AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಕ್ಷಿತ್​ ಶೆಟ್ಟಿ ಜನ್ಮದಿನ; ‘777 ಚಾರ್ಲಿ’ ಟೀಸರ್​ ರಿಲೀಸ್​ ಮಾಡೋಕೆ ಬಂದ ಪರಭಾಷೆಯ ಸ್ಟಾರ್​ಗಳು

‘777 ಚಾರ್ಲಿ’ ಪ್ಯಾನ್​ ಇಂಡಿಯಾ ಚಿತ್ರವಾಗಿದ್ದು, ಕನ್ನಡದ ಜತೆಗೆ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲೂ ತೆರೆಗೆ ಬರುತ್ತಿದೆ. ಹೀಗಾಗಿ, ಟೀಸರ್ ಕೂಡ ಐದು ಭಾಷೆಗಳಲ್ಲಿ ರಿಲೀಸ್​ ಆಗುತ್ತಿದೆ.

ರಕ್ಷಿತ್​ ಶೆಟ್ಟಿ ಜನ್ಮದಿನ; ‘777 ಚಾರ್ಲಿ’ ಟೀಸರ್​ ರಿಲೀಸ್​ ಮಾಡೋಕೆ ಬಂದ ಪರಭಾಷೆಯ ಸ್ಟಾರ್​ಗಳು
777 ಚಾರ್ಲಿ ಸಿನಿಮಾದಲ್ಲಿ ರಕ್ಷಿತ್
ರಾಜೇಶ್ ದುಗ್ಗುಮನೆ
|

Updated on:Jun 06, 2021 | 9:59 AM

Share

ರಕ್ಷಿತ್​ ಶೆಟ್ಟಿ ಅವರ ಖ್ಯಾತಿ ಕೇವಲ ಕನ್ನಡಕ್ಕೆ ಮಾತ್ರ ಸೀಮಿತವಾಗಿಲ್ಲ. ಪರಭಾಷೆಯ ನಟರು ರಕ್ಷಿತ್​ ಶೆಟ್ಟಿಯ ಕೆಲಸವನ್ನು ಮೆಚ್ಚಿಕೊಂಡಿದ್ದಾರೆ. ರಕ್ಷಿತ್​ ನಟಿಸಿ, ನಿರ್ದೇಶಿಸಿದ್ದ ‘ಉಳಿದವರು ಕಂಡಂತೆ’ ಸಿನಿಮಾ ತಮಿಳಿಗೆ ರಿಮೇಕ್​ ಆಗಿತ್ತು. ಜೂನ್ 6ರಂದು ರಕ್ಷಿತ್​ ಜನ್ಮದಿನ. ಈ ವಿಶೇಷ ದಿನದಂದು ‘777 ಚಾರ್ಲಿ’ ಟೀಸರ್ ರಿಲೀಸ್​ ಆಗುತ್ತಿದೆ. ಪರ ಭಾಷೆಯ ಸ್ಟಾರ್​ ನಟರು ಟೀಸರ್​ ರಿಲೀಸ್​ ಮಾಡುತ್ತಿರುವುದು ವಿಶೇಷ.

‘777 ಚಾರ್ಲಿ’ ಪ್ಯಾನ್​ ಇಂಡಿಯಾ ಚಿತ್ರವಾಗಿದ್ದು, ಕನ್ನಡದ ಜತೆಗೆ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲೂ ತೆರೆಗೆ ಬರುತ್ತಿದೆ. ಹೀಗಾಗಿ, ಟೀಸರ್ ಕೂಡ ಐದು ಭಾಷೆಗಳಲ್ಲಿ ರಿಲೀಸ್​ ಆಗುತ್ತಿದೆ. ತೆಲುಗಿನಲ್ಲಿ ನ್ಯಾಚುರಲ್​ ಸ್ಟಾರ್​ ನಾನಿ ಟೀಸರ್​ ರಿಲೀಸ್​ ಮಾಡುತ್ತಿದ್ದಾರೆ. ಖ್ಯಾತ ನಿರ್ದೇಶಕ ಕಾರ್ತಿಕ್​ ಸುಬ್ಬರಾಜ್​ ಅವರು ತಮಿಳಿನಲ್ಲಿ ಈ ಸಿನಿಮಾದ ಟೀಸರ್​ ಬಿಡುಗಡೆ ಮಾಡಲಿದ್ದಾರೆ. ಪೃಥ್ವಿರಾಜ್​ ಹಸ್ತದಿಂದ ಮಲಯಾಳಂನಲ್ಲಿ ಟೀಸರ್​ ಬಿಡುಗಡೆಗೊಳ್ಳಲಿದೆ. ಹಿಂದಿ ಮತ್ತು ಕನ್ನಡ ಟೀಸರ್​ಗಳು ಪರಮ್​ವಾ ಸ್ಟುಡಿಯೋ ಮೂಲಕ ರಿಲೀಸ್​ ಆಗುತ್ತಿದೆ.

ಇನ್ನು, ಮಲಯಾಳಂ ವಲಯದಲ್ಲೂ ‘777 ಚಾರ್ಲಿ’ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಈ ಕಾರಣಕ್ಕೆ, ಪೃಥ್ವಿರಾಜ್​, ಕುಂಜಾಕ್ಕೊ ಬೋಬನ್​, ನಿವೀನ್ ಪೌಲಿ, ಟೊವಿನೋ ಥಾಮಸ್​, ಉಣ್ಣಿ ಮುಕುಂದನ್​, ಅನ್ನಾ ಬೆನ್​, ನಿಖಿಲಾ ವಿಮಲ್​, ಆಂಟನಿ ವರ್ಗೀಸ್ ಟೀಸರ್​ ಹಂಚಿಕೊಂಡು, ಅದರ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಳ್ಳಲಿದ್ದಾರೆ. ಸದ್ಯ, ಈ ವಿಚಾರ ಕೇಳಿದ ಅಭಿಮಾನಿಗಳು ಸಾಕಷ್ಟು ಖುಷಿಯಾಗಿದ್ದಾರೆ. ಮಲಯಾಳಂ ಖ್ಯಾತ ಗಾಯಕ ವಿನೀಥ್​ ಶ್ರೀನಿವಾಸನ್​ ಅವರು ‘777 ಚಾರ್ಲಿ’ ಮಲಯಾಳಂ ಮತ್ತು ಕನ್ನಡ ಅವತರಣಿಕೆ ಹಾಡನ್ನು ಹಾಡಿದ್ದಾರೆ.

‘777 ಚಾರ್ಲಿ’ ಸಿನಿಮಾದಲ್ಲಿ ಶ್ವಾನ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದೆ. ಈಗಾಗಲೇ ಸಿನಿಮಾ ತಂಡದಿಂದ ಸಾಕಷ್ಟು ಪೋಸ್ಟರ್​ ರಿಲೀಸ್​ ಆಗಿದ್ದು, ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿದೆ. ಚಿತ್ರದಲ್ಲಿ ರಕ್ಷಿತ್​ ಹಾಗೂ ಶ್ವಾನದ ಕಾಂಬಿನೇಷನ್​ ಪ್ರೇಕ್ಷಕರಿಗೆ ಇಷ್ಟವಾಗುವ ಎಲ್ಲಾ ಸಾಧ್ಯತೆ ಇದೆ. 777 ಚಾರ್ಲಿ ತಂಡ ಪೋಸ್ಟ್​ ಪ್ರೊಡಕ್ಷನ್​ ಪೂರ್ಣಗೊಳಿಸುವ ಹಂತದಲ್ಲಿದೆ. ಡಬ್ಬಿಂಗ್​ ಕೆಲಸಗಳು ಪೂರ್ಣಗೊಂಡಿದ್ದು, ಸಿನಿಮಾ ಶೀಘ್ರವೇ ಸಿದ್ಧಗೊಳ್ಳಲಿದೆ. 777 ಚಾರ್ಲಿ ಸಿನಿಮಾಕ್ಕೆ ಸುಮಾರು 160 ದಿನಗಳ ಕಾಲ ಶೂಟಿಂಗ್​ ಮಾಡಲಾಗಿದೆ. ಶ್ವಾನದ ಮೂಡ್ ನೋಡಿಕೊಂಡು ಶೂಟ್​ ಮಾಡಬೇಕಾದ ಪರಿಸ್ಥಿತಿ ಇದ್ದಿದ್ದರಿಂದ ಶೂಟಿಂಗ್​ಗೆ ಹೆಚ್ಚು ದಿನ ಹಿಡಿದಿದೆ.

ಕಿರಣ್​ ರಾಜ್​ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ರಕ್ಷಿತ್​ ಶೆಟ್ಟಿ, ಸಂಗೀತಾ ಶೃಂಗೇರಿ, ರಾಜ್​ ಬಿ. ಶೆಟ್ಟಿ, ದಾನಿಶ್​ ಸೇಟ್​ ಮೊದಲಾದವರು ಮುಖ್ಯಭೂಮಿಕೆಯಲ್ಲಿದ್ದಾರೆ. ಪರಮ್​ವಾ ಸ್ಟುಡಿಯೋ ಬ್ಯಾನರ್​ ಅಡಿಯಲ್ಲಿ ಚಿತ್ರ ಮೂಡಿ ಬರುತ್ತಿದೆ.

ಇದನ್ನೂ ಓದಿ: Rakshit Shetty: ರಕ್ಷಿತ್​ ಶೆಟ್ಟಿ ಬರ್ತ್​ಡೇಗೆ ಸಿಗುತ್ತಿದೆ ವಿಶೇಷ ಗಿಫ್ಟ್​; ಐದು ಭಾಷೆಗಳಲ್ಲಿ 777 ಚಾರ್ಲಿ ಟೀಸರ್​

Published On - 3:56 pm, Sat, 5 June 21

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ