
ಕಾಡ ನಟರಾಜ್ (Kaada Natraj) ಅವರು ಹೀರೋ ಆಗಿ ನಟಿಸಿರುವ ‘ಕರಿಕಾಡ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದಲ್ಲಿ ನಿರೀಕ್ಷಾ ಶೆಟ್ಟಿ ಅವರು ನಾಯಕಿಯಾಗಿ ಅಭಿನಯಿಸಿದ್ದಾರೆ. ಈಗಾಗಲೇ ಈ ಸಿನಿಮಾದ ಹಾಡು ನೋಡಿರುವ ಸಿನಿಪ್ರಿಯರಿಗೆ ಕುತೂಹಲ ಮತ್ತು ನಿರೀಕ್ಷೆ ಮೂಡಿದೆ. ಈ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ಸನ್ನಿವೇಶಗಳು ಇವೆ. ಅದನ್ನು ನೋಡಲು ಪ್ರೇಕ್ಷಕರು ಕಾದಿದ್ದಾರೆ. ಫೆಬ್ರವರಿ 6ರಂದು ‘ಕರಿಕಾಡ’ (Karikaada) ಸಿನಿಮಾ ರಿಲೀಸ್ ಆಗಲಿದೆ. ಅದು ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಎಂಬುದು ವಿಶೇಷ.
‘ಕರಿಕಾಡ’ ಸಿನಿಮಾಗೆ ಗಿಲ್ಲಿ ವೆಂಕಟೇಶ್ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರವನ್ನು ‘ರಿದ್ದಿ ಎಂಟರ್ಟೈನ್ಮೆಂಟ್’ ಬ್ಯಾನರ್ ಮೂಲಕ ದೀಪ್ತಿ ದಾಮೋದರ್ ಅವರು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದ ಶೀರ್ಷಿಕೆ ಕೂಡ ಡಿಫರೆಂಟ್ ಆಗಿದ್ದು, ಆ ಕಾರಣದಿಂದಲೂ ಕುತೂಹಲ ಮೂಡಿಸಿದೆ. ಶೀರ್ಷಿಕೆಯ ಅರ್ಥ ಏನು? ಚಿತ್ರದ ಥೀಮ್ ಏನು ಎಂಬುದು ಫೆಬ್ರವರಿ 6ರಂದು ತಿಳಿಯಲಿದೆ.
ಇದು ಪ್ಯಾನ್ ಇಂಡಿಯಾ ಸಿನಿಮಾಗಳ ಜಮಾನ. ಕನ್ನಡದ ಸಿನಿಮಾಗಳು ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿ ಗಮನ ಸೆಳೆಯುತ್ತಿವೆ. ‘ಕರಿಕಾಡ’ ಸಿನಿಮಾ ಸಹ ಕನ್ನಡದ ಜೊತೆ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ರಿಲೀಸ್ ಆಗಲಿದೆ. ಈಗಾಗಲೇ ಈ ಸಿನಿಮಾದ ಟೀಸರ್ ಬಿಡುಗಡೆಯಾಗಿ ಗಮನ ಸೆಳೆದಿದೆ.
ಟೀಸರ್ ನೋಡಿದರೆ ಇದೊಂದು ಪಕ್ಕ ಹಳ್ಳಿಗಾಡಿನ ಕಥೆ ಇರುವ ಅಡ್ವೆಂಚರಸ್ ಸಿನಿಮಾ ಎಂಬ ಸುಳಿವು ಸಿಗುತ್ತದೆ. ಕಾಡಿನಲ್ಲಿ ನಡೆಯುವ ಕಥೆ ಇದು. ದ್ವೇಷ, ಪ್ರತಿಕಾರ, ಪ್ರೀತಿ ಮುಂತಾದ ಭಾವನೆಗಳ ಮಿಶ್ರಣ ಕೂಡ ಇರಲಿದೆ. ಹೊಸ ಪ್ರತಿಭೆಗಳಿಂದ ತುಂಬಿರುವ ಈ ಸಿನಿಮಾದ ಹಾಡುಗಳು ಈಗಾಗಲೇ ಗಮನ ಸೆಳೆದಿವೆ. ಯಶ್ ಶೆಟ್ಟಿ, ಬಲರಾಜ್ ವಾಡಿ ಮುಂತಾದವರು ಈ ಚಿತ್ರದ ಪಾತ್ರವರ್ಗದಲ್ಲಿ ಇದ್ದಾರೆ.
ಇದನ್ನೂ ಓದಿ: ಗಮನ ಸೆಳೆಯುತ್ತಿದೆ ‘ಕರಿಕಾಡ’, ಆಸಕ್ತ ತಂಡದ ಸಾಹಸಮಯ ಪ್ರಯತ್ನ
‘ಕರಿಕಾಡ’ ಚಿತ್ರಕ್ಕೆ ಅತೀಶಯ ಜೈನ್ ಹಾಗೂ ಶಶಾಂಕ್ ಶೇಷಗಿರಿ ಅವರು ಸಂಗೀತ ಸಂಯೋಜಿಸಿದ್ದಾರೆ. ‘ರತುನಿ ರತುನಿ’ ಹಾಗೂ ‘ಕಬ್ಬಿನ್ ಜಲ್ಲೆ’ ಹಾಡುಗಳು ಬಿಡುಗಡೆ ಆಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. 3ನೇ ಹಾಡು ‘ನೀ ಯಾರೇ ನನಗೆ’ ಜ.28ಕ್ಕೆ ಬಿಡುಗಡೆ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.