ಕಾರ್ತಿಕ್ ಕಳಪೆ, ಉತ್ತಮ ಯಾರು? ಮನೆಯ ಕ್ಯಾಪ್ಟನ್ ಆಗಿದ್ಯಾರು?

Bigg Boss: ಕಾರ್ತಿಕ್ ರನ್ನು ಮನೆಯ ಮಂದಿ ಕಳಪೆ ಎಂದು ಘೋಷಿಸಿದ್ದಾರೆ. ಸಂಗೀತಾ ಗಾಯಗೊಂಡು ಹೊರಗಿದ್ದಿದ್ದರಿಂದ ಕಾರ್ತಿಕ್ ಕಳಪೆ ಆದರು. ಉತ್ತಮ ಯಾರು? ಮನೆಯ ಕ್ಯಾಪ್ಟನ್ ಯಾರಾದರು?

ಕಾರ್ತಿಕ್ ಕಳಪೆ, ಉತ್ತಮ ಯಾರು? ಮನೆಯ ಕ್ಯಾಪ್ಟನ್ ಆಗಿದ್ಯಾರು?
ಕಾರ್ತಿಕ್ ಗೌಡ
Follow us
ಮಂಜುನಾಥ ಸಿ.
|

Updated on: Dec 09, 2023 | 12:03 AM

ಈ ವಾರದ ಟಾಸ್ಕ್​ಗಳಲ್ಲಿ ಮನೆಯ ಹಲವು ಮಂದಿ ಕೆಟ್ಟದಾಗಿಯೇ ಆಡಿದ್ದರು, ಒಬ್ಬರು ರಾಕ್ಷಸತನ ತೋರಿದರೆ ಅದಕ್ಕೆ ಬದಲಾಗಿ ದುಪ್ಪಟ್ಟು ರಾಕ್ಷಸತನ ಪ್ರದರ್ಶಿಸಿದರು. ಆದರೆ ವಾರಾಂತ್ಯಕ್ಕೆ ಮುನ್ನ ಒಬ್ಬ ಕಳಪೆ ಹಾಗೂ ಒಬ್ಬ ಉತ್ತಮನ್ನು ಮಾತ್ರ ಆರಿಸುವ ಅವಕಾಶ ಮನೆಯ ಸದಸ್ಯರಿಗಿರುವುದು ನಿಯಮ. ಅಂತೆಯೇ ಮನೆಯ ಸದಸ್ಯರ ಬಹುಮತದಂತೆ ಕಾರ್ತಿಕ್ (Karthik Gowda) ಈ ವಾರದ ಕಳಪೆ ಸ್ಪರ್ಧಿಯಾದರು. ವಿನಯ್ ಜೊತೆ ಜಗಳ, ಅವಾಚ್ಯ ಶಬ್ದದ ಬಳಕೆ ಇನ್ನಿತರೆ ಕಾರಣಗಳನ್ನು ಸ್ಪರ್ಧಿಗಳು ನೀಡಿದರು. ಸಂಗೀತಾ ಗಾಯಗೊಂಡು ಹೊರಗೆ ಹೋಗಿದ್ದ ಕಾರಣ ಎಲ್ಲರ ಗುರಿ ಕಾರ್ತಿಕ್ ಆದರು ಎಂಬುದು ಸಹ ನಿಜವೇ.

ಈ ವಾರದ ಉತ್ತಮ ಇಬ್ಬರಾದರು ಎಂಬುದು ವಿಶೇಷ. ಅದರಲ್ಲಿಯೂ ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಬಂದ ಅವಿನಾಶ್ ಹಾಗೂ ಪವಿ ಇಬ್ಬರೂ ಸಮಾನ ಮತಗಳನ್ನು ಪಡೆದ ಕಾರಣ ಇಬ್ಬರಿಗೂ ಉತ್ತಮ ನೀಡಲಾಯ್ತು. ಅವಿನಾಶ್, ಟಾಸ್ಕ್ ಆಡುವ ಸಂದರ್ಭದಲ್ಲಿ ಯಾವುದೇ ದೂರು ಹೇಳದೆ, ಟಾಸ್ಕ್​ನ ನಿಯಮಗಳಿಗೆ ಬದ್ಧವಾಗಿದ್ದ ಕಾರಣ ಅವರು ಉತ್ತಮ ಎನ್ನಿಸಿಕೊಂಡರು. ಟಾಸ್ಕ್​ಗಳಲ್ಲಿ ಅಗ್ರೆಶನ್ ತೋರಿಸಿದ್ದಕ್ಕೆ ಹಾಗೂ ಚೇರ್ ಟಾಸ್ಕ್​ನಲ್ಲಿ ಏಳದೆ ಕೂತೇ ಇದ್ದು ತಂಡವನ್ನು ಗೆಲ್ಲಿಸಿದ್ದಕ್ಕೆ ಪವಿಗೆ ಉತ್ತಮ ನೀಡಲಾಯ್ತು.

ಇನ್ನು ಮನೆಯ ಕ್ಯಾಪ್ಟನ್ಸಿ ಟಾಸ್ಕ್​ಗೆ ಸ್ಪರ್ಧಿಗಳನ್ನು ಆಯ್ಕೆ ಮಾಡುವ ಜವಾಬ್ದಾರಿ ಈ ಬಾರಿ ಸ್ನೇಹಿತ್​ಗೆ ನೀಡಲಾಗಿತ್ತು, ಕಳೆದ ವಾರದ ಕ್ಯಾಪ್ಟನ್ ಆಗಿದ್ದ ಸ್ನೇಹಿತ್ ಮನೆಯ ಯಾವ ಸದಸ್ಯರು ಕ್ಯಾಪ್ಟೆನ್ಸಿ ಟಾಸ್ಕ್ ಆಡಬಹುದು ಎಂದು ನಿರ್ಧರಿಸುವ ಅಧಿಕಾರವನ್ನು ಬಿಗ್​ಬಾಸ್​ನಿಂದ ಪಡೆದಿದ್ದರು.

ಇದನ್ನೂ ಓದಿ:‘ವಿನಯ್, ನಮ್ರತಾ ನಿಯಮ ಪಾಲಿಸಿಲ್ಲ’; ಇಬ್ಬರನ್ನೂ ಕ್ಯಾಪ್ಟನ್ಸಿ ಟಾಸ್ಕ್​ನಿಂದ ಹೊರಗಿಟ್ಟ ಸ್ನೇಹಿತ್

ಮೊದಲಿಗೆ ಸಂಗೀತಾ ಹಾಗೂ ಕಾರ್ತಿಕ್​ರನ್ನು ಕ್ಯಾಪ್ಟೆನ್ಸಿ ಟಾಸ್ಕ್​ನಿಂದ ಆಚೆ ಇಟ್ಟರು, ಬಳಿಕ ತಮ್ಮದೇ ಗೆಳೆಯರಾದ ವಿನಯ್ ಹಾಗೂ ನಮ್ರತಾರನ್ನು ತೆಗೆದರು. ಇದು ನಮ್ರತಾಗೆ ತೀವ್ರ ಬೇಸರ ಮೂಡಿಸಿತು. ಬಳಿಕ ತನಿಷಾ, ಡ್ರೋಪ್ ಪ್ರತಾಕ್, ತುಕಾಲಿ ಸಂತು, ಪವಿ ಅವರುಗಳನ್ನು ಕ್ಯಾಪ್ಟೆನ್ಸಿ ಟಾಸ್ಕ್​ನಿಂದ ಹೊರತೆಗೆದರು.

ಉಳಿದ ಸಿರಿ, ಅವಿನಾಶ್, ಮೈಖಲ್, ವರ್ತೂರು ಸಂತೋಷ್​ ನಡುವೆ ಟಾಸ್ಕ್​ ನಡೆಯಿತು. ತಿರುಗುವ ಕುರ್ಚಿಯ ಮೇಲೆ ಕೂತು, ಮನೆಯ ಸದಸ್ಯರೆಲ್ಲ ಮಾಡುತ್ತಿರುವ ಗಲಾಟೆಯ ನಡುವೆ 13 ನಿಮಿಷಗಳನ್ನು ಮನಸ್ಸಿನಲ್ಲಿಯೇ ಎಣಿಸಿ ಸರಿಯಾಗಿ ಗಂಟೆ ಹೊಡೆಯುವವರು ಟಾಸ್ಕ್ ಗೆಲ್ಲುತ್ತಾರೆ ಎಂಬುದು ನಿಯಮವಾಗಿತ್ತು. 13 ನಿಮಿಷಕ್ಕೆ 45 ಸೆಕೆಂಡ್​ಗಳಷ್ಟೆ ಕಡಿಮೆ ಲೆಕ್ಕಹಾಕಿ ಗಂಟೆ ಹೊಡೆದ ವರ್ತೂರು ಸಂತೋಷ್​ ಕ್ಯಾಪ್ಟನ್ ಆದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್