ಅಂತಿಮವಾಗಿ ‘ಕೆಜಿಎಫ್ 2’ ಮಾಡಿದ ಕಲೆಕ್ಷನ್ ಎಷ್ಟು? ಇಲ್ಲಿದೆ ಬಾಕ್ಸ್ ಆಫೀಸ್ ಲೆಕ್ಕಾಚಾರ

ಬಾಲಿವುಡ್ ಮಂದಿಯೂ ಚಿತ್ರವನ್ನು ಮುಗಿಬಿದ್ದು ವೀಕ್ಷಿಸಿದರು. ಮೊದಲ ದಿನ ಬಾಲಿವುಡ್ ಒಂದರಲ್ಲೇ ಈ ಸಿನಿಮಾ 50+ ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು.

ಅಂತಿಮವಾಗಿ ‘ಕೆಜಿಎಫ್ 2’ ಮಾಡಿದ ಕಲೆಕ್ಷನ್ ಎಷ್ಟು? ಇಲ್ಲಿದೆ ಬಾಕ್ಸ್ ಆಫೀಸ್ ಲೆಕ್ಕಾಚಾರ
ಯಶ್
Updated By: ರಾಜೇಶ್ ದುಗ್ಗುಮನೆ

Updated on: Jun 19, 2022 | 7:55 PM

‘ಕೆಜಿಎಫ್: ಚಾಪ್ಟರ್ 2’ ಸಿನಿಮಾ (KGF: Chapter 2) ತೆರೆಗೆ ಬಂದು ಎರಡು ತಿಂಗಳ ಮೇಲಾಗಿದೆ. ಈ ಚಿತ್ರದಿಂದ ವಿಜಯ್ ಕಿರಗಂದೂರು ಒಡೆತನದ ಹೊಂಬಾಳೆ ಫಿಲ್ಮ್ಸ್​​ಗೆ (Hombale Films) ಕೋಟಿಕೋಟಿ ಹರಿದು ಬಂದಿದೆ. ಈ ಸಿನಿಮಾ ಹಲವು ದಾಖಲೆಗಳನ್ನು ಬರೆದಿದೆ. ಯಶ್ ಚಿತ್ರ ಬಾಲಿವುಡ್​ನಲ್ಲೂ ಹತ್ತು ಹಲವು ದಾಖಲೆಗಳನ್ನು ಸೃಷ್ಟಿ ಮಾಡಿದೆ. ಈ ಚಿತ್ರದಿಂದ ಯಶ್​ಗೆ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಸಿಕ್ಕಿದೆ. ಇಷ್ಟು ದೊಡ್ಡ ಮಟ್ಟದಲ್ಲಿ ಹಿಟ್ ಆದ ಈ ‘ಕೆಜಿಎಫ್ 2’ ಅಂತಿಮವಾಗಿ ಬಾಕ್ಸ್ ಆಫೀಸ್​ನಲ್ಲಿ ಗಳಿಸಿದ್ದೆಷ್ಟು ಎಂಬ ಬಗ್ಗೆ ಇಲ್ಲಿದೆ ವಿವರ.

ಏಪ್ರಿಲ್ 14ರಂದು ‘ಕೆಜಿಎಫ್ 2’ ರಿಲೀಸ್ ಆಯಿತು. ಈ ಸಿನಿಮಾಗೆ ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ‘ಕೆಜಿಎಫ್’ ಚಿತ್ರದಿಂದ ಪ್ರಶಾಂತ್ ನೀಲ್ ಕಸುಬುಗಾರಿಕೆ ಎಲ್ಲರಿಗೂ ತಿಳಿದಿತ್ತು. ಹೀಗಾಗಿ, ಬಾಲಿವುಡ್ ಮಂದಿಯೂ ಚಿತ್ರವನ್ನು ಮುಗಿಬಿದ್ದು ವೀಕ್ಷಿಸಿದರು. ಮೊದಲ ದಿನ ಬಾಲಿವುಡ್ ಒಂದರಲ್ಲೇ ಈ ಸಿನಿಮಾ 50+ ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು.

ಒಟ್ಟಾರೆ ‘ಕೆಜಿಎಫ್: ಚಾಪ್ಟರ್ 2’ ಬಂಗಾರದ ಬೆಳೆ ತೆಗೆದಿದೆ. ಈ ಚಿತ್ರ ಬಾಲಿವುಡ್​ ಒಂದರಲ್ಲೇ 434.70 ಕೋಟಿ ರೂಪಾಯಿ ಗಳಿಕೆ ಮಾಡಿದೆ. ವಿಶ್ವ ಬಾಕ್ಸ್ ಆಫೀಸ್​ನಲ್ಲಿ ಈ ಸಿನಿಮಾ 1250 ಕೋಟಿ ರೂಪಾಯಿ ಗಳಿಕೆ ಮಾಡಿದೆ.  ಇತ್ತೀಚೆಗೆ ‘ಕೆಜಿಎಫ್ 2’ ಒಟಿಟಿಯಲ್ಲಿ ತೆರೆಗೆ ಬಂದಿದೆ. ಆದಾಗ್ಯೂ ಈ ಚಿತ್ರ ಅನೇಕ ಮಲ್ಟಿಪ್ಲೆಕ್ಸ್​ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಹೀಗಾಗಿ, ಇನ್ನೂ ಕೆಲ ದಿನಗಳ ಕಾಲ ಸಿನಿಮಾ ಪ್ರದರ್ಶನ ಕಾಣಬಹುದು. ಇದರಿಂದ ‘ಕೆಜಿಎಫ್: ಚಾಪ್ಟರ್ 2’  ಗಳಿಕೆ ಕೊಂಚ ಹೆಚ್ಚಬಹುದು.

ಇದನ್ನೂ ಓದಿ
Srinidhi Shetty: ಗ್ಲಾಮರಸ್ ಲುಕ್​ನಲ್ಲಿ ‘ಕೆಜಿಎಫ್’ ಬೆಡಗಿ ಶ್ರೀನಿಧಿ ಶೆಟ್ಟಿ; ಫೋಟೋಗಳು ಇಲ್ಲಿವೆ
ಮಧ್ಯರಾತ್ರಿ ಸಿನಿಮಾ ವೀಕ್ಷಿಸಿದ ಶ್ರೀನಿಧಿ ಶೆಟ್ಟಿ, ಗರುಡ, ವಿನಯ್ ರಾಜ್​ಕುಮಾರ್..; ಚಿತ್ರ ನೋಡಿ ಆಶಾ ಭಟ್ ಹೇಳಿದ್ದೇನು?
Srinidhi Shetty: ‘ಕೆಜಿಎಫ್’ ಬೆಡಗಿ ಶ್ರೀನಿಧಿ ಶೆಟ್ಟಿ ಕ್ಯೂಟ್ ಫೋಟೋ ಗ್ಯಾಲರಿ
‘ಕೆಜಿಎಫ್​ 2’ ಪ್ರಚಾರಕ್ಕಾಗಿ ದೆಹಲಿಗೆ ತೆರಳಿದ ಯಶ್, ಶ್ರೀನಿಧಿ ಶೆಟ್ಟಿ

‘ಕೆಜಿಎಫ್ 2’ ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಬಿಡುಗಡೆ ಆಯಿತು. ಒಟಿಟಿಯಲ್ಲೂ ಈ ಚಿತ್ರ ಐದೂ ಭಾಷೆಗಳಲ್ಲಿ ಲಭ್ಯವಿದೆ. ಆರಂಭದಲ್ಲಿ ಈ ಸಿನಿಮಾವನ್ನು ರೆಂಟ್ ಪಡೆಯಲು ಅವಕಾಶ ನೀಡಲಾಗಿತ್ತು. ಅಂದರೆ 199 ರೂಪಾಯಿ ಪಾವತಿಸಿ ಸಿನಿಮಾ ನೋಡಬೇಕಿತ್ತು. ಈ ತಿಂಗಳ ಆರಂಭದಲ್ಲಿ ಚಂದಾದಾರರಿಗೆ ಉಚಿತವಾಗಿ ಸಿನಿಮಾ ನೋಡಲು ಅವಕಾಶ ನೀಡಲಾಯಿತು.

ಇದನ್ನೂ ಓದಿ: 50ನೇ ದಿನ ‘ಕೆಜಿಎಫ್ 2’ ಎಷ್ಟು ಕಡೆಗಳಲ್ಲಿ ಪ್ರದರ್ಶನ ಕಾಣುತ್ತಿದೆ; ಇಲ್ಲಿದೆ ಮಾಹಿತಿ

‘ಕೆಜಿಎಫ್’ ಸಿನಿಮಾ ಬಾಲಿವುಡ್​ನಲ್ಲಿ ಸಖತ್ ಹಿಟ್ ಆಗಿತ್ತು. ಈ ಚಿತ್ರದ ಸೀಕ್ವೆಲ್ ಆಗಿ ತೆರೆಗೆ ಬಂದಿದ್ದು ‘ಕೆಜಿಎಫ್ 2’ ಚಿತ್ರ. ಗರುಡನನ್ನು ಹತ್ಯೆ ಮಾಡಿದ ರಾಕಿ ಹೇಗೆ ತನ್ನ ಅಧಿಪತ್ಯ ಸಾಧಿಸುತ್ತಾನೆ ಅನ್ನೋದನ್ನು ‘ಕೆಜಿಎಫ್ 2’ ಸಿನಿಮಾದಲ್ಲಿ ತೋರಿಸಲಾಗಿದೆ. ಪ್ರಶಾಂತ್ ನೀಲ್ ಅವರು ಚಿತ್ರವನ್ನು ಅದ್ಭುತವಾಗಿ ಕಟ್ಟಿಕೊಡುವ ಮೂಲಕ ಭೇಷ್ ಎನಿಸಿಕೊಂಡಿದ್ದಾರೆ. ಬಾಲಿವುಡ್ ಮಂದಿ ಕೂಡ ಸಿನಿಮಾವನ್ನು ಸಖತ್ ಇಷ್ಟಪಟ್ಟಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:17 pm, Sun, 19 June 22