‘ಕಲ್ಟ್ ಹಿಟ್ ಸಿನಿಮಾ’; ಚಿತ್ರದ ಕಲೆಕ್ಷನ್ ಲೆಕ್ಕ ಕೊಟ್ಟ ಝೈದ್ ಖಾನ್
ಝೈದ್ ಖಾನ್ ನಟನೆಯ 'ಕಲ್ಟ್' ಸಿನಿಮಾ ಜನವರಿ 23ರಂದು ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. 3 ದಿನಗಳಲ್ಲಿ ಚಿತ್ರ ಕೋಟಿ ಕೋಟಿ ಗಳಿಸಿದೆ. ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಝೈದ್ ಖಾನ್ ಇದನ್ನು 'ಪ್ಯೂರ್ ಕಲ್ಟ್ ಹಿಟ್' ಎಂದು ಘೋಷಿಸಿದ್ದಾರೆ.

ಸಚಿವ ಜಮೀರ್ ಅಹ್ಮದ್ ಮಗ ಝೈದ್ ಖಾನ್ (Zaid Khan) ಅವರು ‘ಬನಾರಸ್’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಈ ಸಿನಿಮಾ ಟೈಮ್ ಟ್ರಾವೆಲ್ ಕಥೆ ಹೊಂದಿತ್ತು. ಈ ಚಿತ್ರ ವಿಮರ್ಶಕರಿಂದ ಮೆಚ್ಚುಗೆ ಪಡೆಯಿತು. ಈಗ ಅವರು ‘ಕಲ್ಟ್’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರ ಹಿಟ್ ಆಗಿದೆ ಎಂದು ಅವರು ಘೋಷಣೆ ಮಾಡಿದ್ದಾರೆ. ಅವರು ಸಿನಿಮಾದ ಕಲೆಕ್ಷನ್ ಲೆಕ್ಕಾಚಾರವನ್ನು ನೀಡಿದ್ದಾರೆ.
‘ಕಲ್ಟ್’ ಸಿನಿಮಾ ಜನವರಿ 23ರಂದು ರಿಲೀಸ್ ಆಯಿತು. ಈ ಸಿನಿಮಾ ಎಷ್ಟು ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂಬ ಕುತೂಹಲ ಇತ್ತು. ಇದಕ್ಕೆ ಉತ್ತರ ಸಿಕ್ಕಿದೆ. ಸ್ವತಃ ಝೈದ್ ಖಾನ್ ಅವರು ಕಲೆಕ್ಷನ್ ವಿವರ ನೀಡಿದ್ದಾರೆ. ಈ ಚಿತ್ರ ಮೂರು ದಿನಗಳಲ್ಲಿ 3.87 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆಯಂತೆ. ಚಿತ್ರದ ಬಜೆಟ್ ಕಡಿಮೆ ಇರುವುದರಿಂದ ಸಿನಿಮಾ ತಂಡ ಲಾಭ ಕಾಣೋ ಸಾಧ್ಯತೆ ಅಧಿಕವಾಗಿದೆ.
ನಾಲ್ಕನೇ ದಿನವಾದ ಸೋಮವಾರ (ಜನವರಿ 26) ಸರ್ಕಾರಿ ರಜೆ ಇತ್ತು. ಇದು ಚಿತ್ರಕ್ಕೆ ಸಹಕಾರಿ ಆಗುವ ಸಾಧ್ಯತೆ ಇದೆ. ಈ ದಿನದಂದು ಜನರು ಹೆಚ್ಚಿನ ಸಂಖ್ಯೆಯಲ್ಲಿ ಸಿನಿಮಾ ವೀಕ್ಷಿಸಿರೋ ಸಾಧ್ಯತೆ ಇದೆ. ಹೀಗಾಗಿ, ಚಿತ್ರದ ಗಳಿಕೆ 5 ಕೋಟಿ ರೂಪಾಯಿ ಸಮೀಪಿಸಿರಬಹುದು ಎಂಬುದು ಬಾಕ್ಸ್ ಆಫೀಸ್ ಪಂಡಿತರ ಊಹೆ.
View this post on Instagram
ದೊಡ್ಡ ಬಜೆಟ್ ಸಿನಿಮಾ ಇರಲಿ, ಸಣ್ಣ ಬಜೆಟ್ ಇರಲಿ, ತಂಡದವರು ಕಲೆಕ್ಷನ್ ಲೆಕ್ಕ ಕೊಡೋದು ತುಂಬಾನೇ ಕಡಿಮೆ. ಆದರೆ, ಝೈದ್ ಖಾನ್ ಆ ರೀತಿ ಅಲ್ಲ. ಅವರು ಸಿನಿಮಾ ಕಲೆಕ್ಷನ್ ವಿವರ ನೀಡಿದ್ದಾರೆ. ಈ ಚಿತ್ರವನ್ನು ‘ಪ್ಯೂರ್ ಕಲ್ಟ್ ಹಿಟ್’ ಎಂದು ಅವರು ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ: ಹೌಸ್ಫುಲ್ ಪ್ರದರ್ಶನ ಕಂಡ ಝೈದ್ ಖಾನ್ ನಟನೆಯ ‘ಕಲ್ಟ್’ ಸಿನಿಮಾ
‘ಕಲ್ಟ್’ ಸಿನಿಮಾದಲ್ಲಿ ಲವ್ ಸ್ಟೋರಿ ಇದೆ. ಬ್ರೇಕಪ್ ಕಥೆ ಇದೆ. ನೊಂದ ಹೃದಯಗಳ ಕಥೆ ಇದೆ. ಈ ಚಿತ್ರದಲ್ಲಿ ಝೈದ್ ಖಾನ್ ಜೊತೆ ಮಲೈಕಾ ವಾಸುಪಾಲ್, ರಚಿತಾ ರಾಮ್ ಮೊದಲಾದವರು ನಟಿಸಿದ್ದಾರೆ. ಜನರಿಗೆ ಚಿತ್ರ ಕೆಲವರಿಗೆ ಇಷ್ಟ ಆಗಿದೆ. ಅನಿಲ್ ಕುಮಾರ್ ನಿರ್ದೇಶನ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




