ಕೆಜಿಎಫ್ ಸಿನಿಮಾ ತೆರೆಕಂಡ ನಂತರದಲ್ಲಿ ಯಶ್ ಹೆಸರು ದೇಶಾದ್ಯಂತ ಖ್ಯಾತಿ ಪಡೆದುಕೊಂಡಿದೆ. ಬಾಲಿವುಡ್ ಮಂದಿ ಕೂಡ ಸ್ಯಾಂಡಲ್ವುಡ್ನತ್ತ ಮುಖ ಮಾಡುವಂತೆ ಮಾಡಿದ್ದು ಕೆಜಿಎಫ್ ಸಿನಿಮಾ. ಈಗ ಯಶ್ ಖ್ಯಾತಿ ದಿನಕಳೆದಂತೆ ಹೆಚ್ಚುತ್ತಲೇ ಇದೆ. ವಿಶೇಷ ಎಂದರೆ, ಫೋರ್ಬ್ಸ್ ರಿಲೀಸ್ ಮಾಡಿರುವ ಸೌತ್ ಸೆಲೆಬ್ರಿಟಿ ಸ್ಪೆಷಲ್ ಎಡಿಷನ್ನಲ್ಲಿ ಯಶ್ ಫೋಟೋ ಕೂಡ ರಾರಾಜಿಸಿದೆ. ಇದು ಫ್ಯಾನ್ಸ್ಗೆ ಸಖತ್ ಖುಷಿ ನೀಡಿದೆ.
ಫೋರ್ಬ್ಸ್ ಮ್ಯಾಗಜಿನ್ ತುಂಬಾನೇ ಫೇಮಸ್. ಇದರ ಮುಖಪುಟದಲ್ಲಿ ಫೋಟೋ ಬರಬೇಕು ಎಂದರೆ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರಬೇಕು. ಈ ಮ್ಯಾಗಜಿನ್ ದೇಶಮಟ್ಟದಲ್ಲಿ ಬಿಡುಗಡೆ ಆಗುತ್ತದೆ. ಆದರೆ, ಇದೇ ಮೊದಲಬಾರಿಗೆ ಫೋರ್ಬ್ಸ್ ದಕ್ಷಿಣ ಭಾರತದ ಸೆಲೆಬ್ರಿಟಿಗಳನ್ನೇ ಇಟ್ಟುಕೊಂಡು ವಿಶೇಷ ಎಡಿಷನ್ ರಿಲೀಸ್ ಮಾಡಿದೆ. ಅಂದರೆ, ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯನ್ನು ಈ ಎಡಿಷನ್ನಲ್ಲಿ ಸೇರಿಸಲಾಗಿದೆ. ಕನ್ನಡದಿಂದ ಯಶ್, ತಮಿಳಿನಿಂದ ನಯನತಾರಾ, ಮಲಯಾಳಂನಿಂದ ದುಲ್ಖರ್ ಸಲ್ಮಾನ್ ಫೋಟೋ ಮ್ಯಾಗಜಿನ್ ಮುಖಪುಟದಲ್ಲಿದೆ.
A sneak peek into our cover stories
Inside Forbes India’s first-ever South celebrity special edition. Subscribe to get early access to our #SouthCelebritySpecial
By @divyajshekhar https://t.co/1Bs5IU30os
— Forbes India (@forbes_india) October 11, 2021
ಈ ಬಗ್ಗೆ ಫೋರ್ಬ್ಸ್ ಟ್ವಿಟರ್ನಲ್ಲಿ ವಿಡಿಯೋ ಪೋಸ್ಟ್ ಮಾಡಿದೆ. ಯಶ್ ಕಪ್ಪು ಬಣ್ಣದ ಕೋಟ್ ಹಾಗೂ ಬಿಳಿ ಶರ್ಟ್ನಲ್ಲಿ ಮಿಂಚಿದ್ದಾರೆ. ಯಶ್ ಹೇರ್ಸ್ಟೈಲ್ ಅಭಿಮಾನಿಗಳಿಗೆ ಸಖತ್ ಇಷ್ಟವಾಗಿದೆ. ಇನ್ನು ಯಶ್ ಫೋಟೋ ವೈರಲ್ ಆಗುತ್ತಿದ್ದಂತೆ ಕೆಜಿಎಫ್ ಚಾಪ್ಟರ್ 2 ಹಾಗೂ ಯಶ್ ಬಾಸ್ ಹ್ಯಾಶ್ಟ್ಯಾಗ್ಗಳು ಟ್ರೆಂಡ್ ಆಗಿದೆ.
Another One ?
Smart Look From @TheNameIsYash BOSS ❤️?#KGFChapter2 #YashBOSS pic.twitter.com/1DGidUCXu5— Telugu Yash Fans Club ™ కె జి ఎఫ్ (@YashTeluguFc) October 11, 2021
National Star @TheNameIsYash BOSS ??#KGFChapter2 #YashBOSS pic.twitter.com/c8V8q8hAZa
— Telugu Yash Fans Club ™ కె జి ఎఫ్ (@YashTeluguFc) October 11, 2021
” Fields Of Gold ”
A Deep Dive Into Yash’s Journey From Mysuru
To Bengaluru To a h
Household Name of
PAN INDIAN STAR @TheNameIsYash BOSS @Forbes@forbes_india #KGFChapter2 #YashBOSS #forbesindia#KGF2onApr14 #KGF2 #KGF pic.twitter.com/nAHu4miwF9— Worldwide Yash Fans (@OfficialYashFc) October 11, 2021
ಬಾಲಿವುಡ್ ವಲಯದಲ್ಲಿ ಆಲಿಮ್ ಹಕೀಮ್ ಖ್ಯಾತಿ ದೊಡ್ಡದು. ಘಟಾನುಘಟಿ ಸೆಲೆಬ್ರಿಟಿಗಳಿಗೆಲ್ಲ ಅವರು ಕೇಶ ವಿನ್ಯಾಸ ಮಾಡಿದ್ದಾರೆ. ಅಮಿತಾಭ್ ಬಚ್ಚನ್, ಸಂಜತ್ ದತ್, ಅರ್ಜುನ್ ರಾಮ್ಪಾಲ್, ಹೃತಿಕ್ ರೋಷನ್, ಹಾರ್ದಿಕ್ ಪಾಂಡ್ಯ ಮುಂತಾದ ಸೆಲೆಬ್ರಿಟಿಗಳಿಗೆ ಹೇರ್ ಸ್ಟೈಲ್ ಮಾಡಿದ ಖ್ಯಾತಿ ಅವರಿಗೆ ಸಲ್ಲುತ್ತಿದೆ. ಈ ಬಾರಿ ಯಶ್ಗೆ ಕೇಶ ವಿನ್ಯಾಸ ಮಾಡಿರುವ ಒಂದು ವಿಡಿಯೋವನ್ನು ಆಲಿಮ್ ಹಕೀಮ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಅದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಸಾವಿರಾರು ಅಭಿಮಾನಿಗಳು ಕಮೆಂಟ್ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಫೋರ್ಬ್ಸ್ ಫೋಟೋಶೂಟ್ಗಾಗಿಯೇ ಅವರು ಆಲಿಮ್ ಸಲೂನ್ಗೆ ಭೇಟಿ ನೀಡಿದ್ದರು ಎನ್ನಲಾಗುತ್ತಿದೆ.
ಇದನ್ನೂ ಓದಿ: ಆಲಿಮ್ ಹಕೀಮ್ ಸಲೂನ್ನಲ್ಲಿ ಯಶ್; ಕೆರಳಿದ ಸಿಂಹದಂತಿರುವ ಹೇರ್ ಸ್ಟೈಲ್ ವಿಡಿಯೋ ವೈರಲ್
Published On - 5:14 pm, Mon, 11 October 21