AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀವು ಅಂದುಕೊಂಡಂತೆ ಇಲ್ಲ ಈ ಶುಭಾ ಪೂಂಜಾ; ಶೀಘ್ರವೇ ಬಯಲಾಗಲಿದೆ ಇನ್ನೊಂದು ಮುಖ

Shubha Poonja: ‘ತ್ರಿದೇವಿ’ ಸಿನಿಮಾದಲ್ಲಿ ಸಾಹಸ ದೃಶ್ಯಗಳಿಗಾಗಿ ಶುಭಾ ಪೂಂಜಾ, ಕಮರ್ಷಿಯಲ್​ ಮಾಡೆಲ್​ ಸಂಧ್ಯಾ ಮತ್ತು ಜೋಸ್ನಾ ಅವರು ಒಂದು ತಿಂಗಳ ಕಾಲ ಕಳರಿಪಯಟ್ಟು ಕಲಿತಿದ್ದಾರೆ. ಜೂ.6ರಂದು ಸಂಜೆ 4 ಗಂಟೆಗೆ ಟ್ರೇಲರ್​ ಬಿಡುಗಡೆ ಆಗಲಿದೆ.

ನೀವು ಅಂದುಕೊಂಡಂತೆ ಇಲ್ಲ ಈ ಶುಭಾ ಪೂಂಜಾ; ಶೀಘ್ರವೇ ಬಯಲಾಗಲಿದೆ ಇನ್ನೊಂದು ಮುಖ
ಶುಭಾ ಪೂಂಜಾ
ಮದನ್​ ಕುಮಾರ್​
|

Updated on: Jun 06, 2021 | 9:09 AM

Share

ನಟಿ ಶುಭಾ ಪೂಂಜಾ ಅವರು ಬಿಗ್​ ಬಾಸ್​ಗೆ ಹೋದ ಬಳಿಕ ಅವರ ಇಮೇಜ್​ ಬದಲಾಯಿತು. ‘ಮೊಗ್ಗಿನ ಮನಸ್ಸು’ ಸಿನಿಮಾದಿಂದಲೂ ಪರದೆ ಮೇಲೆ ಪ್ರೇಕ್ಷಕರು ಅವರನ್ನು ನೋಡುತ್ತ ಬಂದಿದ್ದರೂ ಕೂಡ ಅವರ ರಿಯಲ್​ ಲೈಫ್​ ವಿವರಗಳು ಹೆಚ್ಚು ತಿಳಿದಿರಲಿಲ್ಲ. ಆದರೆ ಬಿಗ್​ ಬಾಸ್​ ಮನೆಯಲ್ಲಿ ಅವರು ನಡೆದುಕೊಂಡ ರೀತಿಯಿಂದಾಗಿ ಅವರ ನಿಜ ವ್ಯಕ್ತಿತ್ವದ ಬಗ್ಗೆ ಎಲ್ಲರಿಗೂ ತಿಳಿಯುವಂತಾಯಿತು. ಈವರೆಗೂ ಶುಭಾ ಅವರನ್ನು ಪ್ರೇಕ್ಷಕರು ನೋಡಿಯೇ ಇರದ ಇನ್ನೊಂದು ಮುಖವಿದೆ. ಅದು ಇಂದು (ಜೂ.6) ಬಯಲಾಗಲಿದೆ.

ಬಬ್ಲಿ ಬಬ್ಲಿ ಹುಡುಗಿ ಆಗಿಯೇ ಶುಭಾ ಪೂಂಜಾ ಅವರು ತೆರೆ ಮೇಲೆ ಕಾಣಿಸಿಕೊಂಡಿದ್ದು ಹೆಚ್ಚು. ಅವರಿಗೆ ಸಿಗುತ್ತಿದ್ದ ಬಹುತೇಕ ಪಾತ್ರಗಳು ಅದೇ ರೀತಿ ಇರುತ್ತಿದ್ದವು. ಇತ್ತೀಚಿನ ವರ್ಷಗಳಲ್ಲಿ ಅವರು ಹಾರರ್​ ಸಿನಿಮಾ ಪ್ರಯತ್ನಿಸಿದರು. ಭಕ್ತಿಪ್ರಧಾನ ಚಿತ್ರದಲ್ಲೂ ನಟಿಸಿದರು. ಈಗ ಅವುಗಳಿಗಿಂತ ಭಿನ್ನವಾಗಿ ಅವರು ಮತ್ತೊಂದು ವೇಷ ಧರಿಸಿದ್ದಾರೆ. ‘ತ್ರಿದೇವಿ’ ಸಿನಿಮಾದಲ್ಲಿ ಶುಭಾ ಪೂಂಜಾ ಫೈಟ್​ ಮಾಡಿದ್ದಾರೆ! ಈ ಬಗ್ಗೆ ಅವರೇ ಮಾಹಿತಿ ನೀಡಿದ್ದಾರೆ.

ಶುಭಾ ಪೂಂಜಾ ಆ್ಯಕ್ಷನ್​ ದೃಶ್ಯಗಳಲ್ಲಿ ನಟಿಸಿದ್ದಾರೆ ಎಂದರೆ ನಂಬುವುದು ಕಷ್ಟ. ಆದರೆ ನಂಬಲೇ ಬೇಕು. ಯಾಕೆಂದರೆ ಅವರು ಅದಕ್ಕೆ ಸಾಕ್ಷಿ ಕೂಡ ನೀಡಿದ್ದಾರೆ. ‘ತ್ರಿದೇವಿ’ ಎಂಬ ಹೆಸರು ಹೇಳಿದರೆ ಇದು ಯಾವುದೋ ಭಕ್ತಿ ಪ್ರಧಾನ ಸಿನಿಮಾ ಎನಿಸುವುದು ಸಹಜ. ಆರಂಭದ ದಿನಗಳಲ್ಲಿ ರಿಲೀಸ್​ ಆದ ಪೋಸ್ಟರ್​ಗಳು ಕೂಡ ಅದನ್ನೇ ಸೂಚಿಸುತ್ತಿದ್ದವು. ಆದರೆ ಈಗ ಸಿನಿಮಾದ ಕೆಲವು ಪೋಸ್ಟರ್​ಗಳನ್ನು ಚಿತ್ರತಂಡ ಹಂಚಿಕೊಳ್ಳುತ್ತಿದೆ. ಅದರಲ್ಲಿ ಶುಭಾ ಪೂಂಜಾ ಪಾತ್ರದ ಝಲಕ್​ ತೋರಿಸಲಾಗಿದೆ. ಇಂದು ಸಂಜೆ ನಾಲ್ಕು ಗಂಟೆಗೆ ಟ್ರೇಲರ್​ ಬಿಡುಗಡೆ ಆಗಲಿದ್ದು, ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿ ಸಿಗಲಿದೆ.

ಈ ಸಿನಿಮಾದಲ್ಲಿ ಸಾಹಸ ದೃಶ್ಯಗಳಿಗಾಗಿ ಶುಭಾ ಪೂಂಜಾ, ಕಮರ್ಷಿಯಲ್​ ಮಾಡೆಲ್​ ಸಂಧ್ಯಾ ಮತ್ತು ಜೋಸ್ನಾ ಒಂದು ತಿಂಗಳ ಕಾಲ ಕಳರಿಪಯಟ್ಟು ಕಲಿತಿದ್ದಾರೆ. ಸಂಧ್ಯಾ ಮತ್ತು ಜೋಸ್ನಾ ಅವರಿಗೆ ಇದು ಮೊದಲ ಸಿನಿಮಾ. ಡ್ಯಾನ್ಸರ್​ ಹಾಗೂ ರಂಗಭೂಮಿ ಕಲಾವಿದೆ ಆಗಿ ಜೋಸ್ನಾಗೆ ಅನುಭವ ಇದೆ. ‘ನಾನು ಫೈಟಿಂಗ್​ ಮಾಡಿದೀನಿ ಎಂದರೆ ನೀವು ನಂಬುವುದಿಲ್ಲ ಅಂತ ಗೊತ್ತು. ಅದಕ್ಕೆ ಈ ಟ್ರೇನಿಂಗ್​ ವಿಡಿಯೋ ನೋಡಿ’ ಎಂದು ಇನ್​ಸ್ಟಾಗ್ರಾಮ್​ನಲ್ಲಿ ಶುಭಾ ಪೂಂಜಾ ಸಾಕ್ಷಿ ಒದಗಿಸಿದ್ದಾರೆ.

ಈ ಚಿತ್ರಕ್ಕೆ ಅಶ್ವಿನ್​ ಮ್ಯಾಥ್ಯೂ ನಿರ್ದೇಶನ ಮಾಡಿದ್ದಾರೆ. ಆಲ್ಟರ್ಡ್​ ಈಗೋ ಬ್ಯಾನರ್​ನಲ್ಲಿ ಸಿನಿಮಾ ಮೂಡಿ ಬಂದಿದೆ.

ಇದನ್ನೂ ಓದಿ:

ಜೀವನದಲ್ಲಿ ಶುಭಾ ಪೂಂಜಾ ಕಳೆದುಕೊಂಡಿದ್ದ ಅಮೂಲ್ಯ ವ್ಯಕ್ತಿಗಳನ್ನು ಮರಳಿ ಕೊಡಿಸಿದ ಬಿಗ್​ ಬಾಸ್​; ಯಾರವರು?

ಬಿಗ್​ ಬಾಸ್​ನಿಂದ ಹೊರಬಂದು ನುಡಿದಂತೆ ನಡೆದ ಶುಭಾ ಪೂಂಜಾ; ಬಡವರಿಗೆ ಫುಡ್​ ಕಿಟ್​ ನೀಡಿದ ನಟಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ