ಹೈದರಾಬಾದ್​ನಲ್ಲಿ ಮನೆ ಖರೀದಿಸಿದ ಕಿಚ್ಚ ಸುದೀಪ್​; ಇದರ ಬೆಲೆ ಎಷ್ಟು ಗೊತ್ತಾ?

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 01, 2020 | 4:53 PM

ಸಾಕಷ್ಟು ಸಿನಿಮಾ ಹಾಗೂ ಜಾಹೀರಾತಿನ ಶೂಟಿಂಗ್​ಗೆ ಕಿಚ್ಚ ಹೈದರಾಬಾದ್​ಗೆ ತೆರಳುತ್ತಿರುತ್ತಾರೆ. ಈ ಕಾರಣಕ್ಕೆ ಅವರು ಹೈದರಾಬಾದ್​ನಲ್ಲಿ ಒಂದು ಮನೆ ಖರೀದಿಸೋ ನಿರ್ಧಾರಕ್ಕೆ ಬಂದಿದ್ದರು.

ಹೈದರಾಬಾದ್​ನಲ್ಲಿ ಮನೆ ಖರೀದಿಸಿದ ಕಿಚ್ಚ ಸುದೀಪ್​; ಇದರ ಬೆಲೆ ಎಷ್ಟು ಗೊತ್ತಾ?
ಅಭಿನಯ ಚಕ್ರವರ್ತಿ ಸುದೀಪ್
Follow us on

ನಟ ಕಿಚ್ಚ ಸುದೀಪ್​ ಇತ್ತೀಚೆಗಷ್ಟೇ ತೆಲುಗು ಬಿಗ್ ​ಬಾಸ್​​ನಲ್ಲಿ ಕಾಣಿಸಿಕೊಂಡಿದ್ದರು. ತೆಲುಗು ಬಿಗ್ ​ಬಾಸ್​ ವೇದಿಕೆ ಮೇಲೆ ಕನ್ನಡದ ‘ಫ್ಯಾಂಟಮ್’ ಚಿತ್ರದ ಬಗ್ಗೆ ಮಾತನಾಡಿದ್ದ ವಿಡಿಯೋ ಸಾಕಷ್ಟು ವೈರಲ್​ ಆಗಿತ್ತು. ಸುದೀಪ್ ಬಿಗ್​ ಬಾಸ್​ ಶೋನಲ್ಲಿ ಪಾಲ್ಗೊಳ್ಳಲು​ ಹೈದರಾಬಾದ್​ಗೆ ತೆರಳಿದ್ದರು ಎನ್ನುವ ವಿಚಾರದ ಬೆನ್ನಲ್ಳೇ ಮತ್ತೊಂದು ಸುದ್ದಿ ಹರಿದಾಡಿದೆ. ಅದೇನೆಂದರೆ ಹೈದರಾಬಾದ್​​ನಲ್ಲಿ ಕಿಚ್ಚ ಐಷಾರಾಮಿ ಮನೆ ಖರೀದಿ ಮಾಡಿದ್ದಾರಂತೆ.

ಕಿಚ್ಚ ಸುದೀಪ್​ ಟಾಲಿವುಡ್​ ಪಾಲಿಗೆ ಹೊಸಬರೇನಲ್ಲ. ರಾಜಮೌಳಿ ನಿರ್ದೇಶನದ ‘ಈಗ’ ಸಿನಿಮಾದಲ್ಲಿ ನಟಿಸಿ ತೆಲುಗಿ ಮಂದಿಗೆ ಪರಿಚಯಗೊಂಡಿದ್ದರು. ನಂತರ ಅವರು ಬಾಹುಬಲಿ-1 ಸಿನಿಮಾದಲ್ಲೂ ಬಣ್ಣ ಹಚ್ಚಿದ್ದರು. ಸುದೀಪ್​ ನಟನೆಯ ಪೈಲ್ವಾನ್ ಸಿನಿಮಾ ಕೂಡ ತೆಲುಗಿಗೆ ಡಬ್​ ಆಗಿ ತೆರೆಕಂಡಿದೆ. ಇನ್ನು ಸಾಕಷ್ಟು ಸಿನಿಮಾ ಹಾಗೂ ಜಾಹೀರಾತಿನ ಶೂಟಿಂಗ್​ಗೆ ಕಿಚ್ಚ ಹೈದರಾಬಾದ್​ಗೆ ತೆರಳುತ್ತಿರುತ್ತಾರೆ. ಈ ಕಾರಣಕ್ಕೆ ಅವರು ಹೈದರಾಬಾದ್​ನಲ್ಲಿ ಒಂದು ಮನೆ ಖರೀದಿಸುವ ನಿರ್ಧಾರಕ್ಕೆ ಬಂದಿದ್ದರು.

ಅಂತೆಯೇ, ಹೈದರಾಬಾದ್​ನ ಗಚಿಬೌಲಿ ಭಾಗದಲ್ಲಿ ಇತ್ತೀಚೆಗೆ ಸುದೀಪ್​ ಮನೆ ಖರೀದಿ ಮಾಡಿದ್ದಾರೆ. ಈ ಮನೆಯ ಬೆಲೆ ಬರೋಬ್ಬರಿ 5 ಕೋಟಿ ರೂಪಾಯಿ ಎನ್ನಲಾಗಿದೆ! ಈ ಮನೆ ತುಂಬಾನೇ ಐಷಾರಾಮಿ ಆಗಿದ್ದು, ಹೈದರಾಬಾದ್​ಗೆ ಶೂಟಿಂಗ್​ಗೆ ತೆರಳಿದಾಗ ಸುದೀಪ್​ ಇಲ್ಲಿಯೇ ವಾಸ ಮಾಡಲಿದ್ದಾರಂತೆ.

ಸಿನಿಮಾ ವಿಚಾರಕ್ಕೆ ಬರುವುದಾದರೆ ಸುದೀಪ್​ ‘ಕೋಟಿಗೊಬ್ಬ 3’ ಹಾಗೂ ‘ಫ್ಯಾಂಟಮ್’ ಚಿತ್ರಗಳಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಇದರ ಜೊತೆಗೆ ಶೀಘ್ರದಲ್ಲೇ ಪ್ರಸಾರವಾಗಲಿರುವ ಕನ್ನಡದ ಬಿಗ್​ಬಾಸ್​ ನಿರ್ವಹಣೆಯ ಜವಾಬ್ದಾರಿ ಕೂಡ ಸುದೀಪ್​ ಅವರದ್ದೇ.

ಇದನ್ನೂ ಓದಿ: ದೀಪಾವಳಿಗೆ ಕಿಚ್ಚನ ಧಮಾಲ್​: ಹಬ್ಬದಂದು ‘ಪಟಾಕಿ ಪೋರಿ’ ಹಿಂದೆ ಬಿದ್ದ ಸುದೀಪ್​!