ಸುದೀಪ್​ ನಟನೆಯ ‘ಮ್ಯಾಕ್ಸ್​’ ಸಿನಿಮಾ ಹೆಸರಿನಲ್ಲಿ ಅಭಿಮಾನಿಗಳಿಂದ ಆಂಬ್ಯುಲೆನ್ಸ್ ಸೇವೆ ಆರಂಭ

|

Updated on: Jan 19, 2024 | 9:41 PM

‘ಸಂಜೀವಿನಿ ಜೀವ ರಕ್ಷಕ ಟ್ರಸ್ಟ್’ ಈಗಾಗಲೇ ಅನೇಕರ ಪ್ರಾಣ ಉಳಿಸುವಲ್ಲಿ ನೆರವಾಗಿದೆ. ಬಹಳ ವರ್ಷಗಳಿಂದ ಕಿಚ್ಚ ಸುದೀಪ್ ಅವರ ಅಭಿಮಾನಿಗಳು ಈ ಟ್ರಸ್ಟ್​ ಮೂಲಕ ಸಮಾಜ ಸೇವೆ ಮಾಡುತ್ತಿದ್ದಾರೆ. ಈಗ ಸುದೀಪ್​ ನಟಿಸುತ್ತಿರುವ ‘ಮ್ಯಾಕ್ಸ್’ ಸಿನಿಮಾದ ಹೆಸರಿನಲ್ಲೇ ಆಂಬ್ಯುಲೆನ್ಸ್ ಸೇವೆ ಪ್ರಾರಂಭಿಸಿರುವುದು ವಿಶೇಷ.

ಸುದೀಪ್​ ನಟನೆಯ ‘ಮ್ಯಾಕ್ಸ್​’ ಸಿನಿಮಾ ಹೆಸರಿನಲ್ಲಿ ಅಭಿಮಾನಿಗಳಿಂದ ಆಂಬ್ಯುಲೆನ್ಸ್ ಸೇವೆ ಆರಂಭ
‘ಮ್ಯಾಕ್ಸ್‌’ ಹೆಸರಿನ ಆಂಬ್ಯುಲೆನ್ಸ್​ಗಳ ಲೋಕಾರ್ಪಣೆ ಮಾಡಿದ ಸುದೀಪ್
Follow us on

ಕಿಚ್ಚ ಸುದೀಪ್​ (Kichcha Sudeep) ಅವರು ನಟನೆ ಮಾತ್ರವಲ್ಲದೇ ಸಮಾಜಮುಖಿ ಕೆಲಸಗಳ ಮೂಲಕವೂ ಹೆಸರುವಾಸಿ ಆಗಿದ್ದಾರೆ. ಅಭಿಮಾನಿಗಳನ್ನು ರಂಜಿಸುವುದರ ಜೊತೆಗೆ ಅನೇಕರಿಗೆ ಸಹಾಯ ಮಾಡಿ ರಿಯಲ್​ ಹೀರೋ ಎನಿಸಿಕೊಂಡಿದ್ದಾರೆ. ಅವರ ಹೆಸರಿನಲ್ಲಿರುವ ಚಾರಿಟೇಬಲ್​ ಟ್ರಸ್ಟ್​ ಮೂಲಕ ಸಹಾಯ ಹಸ್ತ ಚಾಚುವ ಕಾಯಕ ಮುಂದುವರಿದಿದೆ. ಅನಾರೋಗ್ಯದಲ್ಲಿ ಇರುವವರಿಗೆ ಆರ್ಥಿಕವಾಗಿ ನೆರವಾಗುವುದು ಮಾತ್ರವಲ್ಲದೇ ಗ್ರಾಮ, ಶಾಲೆಗಳನ್ನು ದತ್ತು ಪಡೆದು ಅವುಗಳ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಸುದೀಪ್​ ಹೆಸರಿನಲ್ಲಿ ನಡೆದ ಈ ಎಲ್ಲ ಕೆಲಸಗಳಿಗೆ ಇನ್ನೊಂದು ಸೇರ್ಪಡೆ ಆಗುತ್ತಿದೆ. ಸುದೀಪ್​ ಅವರ ಅಭಿಮಾನಿಗಳು (Kichcha Sudeep Fans) ಸ್ಥಾಪಿಸಿರುವ ‘ಸಂಜೀವಿನಿ ಜೀವ ರಕ್ಷಕ ಟ್ರಸ್ಟ್’ ಮೂಲಕ ಆಂಬ್ಯುಲೆನ್ಸ್​ (Ambulance) ಸೇವೆ ಆರಂಭಿಸಲಾಗಿದೆ.

‘ಸಂಜೀವಿನಿ ಜೀವ ರಕ್ಷಕ ಟ್ರಸ್ಟ್’ ಈಗಾಗಲೇ ಸಾವಿರಾರು ಜನರ ಪ್ರಾಣ ಉಳಿಸುವಲ್ಲಿ ನೆರವಾಗಿದೆ. ಬಹಳ ವರ್ಷಗಳಿಂದ ಕಿಚ್ಚ ಸುದೀಪ್ ಅವರ ಅಭಿಮಾನಿಗಳು ಈ ಟ್ರಸ್ಟ್​ ಮೂಲಕ ಸಮಾಜ ಸೇವೆ ಮಾಡುತ್ತಿದ್ದಾರೆ. ಈಗ ಸುದೀಪ್​ ನಟಿಸುತ್ತಿರುವ ‘ಮ್ಯಾಕ್ಸ್’ ಸಿನಿಮಾದ ಹೆಸರಿನಲ್ಲೇ ಆಂಬ್ಯುಲೆನ್ಸ್ ಸೇವೆ ಪ್ರಾರಂಭಿಸಿರುವುದು ವಿಶೇಷ. ಇಂದು (ಜನವರಿ 19) ‘ಮಾಕ್ಸ್’ ಹೆಸರಿನ ಆಂಬ್ಯುಲೆನ್ಸ್​ಗಳನ್ನು ಸುದೀಪ್ ಅವರು ಸಾವರ್ಜನಿಕರ ಸೇವೆಗೆ ಲೋಕಾರ್ಪಣೆ ಮಾಡಿದ್ದಾರೆ.

ಇದನ್ನೂ ಓದಿ: ಕಿಚ್ಚ ಸುದೀಪ್​ ಬಿಡುಗಡೆ ಮಾಡಿದ ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾದ ಟೀಸರ್

‘ಮ್ಯಾಕ್ಸ್​’ ಸಿನಿಮಾ ಬಗ್ಗೆ:

‘ವಿಕ್ರಾಂತ್​ ರೋಣ’ ಬಳಿಕ ಸುದೀಪ್​ ಅವರು ಒಪ್ಪಿಕೊಂಡ ಸಿನಿಮಾ ‘ಮ್ಯಾಕ್ಸ್​’. ಈ ಬಹುನಿರೀಕ್ಷಿತ ಸಿನಿಮಾದ ಮೊದಲ ಗ್ಲಿಂಪ್ಸ್ ಅಭಿಮಾನಿಗಳಿಗೆ ಇಷ್ಟವಾಗಿದೆ. ಈ ಸಿನಿಮಾದಲ್ಲಿ ಸುದೀಪ್ ಅವರು ಪೊಲೀಸ್ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಕ್ಲೈಮ್ಯಾಕ್ಸ್ ಶೂಟಿಂಗ್​ ನಡೆಯುತ್ತಿದೆ. ಈಗಾಗಲೇ ಚಿತ್ರೀಕರಣ ಆಗಿರುವ ಭಾಗಕ್ಕೆ ಎಲ್ಲ ಕಲಾವಿದರು ಧ್ವನಿ ನೀಡಿದ್ದಾರೆ. ತಮಿಳಿನ ಖ್ಯಾತ ನಿರ್ದೇಶಕ ವಿಜಯ್ ಕಾರ್ತಿಕೇಯ ಅವರು ‘ಮ್ಯಾಕ್ಸ್​’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ.

ಇದನ್ನೂ ಓದಿ: Max Movie: ಬೆಳ್ಳಂಬೆಳಿಗ್ಗೆ ‘ಮ್ಯಾಕ್ಸ್’ ಬಗ್ಗೆ ಅಪ್​ಡೇಟ್ ಕೊಟ್ಟ ಸುದೀಪ್​; ಎಲ್ಲಿಯವರೆಗೆ ಬಂತು ಶೂಟ್​?

‘ವಿ. ಕ್ರಿಯೇಷನ್ಸ್’ ಬ್ಯಾನರ್ ಮೂಲಕ ಕಲೈಪುಲಿ ಎಸ್. ಧಾನು ಅವರು ‘ಮ್ಯಾಕ್ಸ್​’ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈ ಸಿನಿಮಾದಲ್ಲಿ ಡಿಫರೆಂಟ್​ ಆದಂತಹ ಸ್ಟೋರಿ ಇರಲಿದೆ. ‘ಮ್ಯಾಕ್ಸ್‌’ ಸಿನಿಮಾದಲ್ಲಿ ದೊಡ್ಡ ಪಾತ್ರವರ್ಗ ಇದೆ. ಸುದೀಪ್​ ಜೊತೆ ವರಲಕ್ಷ್ಮಿ ಶರತ್‌ಕುಮಾರ್, ಕಾಮರಾಜ್, ಸಂಯುಕ್ತಾ ಹೊರನಾಡು, ಸುಕೃತಾ ವಾಗ್ಳೆ ಮುಂತಾದ ಕಲಾವಿದರು ನಟಿಸುತ್ತಿದ್ದಾರೆ. ತಮಿಳುನಾಡಿನ ಮಹಾಬಲಿಪುರಂನಲ್ಲಿ ಈ ಸಾಹಸಮಯ ಚಿತ್ರದ ಬಹುತೇಕ ಶೂಟಿಂಗ್​ ಮಾಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ