ರಕ್ಷಿತ್ ಶೆಟ್ಟಿ ಮಾಡುವ ಪ್ರತಿ ಚಿತ್ರವೂ ಭಿನ್ನ ಕಥಾಹಂದರವುಳ್ಳ ಸಿನಿಮಾ ಆಗಿರುತ್ತದೆ. ಅವರ ಮೊದಲ ಚಿತ್ರದಿಂದ ಇಲ್ಲಿಯವರೆಗೆ ಮಾಡಿದ್ದೆಲ್ಲವೂ ಭಿನ್ನ ಕಥಾ ಹಂದರವುಳ್ಳ ಚಿತ್ರಗಳೇ. ಇದಕ್ಕೆ ಈಗ ಹೊಸ ಸೇರ್ಪಡೆ 777 ಚಾರ್ಲಿ. ನಾಯಿ ಹಾಗೂ ಮನುಷ್ಯನ ಬಾಂಧವ್ಯದ ಕಥೆ ಇಟ್ಟುಕೊಂಡು ಸಿನಿಮಾ ಮಾಡಲಾಗುತ್ತಿದೆ. ರಕ್ಷಿತ್ ಜನ್ಮದಿನದ ಅಂಗವಾಗಿ ಇಂದು ಟೀಸರ್ ರಿಲೀಸ್ ಆಗಿದ್ದು , ಕಿಚ್ಚ ಸುದೀಪ್ ಸೇರಿ ಸಾಕಷ್ಟು ಸೆಲೆಬ್ರಿಟಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಟೀಸರ್ನಲ್ಲಿ ಸಾಕಷ್ಟು ವಿಚಾರಗಳನ್ನು ಹೇಳೋಕೆ ನಿರ್ದೇಶಕ ಕಿರಣ್ ರಾಜ್ ಪ್ರಯತ್ನಿಸಿದ್ದಾರೆ. ಚಾರ್ಲಿ (ಶ್ವಾನ) ಅನಾಥ. ಮಳೆ ಬಂದಾಗ ಶೆಡ್ ಅಡಿಗೆ ಅಡಗಿಕೊಂಡು ನಗರವನ್ನೆಲ್ಲ ಸುತ್ತಾಡುತ್ತದೆ. ಕೊನೆಯಲ್ಲಿ ಈ ಶ್ವಾನ ಸೇರಿಕೊಳ್ಳೋದು ರಕ್ಷಿತ್ ಶೆಟ್ಟಿ ಜತೆಗೆ. ಈ ಟೀಸರ್ ತುಂಬಾನೇ ಕ್ಯೂಟ್ ಆಗಿದ್ದು, ಪ್ರಾಣಿ ಪ್ರಿಯರಿಗೆ ಇಷ್ಟವಾಗಲಿದೆ.
Yo CharlieShetty,,,,, Charlie777 looks stunning. Noone can have another opinion other than liking it.
Wishing you the best always,,,
Have an awesome bday.
Cheers ?https://t.co/AjliaFY1Gk— Kichcha Sudeepa (@KicchaSudeep) June 6, 2021
‘777 ಚಾರ್ಲಿ’ ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಕನ್ನಡದ ಜತೆಗೆ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲೂ ತೆರೆಗೆ ಬರುತ್ತಿದೆ. ಹೀಗಾಗಿ, ಟೀಸರ್ ಕೂಡ ಐದು ಭಾಷೆಗಳಲ್ಲಿ ರಿಲೀಸ್ ಆಗಿದೆ. ತೆಲುಗಿನಲ್ಲಿ ನ್ಯಾಚುರಲ್ ಸ್ಟಾರ್ ನಾನಿ ಟೀಸರ್ ರಿಲೀಸ್ ಮಾಡಿದರೆ, ಖ್ಯಾತ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಅವರು ತಮಿಳಿನಲ್ಲಿ ಈ ಸಿನಿಮಾದ ಟೀಸರ್ ಬಿಡುಗಡೆ ಮಾಡಿದ್ದಾರೆ. ಪೃಥ್ವಿರಾಜ್ ಹಸ್ತದಿಂದ ಮಲಯಾಳಂನಲ್ಲಿ ಟೀಸರ್ ಬಿಡುಗಡೆಗೊಡಿದೆ. ಹಿಂದಿ ಮತ್ತು ಕನ್ನಡ ಟೀಸರ್ಗಳು ಪರಮ್ವಾ ಸ್ಟುಡಿಯೋ ಮೂಲಕ ರಿಲೀಸ್ ಮಾಡಲಾಗಿದೆ.
ಪೃಥ್ವಿರಾಜ್, ಕುಂಜಾಕ್ಕೊ ಬೋಬನ್, ನಿವೀನ್ ಪೌಲಿ, ಟೊವಿನೋ ಥಾಮಸ್, ಉಣ್ಣಿ ಮುಕುಂದನ್, ಅನ್ನಾ ಬೆನ್, ನಿಖಿಲಾ ವಿಮಲ್, ಆಂಟನಿ ವರ್ಗೀಸ್ ಟೀಸರ್ ಹಂಚಿಕೊಂಡಿದ್ದಾರೆ. ‘777 ಚಾರ್ಲಿ’ ತಂಡ ಪೋಸ್ಟ್ ಪ್ರೊಡಕ್ಷನ್ ಪೂರ್ಣಗೊಳಿಸುವ ಹಂತದಲ್ಲಿದೆ. ಡಬ್ಬಿಂಗ್ ಕೆಲಸಗಳು ಪೂರ್ಣಗೊಂಡಿದ್ದು, ಸಿನಿಮಾ ಶೀಘ್ರವೇ ಸಿದ್ಧಗೊಳ್ಳಲಿದೆ. ‘777 ಚಾರ್ಲಿ’ ಸಿನಿಮಾಕ್ಕೆ ಸುಮಾರು 160 ದಿನಗಳ ಕಾಲ ಶೂಟಿಂಗ್ ಮಾಡಲಾಗಿದೆ. ಶ್ವಾನದ ಮೂಡ್ ನೋಡಿಕೊಂಡು ಶೂಟ್ ಮಾಡಬೇಕಾದ ಪರಿಸ್ಥಿತಿ ಇದ್ದಿದ್ದರಿಂದ ಶೂಟಿಂಗ್ಗೆ ಹೆಚ್ಚು ದಿನ ಹಿಡಿದಿದೆ.
We hope that you will receive our labour of love, with love. #LifeOfCharlie is now out ?
Proudly presenting the official teaser of #777Charlie in Kannada, Malayalam, Tamil, Telugu & Hindi ✨
Kannada: https://t.co/2daqMJzCvV
Malayalam: https://t.co/vU4aiek6Hv pic.twitter.com/GCLvp68WX3— Rakshit Shetty (@rakshitshetty) June 6, 2021
ಕಿರಣ್ ರಾಜ್ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ರಕ್ಷಿತ್ ಶೆಟ್ಟಿ, ಸಂಗೀತಾ ಶೃಂಗೇರಿ, ರಾಜ್ ಬಿ. ಶೆಟ್ಟಿ, ದಾನಿಶ್ ಸೇಟ್ ಮೊದಲಾದವರು ಮುಖ್ಯಭೂಮಿಕೆಯಲ್ಲಿದ್ದಾರೆ. ಪರಮ್ವಾ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ಚಿತ್ರ ಮೂಡಿ ಬರುತ್ತಿದೆ.
ಇದನ್ನೂ ಓದಿ: ರಕ್ಷಿತ್ ಶೆಟ್ಟಿ ಜನ್ಮದಿನ; ‘777 ಚಾರ್ಲಿ’ ಟೀಸರ್ ರಿಲೀಸ್ ಮಾಡೋಕೆ ಬಂದ ಪರಭಾಷೆಯ ಸ್ಟಾರ್ಗಳು
Published On - 2:54 pm, Sun, 6 June 21