Kichcha Sudeep: ‘ಬಾದ್​​ಶಾ’ ಸುದೀಪ್​ಗೆ ಬರ್ತ್​ಡೇ ಸಂಭ್ರಮ; ಇಷ್ಟು ಯಂಗ್ ಆಗಿ ಕಾಣುವ ಕಿಚ್ಚನಿಗೆ ವಯಸ್ಸೆಷ್ಟು?

ಕನ್ನಡ ಮಾತ್ರವಲ್ಲದೆ ಪರಭಾಷೆಗಳಲ್ಲೂ ಕಿಚ್ಚನ ಹವಾ ಇದೆ. ತೆಲುಗು, ಹಿಂದಿ, ತಮಿಳು ಮಂದಿಗೂ ಸುದೀಪ್ ಚಿರಪರಿಚಿತರು. ಹೀಗಾಗಿ, ಪರಭಾಷೆಗಳಿಂದಲೂ ಸುದೀಪ್​ಗೆ ಬರ್ತ್​ಡೇ ವಿಶ್ ಬರುತ್ತಿದೆ.

Kichcha Sudeep: ‘ಬಾದ್​​ಶಾ’ ಸುದೀಪ್​ಗೆ ಬರ್ತ್​ಡೇ ಸಂಭ್ರಮ; ಇಷ್ಟು ಯಂಗ್ ಆಗಿ ಕಾಣುವ ಕಿಚ್ಚನಿಗೆ ವಯಸ್ಸೆಷ್ಟು?
ಸುದೀಪ್
Edited By:

Updated on: Sep 02, 2022 | 6:30 AM

‘ಕಿಚ್ಚ’ ಸುದೀಪ್ (Kichcha Sudeep)​​ ಅವರು ಇಂದು (ಸೆಪ್ಟೆಂಬರ್ 2) ಬರ್ತ್​ಡೇ ಆಚರಿಸಿಕೊಳ್ಳುತ್ತಿದ್ದಾರೆ. ಫ್ಯಾನ್ಸ್ ಕಡೆಯಿಂದ ಸುದೀಪ್​ಗೆ ಜನ್ಮದಿನದ ಶುಭಾಶಯ ಬರುತ್ತಿದೆ. ಸಾಕಷ್ಟು ಸೆಲೆಬ್ರಿಟಿಗಳು ಸುದೀಪ್​ಗೆ ಬರ್ತ್​ಡೇ (Sudeep Birthday) ವಿಶ್ ತಿಳಿಸಿದ್ದಾರೆ. ಸುದೀಪ್ ಅವರು ಇಂದು 49ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಈ ವಯಸ್ಸಿನಲ್ಲೂ ಸಖತ್ ಫಿಟ್ ಆಗಿದ್ದಾರೆ. ಫಿಟ್​ನೆಸ್ ವಿಚಾರದಲ್ಲಿ ಅನೇಕರಿಗೆ ಸುದೀಪ್ ಮಾದರಿ.

ಕಿಚ್ಚ ಸುದೀಪ್ ಜನಿಸಿದ್ದು 1973ರ ಸೆಪ್ಟೆಂಬರ್ 2ರಂದು. ಚಿತ್ರರಂಗದಲ್ಲಿ ಸಾಕಷ್ಟು ಪರಿಶ್ರಮದೊಂದಿಗೆ ಮೇಲೆ ಬಂದವರು ಕಿಚ್ಚ. ಕೇವಲ ಕನ್ನಡ ಮಾತ್ರವಲ್ಲದೆ ಪರಭಾಷೆಗಳಲ್ಲೂ ಕಿಚ್ಚನ ಹವಾ ಇದೆ. ತೆಲುಗು, ಹಿಂದಿ, ತಮಿಳು ಮಂದಿಗೂ ಸುದೀಪ್ ಚಿರಪರಿಚಿತರು. ಹೀಗಾಗಿ, ಪರಭಾಷೆಗಳಿಂದಲೂ ಸುದೀಪ್​ಗೆ ಬರ್ತ್​ಡೇ ವಿಶ್ ಬರುತ್ತಿದೆ.

ಸುದೀಪ್​ಗೆ ಈ ವರ್ಷದ ಬರ್ತ್​ಡೇ ವಿಶೇಷ. ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾ ಇತ್ತೀಚೆಗೆ ತೆರೆಗೆ ಬಂದು ಯಶಸ್ಸು ಕಂಡಿದೆ. ಈ ಚಿತ್ರದಿಂದ ಅವರ ಖ್ಯಾತಿ ಹೆಚ್ಚಾಗಿದೆ. ಈ ಸಿನಿಮಾ ಯಶಸ್ಸಿನ ಜತೆ ಈ ವರ್ಷ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಬರ್ತ್​​ಡೇ ಅಂಗವಾಗಿ ಇಂದು ‘ವಿಕ್ರಾಂತ್ ರೋಣ’ ಸಿನಿಮಾ ಜೀ 5 ಒಟಿಟಿಯಲ್ಲಿ ರಿಲೀಸ್ ಆಗಿದೆ. ಈ ಕಾರಣಕ್ಕೂ ಫ್ಯಾನ್ಸ್ ಖುಷಿಯಾಗಿದ್ದಾರೆ.

ಇದನ್ನೂ ಓದಿ
‘ಲಕ್ಕಿ ಮ್ಯಾನ್​​ ಸಿನಿಮಾವನ್ನು ಎಲ್ಲರೂ ತಬ್ಬಿಕೊಳ್ಳಿ,​ ಮತ್ತೆ ಬೇಕು ಅಂದ್ರೂ ಇದು ಸಿಗಲ್ಲ’; ಕಿಚ್ಚ ಸುದೀಪ್​
ಮುಖ ತೋರಿಸದೇ ಫೇಮಸ್​ ಆದ ಭಾಸ್ಕರ್​; ಕಿಚ್ಚ ಸುದೀಪ್​ ಬದುಕಿನಲ್ಲೂ ಇದ್ದಾನೆ ಅಂಥ ಒಬ್ಬ ವ್ಯಕ್ತಿ
‘ವಿಕ್ರಾಂತ್​ ರೋಣ’ ಸೂಪರ್​ ಹಿಟ್​; ಕಿಚ್ಚ ಸುದೀಪ್​ ಅಭಿಮಾನಿಗಳಿಗೆ ‘ಕಬ್ಜ’ ಮೇಲೆ ಹೆಚ್ಚಿತು ನಿರೀಕ್ಷೆ
Vikrant Rona: ದೆಹಲಿಯಲ್ಲಿ ವೀರೇಂದ್ರ ಹೆಗ್ಗಡೆ ಭೇಟಿ ಮಾಡಿದ ಕಿಚ್ಚ ಸುದೀಪ್​; ಇಲ್ಲಿವೆ ಫೋಟೋಗಳು

ಸುದೀಪ್​ ಹಾಗೂ ಪುನೀತ್ ರಾಜ್​ಕುಮಾರ್ ನಡುವೆ ಒಳ್ಳೆಯ ಫ್ರೆಂಡ್​ಶಿಪ್ ಇತ್ತು. ಚಿಕ್ಕ ವಯಸ್ಸಿನಿಂದ ಇವರು ಒಬ್ಬರನ್ನು ಮತ್ತೊಬ್ಬರು ಬೆಂಬಲಿಸುತ್ತಾ ಬಂದಿದ್ದರು. ಆದರೆ ಅಪ್ಪು ಈಗ ನಮ್ಮ ಜತೆ ಇಲ್ಲ. ಈ ಕಾರಣಕ್ಕೆ ಸುದೀಪ್ ಬೇಸರದಲ್ಲಿದ್ದಾರೆ. ಕೆಲವು ಕಡೆಗಳಲ್ಲಿ ಅಭಿಮಾನಿಗಳು ಸುದೀಪ್ ಜನ್ಮದಿನವನ್ನು ಸಾಮಾಜಿಕ ಕೆಲಸಗಳನ್ನು ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸುತ್ತಿದ್ದಾರೆ.

ಸುದೀಪ್ ಅವರು ‘ಕಬ್ಜ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಉಪೇಂದ್ರ ಅವರು ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಈ ಸಿನಿಮಾ ತಂಡದಿಂದ ಹೊಸ ಪೋಸ್ಟರ್ ರಿಲೀಸ್ ಆಗಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. ಇದರ ಜತೆಗೆ ಕಿಚ್ಚ ಹೊಸ ಸಿನಿಮಾ ಅನೌನ್ಸ್​ ಮಾಡುತ್ತಾರಾ ಎಂದು ಅಭಿಮಾನಿಗಳು ಕಾದು ಕೂತಿದ್ದಾರೆ.

ಇದನ್ನೂ ಓದಿ: ಒಡಿಶಾದ ಬೀಚ್​ನಲ್ಲಿ ಅರಳಿತು ಕಿಚ್ಚ ಸುದೀಪ್​ ಮರಳು ಶಿಲ್ಪ; ಇಲ್ಲಿವೆ ಫೋಟೋಗಳು

ಇತ್ತೀಚೆಗೆ ಶಿವಣ್ಣ ಅವರು ಕಾಮನ್​ ಡಿಪಿ ಅನಾವರಣ ಮಾಡಿದ್ದರು. ಸುದೀಪ್ ಅವರು ಲಕ್ಷಾಂತರ ಅಭಿಮಾನಿಗಳ ಜತೆ ನಿಂತಿರುವ ರೀತಿಯಲ್ಲಿ ಈ ಚಿತ್ರ ಮೂಡಿ ಬಂದಿತ್ತು. ಈ ಫೋಟೋವನ್ನು ಪ್ರೊಫೈಲ್ ಪಿಕ್ಚರ್ ಮಾಡಿಕೊಂಡು ಫ್ಯಾನ್ಸ್ ಸಂಭ್ರಮಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.