೆಸರು ಇದೆ. ನಾಲ್ಕನೇ ಸ್ಥಾನದಲ್ಲಿ ಹೃತಿಕ್ ರೋಷನ್ ಇದ್ದಾರೆ.

ಐಎಂಬಿಡಿಬಿ ಪೋಸ್ಟ್

ವಿಶೇಷ ಎಂದರೆ ರಕ್ಷಿತ್ ಶೆಟ್ಟಿ ಹೆಸರು ಕೂಡ ಪಟ್ಟಿಯಲ್ಲಿ ಇದೆ. ಅವರಿಗೆ ಎಂಟನೇ ಸ್ಥಾನ ಸಿಕ್ಕಿದೆ. ರಕ್ಷಿತ್ ಶೆಟ್ಟಿ ಅವರು ‘ರಿಚರ್ಡ್ ಆ್ಯಂಟನಿ’ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರ ಇನ್ನೂ ಸೆಟ್ಟೇರಿಲ್ಲ. ಈ ಸಿನಿಮಾ ಬಗ್ಗೆ ಚರ್ಚೆಗಳಾಗುತ್ತಿವೆ. ರಕ್ಷಿತ್ ಶೆಟ್ಟಿ ಎಲ್ಲಿ ಹೋದರು ಎಂಬ ಬಗ್ಗೆ ಪ್ರಶ್ನೆಗಳೂ ಮೂಡಿವೆ. ಈ ಕಾರಣಕ್ಕೂ ಅವರ ಹೆಸರು ಟ್ರೆಂಡ್ ಆಗಿದೆ.

ಇದನ್ನೂ ಓದಿ: ‘ನಾನು ದೈವವನ್ನು ನಂಬುವವನು, ದೈವಕ್ಕೆ ಅಪಚಾರ ಆಗಿಲ್ಲ’; ರಿಷಬ್ ಶೆಟ್ಟಿ

ರಿಷಬ್ ಶೆಟ್ಟಿ ಅವರು ಸದ್ಯ ಬ್ರೇಕ್​ನಲ್ಲಿ ಇದ್ದಾರೆ. ಅವರು ಸದ್ಯಕ್ಕಂತೂ ‘ಕಾಂತಾರ: ಚಾಪ್ಟರ್ 2’ ಸಿನಿಮಾ ಕೈಗೆ ಎತ್ತಿಕೊಳ್ಳುವ ಉದ್ದೇಶ ಹೊಂದಿಲ್ಲ. ಈ ಚಿತ್ರ ಸಿದ್ಧವಾದರೆ ಬಜೆಟ್ ಕೂಡ ಹೆಚ್ಚಿರುತ್ತದೆ. ಕಲೆಕ್ಷನ್ ಕೂಡ ಅದ್ದೂರಿಯಾಗೇ ಮಾಡಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 12:24 pm, Thu, 16 October 25