ಛೇ.. ರುಕ್ಕುಗೆ ಈ ರೀತಿ ಆಗಬಾರದಿತ್ತು; ಎಐ ಫೋಟೋಗಳು ವೈರಲ್

Rukmini Vasanth: ‘ಕಾಂತಾರ: ಚಾಪ್ಟರ್ 1’ ಸಿನಿಮಾದಲ್ಲಿ ರುಕ್ಮಿಣಿ ಅವರು ಯುವರಾಣಿಯಾಗಿ ಕಾಣಿಸಿಕೊಂಡಿದ್ದಾರೆ. ಕನಕವಲ್ಲಿ ಅವರ ಪಾತ್ರದ ಹೆಸರು. ಅವರು ಕತ್ತಿ ಹಿಡಿದು ಯೋಧೆಯಂತೆ ಹೋರಾಡುತ್ತಾರೆ. ಈ ರೀತಿ ಕತ್ತಿ ಹಿಡಿದ ಒಂದು ದೃಶ್ಯವನ್ನು ಕೆಲವರು ತಿರುಚಿದ್ದಾರೆ. ಈ ಫೋಟೋಗಳು ವೈರಲ್ ಆಗಿವೆ.

ಛೇ.. ರುಕ್ಕುಗೆ ಈ ರೀತಿ ಆಗಬಾರದಿತ್ತು; ಎಐ ಫೋಟೋಗಳು ವೈರಲ್
ರುಕ್ಮಿಣಿ

Updated on: Sep 26, 2025 | 11:50 AM

ದೃಶ್ಯ ಎಷ್ಟೇ ಅದ್ಭುತವಾಗಿರಲಿ, ಅದನ್ನು ಎಷ್ಟೇ ಚೆನ್ನಾಗಿ ಕಟ್ಟಿಕೊಟ್ಟಿರಲಿ ಅವುಗಳನ್ನು ಫನ್ ಆಗಿ ಬದಲಿಸುವ ಆಲೋಚನೆ ಅನೇಕರಿಗೆ ಇರುತ್ತದೆ. ಇತ್ತೀಚೆಗೆ ಬಿಡುಗಡೆ ಆದ ‘ಕಾಂತಾರ: ಚಾಪ್ಟರ್ 1’ (Kantara) ಸಿನಿಮಾದ ಪ್ರತಿ ದೃಶ್ಯಗಳು ಅದ್ಭುತವಾಗಿದೆ. ಈ ಟ್ರೇಲರ್ ನೋಡಿದ ಅನೇಕರಿಗೆ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚುವಂತೆ ಮಾಡಿದೆ. ಹೀಗಿರುವಾಗಲೇ ಟ್ರೇಲರ್​ನಲ್ಲಿ ರುಕ್ಮಿಣಿ ವಸಂತ್ ಅವರ ಆ ಒಂದು ದೃಶ್ಯವನ್ನು ಎಐ ಟೂಲ್ ಬಳಸಿ ನಾನಾ ರೀತಿ ತಿರುಚಲಾಗಿದೆ.

‘ಕಾಂತಾರ: ಚಾಪ್ಟರ್ 1’ ಸಿನಿಮಾದಲ್ಲಿ ರುಕ್ಮಿಣಿ ಅವರು ಯುವರಾಣಿಯಾಗಿ ಕಾಣಿಸಿಕೊಂಡಿದ್ದಾರೆ. ಕನಕವಲ್ಲಿ ಅವರ ಪಾತ್ರದ ಹೆಸರು. ಅವರು ಕತ್ತಿ ಹಿಡಿದು ಯೋಧೆಯಂತೆ ಹೋರಾಡುತ್ತಾರೆ. ಈ ರೀತಿ ಕತ್ತಿ ಹಿಡಿದ ಒಂದು ದೃಶ್ಯವನ್ನು ಕೆಲವರು ತಿರುಚಿದ್ದಾರೆ. ಬೆಂಗಳೂರಿನ ಗುಂಡಿ ಬಿದ್ದ ರಸ್ತೆಗೆ ಟಾರ್ ಹಾಕುವಂತೆ, ಸೌಟು ಹಿಡಿದು ಅಡುಗೆ ಮಾಡಿದಂತೆಲ್ಲ ತೋರಿಸಲಾಗಿದೆ.

ಇದನ್ನೂ ಓದಿ
ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಮಧ್ಯೆ ಎಷ್ಟು ಸಾಮ್ಯತೆ ಇದೆ ನೋಡಿ
‘ನಾನು ಒಂದು ದಿನ ಮಗು ಹೊಂದುತ್ತೇನೆ’; ಮನದ ಆಸೆ ಹೊರಹಾಕಿದ ಸಲ್ಮಾನ್ ಖಾನ್
ಬಿಗ್ ಬಾಸ್​ಗೆ ಶಾಕ್; ಬಿತ್ತು ಎರಡು ಕೋಟಿ ರೂಪಾಯಿ ಕೇಸ್
‘ಓಜಿ’ ಅಬ್ಬರದ ಕಲೆಕ್ಷನ್; ಮೊದಲ ದಿನವೇ 100 ಕೋಟಿ ರೂಪಾಯಿ ಗಳಿಕೆ

ಬೆಂಗಳೂರಿನ ರಸ್ತೆಗಳು ಗುಂಡಿ ಬಿದ್ದಿದ್ದು, ಓಡಾಡಲಾಗದ ಪರಿಸ್ಥಿತಿ ನಿರ್ಮಾಣ ಆಗಿದೆ. ಈ ಬಗ್ಗೆ ಅನೇಕರು ಅಪಸ್ವರ ತೆಗೆದಿದ್ದಾರೆ. ಕೆಲವರು ಈ ಬಗ್ಗೆ ದೂರು ನೀಡಿದ್ದಾರೆ. ಇದಕ್ಕೆ ಎಚ್ಚೆತ್ತುಕೊಂಡಿರುವ ಸರ್ಕಾರ ಗುಂಡಿ ಮುಚ್ಚಿಸೋ ಕೆಲಸದಲ್ಲಿ ತೊಡಗಿಕೊಂಡಿದೆ. ಹೀಗಿರುವಾಗಲೇ ಅನೇಕರು ರುಕ್ಮಿಣಿ ಅವರೇ ರಸ್ತೆ ಮುಚ್ಚಿಸೋ ರೀತಿ ತೋರಿಸಿದ್ದರೆ.

‘ಕಾಂತಾರ: ಚಾಪ್ಟರ್ 1’ ಸಿನಿಮಾದಲ್ಲಿ ರುಕ್ಮಿಣಿ ವಸಂತ್ ಅವರು ಸಖತ್ ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಸೌಂದರ್ಯಕ್ಕೆ ಸಾಟಿಯೇ ಇಲ್ಲದಂತೆ ಆಗಿದೆ. ಅವರ ಸೌಂದರ್ಯವನ್ನು ಅನೇಕರು ಕೊಂಡಾಡಿದ್ದಾರೆ. ಕೆಲವರು ಅವರನ್ನು, ಏಂಜಲ್ ಎಂದೆಲ್ಲ ಕರೆದಿದ್ದಾರೆ.

ಇದನ್ನೂ ಓದಿ: ‘ಕಾಂತಾರ: ಚಾಪ್ಟರ್ 1’ ಚಿತ್ರಕ್ಕೆ ರಿಷಬ್ ಪಡೆದ ಸಂಭಾವನೆ ಎಷ್ಟು? ಊಹೆಗೂ ಮೀರಿದ್ದು

‘ಕಾಂತಾರ: ಚಾಪ್ಟರ್ 1’ ಸಿನಿಮಾ ಅಕ್ಟೋಬರ್ 2ರಂದು ರಿಲೀಸ್ ಆಗುತ್ತಿದೆ. ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಅದ್ದೂರಿಯಾಗಿ ನಿರ್ಮಾಣ ಮಾಡಿದೆ. ‘ಕಾಂತಾರ’ ಚಿತ್ರದ ಪ್ರೀಕ್ವೆಲ್ ಆಗಿ ಈ ಸಿನಿಮಾ ಮೂಡಿ ಬರುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:03 am, Fri, 26 September 25