‘ಕೆಜಿಎಫ್ 2’ ಸಿನಿಮಾ ಕ್ಲೈಮ್ಯಾಕ್ಸ್ನಲ್ಲಿ ‘ಕೆಜಿಎಫ್ 3’ (KGF 3 Movie) ಬಗ್ಗೆ ಅಪ್ಡೇಟ್ ಸಿಕ್ಕಿತ್ತು. ‘ಕೆಜಿಎಫ್’ ಸೀರಿಸ್ನ ಮೂರನೇ ಪಾರ್ಟ್ ಯಾವಾಗ ಸೆಟ್ಟೇರಲಿದೆ ಎಂಬ ಪ್ರಶ್ನೆ ಅಭಿಮಾನಿಗಳ ಮನದಲ್ಲಿದೆ. ಆದರೆ, ಇದಕ್ಕೆ ಮತ್ತಷ್ಟು ವರ್ಷ ಕಾಯಬೇಕಾಗಿರುವುದು ಅನಿವಾರ್ಯ. ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್ನ ವಿಜಯ್ ಕಿರಗಂದೂರು (Vijay Kiragandur) ಅವರು ಮಾಹಿತಿ ನೀಡಿದ್ದಾರೆ. ಈ ಸಿನಿಮಾದ ಕೆಲಸ ಯಾವಾಗ ಶುರುವಾಗಲಿದೆ ಎಂಬ ಪ್ರಶ್ನೆಗೆ ಅವರ ಕಡೆಯಿಂದ ಉತ್ತರ ಸಿಕ್ಕಿದೆ.
‘ಕೆಜಿಎಫ್ 2’ ಕ್ಲೈಮ್ಯಾಕ್ಸ್ನಲ್ಲಿ ರಾಕಿ (ಯಶ್) ಮೃತಪಡುತ್ತಾನೆ. ಆತ ಭಾರತದಲ್ಲಿ ಮಾಡಿದ ಕೃತ್ಯಗಳ ಲೆಕ್ಕವಷ್ಟೇ ಸರ್ಕಾರಕ್ಕೆ ಸಿಕ್ಕಿರುತ್ತದೆ. ವಿದೇಶದಲ್ಲೂ ಆತ ಒಂದಷ್ಟು ಕೃತ್ಯಗಳನ್ನು ಮಾಡಿದ್ದ. ‘ಕೆಜಿಎಫ್ 3’ ಚಿತ್ರದಲ್ಲಿ ಈ ವಿಚಾರ ಹೈಲೈಟ್ ಆಗಲಿದೆ ಎನ್ನಲಾಗುತ್ತಿದೆ. ಈ ಸಿನಿಮಾ ಸೆಟ್ಟೇರೋದು 2025ರಲ್ಲಿ. ರಿಲೀಸ್ ಆಗೋದು 2026ರಲ್ಲಂತೆ! ಈ ಬಗ್ಗೆ ವಿಜಯ್ ಅವರು ಕೋಯಿಮೋಯಿ ಸೈಟ್ಗೆ ಮಾಹಿತಿ ನೀಡಿದ್ದಾರೆ.
‘ಕೆಜಿಎಫ್ 3 ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಇನ್ನೂ ಆರಂಭ ಆಗಿಲ್ಲ. 2025ರಲ್ಲಿ ಸಿನಿಮಾ ಸೆಟ್ಟೇರುವ ನಿರೀಕ್ಷೆ ಇದೆ. ಕೆಜಿಎಫ್ ಸೀರಿಸ್ನಲ್ಲಿ ಐದು ಪಾರ್ಟ್ಗಳು ಬರಬಹುದು. ಜೇಮ್ಸ್ ಬಾಂಡ್ ಸಿನಿಮಾಗಳಲ್ಲಿ ಬಾಂಡ್ ಪಾತ್ರವನ್ನು ಬೇರೆಯವರು ಮಾಡಿದ್ದರು. ಅದೇ ರೀತಿ ‘ಕೆಜಿಎಫ್’ ಸೀರಿಸ್ನ ರಾಕಿಭಾಯ್ ಪಾತ್ರವನ್ನು ಬೇರೆಯವರು ಮಾಡಬಹುದು. ಹೀರೋಗಳು ಬದಲಾಗುತ್ತಿರುತ್ತಾರೆ’ ಎಂದಿದ್ದಾರೆ ವಿಜಯ್. ಈ ಮೂಲಕ ಅವರು ಕುತೂಹಲ ಹುಟ್ಟುಹಾಕಿದ್ದಾರೆ.
ಪ್ರಶಾಂತ್ ನೀಲ್ ಅವರು ‘ಸಲಾರ್’ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರ ಮುಂದಿನ ವರ್ಷ ತೆರೆಗೆ ಬರುವ ನಿರೀಕ್ಷೆ ಇದೆ. ಈ ಚಿತ್ರದ ಬಳಿಕ ಅವರು ಜೂ.ಎನ್ಟಿಆರ್ ಜತೆಗಿನ ಸಿನಿಮಾದಲ್ಲಿ ಬ್ಯುಸಿ ಆಗಲಿದ್ದಾರೆ. ಇದಾದ ಬಳಿಕವೇ ‘ಕೆಜಿಎಫ್ 3’ ಕೆಲಸಗಳಲ್ಲಿ ಪ್ರಶಾಂತ್ ನೀಲ್ ಬ್ಯುಸಿ ಆಗಲಿದ್ದಾರೆ.
ಇದನ್ನೂ ಓದಿ: ‘ನಾನು ತೆಲುಗು ನಟರ ಹಿಂದೆ ಹೋಗಿಲ್ಲ, ಅವರೇ ನನ್ನ ಹುಡುಕಿ ಬಂದರು’; ಪ್ರಶಾಂತ್ ನೀಲ್
ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಚಿತ್ರಕ್ಕೂ ‘ಕೆಜಿಎಫ್ 3’ಗೂ ಲಿಂಕ್ ಇದೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಯಾವುದೇ ಅಪ್ಡೇಟ್ ಸಿಕ್ಕಿಲ್ಲ. ‘ಸಲಾರ್’ ಚಿತ್ರದಲ್ಲಿ ಯಶ್ ಕೂಡ ಇರಲಿದ್ದಾರೆ ಎಂದು ಹೇಳಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ