AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಮುಗೀತಿದ್ದಂತೆ ಸುದೀಪ್​​ಗೆ ಶಾಕ್; ವಂಚನೆ ಆರೋಪದಡಿ ದೂರು ದಾಖಲು

ಬಿಗ್ ಬಾಸ್ ಕನ್ನಡ ಸೀಸನ್ 12 ಮುಗಿಯುತ್ತಿದ್ದಂತೆ ಕಿಚ್ಚ ಸುದೀಪ್‌ಗೆ ಶಾಕ್ ಎದುರಾಗಿದೆ. ನಿರ್ಮಾಪಕ ಸುದೀಪ್ ಮತ್ತು ಚಕ್ರವರ್ತಿ ಚಂದ್ರಚೂಡ್ ವಿರುದ್ಧ 10 ವರ್ಷಗಳ ಹಿಂದಿನ 'ವಾರಸ್ದಾರ' ಧಾರಾವಾಹಿ ಪ್ರಕರಣದ ವಂಚನೆ ಆರೋಪ ಮತ್ತೆ ಮುನ್ನೆಲೆಗೆ ಬಂದಿದೆ. ಹಣ ನೀಡುವ ಭರವಸೆ ನೀಡಿ ಪ್ರಕರಣ ಹಿಂಪಡೆದು ಬಳಿಕ ವಂಚಿಸಿದ್ದಾರೆ ಎಂದು ಮನೆ ಮಾಲೀಕ ದೀಪಕ್ ಮಯೂರ್ ಬೆಂಗಳೂರು ಕಮಿಷನ್ ಕಚೇರಿಯಲ್ಲಿ ದೂರು ನೀಡಿದ್ದಾರೆ.

ಬಿಗ್ ಬಾಸ್ ಮುಗೀತಿದ್ದಂತೆ ಸುದೀಪ್​​ಗೆ ಶಾಕ್; ವಂಚನೆ ಆರೋಪದಡಿ ದೂರು ದಾಖಲು
ಸುದೀಪ್
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Edited By: |

Updated on: Jan 21, 2026 | 7:32 AM

Share

ಬಿಗ್ ಬಾಸ್ (Bigg Boss) ಕನ್ನಡ ಸೀಸನ್ 12 ಅನ್ನು ಕಿಚ್ಚ ಸುದೀಪ್ ಇತ್ತೀಚೆಗೆ ಪೂರ್ಣಗೊಳಿಸಿದ್ದಾರೆ. ಇದರ ಬೆನ್ನಲ್ಲೇ ಅವರಿಗೆ ಶಾಕ್ ಎದುರಾಗಿದೆ. ಕಿಚ್ಚ ಸುದೀಪ್ ನಿರ್ಮಾಣದ ‘ವಾರಸ್ದಾರ’ ಧಾರಾವಾಹಿ ವಿಷಯವಾಗಿ ನಡೆದ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ಕಿಚ್ಚ ಸುದೀಪ್, ಚಕ್ರವರ್ತಿ ಚಂದ್ರಚೂಡ್ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದೆ. ಹಣ ಕೊಡೋದಾಗಿ ನಂಬಿಸಿ ಕೇಸ್ ಹಿಂಪಡೆದುಕೊಳ್ಳುವಂತೆ ಸುದೀಪ್-ಚಕ್ರವರ್ತಿ ಚಂದ್ರಚೂಡ್ ಮಾಡಿದ್ದರಂತೆ. ಆ ಬಳಿಕ ಹಣ ಕೊಡದೆ ವಂಚಿಸಿದ್ದಾರೆ ಎನ್ನಲಾಗಿದೆ.

10 ವರ್ಷಗಳ ಹಿಂದಿನ ಪ್ರಕರಣ

2016ರಲ್ಲಿ ‘ವಾರಸ್ದಾರ’ ಧಾರಾವಾಹಿ ಸಾಕಷ್ಟು ವಿವಾದ ಸೃಷ್ಟಿ ಮಾಡಿತ್ತು. ‘ವಾರಸ್ದಾರ’ ಧಾರಾವಾಹಿ ಶೂಟಿಂಗ್​ಗೆ ದೀಪಕ್ ಮಯೂರ್ ಎಂಬುವವರ ಮನೆಯನ್ನು ಬಾಡಿಗೆಗೆ ಪಡೆಯಲಾಗಿತ್ತು. ಆದರೆ ಧಾರಾವಾಹಿ ಶೂಟಿಂಗ್ ವೇಳೆ ತಮ್ಮ ಕಾಫಿ ತೋಟಕ್ಕೆ ಹಾನಿ ಆಗಿದೆ, ತೋಟದಲ್ಲಿದ್ದ ಮರ, ಗಿಡಗಳನ್ನು ಕಡಿಯಲಾಗಿದೆ. ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಅಲ್ಲದೆ ಮನೆಗೆ ಬಾಡಿಗೆ ನೀಡುವುದಾಗಿ ಹೇಳಿದ್ದ ಸುದೀಪ್ ಬಾಡಿಗೆ ಹಣದಲ್ಲಿ ಸಹ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಮನೆ ಮಾಲೀಕ ದೀಪಕ್ ಆರೋಪಿಸಿದ್ದರು. ಎರಡು ವರ್ಷದ ಬಳಿಕ ದೀಪಕ್ ಕೋರ್ಟ್ ಮೆಟ್ಟಿಲೇರಿದರು.

ಹಣ ನೀಡೋ ಭರವಸೆ

95 ಲಕ್ಷ ಹಣ ಪರಿಹಾರ ನೀಡುವಂತೆ ದೀಪಕ್ ಕೇಸ್ ಹಾಕಿದ್ದರು. 2023ರಲ್ಲಿ ಎನ್ ಕುಮಾರ್ ಎಂಬುವವರು ದೀಪಕ್​​ಗೆ ಕರೆ ಮಾಡಿ ನಮಗೂ ಹಣ ನೀಡದೆ ಸುದೀಪ್ ಅವರಿಂದ ವಂಚನೆ ಆಗಿದೆ ಎಂದಿದ್ದರು. ಆ ಬಳಿಕ ದೀಪಕ್ ಚಕ್ರವರ್ತಿ ಚಂದ್ರಚೂಡ್​ಗೆ ಕರೆ ಮಾಡಿದ್ದರು. ಈ ವೇಳೆ ಚೆನ್ನೈಗೆ ಬರುವಂತೆ ಚಕ್ರವರ್ತಿ ಚಂದ್ರಚೂಡ್ ಹೇಳಿದ್ದರಂತೆ.

ಕೇಸ್ ವಾಪಸ್ ಪಡೆದರೆ 60 ಲಕ್ಷ ನೀಡುವುದಾಗಿ ಸುದೀಪ್ ಭರವಸೆ ನೀಡಿದ್ದರು ಎಂಬುದು ದೀಪಕ್ ಮಾತು. ಕೇಸ್ ವಾಪಸ್ ಪಡೆಯುವ ಮುನ್ನ ಚಕ್ರವರ್ತಿ 10 ಲಕ್ಷದ‌ ರೂಪಾಯಿ ಚೆಕ್ ನೀಡಿದ್ದರಂತೆ. ಈ ವಿಶ್ವಾಸದಲ್ಲಿ ದೀಪಕ್ ಕೇಸ್ ಹಿಂಪಡೆದಿದ್ದರು.

ಇದನ್ನೂ ಓದಿ: ಬಿಗ್ ಬಾಸ್: ಯೂಟ್ಯೂಬ್ ಹಣದಿಂದಲೇ ಮುಂಬೈನಲ್ಲಿ ಮನೆ ಖರೀದಿಸಿದ ರಕ್ಷಿತಾ ಶೆಟ್ಟಿ

ಆದರೆ, ಕೇಸ್ ಹಿಂಪಡೆಯುತ್ತಿದ್ದಂತೆ ಚಕ್ರವರ್ತಿ ಅವರು ದೀಪಕ್ ನಂಬರ್​​ನ ಬ್ಲಾಕ್ ಮಾಡಿದ್ದಾರೆ ಎನ್ನಲಾಗಿದೆ. ಸುದೀಪ್ ಪರವಾಗಿ ದೀಪಕ್ ಮಾತನಾಡಿರುವ ವಿಡಿಯೋಗಳು ಚಕ್ರವರ್ತಿ ಬಳಿ ಇವೆಯಂತೆ. ಇದನ್ನು ಒತ್ತಾಯಪೂರ್ವಕವಾಗಿ ಪಡೆದಿರುವ ಆರೋಪ ದೀಪಕ್​ ಮಾಡಿದ್ದಾರೆ. ಈಗ ಬೆಂಗಳೂರು ಕಮಿಷನ್ ಕಚೇರಿಯಲ್ಲಿ ದೀಪಕ್ ದೂರು ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಇಂದು ಈ ರಾಶಿಯವರ ವೈವಾಹಿಕ ಜೀವನದಲ್ಲಿ ಅಸ್ಥಿರತೆ!
ಇಂದು ಈ ರಾಶಿಯವರ ವೈವಾಹಿಕ ಜೀವನದಲ್ಲಿ ಅಸ್ಥಿರತೆ!
ಆಕಸ್ಮಿಕ ಬೆಂಕಿಗೆ ಹೊತ್ತಿ ಉರಿದ ಶಂಕಿತ ಬಾಂಗ್ಲಾ ವಲಸಿಗರ ಶೆಡ್​ಗಳು
ಆಕಸ್ಮಿಕ ಬೆಂಕಿಗೆ ಹೊತ್ತಿ ಉರಿದ ಶಂಕಿತ ಬಾಂಗ್ಲಾ ವಲಸಿಗರ ಶೆಡ್​ಗಳು
ಬಿಗ್​​ಬಾಸ್​​ಗೆ ಹೋಗಿದ್ದು ಏಕೆ? ಕಾವ್ಯಾ ಕೊಟ್ಟರು ಕಾರಣ
ಬಿಗ್​​ಬಾಸ್​​ಗೆ ಹೋಗಿದ್ದು ಏಕೆ? ಕಾವ್ಯಾ ಕೊಟ್ಟರು ಕಾರಣ
ಬಿಗ್​​ಬಾಸ್ ಬಳಿಕ ರಕ್ಷಿತಾ ಶೆಟ್ಟಿಯ ಮುಂದಿನ ಯೋಜನೆಗಳೇನು?
ಬಿಗ್​​ಬಾಸ್ ಬಳಿಕ ರಕ್ಷಿತಾ ಶೆಟ್ಟಿಯ ಮುಂದಿನ ಯೋಜನೆಗಳೇನು?
ಶಾಲಾ ಬಾಲಕಿಯನ್ನು ಹಿಂಬಾಲಿಸಿ ಮನೆ ಬಾಗಿಲಿಗೆ ಬಂದ ಆಗಂತುಕ!
ಶಾಲಾ ಬಾಲಕಿಯನ್ನು ಹಿಂಬಾಲಿಸಿ ಮನೆ ಬಾಗಿಲಿಗೆ ಬಂದ ಆಗಂತುಕ!
ಗಿಲ್ಲಿ ಬಗ್ಗೆ ಜನರಿಗೆ ಇರುವ ಕ್ರೇಜ್ ನೋಡಿ ಫಸ್ಟ್ ರಿಯಾಕ್ಷನ್ ಕೊಟ್ಟ ಕಾವ್ಯಾ
ಗಿಲ್ಲಿ ಬಗ್ಗೆ ಜನರಿಗೆ ಇರುವ ಕ್ರೇಜ್ ನೋಡಿ ಫಸ್ಟ್ ರಿಯಾಕ್ಷನ್ ಕೊಟ್ಟ ಕಾವ್ಯಾ
ಅಧಿಕಾರ ಬಿಟ್ಟಕೊಡಿ ಎಂದು ಕೇಳೋದು ಕಷ್ಟ: ಸಿಎಂಗೆ ಟಾಂಗ್ ಕೊಟ್ರಾ ಡಿಕೆಸು!
ಅಧಿಕಾರ ಬಿಟ್ಟಕೊಡಿ ಎಂದು ಕೇಳೋದು ಕಷ್ಟ: ಸಿಎಂಗೆ ಟಾಂಗ್ ಕೊಟ್ರಾ ಡಿಕೆಸು!
ನಿತಿನ್ ನಬಿನ್ ನನ್ನ ಬಾಸ್, ನಾನು ಕೇವಲ ಪಕ್ಷದ ಕಾರ್ಯಕರ್ತ: ಪ್ರಧಾನಿ ಮೋದಿ
ನಿತಿನ್ ನಬಿನ್ ನನ್ನ ಬಾಸ್, ನಾನು ಕೇವಲ ಪಕ್ಷದ ಕಾರ್ಯಕರ್ತ: ಪ್ರಧಾನಿ ಮೋದಿ
ಲಕ್ಕುಂಡಿ: ಉತ್ಖನನ ವೇಳೆ ಮನೆಯೊಂದರಲ್ಲಿ ಪುರಾತನ ದೇವಸ್ಥಾನ ಪತ್ತೆ!
ಲಕ್ಕುಂಡಿ: ಉತ್ಖನನ ವೇಳೆ ಮನೆಯೊಂದರಲ್ಲಿ ಪುರಾತನ ದೇವಸ್ಥಾನ ಪತ್ತೆ!
ಶ್ರೀಕೃಷ್ಣಮಠದಲ್ಲಿ ವಸ್ತ್ರಸಂಹಿತೆ ಜಾರಿ: ಇಲ್ಲಿದೆ ಭಕ್ತರಿಗೆ ಕೆಲ ಸೂಚನೆ
ಶ್ರೀಕೃಷ್ಣಮಠದಲ್ಲಿ ವಸ್ತ್ರಸಂಹಿತೆ ಜಾರಿ: ಇಲ್ಲಿದೆ ಭಕ್ತರಿಗೆ ಕೆಲ ಸೂಚನೆ