‘ಕೆಜಿಎಫ್​ 2’ ಟ್ರೇಲರ್ ಸ್ವಾಗತಕ್ಕೆ ಕೌಂಟ್​ಡೌನ್​; ಫ್ಯಾನ್ಸ್ ಕಡೆಯಿಂದಲೂ ನಡೆದಿದೆ ಭರದ ಸಿದ್ಧತೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 27, 2022 | 6:28 AM

ಪ್ರಶಾಂತ್ ನೀಲ್ ನಿರ್ದೇಶನದ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಈಗಾಗಲೇ ‘ಕೆಜಿಎಫ್​’ ಚಿತ್ರದ ಮೂಲಕ ತಮ್ಮ ಕೆಲಸ ಏನು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಹೀಗಾಗಿ, ‘ಕೆಜಿಎಫ್​ 2’ ಕಣ್ತುಂಬಿಕೊಳ್ಳೋಕೆ ಸಿನಿಪ್ರಿಯರು ಕಾದಿದ್ದಾರೆ.

‘ಕೆಜಿಎಫ್​ 2’ ಟ್ರೇಲರ್ ಸ್ವಾಗತಕ್ಕೆ ಕೌಂಟ್​ಡೌನ್​; ಫ್ಯಾನ್ಸ್ ಕಡೆಯಿಂದಲೂ ನಡೆದಿದೆ ಭರದ ಸಿದ್ಧತೆ
ಕೆಜಿಎಫ್ 2 ಚಿತ್ರದಲ್ಲಿ ಯಶ್
Follow us on

ರಾಕಿಂಗ್​ ಸ್ಟಾರ್ ಯಶ್​ (Yash) ನಟನೆಯ ‘ಕೆಜಿಎಫ್​ 2’ ಚಿತ್ರದ ಟ್ರೇಲರ್ ಇಂದು (ಮಾರ್ಚ್​ 27) ರಿಲೀಸ್ ಆಗುತ್ತಿದೆ. ಸಿನಿಮಾದ ಟ್ರೇಲರ್ ಕಣ್ತುಂಬಿಕೊಳ್ಳೋಕೆ ಅಭಿಮಾನಿಗಳು ಕಾದು ಕೂತಿದ್ದಾರೆ. ಇದರ ಜತೆಗೆ ಟ್ರೇಲರ್ ಸ್ವಾಗತಕ್ಕೆ ಫ್ಯಾನ್ಸ್ ಕಡೆಯಿಂದ ದೊಡ್ಡ ಮಟ್ಟದ ಸಿದ್ಧತೆ ನಡೆದಿದೆ. ಅನೇಕ ಪ್ಲ್ಯಾನ್​ಗಳನ್ನು ಅಭಿಮಾನಿಗಳು ರೂಪಿಸಿದ್ದಾರೆ. ರಿಲೀಸ್ ಆಗಲಿರುವ ಟ್ರೇಲರ್ (KGF Chapter 2 Trailer) ಮೂಲಕ ಸಿನಿಮಾ ಹೇಗಿರಲಿದೆ ಎನ್ನುವ ಝಲಕ್​ ಸಿಗಲಿದೆ. ಬೆಂಗಳೂರಿನಲ್ಲಿ ನಡೆಯುವ ಟ್ರೇಲರ್ ರಿಲೀಸ್​ ಕಾರ್ಯಕ್ರಮವನ್ನು ಬಾಲಿವುಡ್​ನ ಖ್ಯಾತ ನಿರೂಪಕ ಹಾಗೂ ನಿರ್ಮಾಪಕ ಕರಣ್​ ಜೋಹರ್ (Karan Johar) ನಡೆಸಿಕೊಡಲಿದ್ದಾರೆ ಅನ್ನೋದು ವಿಶೇಷ.

ಪ್ರಶಾಂತ್ ನೀಲ್ ನಿರ್ದೇಶನದ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಈಗಾಗಲೇ ‘ಕೆಜಿಎಫ್​’ ಚಿತ್ರದ ಮೂಲಕ ತಮ್ಮ ಕೆಲಸ ಏನು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಹೀಗಾಗಿ, ‘ಕೆಜಿಎಫ್​ 2’ ಕಣ್ತುಂಬಿಕೊಳ್ಳೋಕೆ ಸಿನಿಪ್ರಿಯರು ಕಾದಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ಸಿನಿಮಾದ ‘ತೂಫಾನ್​..’ ಹಾಡು ಅಭಿಮಾನಿಗಳಿಗೆ ಥ್ರಿಲ್​ ನೀಡಿದೆ. ಇಂದು ರಿಲೀಸ್ ಆಗುವ ಟ್ರೇಲರ್ ಕೂಡ ಗ್ರ್ಯಾಂಡ್​ ಆಗಿರಲಿದೆ ಎಂಬ ನಿರೀಕ್ಷೆ ಇದೆ.

ಬೆಂಗಳೂರಿನ ಒರಾಯನ್​ ಮಾಲ್​ನಲ್ಲಿರುವ ಪಿವಿಆರ್​ ಥಿಯೇಟರ್​ನಲ್ಲಿ ‘ಕೆಜಿಎಫ್​ 2’ ಚಿತ್ರದ ಟ್ರೇಲರ್ ರಿಲೀಸ್ ಆಗಲಿದೆ. ನಟ ಶಿವರಾಜ್​ಕುಮಾರ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಕರಣ್ ಅವರು ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ. ಚಿತ್ರದ ಹೀರೋ ಯಶ್​, ನಾಯಕಿ ಶ್ರೀನಿಧಿ ಶೆಟ್ಟಿ ಮೊದಲಾದವರು ಕಾರ್ಯಕ್ರಮದಲ್ಲಿ ಹಾಜರಿ ಹಾಕಲಿದ್ದಾರೆ. ಬೇರೆಬೇರೆ ರಾಜ್ಯಗಳಿಂದ ಪತ್ರಕರ್ತರು ಈ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವುದು ವಿಶೇಷ.


ಫ್ಯಾನ್ಸ್ ಕಡೆಯಿಂದ ಹಲವು ಯೋಜನೆ

‘ಕೆಜಿಎಫ್​ 2’ ಸ್ವಾಗತಿಸೋಕೆ ಯಶ್ ಫ್ಯಾನ್ಸ್​ ರೆಡಿ ಆಗಿದ್ದಾರೆ. ಇದಕ್ಕೆ ಅವರು ಹಲವು ಸಿದ್ಧತೆ ಮಾಡಿಕೊಂಡಿದ್ದಾರೆ. ಇಂದು ಬೆಳಿಗ್ಗೆ ರಾಜ್ಯದ ಹಲವು ದೇವಸ್ಥಾನಗಳಲ್ಲಿ ಅಭಿಮಾನಿಗಳು ಪೂಜೆ ಸಲ್ಲಿಸಲಿದ್ದಾರೆ. ಸಂಜೆ ವೇಳೆಗೆ ಕೆಲವು ಊರುಗಳಲ್ಲಿ ಯಶ್ ಫೋಟೋ ಜತೆ ಬೈಕ್‌ ರ‍್ಯಾಲಿ ಮಾಡಲಿದ್ದಾರೆ ಅಭಿಮಾನಿಗಳು. ಹಲವು ಕಡೆಗಳಲ್ಲಿ ಎಲ್‌ಇಡಿ ಅಳವಡಿಸಿ ಟ್ರೈಲರ್ ಪ್ರಸಾರ ಮಾಡಲು ಸಿದ್ಧತೆ ನಡೆದಿದೆ. ಮೈಸೂರಿನಲ್ಲಿ ಫ್ಯಾನ್ಸ್​ ಚಾಮುಂಡಿ ಬೆಟ್ಟದಲ್ಲಿ ತೆಂಗಿನಕಾಯಿ ಒಡೆದು ಪೂಜೆ ಸಲ್ಲಿಸಲಿದ್ದಾರೆ. ಸಂಜೆ ವೇಳೆಗೆ ರೈಲ್ವೇ ನಿಲ್ದಾಣದಲ್ಲಿ ಟ್ರೈಲರ್ ಪ್ರಸಾರ ಆಗಲಿದೆ.

ಇದನ್ನೂ ಓದಿ: Karan Johar: ‘ಕೆಜಿಎಫ್​ 2’ ಟ್ರೇಲರ್​ ರಿಲೀಸ್​ಗೆ ಬರ್ತಿದ್ದಾರೆ ಸ್ಟಾರ್​ ನಿರೂಪಕ ಕರಣ್​ ಜೋಹರ್​; ಏನು ಇವರ ವಿಶೇಷ?

ರಾಕಿ ಭಾಯ್​ಗೆ ‘ದುನಿಯಾ’ ಗೆಲ್ಲಲು ನೀವೂ ಸಾಥ್ ನೀಡಬಹುದು! ‘ಕೆಜಿಎಫ್ 2’ ಚಿತ್ರತಂಡ ನೀಡಿರುವ ಭರ್ಜರಿ ಆಫರ್ ಏನು ಗೊತ್ತಾ?

Published On - 6:00 am, Sun, 27 March 22