AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಟಾಕ್ಸಿಕ್’ನಲ್ಲಿ ಯಶ್​ಗೆ ಜೊತೆಯಾಗುತ್ತಿದ್ದಾರೆ ಬಾಲಿವುಡ್ ಬೆಡಗಿ: ಯಾರದು?

Yash: ಯಶ್ ನಟನೆಯ ಮುಂದಿನ ಸಿನಿಮಾ ‘ಟಾಕ್ಸಿಕ್’ನಲ್ಲಿ ಬಾಲಿವುಡ್​ನ ಜನಪ್ರಿಯ ನಟಿ ನಟಿಸಲಿದ್ದಾರೆ. ಯಾರವರು?

‘ಟಾಕ್ಸಿಕ್’ನಲ್ಲಿ ಯಶ್​ಗೆ ಜೊತೆಯಾಗುತ್ತಿದ್ದಾರೆ ಬಾಲಿವುಡ್ ಬೆಡಗಿ: ಯಾರದು?
ಯಶ್ ಸಿನಿಮಾ
ಮಂಜುನಾಥ ಸಿ.
|

Updated on: Jan 04, 2024 | 6:14 PM

Share

ಕೆಜಿಎಫ್’ (KGF) ಸಿನಿಮಾ ಸರಣಿ ಮೂಲಕ ಭಾರತದಾದ್ಯಂತ ಸಂಚಲನ ಮೂಡಿಸಿರುವ ನಟ ಯಶ್ ತಮ್ಮ ಹೊಸ ಸಿನಿಮಾದ ಘೋಷಣೆ ಮಾಡಿದ್ದಾರೆ. ಯಶ್ ‘ಟಾಕ್ಸಿಕ್’ ಹೆಸರಿನ ಸಿನಿಮಾ ಘೋಷಣೆ ಮಾಡಿದ್ದಾರೆ. ಈ ಸಿನಿಮಾಕ್ಕಾಗಿ ಭಾರತ ಮಾತ್ರವೇ ಅಲ್ಲದೆ ವಿದೇಶದ ಕೆಲವು ಅನುಭವಿ ತಂತ್ರಜ್ಞರನ್ನು ಕರೆತರುತ್ತಿದ್ದಾರೆ. ಮಲಯಾಳಂನ ನಿರ್ದೇಶಕಿ, ಹಾಲಿವುಡ್​ನ ಆಕ್ಷನ್ ನಿರ್ದೇಶಕ ಹೀಗೆ ಭಿನ್ನ ಪ್ರದೇಶಗಳ ಪ್ರತಿಭೆಗಳನ್ನು ಒಟ್ಟುಗೂಡಿಸುತ್ತಿದ್ದಾರೆ ಯಶ್. ಇದೀಗ ಸಿನಿಮಾದ ನಟರ ಆಯ್ಕೆಯಲ್ಲಿಯೂ ಇದೇ ಯೋಜನೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಸಿನಿಮಾದಲ್ಲಿ ಬಾಲಿವುಡ್​ನ ಖ್ಯಾತ ನಟಿಯೊಬ್ಬರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಯಶ್​ರ ಈ ಹಿಂದಿನ ಬ್ಲಾಕ್ ಬಸ್ಟರ್ ಸಿನಿಮಾ ‘ಕೆಜಿಎಫ್ 2’ನಲ್ಲಿ ಬಾಲಿವುಡ್ ಬೆಡಗಿ ರವೀನಾ ಟಂಡನ್ ಮುಖ್ಯವಾದ ಭೂಮಿಕೆ ನಿಭಾಯಿಸಿದ್ದರು. ಅವರ ರಮಿಕಾ ಸೇನ್ ಪಾತ್ರ ಸಖತ್ ಹಿಟ್ ಆಗಿತ್ತು. ಅದೇ ರೀತಿ ಈಗ ‘ಟಾಕ್ಸಿಕ್’ ಸಿನಿಮಾಕ್ಕೆ ರವೀನಾಗಿಂತಲೂ ದೊಡ್ಡ ಬಾಲಿವುಡ್ ಸ್ಟಾರ್ ನಟಿಯನ್ನು ಕರೆತರಲಾಗುತ್ತಿದೆ.

ಬಾಲಿವುಡ್​ನ ಸ್ಟಾರ್ ನಟಿ ಕರೀನಾ ಕಪೂರ್ ಅಲಿಯಾಸ್ ಬೇಬೋ ಯಶ್ ಜೊತೆಗೆ ‘ಟಾಕ್ಸಿಕ್’ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿಗೆ. ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲವಾದರೂ ಫಿಲಂಫೇರ್ ಸೇರಿದಂತೆ ಹಲವು ಬಾಲಿವುಡ್ ವೆಬ್​ಸೈಟ್​ಗಳು ಈ ಬಗ್ಗೆ ಸುದ್ದಿ ಬಿತ್ತರಿಸಿವೆ. ಅಂದಹಾಗೆ ಕೆಲವೇ ದಿನಗಳ ಹಿಂದೆ ಟಾಕ್ ಶೋ ಒಂದರಲ್ಲಿ ನಟಿ ಕರೀನಾ ಕಪೂರ್ ಯಶ್ ಅವರು ತಮಗೆ ಇಷ್ಟವೆಂದು, ಅವರೊಟ್ಟಿಗೆ ನಟಿಸುವ ಆಸೆಯಿದೆಯೆಂದು ಹೇಳಿಕೊಂಡಿದ್ದರು. ಅದರ ಬೆನ್ನಲ್ಲೆ ‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್ ಜೊತೆ ಕರೀನಾ ನಟಿಸುತ್ತಿದ್ದಾರೆ.

ಇದನ್ನೂ ಓದಿ:‘ಸಲಾರ್’ ನೋಡಿದ ‘ಕೆಜಿಎಫ್’ ನಟಿ ಅರ್ಚನಾ ಜೋಯಿಸ್ ಹೇಳಿದ್ದು ಹೀಗೆ…

ಕರೀನಾ ಕಪೂರ್, ‘ಟಾಕ್ಸಿಕ್’ ಸಿನಿಮಾದಲ್ಲಿ ನಾಯಕಿಯ ಪಾತ್ರದಲ್ಲಿ ನಟಿಸಲಿದ್ದಾರಾ ಅಥವಾ ಪ್ರಧಾನ ಪೋಷಕ ಪಾತ್ರದಲ್ಲಿ ನಟಿಸಲಿದ್ದಾರೆಯೇ ಎಂಬ ಬಗ್ಗೆ ಅನುಮಾನವಿದೆ. ‘ಟಾಕ್ಸಿಕ್’ ಸಿನಿಮಾಕ್ಕೆ ಪೂಜಾ ಹೆಗ್ಡೆ, ಸಾಯಿ ಪಲ್ಲವಿ ಹೆಸರುಗಳು ನಾಯಕಿ ಸ್ಥಾನಕ್ಕೆ ಕೇಳಿ ಬರುತ್ತಿವೆ. ಹಾಗಾಗಿ ಕರೀನಾ ನಾಯಕಿಯಾಗಿ ಅಲ್ಲ ಬದಲಿಗೆ ಪ್ರಧಾನ ಪೋಷಕ ಪಾತ್ರದಲ್ಲಿ ನಟಿಸುವ ಸಾಧ್ಯತೆ ಇದೆ.

‘ಟಾಕ್ಸಿಕ್’ ಸಿನಿಮಾ ಪಕ್ಕಾ ಆಕ್ಷನ್ ಸಿನಿಮಾ ಆಗಿದ್ದು, ಮಾದಕ ವಸ್ತು ಜಾಲದ ಸುತ್ತ ಸುತ್ತುವ ಕತೆ ಇದಾಗಿದೆ. ಸಿನಿಮಾದ ನಿರ್ದೇಶನವನ್ನು ಮಲಯಾಳಂನ ಜನಪ್ರಿಯ ನಟಿ, ನಿರ್ದೇಶಕಿ ನೀತು ಮೋಹನ್​ದಾಸ್ ನಿರ್ದೇಶನ ಮಾಡಲಿದ್ದಾರೆ. ಕೆವಿಎನ್ ಪ್ರೊಡಕ್ಷನ್ ನವರು ನಿರ್ಮಾಣ ಮಾಡುತ್ತಿದ್ದಾರೆ. ಹಾಲಿವುಡ್​ನ ಜನಪ್ರಿಯ ಆಕ್ಷನ್ ನಿರ್ದೇಶಕ ಜೆಜೆ ಪೆರ್ರಿ ಸಿನಿಮಾಕ್ಕಾಗಿ ಭಿನ್ನವಾದ ಸಾಹಸ ದೃಶ್ಯಗಳನ್ನು ಸೃಷ್ಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಹೋದ ಜೀವ ವಾಪಸ್‌ ಕೊಡ್ತೀರಾ? ಸಿದ್ದರಾಮಯ್ಯ ವಿರುದ್ಧ ಗುಡುಗಿದ ಈಶ್ವರಪ್ಪ
ಹೋದ ಜೀವ ವಾಪಸ್‌ ಕೊಡ್ತೀರಾ? ಸಿದ್ದರಾಮಯ್ಯ ವಿರುದ್ಧ ಗುಡುಗಿದ ಈಶ್ವರಪ್ಪ
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಇರಾನ್ ಸಹಾಯದಿಂದ ಅಲಿಪುರದಲ್ಲಿ ನಿರ್ಮಿಸಿದ್ದ IK ಆಸ್ಪತ್ರೆ ಇದೆ ನೋಡಿ
ಇರಾನ್ ಸಹಾಯದಿಂದ ಅಲಿಪುರದಲ್ಲಿ ನಿರ್ಮಿಸಿದ್ದ IK ಆಸ್ಪತ್ರೆ ಇದೆ ನೋಡಿ
ಇರಾನ್ ಅಧಿಪತಿ ಖಮನೈಗೂ ಚಿಕ್ಕಬಳ್ಳಾಪುರದ ಅಲೀಪುರ ಮುಸ್ಲಿಮರಿಗೂ ನಂಟು ಏನು?
ಇರಾನ್ ಅಧಿಪತಿ ಖಮನೈಗೂ ಚಿಕ್ಕಬಳ್ಳಾಪುರದ ಅಲೀಪುರ ಮುಸ್ಲಿಮರಿಗೂ ನಂಟು ಏನು?
ಖಮೇನಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಅದರಲ್ಲೇ ಸಿಗರೇಟ್ ಹೊತ್ತಿಸಿಕೊಂಡ ಯುವತಿ
ಖಮೇನಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಅದರಲ್ಲೇ ಸಿಗರೇಟ್ ಹೊತ್ತಿಸಿಕೊಂಡ ಯುವತಿ
ಚಂದ್ರ ಗ್ರಹಣದಂದು ಮಂತ್ರಾಲಯ ರಾಯರ ಮಠದಲ್ಲಿಲ್ಲ ಯಾವುದೇ ನಿರ್ಬಂಧ!
ಚಂದ್ರ ಗ್ರಹಣದಂದು ಮಂತ್ರಾಲಯ ರಾಯರ ಮಠದಲ್ಲಿಲ್ಲ ಯಾವುದೇ ನಿರ್ಬಂಧ!
ವಿದಾಯ ಪಂದ್ಯದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಅಲಿಸಾ ಹೀಲಿ
ವಿದಾಯ ಪಂದ್ಯದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಅಲಿಸಾ ಹೀಲಿ
‘ಹಯಗ್ರೀವ’ ಬಿಡುಗಡೆಗೆ ತೊಂದರೆ ಮಾಡಿದವರಿಗೆ ಧನ್ವೀರ್ ಗೌಡ ಖಡಕ್ ತಿರುಗೇಟು
‘ಹಯಗ್ರೀವ’ ಬಿಡುಗಡೆಗೆ ತೊಂದರೆ ಮಾಡಿದವರಿಗೆ ಧನ್ವೀರ್ ಗೌಡ ಖಡಕ್ ತಿರುಗೇಟು
ಮಾ.03 ಚಂದ್ರಗ್ರಹಣ; 15ನಿಮಿಷಗಳ ಕಾಲ ಗೋಚರಿಸುವ ಗ್ರಹಣದ ಪ್ರಭಾವ ಹೇಗಿರಲಿದೆ?
ಮಾ.03 ಚಂದ್ರಗ್ರಹಣ; 15ನಿಮಿಷಗಳ ಕಾಲ ಗೋಚರಿಸುವ ಗ್ರಹಣದ ಪ್ರಭಾವ ಹೇಗಿರಲಿದೆ?
ಡಿಸಿಎಂ ಡಿಕೆ ಶಿವಕುಮಾರ್ ಮನೆಗೆ ಬಂದವು 3 ಹೊಸ ಎಲೆಕ್ಟ್ರಿಕ್ ಕಾರು!
ಡಿಸಿಎಂ ಡಿಕೆ ಶಿವಕುಮಾರ್ ಮನೆಗೆ ಬಂದವು 3 ಹೊಸ ಎಲೆಕ್ಟ್ರಿಕ್ ಕಾರು!