ಡಿಸೆಂಬರ್ 21ಕ್ಕೆ ಕೆಜಿಎಫ್-2 ತಂಡದಿಂದ ಬಿಗ್ ಸರ್ಪ್ರೈಸ್: ಏನಿರಬಹುದು?
ಟ್ಟರ್ನಲ್ಲಿ ಬರೆದುಕೊಂಡಿರುವ ಕೆಜಿಎಫ್ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ, ಇನ್ನು ಎರಡೇ ದಿನ ಹೊಸ ಅಪ್ಡೇಟ್ ಕೊಡುತ್ತೇವೆ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ, ಸಿನಿಮಾ ತಂಡದ ಪರವಾಗಿ ಅಭಿಮಾನಿಗಳಿಗೆ ಪತ್ರ ಕೂಡ ಬರೆದಿದ್ದಾರೆ.
2018ರ ಡಿಸೆಂಬರ್ 21ರಂದು ಕೆಜಿಎಫ್-1 ಸಿನಿಮಾ ತೆರೆಗೆ ಬಂದಿತ್ತು. ಇದಾಗಿ ಎರಡು ವರ್ಷಗಳೇ ಕಳೆದಿವೆ. ಸಿನಿಮಾದ ಕೆಲ ಪೋಸ್ಟರ್ಗಳನ್ನು ಹೊರತುಪಡಿಸಿದರೆ ಚಿತ್ರತಂಡದಿಂದ ಯಾವುದೇ ಹೊಸ ಅಪ್ಡೇಟ್ ಸಿಕ್ಕಿಲ್ಲ. ಈಗ ಚಿತ್ರತಂಡ ಡಿಸೆಂಬರ್ 21ರಂದೇ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡೋಕೆ ಮುಂದಾಗಿದೆ.
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇದೇ ಅಕ್ಟೋಬರ್ನಲ್ಲಿ ಕೆಜಿಎಫ್ ಚಾಪ್ಟರ್ 2 ತೆರೆಕಾಣಬೇಕಿತ್ತು. ಆದರೆ, ಕೊರೊನಾ ವೈರಸ್ ಕಾರಣದಿಂದ ಚಿತ್ರಮಂದಿರಗಳು ಮುಚ್ಚಲ್ಪಟ್ಟವು. ಬಾಕಿ ಉಳಿದಿದ್ದ ಒಂದು ತಿಂಗಳ ಶೂಟಿಂಗ್ ಕೂಡ ನಿಂತು ಹೋಗಿತ್ತು. ಇನ್ನು, ಕೆಜಿಎಫ್-2ನ ಪ್ರಮುಖ ಖಳ ಸಂಜಯ್ ದತ್ಗೆ ಅನಾರೋಗ್ಯ ಕಾಣಿಸಿಕೊಂಡಿದ್ದು ಕೂಡ ಚಿತ್ರದ ಶೂಟಿಂಗ್ಗೆ ಹಿನ್ನಡೆ ಆಗಿತ್ತು. ಆದರೆ, ಈಗ ಚಿತ್ರತಂಡ ಎಲ್ಲ ಸಮಸ್ಯೆಗಳನ್ನು ಮೆಟ್ಟಿನಿಂತು ಚಿತ್ರೀಕರಣ ಪೂರ್ಣಗೊಳಿಸಿದೆ. ಇದೇ ಸಂದರ್ಭದಲ್ಲಿ ಹೊಸ ಘೋಷಣೆ ಮಾಡೋಕು ಮುಂದಾಗಿದೆ.
ಈ ಬಗ್ಗೆ ಟ್ವಿಟ್ಟರ್ನಲ್ಲಿ ಬರೆದುಕೊಂಡಿರುವ ಕೆಜಿಎಫ್ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ, ಇನ್ನು ಎರಡೇ ದಿನ ಹೊಸ ಅಪ್ಡೇಟ್ ಕೊಡುತ್ತೇವೆ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ, ಸಿನಿಮಾ ತಂಡದ ಪರವಾಗಿ ಅಭಿಮಾನಿಗಳಿಗೆ ಲೆಟರ್ ಕೂಡ ಬರೆದಿದ್ದಾರೆ.
ಪತ್ರದಲ್ಲಿ ಏನಿದೆ ನಾವು ಕೆಜಿಎಫ್ ಚಾಪ್ಟರ್-2ನ ಕೊನೆಯ ಹಂತದಲ್ಲಿದ್ದೇವೆ. ಹೀಗಾಗಿ ನಾವು ಡಿಸೆಂಬರ್ 21ರಂದು ಹೊಸ ಘೋಷಣೆ ಮಾಡುತ್ತಿದ್ದೇವೆ. ನಮ್ಮ ತಂಡದಿಂದ ಅಭಿಮಾನಿಗಳಿಗೆ ಈ ಬಾರಿಯೂ ಟ್ರೀಟ್ ಸಿಗಲಿದೆ. ಡಿಸೆಂಬರ್ 21ರ ಬೆಳಗ್ಗೆ 10:08 ಗಂಟೆಗೆ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಘೋಷಣೆ ಆಗಲಿದೆ. ನಮ್ಮ ಪಯಣಕ್ಕೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ ಎಂದು ಕಾರ್ತಿಕ್ ಬರೆದುಕೊಂಡಿದ್ದಾರೆ.
2 days guru. Update kodteevi ?#KGFChapter2@hombalefilms @vkiragandur @TheNameIsYash @prashanth_neel pic.twitter.com/YlULdtruYz
— Karthik Gowda (@Karthik1423) December 19, 2020
ಘೋಷಣೆ ಆಗೋದೇನು? ಈ ಮೊದಲೇ ಹೇಳಿದಂತೆ ಯಶ್ ಜನ್ಮದಿನದ ಅಂಗವಾಗಿ ಜನವರಿ 8ರಂದು ಟೀಸರ್ ರಿಲೀಸ್ ಆಗುತ್ತಿದೆ. ಹೀಗಾಗಿ, ಡಿಸೆಂಬರ್ 21ರಂದು ಕೆಜಿಎಫ್ 2 ಟೀಸರ್ ಬಿಡುಗಡೆ ಆಗುವುದು ಅನುಮಾನವೇ. ಮೂಲಗಳ ಪ್ರಕಾರ ಸೋಮವಾರ ಹೊಸ ಪೋಸ್ಟರ್ ರಿಲೀಸ್ ಆಗಲಿದೆಯಂತೆ. ಇಲ್ಲದಿದ್ದರೆ, ಕೆಜಿಎಫ್-2 ಯಾವಾಗ ರಿಲೀಸ್ ಆಗಲಿದೆ ಎನ್ನುವ ಬಗ್ಗೆ ಘೋಷಣೆ ಆಗುವ ಸಾಧ್ಯತೆ ಕೂಡ ಇದೆ ಎನ್ನಲಾಗುತ್ತಿದೆ.
ಅನಂತ್ನಾಗ್ ಔಟ್? ಯಶ್ ಮುಖ್ಯಭೂಮಿಕೆ ನಿರ್ವಹಿಸಿರುವ ಕೆಜೆಎಫ್-2ನಲ್ಲಿ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಬಾರಿ ಪ್ರಮುಖ ಖಳನಾಗಿ ಸಂಜಯ್ ದತ್ ಬಣ್ಣ ಹಚ್ಚುತ್ತಿದ್ದಾರೆ. ಬಾಲಿವುಡ್ ನಟಿ ರವೀನಾ ಟಂಡನ್ ಕೂಡ ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಇನ್ನು ದಕ್ಷಿಣ ಭಾರತದ ಪ್ರಮುಖ ನಟ ಪ್ರಕಾಶ್ ರಾಜ್ ಕೂಡ ಚಿತ್ರದಲ್ಲಿದ್ದಾರೆ. ಅನಂತ್ನಾಗ್ ಚಿತ್ರತಂಡದಿಂದ ಹೊರ ನಡೆದಿದ್ದಾರೆ ಎನ್ನುವ ಮಾಹಿತಿ ಇದೆಯಾದರೂ ಚಿತ್ರತಂಡ ಖಚಿತ ಪಡಿಸಿಲ್ಲ. ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರಕ್ಕೆ ವಿಜಯ್ ಕಿರಗಂದೂರು ಬಂಡವಾಳ ಹಾಕುತ್ತಿದ್ದಾರೆ.
ಕೆಜಿಎಫ್ 2 ಕ್ಲೈಮ್ಯಾಕ್ಸ್ ಶೂಟಿಂಗ್: ಪ್ರಶಾಂತ್ ನೀಲ್ ಬೇಡಿಕೆಗೆ ನೋ ಎಂದ ಸಂಜಯ್ ದತ್