AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sudeep: ಸುದೀಪ್​ ಸಾಧನೆಗೆ ‘ವಿಶೇಷ ಅಂಚೆ ಲಕೋಟೆ’ ಗೌರವ; ಇದು ಕಿಚ್ಚನ ಫ್ಯಾನ್ಸ್​ ಹೆಮ್ಮೆಪಡುವ ಸುದ್ದಿ

Indian Post | Kichcha Sudeep: ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಕಿಚ್ಚ ಸುದೀಪ್​ ಅವರಿಗೆ ಈ ಗೌರವ ಸಲ್ಲುತ್ತಿದೆ. ವಿಶೇಷ ಅಂಚೆ ಲಕೋಟೆಯ ಬಿಡುಗಡೆ ಸಮಾರಂಭವು ಶೀಘ್ರದಲ್ಲಿಯೇ ನೆರವೇರಲಿದೆ.

Sudeep: ಸುದೀಪ್​ ಸಾಧನೆಗೆ ‘ವಿಶೇಷ ಅಂಚೆ ಲಕೋಟೆ’ ಗೌರವ; ಇದು ಕಿಚ್ಚನ ಫ್ಯಾನ್ಸ್​ ಹೆಮ್ಮೆಪಡುವ ಸುದ್ದಿ
‘ವಿಶೇಷ ಅಂಚೆ ಲಕೋಟೆ’ ಬಿಡುಗಡೆಗೆ ಕಿಚ್ಚ ಸುದೀಪ್​ಗೆ ಆಹ್ವಾನ ನೀಡಲಾಯಿತು
Follow us
TV9 Web
| Updated By: ಮದನ್​ ಕುಮಾರ್​

Updated on: Aug 31, 2022 | 3:29 PM

ನಟ ಕಿಚ್ಚ ಸುದೀಪ್​ (Kichcha Sudeep) ಅವರು ಭಾರತೀಯ ಚಿತ್ರರಂಗದಲ್ಲಿ ಮಾಡಿದ ಸಾಧನೆ ಗಮನಾರ್ಹ. ಕರ್ನಾಟಕದಲ್ಲಿ ಮಾತ್ರವಲ್ಲದೇ ದೇಶಾದ್ಯಂತ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಬಗೆಬಗೆಯ ಸಿನಿಮಾಗಳ ಮೂಲಕ ಜನರನ್ನು ರಂಜಿಸುವ ಕಾಯಕದಲ್ಲಿ ಅವರು ತೊಡಗಿಕೊಂಡಿದ್ದಾರೆ. ಚಿತ್ರರಂಗಕ್ಕೆ ಸುದೀಪ್​ (Sudeep) ಕಾಲಿರಿಸಿ 25 ವರ್ಷಗಳು ಕಳೆದಿವೆ. ಈ ಸಾಧನೆಗಾಗಿ ಅವರಿಗೆ ಅನೇಕರಿಂದ ಗೌರವ, ಸನ್ಮಾನಗಳು ಸಂದಿವೆ. ಈಗ ಕಿಚ್ಚ ಸುದೀಪ್​ ಅವರ ಸಾಧನೆಯನ್ನು ಗುರುತಿಸಲು ಭಾರತೀಯ ಅಂಚೆ (Indian Post) ಇಲಾಖೆಯಿಂದ ‘ವಿಶೇಷ ಅಂಚೆ ಲಕೋಟೆ’ ಬಿಡುಗಡೆ ಮಾಡಲಾಗುತ್ತಿದೆ. ಇದು ಅವರ ಅಭಿಮಾನಿಗಳಿಗೆ ಹೆಮ್ಮೆ ತರಲಿದೆ.

ದೇಶದ ಮಹತ್ತರ ಘಟನೆಗಳನ್ನು, ಪ್ರಶಸ್ತಿಗಳನ್ನು ಹಾಗೂ ವ್ಯಕ್ತಿಗಳ ಸಾಧನೆಗಳನ್ನು ನೂರಾರು ವರ್ಷ ದಾಖಲೆಯಾಗಿ ಉಳಿಸಬೇಕೆಂಬ ಉದ್ದೇಶದಿಂದ ಭಾರತ ಸರ್ಕಾರದ ಅಂಚೆ ಇಲಾಖೆಯು ಈ ರೀತಿಯ ‘ವಿಶೇಷ ಅಂಚೆ ಲಕೋಟೆ’ಯನ್ನು ಬಿಡುಗಡೆ ಮಾಡುತ್ತದೆ. ಆ ಪ್ರಯುಕ್ತ ಕಿಚ್ಚ ಸುದೀಪ್​ ಅವರಿಗೂ ಗೌರವ ಸಲ್ಲುತ್ತಿದೆ. 25 ವರ್ಷಗಳ ಸಿನಿ ಜರ್ನಿಯನ್ನು ಪೂರ್ಣಗೊಳಿಸಿರುವ ಸುದೀಪ್ ಅವರ ಸಾಧನೆಯನ್ನು ಈ ವಿಶೇಷ ಲಕೋಟೆ ಮೂಲಕ ಭಾರತೀಯ ಅಂಚೆ ಇಲಾಖೆ ದಾಖಲೆ ಮಾಡುತ್ತಿದೆ.

‘ವಿಶೇಷ ಅಂಚೆ ಲಕೋಟೆ’ ಬಿಡುಗಡೆ ಮಾಡುವ ಕುರಿತು ಮಾತನಾಡಲು ಅಂಚೆ ಇಲಾಖೆಯ ಅಧೀಕ್ಷರಾದ ಮಾದೇಶ್ ಅವರು ಕಿಚ್ಚ ಸುದೀಪ್ ಅವರ ಮನೆಗೆ ಆಗಮಿಸಿ ಅವರಿಂದ NOC ಪಡೆದಿದ್ದಾರೆ. ಅಲ್ಲದೇ, ಬಿಡುಗಡೆ ಕಾರ್ಯಕ್ರಮಕ್ಕೆ ಆತ್ಮೀಯವಾಗಿ ಆಹ್ವಾನಿಸಿದ್ದಾರೆ. ಈ ವಿಶೇಷ ಅಂಚೆ ಲಕೋಟೆಯ ಬಿಡುಗಡೆ ಸಮಾರಂಭವು ಶೀಘ್ರದಲ್ಲಿಯೇ ನೆರವೇರಲಿದೆ.

ಇದನ್ನೂ ಓದಿ
Image
‘ಲಕ್ಕಿ ಮ್ಯಾನ್​​ ಸಿನಿಮಾವನ್ನು ಎಲ್ಲರೂ ತಬ್ಬಿಕೊಳ್ಳಿ,​ ಮತ್ತೆ ಬೇಕು ಅಂದ್ರೂ ಇದು ಸಿಗಲ್ಲ’; ಕಿಚ್ಚ ಸುದೀಪ್​
Image
ಮುಖ ತೋರಿಸದೇ ಫೇಮಸ್​ ಆದ ಭಾಸ್ಕರ್​; ಕಿಚ್ಚ ಸುದೀಪ್​ ಬದುಕಿನಲ್ಲೂ ಇದ್ದಾನೆ ಅಂಥ ಒಬ್ಬ ವ್ಯಕ್ತಿ
Image
‘ವಿಕ್ರಾಂತ್​ ರೋಣ’ ಸೂಪರ್​ ಹಿಟ್​; ಕಿಚ್ಚ ಸುದೀಪ್​ ಅಭಿಮಾನಿಗಳಿಗೆ ‘ಕಬ್ಜ’ ಮೇಲೆ ಹೆಚ್ಚಿತು ನಿರೀಕ್ಷೆ
Image
Vikrant Rona: ದೆಹಲಿಯಲ್ಲಿ ವೀರೇಂದ್ರ ಹೆಗ್ಗಡೆ ಭೇಟಿ ಮಾಡಿದ ಕಿಚ್ಚ ಸುದೀಪ್​; ಇಲ್ಲಿವೆ ಫೋಟೋಗಳು

ಕಿಚ್ಚ ಸುದೀಪ್ ಅವರು ಕೇವಲ ಕನ್ನಡ ಚಿತ್ರರಂಗಕ್ಕೆ ಸೀಮಿತವಾಗಿಲ್ಲ. ಪರಭಾಷೆಯಲ್ಲೂ ಅವರು ತಮ್ಮ ಛಾಪು ಮೂಡಿಸಿದ್ದಾರೆ. ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಈಗ’, ‘ರಣ್​’, ‘ದಬಂಗ್​ 3’ ಮುಂತಾದ ಸಿನಿಮಾಗಳಲ್ಲಿ ಘಟಾನುಘಟಿ ತಂತ್ರಜ್ಞರು ಮತ್ತು ಕಲಾವಿದರ ಜೊತೆ ಸುದೀಪ್​ ಕೆಲಸ ಮಾಡಿದ್ದಾರೆ. ಬಹುಭಾಷೆಯಲ್ಲಿ ಬೇಡಿಕೆಯ ನಟನಾಗಿ ಅವರು ಗುರುತಿಸಿಕೊಂಡಿದ್ದಾರೆ.

ಸುದೀಪ್​ ಅವರ ಸಾಧನೆ ಬರೀ ಚಿತ್ರರಂಗಕ್ಕೆ ಸೀಮಿತವಲ್ಲ. ‘ಸುದೀಪ್​ ಚಾರಿಟೇಬಲ್​ ಸೊಸೈಟಿ’ ವತಿಯಿಂದ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡಲಾಗಿದೆ. ಅನಾರೋಗ್ಯದಿಂದ ಬಳಲುತ್ತಿರುವ ಎಷ್ಟೋ ಜನರಿಗೆ ಚಿಕಿತ್ಸೆ ಕೊಡಿಸಲಾಗಿದೆ. ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಲಾಗಿದೆ. ಆ ಮೂಲಕ ಅವರು ಸಾಮಾಜಿಕ ಕಳಕಳಿ ಮೆರೆದಿದ್ದಾರೆ. ಈ ಎಲ್ಲ ಸಾಧನೆಗಳಿಂದಾಗಿ ಸುದೀಪ್​ ಅವರು ಕೋಟ್ಯಂತರ ಅಭಿಮಾನಿಗಳಿಗೆ ಮಾದರಿ ಆಗಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.