ಶ್ರೇಯಸ್ ಮಂಜು ನಟನೆಯ ‘ದಿಲ್ ದಾರ್’ ಚಿತ್ರಕ್ಕೆ ಶರಣ್ ಸೊಸೆ ಕೀರ್ತಿ ಕೃಷ್ಣ ನಾಯಕಿ

|

Updated on: Jan 13, 2025 | 6:44 PM

ಯುಗಾದಿ ಹಬ್ಬದ ಆಸುಪಾಸಲ್ಲಿ ‘ದಿಲ್ ದಾರ್’ ಸಿನಿಮಾ ಬಿಡುಗಡೆ ಆಗುವ ಸಾಧ್ಯತೆ ಇದೆ. ಈ ಚಿತ್ರದಲ್ಲಿ ಶ್ರೇಯಸ್ ಮಂಜು, ಕೀರ್ತಿ ಕೃಷ್ಣ ಜೊತೆ ಸಾಧು ಕೋಕಿಲ, ಕಾರ್ತಿಕ್, ಚಂದ್ರಪ್ರಭ, ಚಿಲ್ಲರ್ ಮಂಜು, ಭಜರಂಗಿ ಲೋಕಿ, ಅರ್ಪಿತ್ ಮುಂತಾದವರು ನಟಿಸಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸಿಕೊಂಡ ‘ದಿಲ್​ ದಾರ್​’ ಚಿತ್ರತಂಡ ಒಂದಷ್ಟು ಮಾಹಿತಿ ಹಂಚಿಕೊಂಡಿದೆ.

ಶ್ರೇಯಸ್ ಮಂಜು ನಟನೆಯ ‘ದಿಲ್ ದಾರ್’ ಚಿತ್ರಕ್ಕೆ ಶರಣ್ ಸೊಸೆ ಕೀರ್ತಿ ಕೃಷ್ಣ ನಾಯಕಿ
Keerthy Krishna, Shreyas Manju
Follow us on

ಯುವ ನಟ ಶ್ರೇಯಸ್ ಮಂಜು ಅವರ ‘ದಿಲ್ ದಾರ್’ ಸಿನಿಮಾದ ಬಗ್ಗೆ ಒಂದಷ್ಟು ಅಪ್​ಡೇಟ್ಸ್​ ಸಿಕ್ಕಿವೆ. ಸದ್ದು ಗದ್ದಲ ಇಲ್ಲದೇ ಈ ಸಿನಿಮಾಗೆ ಬಹುಪಾಲು ಶೂಟಿಂಗ್​ ಪೂರ್ಣಗೊಳಿಸಲಾಗಿದೆ. ಮಧು ಗೌಡ ಗಂಗೂರ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಒಂದು ಹಾಡಿನ ಶೂಟಿಂಗ್ ಮಾತ್ರ ಬಾಕಿ ಉಳಿದುಕೊಂಡಿದೆ. ಬಹುತೇಕ ಚಿತ್ರೀಕರಣ ಮುಕ್ತಾಯ ಆಗಿದ್ದರೂ ಕೂಡ ಈ ಚಿತ್ರಕ್ಕೆ ನಾಯಕಿ ಯಾರು ಎಂಬುದನ್ನು ಚಿತ್ರತಂಡ ಬಹಿರಂಗಪಡಿಸಿರಲಿಲ್ಲ. ಈಗ ಆ ಕುರಿತು ಮಾಹಿತಿ ಹಂಚಿಕೊಳ್ಳಲಾಗಿದೆ. ‘ದಿಲ್ ದಾರ್’ ಸಿನಿಮಾಗೆ ಖ್ಯಾತ ನಟ ಶರಣ್ ಅವರ ಸೊಸೆ ಕೀರ್ತಿ ಕೃಷ್ಣ ಅವರು ನಾಯಕಿ ಆಗಿದಾರೆ.

ಚಿತ್ರರಂಗದಲ್ಲಿ ಕೀರ್ತಿ ಕೃಷ್ಣ ಅವರಿಗೆ ಹೊಸ ಹೊಸ ಆಫರ್​ಗಳು ಬರುತ್ತಿವೆ. ನಟ ಶರಣ್ ಅವರ ತಂಗಿ ಉಷಾ ಕೃಷ್ಣ ಅವರ ಮಗಳಾದ ಕೀರ್ತಿ ಕೃಷ್ಣ ಈಗಾಗಾಲೇ ಸಿಂಪಲ್ ಸುನಿ ನಿರ್ದೇಶನ ಮುಂಬರುವ ಸಿನಿಮಾಗೂ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈಗ ‘ದಿಲ್ ದಾರ್’ ಸಿನಿಮಾದಲ್ಲೂ ನಾಯಕಿಯಾಗಿ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಶ್ರೇಯಸ್​ ಮಂಜು ಹಾಗೂ ಕೀರ್ತಿ ಕೃಷ್ಣ ಅವರು ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ನಿರ್ದೇಶಕ ಮಧು ಗೌಡ ಅವರು ಚಿತ್ರರಂಗದಲ್ಲಿ ಅನುಭವ ಇದೆ. ಸಿದ್ಧಸೂತ್ರಗಳ ಚೌಕಟ್ಟನ್ನು ಮೀರಿ ಬೇರೆ ರೀತಿಯ ಲವ್ ಸ್ಟೋರಿಯನ್ನು ಈ ಸಿನಿಮಾದಲ್ಲಿ ತೋರಿಸಲಿದ್ದಾರೆ ಎಂದು ಚಿತ್ರತಂಡ ಹೇಳಿದೆ. ಕಥೆ ಡಿಫರೆಂಟ್​ ಆಗಿರುವ ಕಾರಣ ಶ್ರೇಯಸ್ ಮಂಜು ಅವರು ಬಹಳ ಖುಷಿಯಿಂದಲೇ ಈ ಸಿನಿಮಾವನ್ನು ಒಪ್ಪಿಕೊಂಡರು. ವೇಗವಾಗಿ ಶೂಟಿಂಗ್​ ಪೂರ್ಣಗೊಳಿಸಿಕೊಂಡ ಚಿತ್ರತಂಡ ಈಗ ಒಂದು ಹಾಡಿನ ಶೂಟಿಂಗ್ ಮಾಡುವುದು ಬಾಕಿ ಇದೆ.

ಇದನ್ನೂ ಓದಿ: Choo Mantar Review: ‘ಛೂ ಮಂತರ್’ ವಿಮರ್ಶೆ; ತಿರುವುಗಳ ಹಾದಿಯಲ್ಲಿ ಅಮಾನುಷ ಶಕ್ತಿಗಳ ಕಾಟ

ಬಹಳ ಅದ್ದೂರಿಯಾಗಿ ಮತ್ತು ವಿಶೇಷವಾಗಿ ಈ ಹಾಡನ್ನು ಚಿತ್ರಿಸಲು ‘ದಿಲ್​ ದಾರ್’ ತಂಡ ಸಿದ್ಧತೆ ಮಾಡಿಕೊಂಡಿದೆ. ಅರ್ಜುನ್ ಜನ್ಯ ಅವರು ಹಾಡಿಗೆ ಸಂಗೀತ ನೀಡಿದ್ದಾರೆ. ಈ ಹಾಡಿನಲ್ಲಿ ಡ್ಯಾನ್ಸ್ ಕೂಡ ಸ್ಪೆಷಲ್​ ಆಗಿರಲಿದೆ ಎಂದು ‘ದಿಲ್ ದಾರ್​’ ತಂಡ ಹೇಳಿದೆ. ಈ ಹಾಡಿಗಾಗಿ ಶ್ರೇಯಸ್ ಮಂಜು ಅವರು ಸಾಕಷ್ಟು ರಿಹರ್ಸಲ್​ ಮಾಡುತ್ತಿದ್ದಾರೆ. ಹಾಡಿನ ಚಿತ್ರೀಕರಣದ ಬಳಿಕ ಸಿನಿಮಾ ಬಿಡುಗಡೆ ಬಗ್ಗೆ ಮಾಹಿತಿ ಹೊರಬೀಳಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.